Post Office: ಪ್ರಧಾನಿ ಮೋದಿ ಕೂಡ ಹೂಡಿಕೆ ಮಾಡಿರುವ ಪೋಸ್ಟ್ ಆಫೀಸ್ ಸ್ಕೀಮ್, ನೀವು ಕೂಡ ಟ್ರೈ ಮಾಡ್ತೀರಾ?

Published : Oct 03, 2026, 05:15 PM IST

ಅಂಚೆ ಕಚೇರಿಯ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಯಾವುದೇ ಮಾರುಕಟ್ಟೆ ಅಪಾಯಗಳಿಲ್ಲದ ಸುರಕ್ಷಿತ ಹೂಡಿಕೆ ಯೋಜನೆಯಾಗಿದೆ. ಇದರಲ್ಲಿ ವಾರ್ಷಿಕ 7.7% ಬಡ್ಡಿ ಮತ್ತು ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ದೊರೆಯುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ದಾರೆ.

PREV
15
ಅಂಚೆ ಕಚೇರಿ NSC ಯೋಜನೆ: ಸುರಕ್ಷಿತ ಹೂಡಿಕೆ ಮತ್ತು ತೆರಿಗೆ ಉಳಿತಾಯ

ತಮ್ಮ ಬಳಿ ಇರುವ ಹಣವನ್ನು ಸುರಕ್ಷಿತ ಸ್ಥಳದಲ್ಲಿ ಹೂಡಿಕೆ ಮಾಡಬೇಕು ಎಂದು ಯೋಚನೆ ಮಾಡುವವರಿಗೆ ಅಂಚೆ ಕಚೇರಿ ಯೋಜನೆಗಳು ಒಂದು ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (National Savings Certificate) (NSC) ಕೂಡ ಒಂದು. ಈ ಯೋಜನೆಯಲ್ಲಿ ಪ್ರಧಾನಿ ಮೋದಿ ಅವರು ಹೂಡಿಕೆ ಮಾಡಿರುವುದಾಗಿ ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿರುವ ಆಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದರು.

25
ಅಂಚೆ ಕಚೇರಿಯಲ್ಲಿ ಎನ್‌ಎಸ್‌ಸಿ ಅಂದರೆ ಏನು?

ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಎಂಬುವುದು ಪೋಸ್ಟ್ ಆಫೀಸ್ ಮೂಲಕ ನೀಡುತ್ತಿರುವ ಸಣ್ಣ ಹೂಡಿಕೆ ಯೋಜನೆಯಾಗಿದೆ. ಮಾರ್ಕೆಟ್ ಆಧಾರಿತ ಹೂಡಿಕೆಯಲ್ಲಿ ಹೋಲಿಕೆ ಮಾಡುವುದಾದರೆ ಮಾರ್ಕೆಟ್ ಏರಿಳಿತಗಳ ಪ್ರಭಾವ ಇರುವುದಿಲ್ಲ. ಮಧ್ಯಮ ಅವಧಿಗೆ ಸುರಕ್ಷಿತವಾಗಿ ಹೂಡಿಕೆ ಮಾಡುವ ಒಂದು ಅತ್ಯುತ್ತಮ ಆಯ್ಕೆ ಎಂದರೂ ತಪ್ಪಾಗುವುದಿಲ್ಲ. ನೀವು ಇದರಲ್ಲಿ ಕನಿಷ್ಠ ಒಂದು ಸಾವಿರ ರೂಪಾಯಿಯಿಂದ ಹೂಡಿಕೆ ಮಾಡಲು ಪ್ರಾರಂಭಿಸಬಹುದು. ನಂತರ ನೀವು ಇದನ್ನು ಹೆಚ್ಚಿಸಿಕೊಳ್ಳಲು ಅವಕಾಶವಿದೆ. ಇದರಲ್ಲಿ ಗರಿಷ್ಠ ಹೂಡಿಕೆ ಮಾಡಲು ಯಾವುದೇ ಮಿತಿ ಇಲ್ಲ. ಇಲ್ಲಿ ಹೂಡಿಕೆ ಮಾಡುವ ಹಣಕ್ಕೆ ಸಾಮಾನ್ಯವಾಗಿ ಐದು ವರ್ಷಗಳ ಅವಧಿ ನಿಗದಿ ಮಾಡಲಾಗುತ್ತದೆ.

35
ಐದು ಲಕ್ಷ ಹೂಡಿಕೆ ಮಾಡಿದರೆ ಎಷ್ಟು ಮೊತ್ತ ಸಿಗುತ್ತದೆ?

ಎನ್‌ಎಸ್‌ಸಿ ಹೂಡಿಕೆಯಲ್ಲಿ ಸದ್ಯ 7.7 ರಷ್ಟು ವಾರ್ಷಿಕ ಬಡ್ಡಿ ನೀಡಲಾಗುತ್ತಿದೆ. ಇದರಲ್ಲಿ ಬಡ್ಡಿಗೆ ಚಕ್ರಬಡ್ಡಿ ಸಿಗುತ್ತದೆ. ಆದರೆ ಬಡ್ಡಿ ಹಣದ ಮೊತ್ತವನ್ನು ಮಧ್ಯದಲ್ಲಿ ನೀಡದೆ, ಮೆಚ್ಯುರಿಟಿ ಸಮಯದಲ್ಲಿ ಒಟ್ಟಾರೆ ಮೊತ್ತವನ್ನು ಸೇರಿಸಿ ನೀಡಲಾಗುತ್ತದೆ. ಉದಾಹರಣೆಗೆ 5 ಲಕ್ಷ ರೂಪಾಯಿಗಳನ್ನು ಎನ್‌ಎಸ್‌ಸಿಯಲ್ಲಿ ಐದು ವರ್ಷಕ್ಕೆ ಹೂಡಿಕೆ ಮಾಡಿದರೆ. ಮೆಚ್ಯೂರಿಟಿ ಸಮಯದಲ್ಲಿ ಸುಮಾರು 7,24,517 ರೂಪಾಯ ಸಿಗುತ್ತದೆ. ಅಂದರೆ ಐದು ಲಕ್ಷ ರೂಪಾಯಿಗೆ 2,24,517 ರೂಪಾಯಿ ಬಡ್ಡಿ ರೂಪದಲ್ಲಿ ಸಿಗುತ್ತದೆ. ಬಡ್ಡಿ ಮೊತ್ತವನ್ನು ಸರ್ಕಾರ ನಿರ್ಧಾರ ಮಾಡುತ್ತದೆ, ಆದರೆ ಇದು ಭವಿಷ್ಯದಲ್ಲಿ ಬದಲಾವಣೆಯಾಗುವ ನಿರೀಕ್ಷೆ ಇದೆ.

45
ತೆರಿಗೆ ಉಳಿಸುವ ಅವಕಾಶ

ಎನ್‌ಎಸ್‌ಸಿಯಲ್ಲಿ ಹೂಡಿಕೆ ಮಾಡುವ ಹಣಕ್ಕೆ ತೆರಿಗೆ ವಿನಾಯಿತಿ ಕೂಡ ನೀಡಲಾಗುತ್ತದೆ. ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವವರಿಗೆ ಆದಾಯ ತೆರಿಗೆ ಕಾನೂನಿನ ಸೆಕ್ಷನ್ 80ಸಿ ಅನ್ವಯ, ಅರ್ಹ ಹೂಡಿಕೆಗಳ ಮೊತ್ತದ ಮೇಲೆ 1.5 ಲಕ್ಷ ರೂಪಾಯಿ ವರೆಗೂ ತೆರಿಗೆ ವಿನಾಯಿತಿ ಸಿಗುತ್ತದೆ. ಆದರೆ ಪ್ರತಿ ವರ್ಷ ನೀಡುವ ಬಡ್ಡಿಯನ್ನು ಆದಾಯವಾಗಿ ಪರಿಗಣಿಸಲಾಗುತ್ತದೆ. ಆದ್ದರಿಂದ ಮೊದಲ ನಾಲ್ಕು ವರ್ಷಗಳ ಬಡ್ಡಿಯನ್ನು ಕೆಲವು ನಿರ್ಬಂಧಗಳ ಅನ್ವಯ ತೆರಿಗೆ ವಿನಾಯಿತಿ ಸಿಗುತ್ತದೆ. ಆದರೆ ಈ ಯೋಜನೆಗೆ ಯಾವುದೇ ವಿಶೇಷ ವಿನಾಯಿತಿ ಇರೋದಿಲ್ಲ ಎಂಬುವುದನ್ನು ಹೂಡಿಕೆದಾರರು ಗಮನಿಸಬೇಕು.

55
ಮೋದಿ ಎಷ್ಟು ಹೂಡಿಕೆ ಮಾಡಿದ್ದರೆ ಗೊತ್ತಾ?

ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಅಫಿಡವಿಟ್‌ನಲ್ಲಿ ಘೋಷಣೆ ಮಾಡಿರುವ ಆಸ್ತಿಗಳ ವಿವರಗಳಲ್ಲಿ ಎನ್‌ಎಸ್‌ಸಿ ಕೂಡ ಇದೆ. 2019ರ ಚುನಾವಣೆಯ ಸಮಯದಲ್ಲಿ ಈ ಯೋಜನೆಯಲ್ಲಿ 7.61 ಲಕ್ಷ ರೂಪಾಯಿ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಇದರಂತೆ ಸದ್ಯ ಅವರ ಮೊತ್ತ ಸುಮಾರು 9 ಲಕ್ಷ ರೂಪಾಯಿ ಹೆಚ್ಚಾಗಿರುತ್ತದೆ. ಯಾವುದೇ ರಿಸ್ಕ್ ಇಲ್ಲದೇ ಹೂಡಿಕೆ ಮಾಡಬೇಕು ಎಂದು ನೋಡುವವರಿಗೆ ಈ ಯೋಜನೆ ಅತ್ಯುತ್ತಮ ಆಯ್ಕೆ ಎಂದು ಹೇಳಬಹುದಾಗಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories