ಏಪ್ರಿಲ್ 1 ರಿಂದ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ₹218 ರಷ್ಟು ಭಾರೀ ಏರಿಕೆಯಾಗಿದೆ. ಈ ಬೆಲೆ ಏರಿಕೆಯು ಹೋಟೆಲ್ ಮತ್ತು ಇತರೆ ವ್ಯಾಪಾರಗಳ ಮೇಲೆ ನೇರ ಪರಿಣಾಮ ಬೀರಲಿದ್ದು, ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಮಧ್ಯಪ್ರಾಚ್ಯದ ಯುದ್ದದ ಭೀಕರ ಪರಿಣಾಮ ಭಾರತದ ಅಡುಗೆಮನೆ ಮತ್ತು ಹೋಟೆಲ್‌ಗಳ ಮೇಲೆ ಬೀರಿದ್ದು, ಇಂದು ಮತ್ತೆ ಬೆಲೆ ಏರಿಕೆಯಾಗಿದೆ. ಮಾರ್ಚ್‌ನಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳವಾಗಿತ್ತು. ಇಂದು ಮತ್ತೆ ಏರಿಕೆಯಾಗಿರುವ ಬೆಲೆ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ.
25
19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ
19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 218 ರೂ.ಗಳಷ್ಟು ಏರಿಕೆಯಾಗಿದೆ. ಹೊಸ ದರಗಳ ಅನುಷ್ಠಾನದೊಂದಿಗೆ ಇಂದಿನಿಂದಲೇ (ಏಪ್ರಿಲ್ 1, 2026) ಅನ್ವಯವಾಗಲಿವೆ. ತೈಲ ಕಂಪನಿಗಳು ದೇಶಾದ್ಯಂತದ ಪ್ರಮುಖ ನಗರಗಳಲ್ಲಿ ಇತ್ತೀಚಿನ ಅನಿಲ ಬೆಲೆಗಳನ್ನು ಸಹ ಬಿಡುಗಡೆ ಮಾಡಿವೆ.
35
ಎಷ್ಟಾಗಿದೆ ದರ?
ಬೆಲೆ ಏರಿಕೆ ನಂತ್ರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಸಿಲಿಂಡರ್ ಬೆಲೆ ಏಪ್ರಿಲ್ 1 ರಿಂದ ₹2078.50 ಆಗಿದೆ. ಮಾರ್ಚ್‌ನಲ್ಲಿ ಸಿಲಿಂಡರ್‌ನ ಬೆಲೆ ₹1883, ಇಂದು ₹195.50 ಹೆಚ್ಚಳವಾಗಿದೆ. ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಕೆಯಾಗಿರೋದು ನೆಮ್ಮದಿಯ ಸುದ್ದಿ ಆಗಿದೆ.
ಚೆನ್ನೈನಲ್ಲಿ, ಸಿಲಿಂಡರ್ ಬೆಲೆ ಇಂದಿನಿಂದ 2246.50 ರೂ.ಗಳಷ್ಟು ಆಗಿದೆ. ಕೋಲ್ಕತ್ತಾದಲ್ಲಿ 19 ಕೆಜಿ ಸಿಲಿಂಡರ್ ಬೆಲೆ ಇಂದಿನಿಂದ 2208 ರೂಪಾಯಿ ಆಗಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 2 ಸಾವಿರ ರೂಪಾಯಿಯ ಆಸುಪಾಸಿಗೆ ಬಂದು ನಿಂತಿದೆ.
ಈಗಾಗಲೇ ಸಿಲಿಂಡರ್ ಪೂರೈಕೆಯಲ್ಲಿನ ವ್ಯತ್ಯಯದಿಂದ ನಗರದಲ್ಲಿನ ಹಲವು ಸಣ್ಣ ಪ್ರಮಾಣದ ಹೋಟೆಲ್‌ಗಳು ಬಾಗಿಲು ಹಾಕಿಕೊಂಡಿವೆ. ಇದೀಗ ಬೆಲೆ ಏರಿಕೆ ವ್ಯಾಪಾರಿಗಳಿಗೆ ಬಿಗ್ ಶಾಕ್ ನೀಡಿದೆ.
55
ಮಾರ್ಚ್ ನಲ್ಲಿಯೂ ಏರಿಕೆಯಾಗಿತ್ತು
ಮಾರ್ಚ್ 1 ರಂದು 19 ಕೆಜಿ ಸಿಲಿಂಡರ್ ಬೆಲೆಯನ್ನು 114.5 ರೂ. ಹೆಚ್ಚಿಸಲಾಗಿತ್ತು. 14.2 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಮಾರ್ಚ್ 7 ರಂದು ಎಲ್‌ಪಿಜಿ ಬೆಲೆಯಲ್ಲಿ 60 ರೂ.ಗಳಷ್ಟು ಹೆಚ್ಚಿಸಲಾಗಿತ್ತು.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಅಂತರರಾಷ್ಟ್ರೀಯ ಮಾರುಕಟ್ಟೆ ಮಾನದಂಡಗಳು ಮತ್ತು ಡಾಲರ್-ರೂಪಾಯಿ ವಿನಿಮಯ ದರದ ಆಧಾರದ ಮೇಲೆ ಪ್ರತಿ ತಿಂಗಳ ಮೊದಲ ದಿನದಂದು ಎಟಿಎಫ್ ಮತ್ತು ಎಲ್‌ಪಿಜಿ ಬೆಲೆಗಳನ್ನು ಪರಿಷ್ಕರಿಸುತ್ತವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.