ಬೈಕ್ ಏರಿ ಕೂಲ್ ಆಗಿ ಬೈಕ್ ಓಡಿಸ್ತಿದ್ದ ಜೋಮಾಟೊ ಹುಡುಗಿಯ ವಿಡಿಯೋ ವೈರಲ್ ಆಗ್ತಿದ್ದಂತೆ ನೆಟ್ಟಿಗರ ಕೋಪ ನೆತ್ತಿಗೇರಿದೆ. ಕಂಪನಿ ಹಾಗೂ ಹುಡುಗಿ ಡ್ರೆಸ್ ಬಗ್ಗೆ ಜನರು ಕಮೆಂಟ್ ಶುರು ಮಾಡಿದ್ದಾರೆ.
ಆನ್ಲೈನ್ ಫುಡ್ ಡಿಲೆವರಿ ಕಂಪನಿ ಜೋಮಾಟೊ ಆಗಾಗ ಸುದ್ದಿ ಮಾಡ್ತಿರುತ್ತದೆ. ಅದ್ರ ಬೆಲೆ ಏರಿಕೆ ಇಲ್ಲವೆ ಡೆಲಿವರಿ ಬಾಯ್ ಕೆಲಸಕ್ಕೆ ಜೋಮಾಟೊ ಚರ್ಚೆಗೆ ಬರುತ್ತಿರುತ್ತದೆ. ಈಗ ಜೋಮಾಟೊದ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಾರಿ ಜೋಮಾಟೊ ಡೆಲಿವರಿ ಮಾಡಲು ರಸ್ತೆಗಿಳಿದ ಹುಡುಗಿ ಸುದ್ದಿಯಲ್ಲಿದ್ದಾಳೆ.
ಈಗಿನ ದಿನಗಳಲ್ಲಿ ಹುಡುಗಿಯರು ಕೂಡ ಡೆಲಿವರಿ (Delivery) ಕೆಲಸ ಮಾಡ್ತಿದ್ದಾರೆ. ಆನ್ಲೈನ್ (Online) ಕಂಪನಿಗಳ ಜೊತೆ ಕೈಜೋಡಿಸಿ ಅವರ ವಸ್ತುಗಳನ್ನು ಗ್ರಾಹಕರಿಗೆ ಸುರಕ್ಷಿತವಾಗಿ ತಲುಪಿಸುವ ಕೆಲಸ ಮಾಡ್ತಿದ್ದಾರೆ. ಇದೇ ನಿಟ್ಟಿನಲ್ಲಿ ಜೋಮಾಟೊ ಹುಡುಗಿ ಕೂಡ ಬೈಕ್ ಏರಿ ರಸ್ತೆಗಿಳಿದಿದ್ದಾಳೆ. ಆಕೆ ಜೋಮಾಟೋ ಬ್ಯಾಗ್ ಹಾಕಿರೋದನ್ನು ವಿಡಿಯೋದಲ್ಲಿ ನೋಡ್ಬಹುದು. ಆಕೆಯ ಈ ಡ್ರೆಸ್ ಕೆಲವರ ಕೋಪಕ್ಕೆ ಕಾರಣವಾಗಿದೆ. ಹುಡುಗಿ ಇಂಥ ಬಟ್ಟೆ ಹಾಕಿಕೊಂಡು ಜನರ ಮುಂದೆ ಸ್ಟಂಟ್ ಮಾಡ್ತಿದ್ದಾಳೆ. ಇದ್ರಿಂದ ಪ್ರಯಾಣಿಕರ ಗಮನ ಬೇರೆಡೆ ಹೋಗುತ್ತದೆ ಎಂದು ಕೆಲವರು ಆರೋಪ ಮಾಡಿದ್ದಾರೆ. ಮತ್ತೆ ಕೆಲವರು ಹೆಲ್ಮೆಟ್ (Helmet) ಧರಿಸದ ಕಾರಣ ಜೋಮಾಟೊ ಕಂಪನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
undefined
ಇಲ್ಲಿ ರಾಜರಿಗೆ ಊರವರೆಲ್ಲ ಹೆಂಡ್ತಿಯರು! ಕಾಡಿನಲ್ಲಿ ಅಲೆದಾಡ್ತಿವೆ ಅವ್ರ ಆತ್ಮ...ಡಾ.ಬ್ರೋ ಬಿಚ್ಚಿಟ್ಟ ರಹಸ್ಯ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಮಧ್ಯಪ್ರದೇಶದ ಇಂದೋರ್ ನದ್ದು. ಹುಡುಗಿಯೊಬ್ಬಳು ಜೋಮಾಟೊ ಟೀ ಶರ್ಟ್ ಧರಿಸಿದ್ದಾಳೆ. ಹಾಗೆಯೇ ಶಾರ್ಟ್ ಡೆನಿಮ್ ಬಾಟಮ್ ಹಾಕಿರೋದನ್ನು ನೀವು ವಿಡಿಯೋದಲ್ಲಿ ಕಾಣ್ಬಹುದು. ಅವಳು ಕೂದಲು ಬಿಡ್ಕೊಂಡು, ತಲೆಯ ಮೇಲೆ ಕನ್ನಡಕ ಹಾಕಿಕೊಂಡು ಬೈಕ್ ಓಡಿಸ್ತಿದ್ದಾಳೆ. ಹೆಲ್ಮೆಟ್ ಇಲ್ಲದೇ ಕೂಲ್ ಬೋಲ್ಡ್ ಸ್ಟೈಲ್ ನಲ್ಲಿ ಬೈಕ್ ಓಡಿಸುತ್ತಿರೋದನ್ನು ನೀವು ಕಾಣ್ಬಹುದು. ಆಕೆ ಬೆನ್ನಿನ ಮೇಲೆ ಜೋಮಾಟೊ ಬ್ಯಾಗ್ ಇದೆ. ಆಕೆ ಅಕ್ಕಪಕ್ಕ ಹೋಗ್ತಿರುವ ವಾಹನ ಸವಾರರು ಆಕೆಯನ್ನು ನೋಡ್ತಿದ್ದಾರೆ. ಕೆಲವರು ಆಕೆಯನ್ನು ಮಾತನಾಡಿಸುವ ಪ್ರಯತ್ನ ಮಾಡ್ತಿರೋದನ್ನು ನೀವು ನೋಡ್ಬಹುದು.
ಐಷಾರಾಮಿ ಬ್ಯಾಗ್ ಹಿಡಿದ ರಾಣಿ ಮುಖರ್ಜಿಗೆ ರೊಮ್ಯಾನ್ಸ್ ಮಾಡೋದ ಕಲಿಸಿದ್ದು ಯಾರು?
ಈ ವಿಡಿಯೋ ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರು ಇಂದೋರ್ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಹೆಲ್ಮೆಟ್ ಹಾಕದೆ ಬೈಕ್ ಓಡಿಸುತ್ತಿರುವ ಹುಡುಗಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ರಾಜೀವ್ ಮೆಹ್ತಾ ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಜೋಮಾಟೊ ಮಾರ್ಕೆಟಿಂಗ್ ಹೆಡ್ ಈ ಐಡಿಯಾ ಮಾಡಿದ್ದಾರೆ. ಬೆಳಿಗ್ಗೆ ಒಂದು ಗಂಟೆ ಹಾಗೂ ಸಂಜೆ ಒಂದು ಗಂಟೆ, ಖಾಲಿ ಬ್ಯಾಗ್ ನೊಂದಿಗೆ ರಸ್ತೆಯಲ್ಲಿ ರೈಡ್ ಮಾಡಲು ಈ ಮಾಡೆಲ್ ಆಯ್ಕೆ ಮಾಡಿಕೊಂಡಿದ್ದಾರೆಂದು ರಾಜೀವ್ ಮೆಹ್ತಾ ಶೀರ್ಷಿಕೆ ಹಾಕಿದ್ದಾರೆ. ಅಲ್ಲದೆ ವಿಡಿಯೋ ಮೇಲೂ ನೀವು ಒಂದಿಷ್ಟು ಬರಹವನ್ನು ಓದಬಹುದು. ಇಂಧೋರ್ ವಿಜಯನಗರದಲ್ಲಿ ಎಂದು ಅದ್ರ ಮೇಲೆ ಬರೆಯಲಾಗಿದೆ.
ವಿಡಿಯೋ ಬಗ್ಗೆ ಅನೇಕರು ಕಮೆಂಟ್ ಮಾಡಿರೋದನ್ನು ನೀವು ನೋಡ್ಬಹುದು. ಇನ್ಮುಂದೆ ಜೋಮಾಟೊದಲ್ಲಿ ಆರ್ಡರ್ ಮಾಡ್ಬೇಕು ಅಂತಾ ಒಬ್ಬರು ಬರೆದ್ರೆ ಮತ್ತೊಬ್ಬರು ಇಂಧೋರ್ ಪೊಲೀಸ್ ವಿರುದ್ಧ ಕೆಂಡಕಾರಿದ್ದಾರೆ. ಜೋಮಾಟೊ, ಡೆಲಿವರಿ ಬಾಯ್ಸ್ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವುದಿಲ್ಲ. ಮಾಡೆಲ್‌ಗೆ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುವಂತೆ ಒತ್ತಾಯಿಸಲಾಗಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣದಿಂದ ಕಾರ್ಪೊರೇಟ್‌ವರೆಗೆ ಮಹಿಳೆಯರು ದೊಡ್ಡ ಮಾರ್ಕೆಟಿಂಗ್ ಸಾಧನವಾಗಿದ್ದಾರೆ ಎಂದು ಇನ್ನೊಬ್ಬರು ಬರೆದಿದ್ದಾರೆ.
ಇದಕ್ಕೆ ಜೋಮಾಟೊ ಡೆಲಿವರಿ ಬಾಯ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. @deepigoyal ಎಂಬ ಹೆಸರಿನ ಡೆಲಿವರಿ ಬಾಯ್, ನಮಗೂ ಇದಕ್ಕೂ ಸಂಬಂಧವಿಲ್ಲ. ಹೆಲ್ಮೆಟ್ ಧರಿಸದೆ ಬೈಕ್ ಓಡಿಸುವುದನ್ನು ನಾವು ಬೆಂಬಲಿಸುವುದಿಲ್ಲ. ಜೋಮಾಟೊ ಇಂಧೋರ್ ಮಾರ್ಕೆಟಿಂಗ್ ಮುಖ್ಯಸ್ಥರನ್ನು ಹೊಂದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ನಮ್ಮ ಬ್ರ್ಯಾಂಡ್ ಹೆಸರಿನಲ್ಲಿ ಫ್ರೀ ರೈಡಿಂಗ್ ಇದಾಗಿರಬಹುದು. ಮಹಿಳೆಯರು ಡೆಲಿವರಿ ಕೆಲಸ ಮಾಡೋದು ತಪ್ಪಲ್ಲ. ನಮ್ಮಲ್ಲಿ ಅನೇಕ ಮಹಿಳೆಯರು ತಮ್ಮ ಜೀವನೋಪಾಯಕ್ಕೆ ಈ ಕೆಲಸ ಮಾಡ್ತಾರೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
Indore marketing head had this idea. He hired a model to drive around with an empty zomato bag for one hour in the morning and one hour in the evening. is on a roll... 😁😁 pic.twitter.com/kuwVpNzewu
— Rajiv Mehta (@rajivmehta19)