ಸೂಪರ್‌ಹಿಟ್ ಸಿನ್ಮಾದಲ್ಲಿ ನಟಿಸಿ ಬಾಲಿವುಡ್‌ ತೊರೆದ ನಟ, ಈಗ ಸಕ್ಸಸ್‌ಫುಲ್‌ ಉದ್ಯಮಿ, ಕೋಟಿ ಆಸ್ತಿಯ ಒಡೆಯ!

Published : Oct 15, 2023, 12:55 PM IST

ಅಮೀರ್‌ ಖಾನ್ ಅಭಿನಯದ 'ರಂಗ್ ದೇ ಬಸಂತಿ' ಚಿತ್ರದಲ್ಲಿ ಅಮೀರ್‌ಖಾನ್‌ ಜೊತೆ ನಟಿಸಿದ್ದ ನಟ. ಈಗ ಮ್ಮದೇ ಆದ ಕಂಪನಿಯನ್ನು ಆರಂಭಿಸಿ ಸಕ್ಸಸ್‌ ಆಗಿದ್ದಾರೆ. ಬರೋಬ್ಬರಿ 110 ಕೋಟಿ ರೂ. ಕಂಪೆನಿ ಆಸ್ತಿಯ ಒಡೆಯ.

PREV
18
ಸೂಪರ್‌ಹಿಟ್ ಸಿನ್ಮಾದಲ್ಲಿ ನಟಿಸಿ ಬಾಲಿವುಡ್‌ ತೊರೆದ ನಟ, ಈಗ ಸಕ್ಸಸ್‌ಫುಲ್‌ ಉದ್ಯಮಿ, ಕೋಟಿ ಆಸ್ತಿಯ ಒಡೆಯ!

ರಂಗ್ ದೇ ಬಸಂತಿಯನ್ನು ಭಾರತದ ಅತ್ಯಂತ ಜನಪ್ರಿಯ ಮತ್ತು ಕ್ಲಾಸಿಕ್ ಚಲನಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅಮೀರ್‌ ಖಾನ್ ಈ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದರು. ಆದರೆ ಈ ಸಿನಿಮಾದಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದ ನಟರೊಬ್ಬರು ಈಗ ಯಶಸ್ವಿ ಉದ್ಯಮಿಯಾಗಿದ್ದಾರೆ. ಅಮೀರ್ ಖಾನ್ ಅವರ ಸಹ ನಟ ಕುನಾಲ್ ಕಪೂರ್ ವರ್ಷಗಳ ಹಿಂದೆ ತಮ್ಮದೇ ಆದ ಕಂಪನಿಯನ್ನು ಆರಂಭಿಸಲು ನಿರ್ಧರಿಸಿದರು. 

28

ವಾಣಿಜ್ಯೋದ್ಯಮಿ ಹೂಡಿಕೆದಾರರಾಗಿ ಬದಲಾಗುತ್ತಿರುವ ಕುನಾಲ್ ಕಪೂರ್ ಅವರು ಕೆಟ್ಟೊದ ಸಹ-ಸಂಸ್ಥಾಪಕರಾಗಿದ್ದಾರೆ. ಇದು ವ್ಯಾಪಕವಾಗಿ ಜನಪ್ರಿಯವಾಗಿರುವ ಕ್ರೌಡ್-ಫಂಡಿಂಗ್ ವೇದಿಕೆಯಾಗಿದೆ. ವ್ಯಾಪಾರ ಪಾಲುದಾರರಾದ ಜಹೀರ್ ಅಡೆನ್‌ವಾಲಾ ಮತ್ತು ವರುಣ್ ಶೇತ್ ಅವರೊಂದಿಗೆ ಕಪೂರ್ 2012 ರಲ್ಲಿ ಕೆಟ್ಟೋವನ್ನು ಸ್ಥಾಪಿಸಿದರು.

38

ರಂಗ್ ದೇ ಬಸಂತಿಯ ವ್ಯಾಪಕ ಯಶಸ್ಸು ಕುನಾಲ್ ಕಪೂರ್‌ಗೆ ಬಾಲಿವುಡ್‌ನಲ್ಲಿ ಹೆಚ್ಚು ಯಶಸ್ಸನ್ನು ತಂದು ಕೊಟ್ಟಿತು. ಆದರೆ ಕೆಲವು ಸಣ್ಣ ಹಿಟ್‌ಗಳ ನಂತರ, ನಟ ಚಿತ್ರರಂಗದಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದರು.

48

ಕಪೂರ್ ಅವರು ಉದ್ಯಮಶೀಲತೆಗೆ ಹೆಚ್ಚು ಒಲವು ಹೊಂದಿದ್ದರು ಮತ್ತು ಎನ್‌ಜಿಒಗಳಿಗೆ ಸಕ್ರಿಯ ದಾನಿಯಾಗಿದ್ದರು. ಇದು ಕೆಟ್ಟೋವನ್ನು ಆರಂಭಿಸಲು ಅವರನ್ನು ಪ್ರೇರೇಪಿಸಿತು.

58

ಕುನಾಲ್ ಕಪೂರ್ ಕೇವಲ 16 ವರ್ಷದವರಾಗಿದ್ದಾಗ ಉದ್ಯಮ ಆರಂಭಿಸಲು ಉತ್ಸಾಹ ತೋರಿದರು. ಹಾಂಗ್ ಕಾಂಗ್‌ಗೆ ಮಾವಿನಹಣ್ಣನ್ನು ರಫ್ತು ಮಾಡಲು ಪ್ರಯತ್ನಿಸಿದರು. ಕೆಟ್ಟೋ ಕುನಾಲ್ ಕಪೂರ್ ಅವರ ಎರಡನೇ ಬಿಸಿನೆಸ್ ಪ್ಲಾನ್ ಅಗಿದೆ ಮತ್ತು ಇದು ಅತಿ ಬೇಗನೇ ಸಕ್ಸಸ್ ಆಯಿತು.

68

ಅಗತ್ಯವಿರುವ ಜನರು ಮತ್ತು ಸಹಾಯ ಮಾಡುವವರ ನಡುವಿನ ಅಂತರವನ್ನು ಕಡಿಮೆ ಮಾಡುವುದು, ಎನ್‌ಜಿಒಗಳ ಪಾತ್ರವನ್ನು ನಿರಾಕರಿಸುವುದು ಮತ್ತು ಕ್ರೌಡ್-ಫಂಡಿಂಗ್ ವೆಚ್ಚವನ್ನು ಕಡಿತಗೊಳಿಸುವುದು ಕೆಟ್ಟೋ ಹಿಂದಿನ ಮುಖ್ಯ ಆಲೋಚನೆಯಾಗಿದೆ. ಒಂದು ಕಾರಣಕ್ಕಾಗಿ ಹಣವನ್ನು ಸಂಗ್ರಹಿಸುವಲ್ಲಿ ಕೆಟ್ಟೋ ಪ್ರಸ್ತುತ 70 ಪ್ರತಿಶತದಷ್ಟು ಯಶಸ್ಸಿನ ಪ್ರಮಾಣವನ್ನು ಹೊಂದಿದೆ.

78

ಇಲ್ಲಿಯವರೆಗೆ, ಕೆಟ್ಟೋ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಿವಿಧ ಕಾರಣಗಳಿಗಾಗಿ USD 150 ಮಿಲಿಯನ್ (ರೂ. 1,249 ಕೋಟಿ) ಸಂಗ್ರಹಿಸಿದೆ. ಸ್ಟಾರ್ಟ್‌ಅಪ್ ಒಟ್ಟು ರೂ 110 ಕೋಟಿ ಆದಾಯವನ್ನು ಹೊಂದಿದೆ.

88

ವರದಿಗಳ ಪ್ರಕಾರ ನಟ ಮತ್ತು ಸಹ-ಸಂಸ್ಥಾಪಕ ಕುನಾಲ್ ಕಪೂರ್ 166 ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾರೆ. ಉದ್ಯಮವನ್ನು ಸಕ್ಸಸ್‌ಫುಲ್ ಆಗಿ ಮುನ್ನಡೆಸುತ್ತಿದ್ದಾರೆ.

Read more Photos on
click me!

Recommended Stories