ಪ್ರಧಾನಿ ಮೋದಿ ಕರೆ ನೀಡಿದಂತೆ ಭಾರತ ಕನಿಷ್ಠ ಒಂದು ವರ್ಷ ಚಿನ್ನ ಖರೀದಿ ನಿಲ್ಲಿಸಿದರೆ ಕನಿಷ್ಠ ನಾಲ್ಕು ರಾಷ್ಟ್ರಗಳು ಕಂಗಾಲಾಗಲಿದೆ. ಇದೇ ವೇಳೆ ಭಾರತ ಮತ್ತಷ್ಟು ಬಲಿಷ್ಠಗೊಳ್ಳಲಿದೆ. ಏನಿದು ಚಿನ್ನದ ಹಿಂದಿನ ಸೀಕ್ರೆಟ್.
ಭಾರತ ವಿಶ್ವದಲ್ಲೇ ಚಿನ್ನ ಖರೀದಿ, ಬಳಕೆ ಮಾಡುವ ರಾಷ್ಟ್ರಗಳ ಪೈಕಿ 2ನೇ ಸ್ಥಾನದಲ್ಲಿದೆ. ಪ್ರತಿ ವರ್ಷ 700 ರಿಂದ 800 ಟನ್ ಚಿನ್ನ ಭಾರತ ಖರೀದಿ ಮಾಡಿಕೊಳ್ಳುತ್ತದೆ. ಈ ಪೈಕಿ ಶೇಕಡಾ 90ರಷ್ಟು ಚಿನ್ನವನ್ನು ಭಾರತ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದಕ್ಕಾಗಿ ಭಾರತ ಸಾವಿರಾರು ಕೋಟಿ ರೂಪಾಯಿ ವಿದೇಶಿ ವಿನಿಮಯ ಬಳಸಿಕೊಳ್ಳುತ್ತದೆ. ಇದೇ ಸಮಸ್ಯೆ ಉಲ್ಭಣಿಸುತ್ತಿದೆ.
25
ಒಂದು ವರ್ಷ ಚಿನ್ನ ಖರೀದಿ ನಿಲ್ಲಿಸಿದರೆ
ಅನಿವಾರ್ಯತೆ ಹೊರತು ಪಡಿಸಿ ಚಿನ್ನ ಖರೀದಿಯನ್ನು ಒಂದು ವರ್ಷ ಮಾಡಬೇಡಿ ಎಂದು ಮೋದಿ ಹೇಳಿದ್ದಾರೆ. ಒಂದು ವರ್ಷ ಭಾರತ ಚಿನ್ನ ಆಮದು ಶೇಕಡಾ 50ರಷ್ಟು ಕಡಿಮೆ ಮಾಡಿದರೆ, ಭಾರತದ 30 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ವಿನಿಮಯ ಉಳಿತಾಯವಾಗಲಿದೆ. ಶೇಕಡಾ 75ರಷ್ಟು ಚಿನ್ನ ಆಮದು ಕಡಿತಗೊಂಡರೆ ಭಾರತದ 44 ಬಿಲಿಯನ್ ಅಮೆರಿಕನ್ ಎಕ್ಸ್‌ಚೇಂಜ್ ಉಳಿತಾಯವಾಗಲಿದೆ.
35
ಯಾವ ದೇಶಕ್ಕೆ ಬೀಳಲಿದೆ ಹೊಡೆತ
ಭಾರತ ಗರಿಷ್ಠ ಚಿನ್ನವನ್ನು ಸ್ವಿಟ್ಜರ್‌ಲೆಂಡ್, ಯುಎಇ, ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾದಿಂದ ಮಾಡುತ್ತದೆ. ಭಾರತ ಚಿನ್ನ ಖರೀದಿ ಗಣನೀಯವಾಗಿ ಇಳಿಕೆ ಮಾಡಿದರೆ ಈ ನಾಲ್ಕು ರಾಷ್ಟ್ರಗಳು ಕಂಗಾಲಾಗಲಿದೆ. ಕಾರಣ ಈ ನಾಲ್ಕು ದೇಶಗಳು ಭಾರತದ ಚಿನ್ನದ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಪಾಲು ಹೊಂದಿದೆ. ಖರೀದಿ ಇಳಿಕೆಯಾದರೆ ಈ ದೇಶಗಳು ಆರ್ಥಿಕತೆ ಸಮಸ್ಯೆ ಎದುರಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಕರೆಗೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ದೇಶದ ಹಿತಕ್ಕಾಗಿ ಅನಗತ್ಯ ಖರೀದಿ ಬೇಡ. ಇದು ಉತ್ತಮ ನಿರ್ಧಾರ. ಜನರು ಈ ಕರೆಗೆ ಸ್ಪಂದಿಸಬೇಕು ಎಂದು ಹಲವು ಆರ್ಥಿಕ ತಜ್ಞರು ಮನವಿ ಮಾಡಿದ್ದಾರೆ.ಇದೇ ವೇಳೆ ಚಿನ್ನ ವ್ಯಾಪಾರಿಗಳು ಸೇರಿದಂತೆ ಇತರರು ಇದರಿಂದ ಚಿನ್ನದ ಮೇಲೆ ಅವಲಂಬಿತರಾಗಿ ಕೆಲಸ ಮಾಡುತ್ತಿರು ವ್ಯಾಪಾರಸ್ಥರು, ಕುಟುಂಬಸ್ಥರು ಬೀದಿಗೆ ಬರುತ್ತಾರೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
55
ಮೋದಿ ಸೂತ್ರ
ಆರ್ಥಿಕತೆ, ಹಣದುಬ್ಬರ, ವಿದೇಶಿ ವಿನಿಮಯ ಉಳಿತಾಯ ಮಾಡಲು ಪ್ರಧಾನಿ ಮೋದಿ 7 ಸೂತ್ರಗಳನ್ನು ನೀಡಿದ್ದಾರೆ. ಸಾರ್ವಜನಿಕ ಸಾರಿಗೆ ಬಳಕೆ, ಇವಿ ಬಳಕೆ, ಪೆಟ್ರೋಲ್ ಡೀಸೆಲ್ ಕಡಿಮೆ ಖರ್ಚು, ವರ್ಕ್ ಫ್ರಮ್ ಹೋಮ್‌ಗೆ ಆದ್ಯತೆ ನೀಡುವುದು ಸೇರಿದಂತೆ ಹಲವು ಸೂತ್ರಗಳನ್ನು ಮೋದಿ ನೀಡಿದ್ದಾರೆ.
ಮೋದಿ ಸೂತ್ರ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.