ಶ್ರೀಮಂತಿಕೆಯಲ್ಲಿ ಸುಂದರ್‌ ಪಿಚೈ, ಸತ್ಯ ನಾಡೆಲ್ಲಾರನ್ನು ಹಿಂದಿಕ್ಕಿದ ಭಾರತೀಯ ಮೂಲದ ಮಹಿಳಾ ಉದ್ಯಮಿ!

First Published | Oct 14, 2023, 2:20 PM IST

ಈ ವಾರ ಬಿಡುಗಡೆಯಾದ ಹುರುನ್ ಇಂಡಿಯಾದ ಶ್ರೀಮಂತರ ಪಟ್ಟಿ 2023 ರ ಪ್ರಕಾರ, ರಾಷ್ಟ್ರದಲ್ಲಿ 259 ಬಿಲಿಯನೇರ್‌ ಶ್ರೀಮಂತರಿದ್ದಾರೆ (2022 ರಲ್ಲಿ 221), ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದಾರೆ. ಭಾರತೀಯ ಮೂಲದ ವ್ಯವಸ್ಥಾಪಕರು, ಉದ್ಯಮಿಗಳಾಗಿರುವ   ಅಸಾಧಾರಣ ನಿವ್ವಳ ಮೌಲ್ಯವನ್ನು ಹೊಂದಿರುವ ವೃತ್ತಿಪರರು ಕೂಡ ಈ ಪಟ್ಟಿಯಲ್ಲಿದ್ದಾರೆ. ಗಮನಾರ್ಹ ವಿಷಯವೆಂದರೆ ವೃತ್ತಿಪರ ಮ್ಯಾನೇಜರ್‌ಗಳನ್ನು ಹುರುನ್ ಇಂಡಿಯಾ ರಿಚ್ ಲಿಸ್ಟ್ 2023 ರಲ್ಲಿ ಹೆಸರಿಸಲಾಗಿದೆ.  ಇದರಲ್ಲಿ ಸುಂದರ್ ಪಿಚೈ, ಸತ್ಯ ನಾಡೆಲ್ಲಾ ಅವರನ್ನು ಹಿಂದಿಕ್ಕಿ ಭಾರತೀಯ ಮೂಲದ ಮಹಿಳಾ ಉದ್ಯಮಿಯೊಬ್ಬರು ಸ್ಥಾನ ಪಡೆದಿದ್ದಾರೆ.

ಜಯಶ್ರೀ ಉಲ್ಲಾಲ್ ಅವರನ್ನು ಶ್ರೀಮಂತ ಭಾರತೀಯ ವೃತ್ತಿಪರ ಮ್ಯಾನೇಜರ್ ಎಂದು ಹುರುನ್ ಇಂಡಿಯಾ ರಿಚ್ ಲಿಸ್ಟ್ 2023  ಹೆಸರಿಸಿದೆ. ಅರಿಸ್ಟಾ ನೆಟ್‌ವರ್ಕ್‌ನ ಸಿಇಒ 20,800 ಕೋಟಿ ರೂ. ನಿವ್ವಳ ಮೌಲ್ಯವನ್ನು ಹೊಂದಿದ್ದು, ಇದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ (ರೂ. 7,500 ಕೋಟಿ) ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ (ರೂ. 5,400 ಕೋಟಿ) ಗಿಂತ ಹೆಚ್ಚು. 2008 ರಿಂದ, ಅವರು ಅರಿಸ್ಟಾ ನೆಟ್‌ವರ್ಕ್ಸ್‌ನ ಅಧ್ಯಕ್ಷರು ಮತ್ತು ಸಿಇಒ ಆಗಿ ಸೇವೆ ಸಲ್ಲಿಸಿದ್ದಾರೆ. ಅವಳು ಕಂಪನಿಗೆ ಸೇರಿದಾಗ ಕೇವಲ 50 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿತ್ತು. ಈಗ 3,600 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.

ಫೆಬ್ರವರಿಯಲ್ಲಿ ಫೋರ್ಬ್ಸ್ ವರದಿಯಂತೆ ಉಳ್ಳಾಲ್ 2.2 ಬಿಲಿಯನ್ ಡಾಲರ್ (ಸುಮಾರು 18,199 ಕೋಟಿ ರೂ.) ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇದು ಸಿಇಒ ಉಳ್ಳಾಲ್ ಅವರನ್ನು ಯುಎಸ್‌ನ ಅತ್ಯಂತ ಶ್ರೀಮಂತ ಸ್ವತಂತ್ರ ಮಹಿಳೆಯರಲ್ಲಿ ಒಬ್ಬರು ಎಂದು ಗುರುತಿಸಿದೆ. ಅವರ ಸಂಪತ್ತು ಅರಿಸ್ಟಾ ನೆಟ್‌ವರ್ಕ್ಸ್‌ನ ಸ್ಟಾಕ್‌ನಲ್ಲಿ ಶೇ.5 ಪಾಲುದಾರಿಕೆಯ ಲಾಭ ಪಡೆಯುತ್ತಾರೆ. ಉಳ್ಳಾಲ್ ಅವರು ತಮ್ಮ ಇಬ್ಬರು ಮಕ್ಕಳು, ಸೋದರಳಿಯ ಮತ್ತು ಸೊಸೆಗಾಗಿ  ದೊಡ್ಡ ಮೊತ್ತದ ಆಸ್ತಿಯನ್ನು ಮೀಸಲಿಟ್ಟಿದ್ದಾರೆ.

Tap to resize

ಲಂಡನ್‌ನಲ್ಲಿ ಜನಿಸಿದ ಉಳ್ಳಾಲ್   ಭಾರತದಲ್ಲಿ ಬೆಳೆದರು. ನವದೆಹಲಿಯಲ್ಲಿ ತಮ್ಮ ಶಾಲಾ ವಿದ್ಯಾಭ್ಯಾಸ ಪಡೆದರು. ಬಳಿಕ ಬಿ.ಎಸ್. ಸ್ಯಾನ್ ಫ್ರಾನ್ಸಿಸ್ಕೋ ಸ್ಟೇಟ್ ಯೂನಿವರ್ಸಿಟಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಮತ್ತು ನಂತರ ಸಾಂಟಾ ಕ್ಲಾರಾ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. 

1993 ರಲ್ಲಿ ಸಿಸ್ಕೋ ಸ್ವಾಧೀನಪಡಿಸಿಕೊಂಡ ಗ್ರಾಫಿಕ್ ಕಾರ್ಡ್ ಮೇಜರ್ ಅಡ್ವಾನ್ಸ್‌ಡ್ ಮೈಕ್ರೋ ಡಿವೈಸಸ್ (AMD) ಮತ್ತು ನಂತರ ಫೇರ್‌ಚೈಲ್ಡ್ ಸೆಮಿಕಂಡಕ್ಟರ್, ಉಂಗರ್‌ಮ್ಯಾನ್-ಬಾಸ್ ಮತ್ತು ಕ್ರೆಸೆಂಡೋ ಕಮ್ಯುನಿಕೇಶನ್‌ಗಳನ್ನು ಸೇರ್ಪಡೆಯಾಗುವ ಮೂಲಕ ಉಲ್ಲಾಲ್ ವೃತ್ತಿಪರ ಜಗತ್ತನ್ನು ಪ್ರವೇಶಿಸಿದರು. ಸಿಸ್ಕೊದೊಂದಿಗೆ 15 ವರ್ಷಗಳ ಅವಧಿಯ ಸುದೀರ್ಘ ಸೇವೆಯ ನಂತರ ಅವರು 2008 ರಲ್ಲಿ ಅರಿಸ್ಟಾಗೆ ಸೇರಿದರು. 

ಜಯಶ್ರೀ  ನೆಟ್ವರ್ಕಿಂಗ್ ಉದ್ಯಮದಲ್ಲಿ ಅಗ್ರ ಐದು ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು ಮತ್ತು  ವಿಶ್ವದ ಅತ್ಯುತ್ತಮ CEOಗಳಲ್ಲಿ ಒಬ್ಬರು ಎಂದು ಹೆಸರಿಸಲಾಗಿದೆ. 2014 ರಲ್ಲಿ ಯಶಸ್ವಿ ಐಪಿಒಗೆ ಅರಿಸ್ಟಾವನ್ನು ಮುನ್ನಡೆಸಿದರು.

ಜಯಶ್ರೀ  ನೆಟ್ವರ್ಕಿಂಗ್ ಉದ್ಯಮದಲ್ಲಿ ಅಗ್ರ ಐದು ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ  ಒಬ್ಬರು ಮತ್ತು  ವಿಶ್ವದ ಅತ್ಯುತ್ತಮ CEOಗಳಲ್ಲಿ ಒಬ್ಬರು ಎಂದು ಹೆಸರಿಸಲಾಗಿದೆ. 2014 ರಲ್ಲಿ ಯಶಸ್ವಿ ಐಪಿಒಗೆ ಅರಿಸ್ಟಾವನ್ನು ಮುನ್ನಡೆಸಿದರು. ಜಯಶ್ರೀ ಅವರು ವಿಜಯ್ ಉಲ್ಲಾಲ್ ಅವರನ್ನು ವಿವಾಹವಾಗಿದ್ದಾರೆ, ಸ್ವತಃ ಮಾಜಿ ಉನ್ನತ ಟೆಕ್ ಎಕ್ಸಿಕ್ಯೂಟಿವ್ ಆಗಿರುವ ಅವರು ಸಾಹಸೋದ್ಯಮ ಬಂಡವಾಳಗಾರರಾಗಿದ್ದಾರೆ.

ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಮತ್ತು ಕ್ಯಾಲಿಫೋರ್ನಿಯಾದ ಸರಟೋಗಾದಲ್ಲಿ ವಾಸಿಸುತ್ತಿದ್ದಾರೆ. ಉಲ್ಲಾಳ್‌ ಅವರ ದಿವಂಗತ ಸಹೋದರಿ ಸೂಸಿ ನಾಗ್‌ಪಾಲ್ ಯುಎಸ್‌ನ ಸರಟೋಗಾ ಸಿಟಿ ಕೌನ್ಸಿಲ್‌ನಲ್ಲಿರುವ ರಾಜಕಾರಣಿಯಾಗಿದ್ದರು.

Latest Videos

click me!