ಮದುವೆಯಾದ್ಮೇಲೆ ಆಧಾರ್‌ ನಲ್ಲಿ ಸರ್‌ ನೇಮ್ ಬದಲಿಸ್ಬೇಕು ಅಂದ್ರೆ ಏನು ಮಾಡ್ಬೇಕು? ಎಷ್ಟು ಖರ್ಚು ಬರುತ್ತೆ ಗೊತ್ತಾ?

Published : Oct 06, 2026, 12:19 PM IST

ಆಧಾರ್‌ ನಲ್ಲಿ ಹೆಸರು ತಪ್ಪಾಗಿದ್ದರೆ ಅಥವಾ ಮದುವೆಯಾದ ಬಳಿಕ ಹೆಸರು ಬದಲಾಗಿದ್ದರೆ ಅಪ್ಡೇಟ್ ಮಾಡಿಸಿಕೊಳ್ಳೋದು ಮುಖ್ಯ. ಆಧಾರ್ನಲ್ಲಿ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಯುಐಡಿಎಐ ಹೊಸ ಎಸ್ಒಪಿವನ್ನು 2026ರ ಸೆಪ್ಟೆಂಬರ್ 18ರಂದು ಬಿಡುಗಡೆ ಮಾಡಿದೆ. ಹೊಸ ನಿಯಮಗಳ ಬಗ್ಗೆ ಮಾಹಿತಿ ಇಲ್ಲಿದೆ.

PREV
16
ಮದುವೆಯಾದ ಬಳಿಕ ಸರ್ನೇಮ್ ಬದಲಿಸಬಹುದೇ?

ಮದುವೆಯಾದ ನಂತ್ರ ಸರ್‌ ನೇಮ್‌ ಬದಲಿಸಿಕೊಳ್ಳಬಹುದು. ಮಹಿಳೆ ತನ್ನ ಹೆಸರಿಗೆ ಗಂಡನ ಹೆಸರು ಅಥವಾ ಕುಟುಂಬದ ಸರ್ನೇಮ್ ಸೇರಿಸಿಕೊಳ್ಳಲು ಆಧಾರ್ನಲ್ಲಿ ಹೆಸರು ಅಪ್ಡೇಟ್ ಮಾಡಿಸಬಹುದು. ಉದಾಹರಣೆಗೆ, ಮದುವೆಗೂ ಮೊದಲು ಹೆಸರು ಪೂನಂ ರಾಯ್ ಎಂದಿದ್ದರೆ, ಮದುವೆಯ ಬಳಿಕ ಪೂನಂ ಹರೀಶ್ ರಾಯ್ ಎಂದು ಬದಲಿಸಿಕೊಳ್ಳಲು ಅವಕಾಶವಿದೆ. ಇದಕ್ಕಾಗಿ ಹೊಸ ಹೆಸರನ್ನು ಬೆಂಬಲಿಸುವ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು. ಮದುವೆಯ ಸಂದರ್ಭದ ಹೆಸರು ಬದಲಾವಣೆಗೆ ಮ್ಯಾರೇಜ್ ಸರ್ಟಿಫಿಕೇಟ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ.

26
ಆಧಾರ್ ಸೆಂಟರ್ಗೆ ಹೋಗುವುದು ಕಡ್ಡಾಯ

ಆಧಾರ್ನಲ್ಲಿ ಹೆಸರು ಬದಲಾವಣೆ ಅಥವಾ ತಿದ್ದುಪಡಿ ಮಾಡಿಸಲು ಸದ್ಯ ಸಾಮಾನ್ಯ ಆನ್ಲೈನ್ ಅಪ್ಡೇಟ್ ಸೌಲಭ್ಯವಿಲ್ಲ. ಹೀಗಾಗಿ ಹತ್ತಿರದ ಆಧಾರ್ ಎನ್ರೋಲ್ಮೆಂಟ್ ಸೆಂಟರ್ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು. ಅಲ್ಲಿ ಆಧಾರ್ ಎನ್ರೋಲ್ಮೆಂಟ್/ಅಪ್ಡೇಟ್ ಫಾರ್ಮ್ ಭರ್ತಿ ಮಾಡಿ, ಹೊಸ ಹೆಸರನ್ನು ನಮೂದಿಸಬೇಕು. ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅಪ್ಡೇಟ್ ರಿಕ್ವೆಸ್ಟ್ ದಾಖಲಿಸಲಾಗುತ್ತದೆ. ನಂತರ ಯುಆರ್ಎನ್ (Update Request Number) ಇರುವ ರಸೀದಿಯನ್ನು ನೀಡಲಾಗುತ್ತದೆ.

36
ವಿಚ್ಛೇದನದ ಬಳಿಕವೂ ಹೆಸರು ಬದಲಿಸಬಹುದು

ಮದುವೆಯ ಬಳಿಕ ಸರ್ನೇಮ್ ಬದಲಿಸುವುದಷ್ಟೇ ಅಲ್ಲ, ವಿಚ್ಛೇದನದ ನಂತರ ಮತ್ತೆ ಹೆಸರು ಅಥವಾ ಸರ್ನೇಮ್ ಬದಲಿಸಬೇಕಾದರೂ ಸೂಕ್ತ ದಾಖಲೆಗಳ ಆಧಾರದ ಮೇಲೆ ಆಧಾರ್ನಲ್ಲಿ ಅಪ್ಡೇಟ್ ಮಾಡಿಸಿಕೊಳ್ಳಬಹುದು.

46
ಸ್ಪೆಲ್ಲಿಂಗ್ ತಪ್ಪಿದ್ದರೂ ಸರಿಪಡಿಸಿಕೊಳ್ಳಿ

ಆಧಾರ್ನಲ್ಲಿ ನಿಮ್ಮ ಹೆಸರಿನ ಸ್ಪೆಲ್ಲಿಂಗ್ ತಪ್ಪಾಗಿದ್ದರೆ ಅದನ್ನು ಕೂಡ ಸರಿಪಡಿಸಿಕೊಳ್ಳಬಹುದು. ಎನ್ರೋಲ್ಮೆಂಟ್ ಸಂದರ್ಭದಲ್ಲಿ ಸರಿಯಾದ ದಾಖಲೆ ನೀಡಿದ್ದರೂ ಡೇಟಾ ಎಂಟ್ರಿ ವೇಳೆ ಹೆಸರು ತಪ್ಪಾಗಿ ದಾಖಲಾಗಿದ್ದರೆ, ಅದನ್ನು ತಿದ್ದುಪಡಿ ಮಾಡುವ ಅವಕಾಶವಿದೆ.

56
ಹೆಸರನ್ನು ಎಷ್ಟು ಬಾರಿ ಬದಲಿಸಬಹುದು?

ಯುಐಡಿಎಐನ ಪ್ರಸ್ತುತ ನಿಯಮಗಳ ಪ್ರಕಾರ, ಸಾಮಾನ್ಯ ಪ್ರಕ್ರಿಯೆಯಲ್ಲಿ ಆಧಾರ್ನಲ್ಲಿನ ಹೆಸರನ್ನು ಎರಡು ಬಾರಿ ಅಪ್ಡೇಟ್ ಮಾಡಬಹುದು. ಎರಡು ಬಾರಿ ಅಪ್ಡೇಟ್ ಮಾಡಿದ ನಂತರ ಮತ್ತೆ ಹೆಸರು ಬದಲಿಸುವ ಅಗತ್ಯ ಬಂದರೆ ಎಕ್ಸೆಪ್ಶನ್ ಪ್ರೊಸೆಸ್ ಮೂಲಕ ಅರ್ಜಿ ಸಲ್ಲಿಸಬೇಕಾಗಬಹುದು.

66
ಹೆಸರು ಅಪ್ಡೇಟ್ಗೆ ಎಷ್ಟು ಶುಲ್ಕ ?

ಯುಐಡಿಎಐನ ಪ್ರಸ್ತುತ ಶುಲ್ಕದ ಪ್ರಕಾರ, ಹೆಸರು, ಲಿಂಗ, ಜನ್ಮ ದಿನಾಂಕ, ವಿಳಾಸ, ಮೊಬೈಲ್ ನಂಬರ್ ಅಥವಾ ಇ-ಮೇಲ್ನಂತಹ ಡೆಮೋಗ್ರಾಫಿಕ್ ವಿವರಗಳನ್ನು ಪ್ರತ್ಯೇಕವಾಗಿ ಅಪ್ಡೇಟ್ ಮಾಡಿಸಲು 75 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಎಲ್ಲಾ ಸಪೋರ್ಟಿಂಗ್ ಡಾಕ್ಯುಮೆಂಟ್ಗಳಲ್ಲಿ ಹೊಸ ಹೆಸರು ಒಂದೇ ರೀತಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಮುಖ್ಯ. ಸರಿಯಾದ ಮತ್ತು ಮಾನ್ಯ ದಾಖಲೆಗಳನ್ನು ಸಲ್ಲಿಸಿದರೆ ಅಪ್ಡೇಟ್ ಪ್ರಕ್ರಿಯೆ ಸುಗಮವಾಗುತ್ತದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories