ಬೆಲೆ ಇಳಿಕೆ; ಒಂದೇ ದಿನ ಮಾರಾಟವಾಯ್ತು 60 ಸಾವಿರ ಕೋಟಿ ಮೌಲ್ಯದ ಚಿನ್ನ, ಬೆಳ್ಳಿ Dhan Trayodashi

Published : Nov 07, 2026, 09:04 AM IST

ಚಿನ್ನದ ಬೆಲೆ ಏರಿಕೆಯಾಗಿದ್ದರೂ, ಇತ್ತೀಚಿನ ದರ ಇಳಿಕೆಯಿಂದಾಗಿ ಧನ ತ್ರಯೋದಶಿಯಂದು ದೇಶಾದ್ಯಂತ 60 ಸಾವಿರ ಕೋಟಿ ರೂ. ಮೌಲ್ಯದ ಚಿನ್ನ ಮಾರಾಟವಾಗಿದೆ. ಬೆಂಗಳೂರು ಮತ್ತು ದೆಹಲಿಯಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

PREV
14
ದೇಶಾದ್ಯಂತ 60 ಸಾವಿರ ಕೋಟಿ ರು. ಮೌಲ್ಯದ ಚಿನ್ನ ಮಾರಾಟ

ಚಿನ್ನದ ಬೆಲೆ ಗಗನಮುಖಿಯಾಗಿದ್ದ ಕಾರಣ ಕಳೆದ ಕೆಲ ತಿಂಗಳುಗಳಿಂದ ಅದನ್ನು ಕೊಳ್ಳಲು ಮನಸ್ಸು ಮಾಡಿರದ ಗ್ರಾಹಕರು ಶುಕ್ರವಾರದ ಧನ ತ್ರಯೋದಶಿಯಂದು ಹೊನ್ನನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ಪರಿಣಾಮ, ದೇಶಾದ್ಯಂತ 60 ಸಾವಿರ ಕೋಟಿ ರು. ಮೌಲ್ಯದ ಚಿನ್ನ ಮಾರಾಟವಾಗಿರುವ ಅಂದಾಜಿದೆ.

24
ಶೇ.15- 20 ಏರಿಕೆ

ಹಿಂದಿನ ವರ್ಷಕ್ಕೆ ಹೋಲಿಸಿದರೆ ಚಿನ್ನದ ಬೆಲೆ ಈ ವರ್ಷ ಶೇ.15- 20 ಏರಿಕೆಯಾಗಿದೆ. ಆದರೆ ಕಳೆದ ಕೆಲ ದಿನಗಳಿಂದ ದರ ಮತ್ತೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಗೆ ಮುಂದಾಗಿದ್ದರು ಎನ್ನಲಾಗಿದೆ.

34
ಶುಕ್ರವಾರ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆ

ಶುಕ್ರವಾರ ಬೆಂಗಳೂರಿನಲ್ಲಿ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 2560 ರು. ಇಳಿಕೆಯಾಗಿದ್ದು, 1,43,460 ರು. ಆಗಿದೆ. ಇದೇ ಪ್ರಮಾಣದ 22 ಕ್ಯಾರಟ್‌ನ ಬೆಲೆ 2350 ರು. ಕುಸಿದು 1,31,500 ರು. ಆಗಿದೆ.

ಇದನ್ನೂ ಓದಿ:  Reliance Jio ಉದ್ಯಮದಲ್ಲೇ ಇದೇ ಮೊದಲು, ಒಂದೇ ಒಂದು ರಿಚಾರ್ಜ್, ಭರ್ಜರಿ ಆಫರ್ಸ್, 3 ವರ್ಷಗಳವರೆಗೆ ಟೆನ್ಷನ್ ಫ್ರೀ!

44
ಚಿನ್ನದ ಜೊತೆ ಬೆಳ್ಳಿ ಬೆಲೆಯೂ ಇಳಿಕೆ

ದೆಹಲಿಯಲ್ಲಿ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 1,46,300 ರು. ಇದೆ. ಅತ್ತ ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದ್ದು, ಬೆಂಗಳೂರಿನಲ್ಲಿ 1 ಕೆ.ಜಿ. ಬೆಲೆ 5 ಸಾವಿರ ರು. ಕುಸಿದು 2,05,000 ರು. ಆಗಿದೆ. ದೆಹಲಿಯಲ್ಲಿ ಇದು 1,92,500 ರು. ಆಗಿದೆ.

ಇದನ್ನೂ ಓದಿ: ದೇಶದ ಮನೆಮನೆಯ ಬ್ರ್ಯಾಂಡ್‌ ಆಗಿದ್ದ Videocon ದಿವಾಳಿ, ಕಂಪನಿ ಮಾಲೀಕ ವೇಣುಗೋಪಾಲ್‌ ಧೂತ್ ಆಸ್ತಿಗಳೆಲ್ಲಾ ಮುಟ್ಟುಗೋಲು!

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories