ಇಂದಿನಿಂದ LPG ಸಿಲಿಂಡರ್ ಬೆಲೆಯಲ್ಲಿ ಅಚ್ಚರಿಯ ಬದಲಾವಣೆ! ಹಬ್ಬಕ್ಕೆ ದುಬಾರಿ ಗಿಫ್ಟ್

Published : Nov 01, 2026, 08:41 AM IST

ನವೆಂಬರ್ 1 ರಿಂದ ಅನ್ವಯವಾಗುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ₹10 ರಿಂದ ₹11.50 ರವರೆಗೆ ಹೆಚ್ಚಳ ಮಾಡಲಾಗಿದೆ. ಆದರೆ, ಗೃಹಬಳಕೆಯ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

PREV
15
ನವೆಂಬರ್ 1 ರಿಂದ ವಾಣಿಜ್ಯ LPG ಸಿಲಿಂಡರ್ ಬೆಲೆ

ಹಾಲು, ಮೊಸರು, ಅಕ್ಕಿ ನಂತರ ಇದೀಗ ಎಲ್‌ಪಿಜಿ ಸರದಿ. ತಿಂಗಳ ಮೊದಲ ದಿನ ಇಂಧನ ಕಂಪನಿಗಳು ಎಲ್‌ಪಿಜಿ ಬೆಲೆಯನ್ನು ಪರಿಷ್ಕರಣೆ ಮಾಡಿ ಪ್ರಕಟಿಸುತ್ತವೆ. ಈಗಾಗಲೇ ಬೆಲೆ ಏರಿಕೆಯಿಂದ ಆಕ್ರೋಶಗೊಂಡಿರುವ ಜನರ ಜೇಬಿಗೆ ಮತ್ತೊಮ್ಮೆ ಕತ್ತರಿ ಬೀಳುತ್ತಿದೆ.

25
ಇಂದಿನಿಂದಲೇ ಹೊಸ ಬೆಲೆಗಳು ಅನ್ವಯ

ನವೆಂಬರ್ 1 ರಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ LPG ಸಿಲಿಂಡರ್ ಬೆಲೆಯಲ್ಲಿ ₹10 ರಿಂದ ₹11.50 ರವರೆಗೆ ಹೆಚ್ಚಳ ಮಾಡಲಾಗಿದೆ. ಆದರೆ, ಈ ಹಬ್ಬದ ಸಂದರ್ಭದಲ್ಲಿ ಗೃಹಬಳಕೆಯ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆಗಳು ಬದಲಾಗದೆ ಸ್ಥಿರವಾಗಿರುವುದು ಸಮಾಧಾನಕರ ಸಂಗತಿಯಾಗಿದೆ.

35
ದೆಹಲಿ ಮತ್ತು ಚೆನ್ನೈ ನಗರಗಳಲ್ಲಿ ಹೊಸ ಬೆಲೆಗಳು

ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ₹2,810 ರಿಂದ ₹2,820 ಕ್ಕೆ ಏರಿಕೆಯಾಗಿದೆ. ಕಳೆದ ಅಕ್ಟೋಬರ್ 1 ರಂದು ಸಹ ದೆಹಲಿಯಲ್ಲಿ ಇದರ ಬೆಲೆ ₹62.50 ರಷ್ಟು ಹೆಚ್ಚಾಗಿತ್ತು. ಮತ್ತೊಂದೆಡೆ, ಚೆನ್ನೈನಲ್ಲಿ ಗರಿಷ್ಠ ಬೆಲೆ ಏರಿಕೆಯಾಗಿದ್ದು, ₹11.50 ಹೆಚ್ಚಳದೊಂದಿಗೆ ವಾಣಿಜ್ಯ ಸಿಲಿಂಡರ್ ದರ ₹2,983 ರಿಂದ ₹2,994.50 ಕ್ಕೆ ತಲುಪಿದೆ. ಚೆನ್ನೈನಲ್ಲಿ ಗೃಹಬಳಕೆ ಸಿಲಿಂಡರ್ ಬೆಲೆ ₹957.50 ಯಲ್ಲಿಯೇ ಮುಂದುವರಿದಿದೆ.

45
ಮುಂಬೈ ಮತ್ತು ಅಹಮದಾಬಾದ್‌ನಲ್ಲಿ ದರ ಸ್ಥಿತಿ

ಮುಂಬೈನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ₹2,764 ಕ್ಕೆ ತಲುಪಿದ್ದು, ಗೃಹಬಳಕೆ ಸಿಲಿಂಡರ್ ಬೆಲೆ ₹941.50 ಯಲ್ಲಿ ಸ್ಥಿರವಾಗಿದೆ. ಅಹಮದಾಬಾದ್‌ನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ₹10.50 ಏರಿಕೆಯಾಗಿ ₹2,831.50 ರಿಂದ ₹2,842 ಕ್ಕೆ ತಲುಪಿದ್ದರೆ, ಅಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ ₹949 ಯಲ್ಲಿ ಬದಲಾಗದೆ ಉಳಿದಿದೆ.

55
ಬೆಂಗಳೂರಿನಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ಈ ರೀತಿಯಾಗಿದೆ
  • 14.2 ಕೆಜಿ: 944.50 ರೂಪಾಯಿ
  • 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 2898 ರೂಪಾಯಿ
  • 5 ಕೆಜಿ ಸಿಲಿಂಡರ್ ಬೆಲೆ 350 ರೂಪಾಯಿ
  • 47.5 ಕೆಜಿ ಸಿಲಿಂಡರ್ ಬೆಲೆ 7.240 ರೂಪಾಯಿ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories