ಹೈಬ್ರಿಡ್ ಮಾದರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗಾಗಿ ವಿನ್ಯಾಸಗೊಳಿಸಲಾದ ಈ ವೇದಿಕೆಯು, ಭಾರತದ ಮೊಟ್ಟಮೊದಲ ಸಂಪೂರ್ಣ ನಿರ್ವಹಣೆಯ ಮತ್ತು ಏಕೀಕೃತ ಜೀರೋ ಟ್ರಸ್ಟ್ ಆರ್ಕಿಟೆಕ್ಚರ್ ಪರಿಹಾರ ನೀಡುತ್ತಿದೆ.
ಇಂದಿನ ಕೃತಕ ಬುದ್ಧಿಮತ್ತೆ ಆಧಾರಿತ ಯುಗದಲ್ಲಿ ಹೆಚ್ಚುತ್ತಿರುವ ಸೈಬರ್ ದಾಳಿಗಳನ್ನು ತಡೆಯಲು ಭಾರತದ ಪ್ರಮುಖ ದೂರಸಂಪರ್ಕ ಸಂಸ್ಥೆಯಾದ ಭಾರ್ತಿ ಏರ್ ಟೆಲ್ ನ ಬಿ2ಬಿ ವಿಭಾಗವಾದ ಏರ್ ಟೆಲ್ ಬಿಸಿನೆಸ್, ಏರ್ ಟೆಲ್ ಸೆಕ್ಯೂರ್ ವರ್ಕ್‌ಫೋರ್ಸ್ ಎಂಬ ನೂತನ ಭದ್ರತಾ ವ್ಯವಸ್ಥೆಯನ್ನು ಲೋಕಾರ್ಪಣೆ ಮಾಡಿದೆ. ಹೈಬ್ರಿಡ್ ಮಾದರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗಾಗಿ ವಿನ್ಯಾಸಗೊಳಿಸಲಾದ ಈ ವೇದಿಕೆಯು, ಭಾರತದ ಮೊಟ್ಟಮೊದಲ ಸಂಪೂರ್ಣ ನಿರ್ವಹಣೆಯ ಮತ್ತು ಏಕೀಕೃತ ಜೀರೋ ಟ್ರಸ್ಟ್ ಆರ್ಕಿಟೆಕ್ಚರ್ (ಝಡ್ ಟಿ ಎ) ಆಧಾರಿತ ಭದ್ರತಾ ಪರಿಹಾರವಾಗಿದ್ದು, ಉದ್ಯಮಗಳಿಗೆ ಬೇಕಾದ ಸಂಪೂರ್ಣ ಭದ್ರತಾ ವ್ಯವಸ್ಥೆಯನ್ನು ಒದಗಿಸುತ್ತದೆ.
25
ಆ್ಯಪ್ಲಿಕೇಶನ್ ಟು ಡೇಟಾ, ಸಂಪೂರ್ಣ ಭದ್ರತೆ
ಇಂದಿನ ಎಐ-ಚಾಲಿತ ಯುಗದಲ್ಲಿ, ಸೈಬರ್ ದಾಳಿಗಳು ಅತ್ಯಂತ ವೇಗವಾಗಿ ಮತ್ತು ಸಂಕೀರ್ಣವಾಗಿ ಬೆಳೆಯುತ್ತಿದ್ದು, 2025ರಲ್ಲೇ ಎರಡು ಮಿಲಿಯನ್ ಗಿಂತಲೂ ಹೆಚ್ಚು ಸೈಬರ್ ಭದ್ರತಾ ಘಟನೆಗಳು ವರದಿಯಾಗಿವೆ. ಈ ನಿಟ್ಟಿನಲ್ಲಿ ಏರ್ ಟೆಲ್ ನ ಈ ಹೆಜ್ಜೆ ಮಹತ್ವ ಪಡೆದುಕೊಂಡಿದೆ. ಏರ್ ಟೆಲ್ ನ ಪ್ಯಾನ್-ಇಂಡಿಯಾ ನೆಟ್ ವರ್ಕ್ ಮತ್ತು 24X7 ತಜ್ಞರ ಕಾವಲು ವ್ಯವಸ್ಥೆಯು ಈ ವೇದಿಕೆಗೆ ಶಕ್ತಿ ತುಂಬಿದೆ ಮತ್ತು ಭಾರತದ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ (ಡಿಪಿಡಿಪಿ) ಕಾಯ್ದೆಯ ನಿಯಮಗಳನ್ನು ಪಾಲಿಸಲು ಪೂರಕವಾಗಿ ಇದನ್ನು ನಿರ್ಮಿಸಲಾಗಿದೆ. ಇದು ಬಳಕೆದಾರರು, ಸಾಧನಗಳು, ನೆಟ್ ವರ್ಕ್ ಗಳು, ಅಪ್ಲಿಕೇಶನ್ ಗಳು ಮತ್ತು ಡೇಟಾ ಹೀಗೆ ಪ್ರತಿಯೊಂದು ಹಂತದಲ್ಲೂ ಭದ್ರತೆಯನ್ನು ಒದಗಿಸುತ್ತದೆ. ಇದರಿಂದಾಗಿ ಉದ್ಯಮಗಳು ತಾವೇ ಸ್ವತಃ ಭದ್ರತಾ ವ್ಯವಸ್ಥೆಯನ್ನು ನಿರ್ಮಿಸಿ ನಿರ್ವಹಿಸುವ ಹೊರೆಯಿಂದ ಮುಕ್ತವಾಗಲಿವೆ.
35
24x7 ಸಮಗ್ರ ರಕ್ಷಣೆ
ಹೈಬ್ರಿಡ್ ಕೆಲಸದ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಬಲಿಷ್ಠ ಝಡ್ ಟಿ ಎ (ಜೀರೋ ಟ್ರಸ್ಟ್ ಆರ್ಕಿಟೆಕ್ಚರ್) ಅಡಿಯಲ್ಲಿ ರೂಪಿಸಲಾಗಿರುವ ಈ ಪರಿಹಾರವು, ಇಂದು ಉದ್ಯಮಗಳು ಎದುರಿಸುತ್ತಿರುವ ಅತಿಯಾದ ಭದ್ರತಾ ಪರಿಕರಗಳ ಬಳಕೆ, ಎಚ್ಚರಿಕೆಗಳ ಕುರಿತು ಉದಾಸೀನತೆ ಮತ್ತು ನುರಿತ ತಜ್ಞರ ಕೊರತೆಯಂತಹ ಸಮಸ್ಯೆಗಳನ್ನು ನೀಗಿಸಲಿದೆ. ಚದುರಿಹೋಗಿರುವ ವಿವಿಧ ಕಂಪನಿಗಳ ಭದ್ರತಾ ವ್ಯವಸ್ಥೆಗಳ ಬದಲಾಗಿ, ಏಕೀಕೃತ ವೇದಿಕೆಯ ಮೂಲಕ 24x7 ಸಮಗ್ರ ರಕ್ಷಣೆ ನೀಡುವುದರಿಂದ ಸೈಬರ್ ದಾಳಿ ಪತ್ತೆ ಹಚ್ಚುವಿಕೆ ಮತ್ತು ರಿಮೋಟ್ ಆಕ್ಸೆಸ್ ಭದ್ರತೆಯು ಮತ್ತಷ್ಟು ಬಲಗೊಳ್ಳಲಿದೆ.
ಭಾರತದ ಡಿಪಿಡಿಪಿ ಕಾಯ್ದೆಗೆ ಅನುಗುಣವಾಗಿ, ಈ ಸೇವೆಯು ಆಡಿಟ್- ದರ್ಜೆಯ ಲಾಗ್ ಗಳು, ಡೇಟಾ ಚಲನೆಯ ನಿಯಂತ್ರಣಗಳು ಮತ್ತು ವ್ಯವಸ್ಥಿತ ಘಟನಾ ನಿರ್ವಹಣಾ ಕಾರ್ಯವೈಖರಿಯನ್ನು ಹೊಂದಿದೆ.
ಏಕೀಕೃತ ಡ್ಯಾಶ್ ಬೋರ್ಡ್ ಮೂಲಕ ಉದ್ಯಮಗಳು ನೆಟ್ ವರ್ಕ್, ಬಳಕೆದಾರರು ಮತ್ತು ಡೇಟಾವನ್ನು ಒಂದೇ ಪರದೆಯ ಮೇಲೆ ವೀಕ್ಷಿಸಬಹುದು. ಇದು ಇಮೇಲ್, ವೆಬ್ ಮತ್ತು ಅಪ್ಲಿಕೇಶನ್ ಗಳ ಮೂಲಕ ಉದ್ಯೋಗಿಗಳ ಸುರಕ್ಷತೆಯನ್ನು ಖಚಿತಪಡಿಸುವುದಲ್ಲದೆ, ಅನುಮತಿಯಿಲ್ಲದ ಕ್ಲೌಡ್ ಮತ್ತು ಎಐ ಅಪ್ಲಿಕೇಶನ್ ಗಳ ಬಳಕೆಯ ಮೇಲೂ ನಿಗಾ ಇಡಲಿದೆ.
ಜೊತೆಗೆ ಇದರ ಭಾಗವಾಗಿ, ಏರ್ ಟೆಲ್ ಬಿಸಿನೆಸ್ ಸಂಸ್ಥೆಯು ಏರ್ ಟೆಲ್ ಸೆಕ್ಯೂರ್ ವರ್ಕ್ ಫೋರ್ಸ್ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಅನಾವರಣಗೊಳಿಸಿದೆ. ಏರ್ ಟೆಲ್ ಕ್ಲೌಡ್‌ನಲ್ಲಿ ಲಭ್ಯವಿರುವ ಈ ವ್ಯವಸ್ಥೆಯ ಮೂಲಕ ಉದ್ಯಮಗಳು ತಮ್ಮ ವ್ಯವಹಾರಕ್ಕೆ ಈ ಸೇವೆಯನ್ನು ಅಳವಡಿಸಿಕೊಳ್ಳುವ ಮೊದಲೇ ಅದರ ನೇರ ಅನುಭವವನ್ನು ಪಡೆಯಬಹುದು.
55
24 ಗಂಟೆ ಸುರಕ್ಷತೆ
ದಿನದ 24 ಗಂಟೆಯೂ ತಜ್ಞರ ಮೇಲ್ವಿಚಾರಣೆಯಲ್ಲಿರುತ್ತದೆ. ನಮ್ಮ ಈ ಏಕೀಕೃತ ವಿಧಾನವು ಗ್ರಾಹಕರಿಗೆ ಗರಿಷ್ಠ ಮೌಲ್ಯವನ್ನು ನೀಡಲಿದೆ. ಇದರಿಂದ ಉದ್ಯಮಗಳು ತಮ್ಮ ಭದ್ರತಾ ವೆಚ್ಚದಲ್ಲಿ ಶೇ. 30 ರಷ್ಟು ಉಳಿತಾಯ ಮಾಡಲು ಮತ್ತು ಸುರಕ್ಷತೆಯ ಬಗ್ಗೆ ಯಾವುದೇ ಆತಂಕವಿಲ್ಲದೆ ತಮ್ಮ ವ್ಯವಹಾರದ ಬೆಳವಣಿಗೆಯತ್ತ ಗಮನಹರಿಸಲು ಸಾಧ್ಯವಾಗುತ್ತದೆ,” ಎಂದು ಎರ್ಟೆಲ್ ಸಿಇಓ ಶರತ್ ಸಿನ್ಹಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
24 ಗಂಟೆ ಸುರಕ್ಷತೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.