BSNL ದೀಪಾವಳಿ ಭರ್ಜರಿ ಆಫರ್, ಕೇವಲ 1 ರೂಪಾಯಿಗೆ ಅನ್‌ಲಿಮಿಟೆಡ್ ಕಾಲ್, ಡೇಟಾ ಘೋಷಿಸಲಾಗಿದೆ. ಬಿಎಸ್ಎನ್ಎಲ್ ಬಳಕೆದಾರರು, ಹೊಸ ಗ್ರಾಹಕರಿಗೆ ದೀಪಾವಳಿ ಬೋನಾನ್ಜಾ ಆಫರ್ ನೀಡಲಾಗಿದೆ. ಆಫರ್ ಮಾಹಿತಿ ಇಲ್ಲಿದೆ.
ದೀಪಾವಳಿಗೆ ಬಿಎಸ್ಎನ್ಎಲ್ ಭರ್ಜರಿ ಆಫರ್ ಘೋಷಿಸಿದೆ. ದೀಪಾವಳಿ ಬೋನಾನ್ಜಾ ಆಫರ್ ಮೂಲಕ ಗ್ರಾಹಕರಿಗೆ ಕೇವಲ 1 ರೂಪಾಯಿಗೆ ಅನ್‌ಲಿಮಿಚೆಡ್ ಡೇಟಾ ಹಾಗೂ ಕಾಲ್ ಆಫರ್ ನೀಡಲಾಗಿದೆ. 1 ರೂಪಾಯಿಗೆ ಇಡೀ ತಿಂಗಳು ಬಿಎಸ್ಎನ್ಎಲ್ ಹಲವ ಆಫರ್ ಅನುಭವಿಸಬಹುದು. ಇದು ಸೀಮಿತ ಅವಧಿಯ ಆಫರ್.
26
ಒಂದು ತಿಂಗಳವರೆಗೆ ಇರಲಿದೆ ಆಫರ್
ಒಂದು ತಿಂಗಳವರೆಗೆ ಇರಲಿದೆ ಆಫರ್
ಬಿಎಸ್ಎನ್ಎಲ್ ದೀಪಾವಳಿ ಬಂಪರ್ ಆಫರ್ ಅಕ್ಟೋಬರ್ 15 ರಿಂದ ನವೆಂಬರ್ 15ರ ವರೆಗೆ ಇರಲಿದೆ. ಒಂದು ತಿಂಗಳು ಈ ಆಫರ್ ರೀಚಾರ್ಜ್ ಮಾಡಲು, ಆ್ಯಕ್ಟಿವೇಟ್ ಮಾಡಲು ಅವಕಾಶವಿದೆ. ಅಗಸ್ಟ್ ತಿಂಗಳಲ್ಲೇ ಇದೇ ರೀತಿ ಬಿಎಸ್ಎನ್ಎಲ್ ಫ್ರೀಡಂ ಆಫರ್ ಘೋಷಣೆ ಮಾಡಿತ್ತು.
36
ಬಿಎಸ್ಎನ್ಎಲ್ 1 ರೂಪಾಯಿ ಆಫರ್
ಬಿಎಸ್ಎನ್ಎಲ್ 1 ರೂಪಾಯಿ ಆಫರ್
ದೀಪಾವಳಿ ಆಫರ್ ಮೂಲಕ ಹೊಸ ಗ್ರಾಹಕರಿಗೆ ಬಿಎಸ್ಎನ್ಎಲ್ 4ಜಿ ಸಿಮ್ ಕೇವಲ 1 ರೂಪಾಯಿಗೆ ಸಿಗಲಿದೆ. 1 ರೂಪಾಯಿ ನೀಡಿ ಬಿಎಸ್ಎನ್ಎಲ್ ಸಿಮ್ ಖರೀದಿಸಿದ ಬಳಿಕ ಆ್ಯಕ್ಚಿವೇಟ್ ಆಗಲಿದೆ. ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲ್ ಸೇವೆ ಸಿಗಲಿದೆ. ಪ್ರತಿ ದಿನ 2ಜಿಬಿ ಹೈಸ್ಪೀಡ್ ಡೇಟಾ ಸಿಗಲಿದೆ.
ಬಿಎಸ್ಎನ್ಎಲ್ 1 ರೂಪಾಯಿ ಪ್ಲಾನ್‌ನಲ್ಲಿ 30 ದಿನ ವ್ಯಾಲಿಟಿಡಿ ಇರಲಿದೆ. ದೀಪಾವಳಿ ಆಫರ್ ಮುಗಿದ ಬಳಿಕ ಬಿಎಸ್ಎನ್ಎಲ್ ಸಾಮಾನ್ಯ ರೀಚಾರ್ಜ್ ಮೂಲಕ ಸಿಮ್ ಸಕ್ರಿಯವಾಗಿಡಲು ಸಾಧ್ಯವಿದೆ. ಇಷ್ಟೇ ಅಲ್ಲ ಅವಶ್ಯಕತೆಗೆ ತಕ್ಕಂತೆ ಕಡಿಮೆ ಬೆಲೆಯ ಉತ್ತಮ ಪ್ಲಾನ್ ರೀಚಾರ್ಜ್ ಮಾಡಿಕೊಳ್ಳಬಹುದು.
56
1ರೂಪಾಯಿ ಆಫರ್ ಪಡೆಯುವುದು ಹೇಗೆ?
1ರೂಪಾಯಿ ಆಫರ್ ಪಡೆಯುವುದು ಹೇಗೆ?
ಹೊಸ ಗ್ರಾಹಕರು ಹತ್ತಿರದ ಬಿಎಸ್ಎನ್ಎಲ್ ಕೇಂದ್ರಕ್ಕೆ ತೆರಳಿ ಹೊಸ ಸಿಮ್ ಖರೀದಿಸಬೇಕು. 1 ರೂಪಾಯಿ ನೀಡಿ ಸಿಮ್ ಖರೀದಿಸಿದರೆ ಸಾಕು, ಇನ್ನು ಕೆವೈಸಿ ಸೇರಿದಂತೆ ಅಗತ್ಯ ದಾಖಲೆ ಸಲ್ಲಿಕೆ ಮಾಡಿದರೆ ಗಂಟೆಗಳ ಅವಧಿಯಲ್ಲಿ ಸಿಮ್ ಆ್ಯಕ್ಟಿವೇಟ್ ಆಗಲಿದೆ. ಇದು ಲಿಮಿಟೆಡ್ ಪಿರೀಯೆಡ್ ಆಫರ್, ಹೀಗಾಗಿ ಹೊಸದಾಗಿ ಸಿಮ್ ಖರೀದಿಸಿದರೆ ಅಕ್ಟೋಬರ್ 15 ರಿಂದ ನವೆಂಬರ್ 15ರ ಒಳಗೆ ಆ್ಯಕ್ಟಿವೇಟ್ ಮಾಡಿಕೊಳ್ಳಬೇಕು.
66
ಬಿಎಸ್ಎನ್ಎಲ್ ಸಹಾಯವಾಣಿ
ಬಿಎಸ್ಎನ್ಎಲ್ ಸಹಾಯವಾಣಿ
ದೀಪಾವಳಿ ಆಫರ್‌ನಲ್ಲಿ ಸಮಸ್ಯೆ ಎದುರಾದರ ಬಿಎಸ್ಎನ್ಎಲ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಬಿಎಸ್ಎನ್ಎಲ್ ಅಧಿಕೃತ ವೆಬ್‌ಸೈಟ್ ಅಥವಾ 1800-180-1503 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.