ಸಂಕಷ್ಟದ ನಡುವೆ ಬಿಕ್ ಶಾಕ್, ಡಾಲರ್ ಎದುರು 95.80 ಕ್ಕೆ ಕುಸಿದ ರೂಪಾಯಿ ಮೌಲ್ಯ, ಬೆಲೆ ಏರಿಕೆ ಬಿಸಿ

Published : May 13, 2026, 06:11 PM IST

ಪೆಟ್ರೋಲ್ ಡೀಸೆಲ್ ಕೊರತೆ, ವಿದೇಶಿ ವಿನಿಮಯ ಸಮಸ್ಯೆ, ಚಿನ್ನ ಆಮದು ಸವಾಲು ಸೇರಿದಂತೆ ಭಾರತದ ಆರ್ಥಿಕತೆ ಎಚ್ಚರಿಕೆ ನಡುವೆ ಮತ್ತೊಂದು ಆಘಾತ ಎದುರಾಗಿದೆ. ಡಾಲರ್ ಎದುರು ರೂಪಾಯಿ ದಾಖಲೆ ಕುಸಿತ ಕಂಡಿದೆ.

PREV
15
ರೂಪಾಯಿ ಸಾರ್ವಕಾಲಿಕ ಕುಸಿತ

ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ಭಾರತ ಸದ್ಯ ಆರ್ಥಿಕ ಪರಿಸ್ಥಿತಿ ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸುತ್ತಿರುವ ನಡುವೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಬಲಗೊಳ್ಳುತ್ತಿದೆ. ಇದರ ಪರಿಣಾಮ ರೂಪಾಯಿ ದಾಖಲೆ ಕುಸಿತ ಕಾಣುತ್ತಿದೆ. ಇಂದು ದಿನದ ವಹಿವಾಟು ಅಂತ್ಯದಲ್ಲಿ ಡಾಲರ್ ಎದುರು ರೂಪಾಯಿ 95.80 ರೂಪಾಯಿ ಕುಸಿತ ಕಂಡಿದೆ.

25
12 ಪೈಸೆ ಕುಸಿತ

ಮದ್ಯಪ್ರಾಚ್ಯ ದೇಶಗಳ ಯುದ್ಧ ಬೀತಿ, ಒಪ್ಪಂದದಲ್ಲಿ ಸಮನ್ವಯ ಕೊರತೆ, ಕಚ್ಚಾಟಗಳಿಂದ ಕಚ್ಚಾ ತೈಲ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದೆ. ತೈಲದ ಮೇಲೆ ಸಂಪೂರ್ಣ ಅವಲಂಬನೆಯಾಗಿರುವ ಭಾರತದ ಮೇಲೆ ಇದು ಒತ್ತಡ ಹೆಚ್ಚಿಸುತ್ತಿದೆ. ಇದೇ ವೇಳೆ ಯುದ್ಧದ ಪರಿಸ್ಥಿತಿಯಿಂದ ಜಾಗತಿಕ ಹೂಡಿಕೆದಾರರು ಡಾಲರ್ ಮೊರೆ ಹೋಗುತ್ತಿರುವುದು ಡಾಲರ್‌ನ್ನು ಮತ್ತಷ್ಟು ಬಲಗೊಳ್ಳುವಂತೆ ಮಾಡಿದ್ದು ಮಾತ್ರವಲ್ಲ, ಭಾರತದ ರೂಪಾಯಿ ದಿನದ ವಹಿವಾಟಿನಲ್ಲಿ 12 ಪೆೈಸೆ ಕುಸಿಯುವಂತೆ ಮಾಡಿದೆ.

35
ಮಾರುಕಟ್ಟೆಯಿಂದ ಬಂಡವಾಳ ವಾಪಾಸ್

ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಾಗಿದೆ. ಇದರ ಪರಿಣಾಮ ಭಾರತೀಯ ಷೇರುಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದೆ. ವಿದೇಶಿ ಹೂಡಿಕೆದಾರರು ತಮ್ಮ ಹಣಗಳನ್ನು ವಾಪಾಸ್ ಪಡೆಯುತ್ತಿದ್ದಾರೆ. ಇದರಿಂದ ಭಾರತದ ಆರ್ಥಿಕತೆ ಮೇಲೆ ತೀವ್ರ ಹೊಡೆತ ಬೀಳುತ್ತಿದೆ. ಯುದ್ಧದ ಪರಿಣಾಮ ಭಾರತಕ್ಕೆ ಇದೀಗ ತೀವ್ರವಾಗಿ ತಟ್ಟಲು ಆರಂಭಿಸಿದೆ.

45
ಹಣದುಬ್ಬರ ಆತಂಕ

ಕಚ್ಚಾ ತೈಲ ಬೆಲೆ ಏರಿಕೆ, ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತದಿಂದ ಆಮದು ಮಾಡಿಕೊಳ್ಳುವ ವಸ್ತುಗಳಿಗೆ ಭಾರತ ಹೆಚ್ಚಿನ ರೂಪಾಯಿ ವ್ಯಯಿಸಬೇಕಿದೆ. ಇದರಿಂದ ಆಮದು ವಸ್ತುಗಳ ಬೆಲೆ ಏರಿಕೆಯಾಗಲಿದೆ. ಇದರಿಂದ ಹಣದುಬ್ಬರ ಸಮಸ್ಯೆಗಳು ತೀವ್ರಗೊಳ್ಳಲಿದೆ.

55
ಜನಸಾಮಾನ್ಯರಿಗೆ ತಟ್ಟಲಿಗೆ ಬಿಸಿ

ಯುದ್ಧದಿಂದ ನಿರ್ಮಾಣವಾಗಿರುವ ಸದ್ಯದ ಪರಿಸ್ಥಿತಿಯಿಂದ ಜನಸಾಮಾನ್ಯರು ಹೈರಾಣಾಗುತ್ತಾರೆ. ಮಧ್ಯಮ ವರ್ಗ ಸೇರಿದಂತೆ ಜನಸಾಮಾನ್ಯರ ಜೇಬಿಗೆ ತೀವ್ರ ಹೊಡೆತ ನೀಡಲಿದೆ. ವಸ್ತುಗಳ ಬೆಲೆ ಏರಿಕೆ ಜೀವನ ನಿರ್ವಹಣೆಗೆ ಅಡ್ಡಿಯಾಗಲಿದೆ. ಇದರ ಜೊತೆಗೆ ಉದ್ಯೋಗ ಕಡಿತಗಳು ಹೆಚ್ಚಾಗಲಿದೆ.

ಜನಸಾಮಾನ್ಯರಿಗೆ ತಟ್ಟಲಿಗೆ ಬಿಸಿ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories