ಹಾರ್ಡ್ ವರ್ಕ್ ಮಾತ್ರವಲ್ಲ, ಸ್ಮಾರ್ಟ್ ವರ್ಕ್‌ನಿಂದಲೂ ಬ್ಯುಸಿನೆಸ್ ಮಾಡಬಹುದೆಂದ ಚಾಣಕ್ಯನ ಸೂತ್ರಗಳಿವು

Published : Apr 01, 2026, 10:33 AM IST

Chanakya Business Tips : ಬ್ಯುಸಿನೆಸ್ ನಲ್ಲಿ ಸಕ್ಸಸ್ ಸಿಗೋದು ಬಹಳ ಕಷ್ಟ. ಕೆಲವೊಮ್ಮೆ ಎಷ್ಟೇ ದುಡಿದ್ರೂ ಯಶಸ್ಸು ಸಿಗೋದಿಲ್ಲ. ಅಂಥವರು ಏನು ಮಾಡ್ಬೇಕು ಅಂತ ಚಾಣಕ್ಯ ಹೇಳಿದ್ದಾರೆ. 

PREV
17
ಚಾಣಕ್ಯನ ಮಂತ್ರ

ಜೀವನದಲ್ಲಿ ಯಶಸ್ಸು ಗಳಿಸ್ಬೇಕು ಅಂದ್ರೆ ಕಠಿಣ ಪರಿಶ್ರಮ ಅತ್ಯಗತ್ಯ. ಅದ್ರ ಜೊತೆ ಸರಿಯಾದ ನಿರ್ದೇಶನ ಮತ್ತು ತಿಳುವಳಿಕೆ ಮುಖ್ಯವಾಗುತ್ತೆ. ಅನೇಕ ಬಾರಿ ಬಹಳಷ್ಟು ಪ್ರಯತ್ನ ಮಾಡಿದ್ರೂ ಜನರಿಗೆ ಸಕ್ಸಸ್ ಮರೀಚಿಕೆಯಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ಸೂಕ್ತ ಮಾರ್ಗದರ್ಶನದ ಕೊರತೆ. ನೀವು ಮಾಡುವ ಕೆಲ್ಸದಲ್ಲಿ, ಬ್ಯುಸಿನೆಸ್ ನಲ್ಲಿ ಸಕ್ಸಸ್ ಕಾಣ್ಬೇಕು, ಲಾಭವಾಗ್ಬೇಕು, ಸುಖಕರ ಜೀವನ ಬೇಕು ಎನ್ನುವವರು ಆಚಾರ್ಯ ಚಾಣಕ್ಯರ ತತ್ವಗಳನ್ನು ಪಾಲಿಸಬೇಕು. ಆಚಾರ್ಯ ಚಾಣಕ್ಯ ಬ್ಯುಸಿನೆಸ್ ಮತ್ತು ವೃತ್ತಿಜೀವನದಲ್ಲಿ ಪ್ರಗತಿ ಸಾಧಿಸಲು ಸೂಕ್ತ ಮಾರ್ಗದರ್ಶನ ನೀಡಿದ್ದಾರೆ.

27
ಕೆಲಸದ ಆರಂಭ ಹೀಗಿರಲಿ

ಚಾಣಕ್ಯರ ಪ್ರಕಾರ, ಯಾವುದೇ ಕೆಲಸ ಪ್ರಾರಂಭಿಸುವ ಮೊದಲು ಆಳವಾಗಿ ಯೋಚಿಸಬೇಕು. ನೀವು ಈ ಕೆಲಸವನ್ನು ಏಕೆ ಮಾಡ್ತೀರಿ, ಅದರ ಫಲಿತಾಂಶ ಏನಾಗುತ್ತೆ, ಅದರಿಂದ ಲಾಭವಿದ್ಯಾ, ಅದನ್ನು ಮಾಡಲು ನೀವು ಸಮರ್ಥರಾ ಎಂಬ ಪ್ರಶ್ನೆಗಳಿಗೆ ಮೊದಲು ಉತ್ತರ ಕಂಡ್ಕೊಳ್ಳಿ. ಇದ್ರಿಂದ ತಪ್ಪು ನಿರ್ಧಾರ ತೆಗೆದುಕೊಳ್ಳುವುದು ತಪ್ಪುತ್ತದೆ.

37
ಕೆಲಸ ಅರ್ಧಕ್ಕೆ ಬಿಡಬೇಡಿ

ಕೆಲಸ ಶುರು ಮಾಡಿದ ಆರಂಭದಲ್ಲೇ ಸಕ್ಸಸ್ ಸಿಗೋದಿಲ್ಲ. ಆರಂಭದಲ್ಲಿ ಅಡೆತಡೆಗಳು ಸಹಜ. ಇದ್ರಿಂದ ಬೇಸರಗೊಳ್ಳುವ ಅನೇಕರು ಸೋಲೊಪ್ಪಿಕೊಳ್ತಾರೆ. ಭಯದಲ್ಲಿ ಕೆಲ್ಸವನ್ನ ಅರ್ಧಕ್ಕೆ ಬಿಟ್ಟುಬಿಡ್ತಾರೆ. ಯಾವುದೇ ಕೆಲ್ಸವನ್ನು ಪೂರ್ಣಗೊಳಿಸುವುದು ನಿಜವಾದ ಯಶಸ್ಸು ಎಂದು ಚಾಣಕ್ಯ ಹೇಳುತ್ತಾರೆ. ಅಪೂರ್ಣ ಕೆಲಸ ಎಂದಿಗೂ ಮನ್ನಣೆಯನ್ನು ಸೃಷ್ಟಿಸುವುದಿಲ್ಲ.

47
ಯಶಸ್ಸಿನ ರಹಸ್ಯ ಗುಟ್ಟಾಗಿರಲಿ

ಚಾಣಕ್ಯನ ನೀತಿಯ ಪ್ರಕಾರ, ನೀವು ನಿಮ್ಮ ಪ್ಲಾನ್ ಮತ್ತು ಯಶಸ್ಸಿನ ರಹಸ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು. ನಿಮ್ಮ ಖುಷಿಯನ್ನು ನೀವು ಹಂಚಿಕೊಂಡ್ರೂ ಅದು ನಿಮಗೆ ಲಾಭದ ಬದಲು ನಷ್ಟಕ್ಕೆ ಕಾರಣವಾಗುತ್ತದೆ. ನಿಮ್ಮ ಯಶಸ್ಸಿನ ಗುಟ್ಟನ್ನು ಎಲ್ಲರಿಗೂ ಬಹಿರಂಗಪಡಿಸಿದರೆ ಅದನ್ನು ಬೇರೆಯವರು ಫಾಲೋ ಮಾಡ್ಬಹುದು. ಇದ್ರಿಂದ ಅವರು ಲಾಬಪಡೆಯುತ್ತಾರೆ. ನಿಮ್ಮ ಪ್ಲಾನ್ ಜಾರಿಗೆ ತಂದು ಅವರು ಸಕ್ಸಸ್ ಆಗ್ತಾರೆ. ಹಾಗಾಗಿ ನಿಮ್ಮ ಯಶಸ್ಸಿನ ರಹಸ್ಯವನ್ನು ಎಂದಿಗೂ ಯಾರಿಗೂ ಹೇಳ್ಬೇಡಿ.

57
ಅತಿಯಾದ ಪ್ರಾಮಾಣಿಕತೆ ಹಾನಿಕಾರಕ

ಅತಿಯಾದ ಪ್ರಾಮಾಣಿಕತೆ ಎಲ್ಲೆಡೆ ಸರಿಯಲ್ಲ ಎಂದು ಚಾಣಕ್ಯ ನಂಬುತ್ತಾರೆ. ಅತಿಯಾದ ಪ್ರಾಮಾಣಿಕರು ಇತರರಿಗೆ ಸುಲಭ ಗುರಿಯಾಗುತ್ತಾರೆ. ಪ್ರತಿ ಬಾರಿಯೂ ನೀವು ಬುದ್ಧಿವಂತಿಕೆಯಿಂದ ವರ್ತಿಸಬೇಕು. ನಿಮ್ಮ ಸ್ವಂತ ಹಿತಾಸಕ್ತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲ್ಸ ಮಾಡಬೇಕು.

67
ಸಂಬಂಧದ ಹಿಂದಿನ ಸ್ವಾರ್ಥ ಅರ್ಥಮಾಡಿಕೊಳ್ಳಿ

ಚಾಣಕ್ಯನ ಪ್ರಕಾರ, ಪ್ರತಿಯೊಂದು ಸಂಬಂಧದ ಹಿಂದೆಯೂ ಕೆಲವು ರೀತಿಯ ಸ್ವಾರ್ಥ ಅಡಗಿರುತ್ತದೆ. ಇದು ವ್ಯವಹಾರಕ್ಕೆ ಮಾತ್ರವಲ್ಲದೆ ವೈಯಕ್ತಿಕ ಜೀವನಕ್ಕೂ ಅನ್ವಯಿಸುತ್ತದೆ. ಆದ್ದರಿಂದ, ಜನರನ್ನು ಬುದ್ಧಿವಂತಿಕೆಯಿಂದ ನಂಬಿ ಮತ್ತು ನಷ್ಟಗಳನ್ನು ತಪ್ಪಿಸಲು ಸರಿಯಾದ ದಾರಿಯನ್ನು ಪಾಲಿಸಿ.

77
ಬುದ್ಧಿವಂತಿಕೆ

ಚಾಣಕ್ಯನ ಈ ಐದು ಮಂತ್ರಗಳು ಯಶಸ್ಸು ಕೇವಲ ಕಠಿಣ ಪರಿಶ್ರಮದಿಂದಲ್ಲ, ಸರಿಯಾದ ಚಿಂತನೆ, ತಾಳ್ಮೆ, ರಹಸ್ಯ ಮತ್ತು ಬುದ್ಧಿವಂತಿಕೆಯಿಂದ ಬರುತ್ತದೆ ಎಂದು ಸ್ಪಷ್ಟವಾಗಿ ಸೂಚಿಸುತ್ತವೆ. ಈ ತತ್ವಗಳನ್ನು ನಿಮ್ಮ ಜೀವನ ಮತ್ತು ವ್ಯವಹಾರದಲ್ಲಿ ಅಳವಡಿಸಿಕೊಂಡರೆ, ಯಶಸ್ಸಿನ ಹಾದಿಯು ತುಂಬಾ ಸುಲಭವಾಗುತ್ತದೆ. ಯಾವುದೇ ಕಠಿಣ ಪರಿಶ್ರಮ ಇಲ್ಲದೆ ಸುಲಭವಾಗಿ ನೀವು ಯಶಸ್ಸನ್ನು ಸಾಧಿಸಬಹುದು.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories