ರಾಜ್ಯದ ಜನ ಸತ್ತರೆ ₹5 ಲಕ್ಷ ಕೊಡುವ ಸರ್ಕಾರ, ಒಬ್ಬೊಬ್ಬ ಶಾಸಕರ ವೈದ್ಯಕೀಯ ವೆಚ್ಚಕ್ಕೆ ₹1 ಕೋಟಿ ಖರ್ಚು ಮಾಡ್ತಿದೆ!

Published : Oct 06, 2026, 11:39 AM IST

ರಾಜ್ಯದಲ್ಲಿ ವಿಪತ್ತಿನಿಂದ ಜನರು ಸತ್ತರೆ ₹5 ಲಕ್ಷ ಕೊಟ್ಟು ಕೈ ತೊಳೆದುಕೊಳ್ಳುವ ಸರ್ಕಾರ ಒಬ್ಬೊಬ್ಬ ಶಾಸಕರ ವೈದ್ಯಕೀಯ ವೆಚ್ಚಕ್ಕೆ ಕೋಟಿ, ಕೋಟಿ ಖರ್ಚು ಮಾಡ್ತಿದೆ. ಇದೀಗ 69 ಶಾಸಕರು ಸಾರ್ವಜನಿಕರ ತೆರಿಗೆ ಹಣದಿಂದ ಕೋಟ್ಯಂತರ ರೂಪಾಯಿ ವೈದ್ಯಕೀಯ ವೆಚ್ಚ ಮರುಪಾವತಿ ಮಾಡಿಸಿಕೊಂಡಿರುವ ಮಾಹಿತಿ ಬಹಿರಂಗವಾಗಿದೆ.

PREV
15
ಕೋಟಿ ಮುಟ್ಟಿದ ಶಾಸಕರ ವೈದ್ಯಕೀಯ ವೆಚ್ಚ

ಬೆಂಗಳೂರು: ರಾಜ್ಯದ ಜನಸಾಮಾನ್ಯರು ಕಟ್ಟುವ ತೆರಿಗೆ ಹಣದಿಂದ ಜನಪ್ರತಿನಿಧಿಗಳು ಮತ್ತು ಅವರ ಕುಟುಂಬಸ್ಥರ ವೈದ್ಯಕೀಯ ಚಿಕಿತ್ಸೆಗೆ ಕೋಟ್ಯಂತರ ರೂಪಾಯಿ ವ್ಯಯವಾಗುತ್ತಿರುವ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಮೇ 20, 2023 ರಿಂದ ಸೆಪ್ಟೆಂಬರ್ 30, 2026ರವರೆಗಿನ ಅವಧಿಯಲ್ಲಿ ಕರ್ನಾಟಕ ವಿಧಾನಸಭೆಯ ಒಟ್ಟು 69 ಶಾಸಕರು ತಮ್ಮ ಹಾಗೂ ತಮ್ಮ ಅವಲಂಬಿತ ಕುಟುಂಬ ಸದಸ್ಯರ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಸಾರ್ವಜನಿಕರ ತೆರಿಗೆ ಹಣದಿಂದ ಮರುಪಾವತಿ (Medical Reimbursement) ಮಾಡಿಸಿಕೊಂಡಿದ್ದಾರೆ.

ರಾಜ್ಯದ ಜನರು ಸತ್ತರೆ ₹5 ಲಕ್ಷ ಕೊಟ್ಟು ಕೈ ತೊಳೆದುಕೊಳ್ಳುವ ಸರ್ಕಾರ ಒಬ್ಬೊಬ್ಬ ಶಾಸಕರ ವೈದ್ಯಕೀಯ ವೆಚ್ಚಕ್ಕೆ ಕೋಟಿ, ಕೋಟಿ ಖರ್ಚು ಮಾಡ್ತಿದೆ. ಕರ್ನಾಟಕ ಶಾಸಕಾಂಗದ ನಿಯಮಗಳ ಪ್ರಕಾರ ಶಾಸಕರು ಹಾಗೂ ಅವರ ಕುಟುಂಬಸ್ಥರು ಪಡೆಯುವ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲು ಕಾನೂನಿನ ಚೌಕಟ್ಟಿನಲ್ಲಿ ಅವಕಾಶವಿದೆ. ಇದೇ ಅಧಿಕಾರವನ್ನು ಬಳಸಿಕೊಂಡು ಆಡಳಿತ ಮತ್ತು ವಿರೋಧ ಪಕ್ಷಗಳ ಪ್ರಮುಖ ಶಾಸಕರು ಲಕ್ಷಾಂತರ ರೂಪಾಯಿ ಮರುಪಾವತಿ ಪಡೆದಿದ್ದಾರೆ.

25
ವೈದ್ಯಕೀಯ ವೆಚ್ಚ ಮರುಪಾವತಿಯಲ್ಲಿ ಟಾಪ್ 3 ಶಾಸಕರು:

ಎಚ್. ಕೆ. ಸುರೇಶ್ (ಬೇಲೂರು ಶಾಸಕ): ಇವರು ಹಾಗೂ ಇವರ ಕುಟುಂಬದ ವೈದ್ಯಕೀಯ ಚಿಕಿತ್ಸೆಗಾಗಿ ಬರೋಬ್ಬರಿ ₹98,78,325 (ಅಂದಾಜು 98.78 ಲಕ್ಷ ರೂ.) ಮರುಪಾವತಿ ಪಡೆಯುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಕೆ. ಹರೀಶ್ ಗೌಡ (ಚಾಮರಾಜ ಶಾಸಕ): ಇವರು ಹಾಗೂ ಕುಟುಂಬದವರು ₹85,91,139 (ಅಂದಾಜು 85.91 ಲಕ್ಷ ರೂ.) ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.

ಡಾ. ಎಚ್. ಡಿ. ರಂಗನಾಥ್ (ಕುಣಿಗಲ್ ಶಾಸಕ): ಇವರು ಹಾಗೂ ಕುಟುಂಬದ ವೈದ್ಯಕೀಯ ವೆಚ್ಚವಾಗಿ ₹85,02,261 ಮರುಪಾವತಿಯಾಗಿದ್ದು, ಮೂರನೇ ಸ್ಥಾನದಲ್ಲಿದ್ದಾರೆ.

35
ಅತ್ಯಂತ ಕಡಿಮೆ ವೆಚ್ಚ ಪಡೆದ ಶಾಸಕ:

ಹುಕ್ಕೇರಿ ಕ್ಷೇತ್ರದ ಶಾಸಕ ನಿಖಿಲ್ ಉಮೇಶ್ ಕತ್ತಿ ಅವರು ಕೇವಲ ₹2,349 ಮರುಪಾವತಿ ಮಾಡಿಸಿಕೊಳ್ಳುವ ಮೂಲಕ ಪಟ್ಟಿಯಲ್ಲೇ ಅತ್ಯಂತ ಕಡಿಮೆ ವೆಚ್ಚ ಪಡೆದ ಶಾಸಕರಾಗಿದ್ದಾರೆ.

45
ಉಳಿದ ಪ್ರಮುಖ ರಾಜಕೀಯ ಮುಖಂಡರ ವಿವರ:

ಶಾಮನೂರು ಶಿವಶಂಕರಪ್ಪ: ₹69,78,625

ಎಸ್. ಸುರೇಶ್ ಕುಮಾರ್: ₹22,26,082

ಕೆ. ಗೋಪಾಲಯ್ಯ: ₹21,05,469

ಎಚ್. ಡಿ. ರೇವಣ್ಣ: ₹13,02,425

55
10 ಲಕ್ಷಕ್ಕಿಂತ ಕಡಿಮೆ ವೆಚ್ಚ ಮಾಡಿದವರು

ಬಸವರಾಜ ಬೊಮ್ಮಾಯಿ (ಮಾಜಿ ಮುಖ್ಯಮಂತ್ರಿ): ₹10,45,657

ಆರಗ ಜ್ಞಾನೇಂದ್ರ (ಮಾಜಿ ಗೃಹ ಸಚಿವ): ₹10,21,631

ಲಕ್ಷ್ಮಣ ಸವದಿ: ₹4,86,848

ಡಾ. ಸಿ. ಎನ್. ಅಶ್ವತ್ಥ ನಾರಾಯಣ: ₹4,58,240

ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಸ್ಥಿತಿಗತಿ ಹಾಗೂ ಜನಸಾಮಾನ್ಯರಿಗೆ ಸಿಗುವ ಆರೋಗ್ಯ ಸೌಲಭ್ಯಗಳ ಬಗ್ಗೆ ನಿತ್ಯ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಆರ್ಥಿಕವಾಗಿ ಸಬಲರಾಗಿರುವ ಜನಪ್ರತಿನಿಧಿಗಳೇ ಕೋಟ್ಯಂತರ ರೂಪಾಯಿ ಸರ್ಕಾರಿ ಖಜಾನೆಯಿಂದ ಮರುಪಾವತಿ ಪಡೆದಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸರ್ಕಾರ ಆಸ್ಪತ್ರೆಗಳಿಗೆ ಸೌಕರ್ಯಗಳಿಲ್ಲ:

ಸರ್ಕಾರದ ನೂರಾರು ಆಸ್ಪತ್ರೆಗಳಿಗೆ ಸರಿಯಾಗಿ ಮೂಲ ಸೌಕರ್ಯಗಳಿಲ್ಲ. ಜೊತೆಗೆ, ವೈದ್ಯರು ಹಾಗೂ ಇತರೆ ಸಿಬ್ಬಂದಿ ಇಲ್ಲದೇ ಜನರು ಪರದಾಡುತ್ತಿದ್ದಾರೆ. ಆದರೆ, ಇವರು ಒಂದೊಂದು ಆಸ್ಪತ್ರೆ ನಿರ್ಮಾಣ ಮಾಡುವಷ್ಟು ಹಣವನ್ನು ವೈದ್ಯಕೀಯ ವೆಚ್ಚಕ್ಕಾಗಿ ಬಳಸಿಕೊಂಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories