ಬಂಗಾರ ಖರೀದಿಸುವವರಿಗೆ ಗುಡ್‌ ನ್ಯೂಸ್; ಒಂದೇ ದಿನ 1200 ರುಪಾಯಿ ಕುಸಿತ! ಬೆಂಗಳೂರಲ್ಲಿಂದು ಚಿನ್ನದ ಬೆಲೆ ಎಷ್ಟು?

Published : Feb 12, 2026, 10:36 AM IST

ಬೆಂಗಳೂರು: ಕಳೆದ ನಾಲ್ಕೈದು ದಿನಗಳಿಂದ ಗಗನದತ್ತ ಮುಖಮಾಡಿದ ಚಿನ್ನದ ದರದಲ್ಲಿ ಭರ್ಜರಿ ಕುಸಿತ ಕಂಡಿದ್ದು, ಇಂದು ದೊಡ್ಡ ಮೊತ್ತದ ಇಳಿಕೆ ಕಂಡಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ. ಹಾಗಿದ್ದರೇ ಫೆಬ್ರವರಿ 12ರ ಬೆಳಗ್ಗೆ ಚಿನ್ನ ಬೆಲೆ ಎಷ್ಟು ನೋಡೋಣ ಬನ್ನಿ.

PREV
16
ಗ್ರಾಹಕರು ಕಂಗಾಲಾಗುವಂತೆ ಮಾಡಿದ್ದ ಚಿನ್ನದ ಬೆಲೆ ಏರಿಕೆ

ಕಳೆದ ಫೆಬ್ರವರಿ 07ರಿಂದ ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ದಿಢೀರ್ ಕುಸಿತ ಕಂಡಿದೆ. ಬುಧವಾರದ ಅಂತ್ಯದ ವೇಳೆಗೆ 24 ಕ್ಯಾರಟ್ ಚಿನ್ನದ ಬೆಲೆ 15,960 ರುಪಾಯಿಗಳಾಗಿತ್ತು. ಇನ್ನು 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಮ್‌ಗೆ 14,630 ರುಪಾಯಿ ಆಗಿತ್ತು. ನಿರಂತರವಾದ ಬೆಲೆ ಏರಿಕೆ ಚಿನ್ನದ ಗ್ರಾಹಕರನ್ನು ಕಂಗಾಲಾಗುವಂತೆ ಮಾಡಿತ್ತು.

26
24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 1200 ರುಪಾಯಿ ಇಳಿಕೆ

ಇನ್ನು ಇದೀಗ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 120 ರುಪಾಯಿ ಕುಸಿತ ಕಂಡಿದೆ. ಅಂದರೆ ಪ್ರತಿ 10 ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1200 ರುಪಾಯಿ ಇಳಿಕೆಯಾಗಿದೆ. ಇಂದು 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಮ್‌ಗೆ 15840 ರುಪಾಯಿಗಳಾಗಿವೆ.

36
22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 1100 ರುಪಾಯಿ ಇಳಿಕೆ

ಇದೇ ವೇಳೆ ಆರಭಣ ಚಿನ್ನವಾಗಿರುವ 22 ಕ್ಯಾರಟ್ ಚಿನ್ನದ ಬೆಲೆಯಲ್ಲೂ 110 ರುಪಾಇ ಕುಸಿತ ಕಂಡಿದೆ. ಅಂದರೆ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 1100 ರುಪಾಯಿ ಕುಸಿತವಾಗಿದ್ದು, ಇಂದಿನ ಪ್ರತಿಗ್ರಾಮ್ ಚಿನ್ನದ ಬೆಲೆ 14520 ರುಪಾಯಿಗೆ ಇಳಿದಿದೆ.

46
ಗ್ರಾಹಕರ ಪಾಲಿಗೆ ಸಿಹಿ ಸುದ್ದಿ

24 ಕ್ಯಾರಟ್ ಹಾಗೂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿರುವುದು ಗ್ರಾಹಕರ ಮನಸ್ಸಿನಲ್ಲಿ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ ಕಾಣುವ ಸಾಧ್ಯತೆಯಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

56
ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ

ಸಾಮಾನ್ಯವಾಗಿ ಚಿನ್ನದ ಬೆಲೆ ಇಳಿಯುತ್ತಿದ್ದಂತೆಯೇ ಬೆಳ್ಳಿ ಬೆಲೆಯೂ ಇಳಿಕೆ ಕಾಣುತ್ತಾ ಬಂದಿತ್ತು. ಆದರೆ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡರೂ, ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ.

66
ಇಂದು ಪ್ರತಿ ಕೆಜಿಗೆ 5000 ರುಪಾಯಿ ಏರಿಕೆ

ಫೆಬ್ರವರಿ 11ರಂದು ಬೆಳ್ಳಿ ಪ್ರತಿ ಕೆಜಿಗೆ 2,90,000 ರುಪಾಯಿಗಳಾಗಿತ್ತು. ಆದರೆ ಇಂದು 5000 ರುಪಾಯಿ ಏರಿಕೆ ಕಂಡಿದ್ದು, ಪ್ರತಿ ಕೆಜಿ ಬೆಳ್ಳಿ ಬೆಲೆ 2,95,000 ರುಪಾಯಿಗಳಾಗಿವೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories