ಗರಿಗರಿಯಾದ ದೋಸೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬೆಳಗ್ಗೆ ಆಗಿರ್ಲಿ, ರಾತ್ರಿ ಆಗಿರ್ಲಿ ಖುಷಿಯಿಂದ ದೋಸೆ ಚಪ್ಪರಿಸಿ ತಿನ್ತಾರೆ. ಇವತ್ತು ಮಾರ್ಚ್ 3. ವಿಶ್ವ ದೋಸೆ ದಿನವಾಗಿದ್ದು, ಈ ವರ್ಷ ಸ್ವಿಗ್ಗಿ ಬರೋಬ್ಬರಿ 29 ಮಿಲಿಯನ್ ದೋಸೆ ಡೆಲಿವರಿ ಮಾಡಿದೆ ಎಂದು ಬಹಿರಂಗಪಡಿಸಿದೆ. ಅಂದರೆ ಪ್ರತಿ ನಿಮಿಷಕ್ಕೆ ಸರಾಸರಿ 122 ದೋಸೆಗಳನ್ನು ಆರ್ಡರ್ ಮಾಡಲಾಗಿದೆ.
ದಕ್ಷಿಣಭಾರತದಲ್ಲಿ ಹಲವಾರು ವೆರೈಟಿಯ ಆಹಾರಗಳಿವೆ. ಇಡ್ಲಿ-ಸಾಂಬಾರ್, ವಡಾ, ರೈಸ್ ಬಾತ್, ದೋಸೆ ಹೀಗೆ ಹಲವು. ಅದರಲ್ಲಿ ಬಹುತೇಕರ ಅಚ್ಚುಮೆಚ್ಚಿನ ಆಹಾರ ದೋಸೆ. ಸಾದಾ ದೋಸೆ, ಮಸಾಲೆ ದೋಸೆ, ತುಪ್ಪ ದೋಸೆ, ಬೆಣ್ಣೆ ದೋಸೆ ಹೀಗೆ ಯಾವುದೇ ವೆರೈಟಿ ದೋಸೆ ಆಗಿರ್ಲಿ, ಇದು ಸಾಂಬಾರ್ ಅಥವಾ ಚಟ್ನಿಯೊಂದಿಗೆ ಅದ್ಭುತವಾದ ರುಚಿಯನ್ನು ನೀಡುತ್ತದೆ. ಹೀಗಾಗಿಯೇ ಬಹುತೇಕರು ಬೆಳಗ್ಗೆ ಆಗಿರ್ಲಿ, ರಾತ್ರಿ ಆಗಿರ್ಲಿ ಖುಷಿಯಿಂದ ದೋಸೆ ಚಪ್ಪರಿಸಿ ತಿನ್ತಾರೆ. ಅದರಲ್ಲೂ ಬೆಂಗಳೂರು ದೋಸೆ ಕ್ಯಾಪಿಟಲ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ನಗರ. ಇವತ್ತು ಮಾರ್ಚ್ 3. ವಿಶ್ವ ದೋಸೆ ದಿನವಾಗಿದ್ದು, ಈ ವರ್ಷ ಸ್ವಿಗ್ಗಿ ಬರೋಬ್ಬರಿ 29 ಮಿಲಿಯನ್ ದೋಸೆ ಡೆಲಿವರಿ ಮಾಡಿದೆ ಎಂದು ಬಹಿರಂಗಪಡಿಸಿದೆ.
ಪ್ರತಿ ನಿಮಿಷಕ್ಕೆ ಸರಾಸರಿ 122 ದೋಸೆಗಳ ಆರ್ಡರ್
ವಿಶ್ವಾದ್ಯಂತ ಪ್ರತಿ ದಿನ ಲಕ್ಷಾಂತರ ದೋಸೆ ಮಾರಾಟವಾಗುತ್ತದೆ. ಬೆಳಗಿನ ಉಪಹಾರಕ್ಕೆ, ಸಂಜೆ ಸ್ನಾಕ್ಸ್‌ಗೆ ಹೆಚ್ಚಿನ ಜನರು ದೋಸೆಯನ್ನೇ ಆರ್ಡರ್ ಮಾಡುತ್ತಾರೆ. ಖ್ಯಾತ ಫುಡ್ ಡೆಲಿವರಿ ಸಂಸ್ಥೆ ಸ್ವಿಗ್ಗಿ ನೀಡಿರುವ ಮಾಹಿತಿಯ ಪ್ರಕಾರ, ಕಳೆದ ವರ್ಷ ಬರೋಬ್ಬರಿ 29 ಮಿಲಿಯನ್ ದೋಸೆಯನ್ನು ಡೆಲಿವರಿ ಮಾಡಿದೆಯಂತೆ. ದೇಶಾದ್ಯಂತ ಬೆಳಗಿನ ಉಪಾಹಾರಕ್ಕೆ ಪ್ರತಿ ನಿಮಿಷಕ್ಕೆ ಸರಾಸರಿ 122 ದೋಸೆಗಳನ್ನು ಆರ್ಡರ್ ಮಾಡಲಾಗುತ್ತದೆ. ಇದರಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದ್ದರೆ, ಹೈದರಾಬಾದ್ ಮತ್ತು ಚೆನ್ನೈ ನಂತರದ ಸ್ಥಾನಗಳಲ್ಲಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
undefined
ಬೆಂಗಳೂರಲ್ಲಿ ಅತಿ ಹೆಚ್ಚು ದೋಸೆ ಆರ್ಡರ್
ವರದಿಯ ಪ್ರಕಾರ, ಭಾರತದ ದೋಸೆ ರಾಜಧಾನಿ ಬೆಂಗಳೂರು ಚಾರ್ಟ್‌ನಲ್ಲಿ ಅಗ್ರಸ್ಥಾನದಲ್ಲಿದೆ ಅಂದರೆ ದೋಸೆ ಆರ್ಡರ್ ಮಾಡುವುದರಲ್ಲಿ ಇತರ ದೊಡ್ಡ ನಗರಗಳನ್ನು ಮೀರಿಸಿದೆ. ಬೆಂಗಳೂರು, ದೆಹಲಿ, ಮುಂಬೈ ಮತ್ತು ಕೋಲ್ಕತ್ತಾಕ್ಕಿಂತ ಎರಡು ಪಟ್ಟು ಹೆಚ್ಚು ದೋಸೆ ಆರ್ಡರ್‌ಗಳನ್ನು ನೀಡಿದೆ. ಬೆಣ್ಣೆಯ ಪರಾಠಗಳಿಗೆ ಹೆಸರುವಾಸಿಯಾದ ಚಂಡೀಗಢ, ಮಸಾಲೆ ದೋಸೆಯನ್ನು ಹೆಚ್ಚು ಆರ್ಡರ್ ಮಾಡಲಾಗಿದೆ. ರಾಂಚಿ, ಕೊಯಮತ್ತೂರು, ಪುಣೆ ಮತ್ತು ಭೋಪಾಲ್‌ನಲ್ಲಿ ಹೆಚ್ಚು ಆರ್ಡರ್ ಮಾಡಿದ ಭಕ್ಷ್ಯಗಳಲ್ಲಿ ದೋಸೆ ಕೂಡ ಸೇರಿದೆ.
ಕೊಯಂಬತ್ತೂರಿನ ದೋಸೆ ಚಾಂಪಿಯನ್
ಬೆಳಗಿನ ಉಪಾಹಾರದ ಸಮಯದಲ್ಲಿ, ನಂತರ ರಾತ್ರಿಯ ಊಟ. ರಾತ್ರಿಯ ಊಟಕ್ಕೆ ಅತಿ ಹೆಚ್ಚು ದೋಸೆ ಆರ್ಡರ್ ಮಾಡಿರುವುದು ಚೆನ್ನೈ ನಗರ. ಜನರು ಅತಿ ಹೆಚ್ಚು ಆರ್ಡರ್ ಮಾಡಿರುವ ದೋಸೆಗಳಲ್ಲಿ ಕ್ಲಾಸಿಕ್ ಮಸಾಲಾ ದೋಸೆಯು ಮೊದಲ ಸ್ಥಾನದಲ್ಲಿದೆ. ಸಾದಾ ದೋಸೆ, ಸೆಟ್ ದೋಸೆ, ಈರುಳ್ಳಿ ದೋಸೆ ಮತ್ತು ಬೆಣ್ಣೆ ಮಸಾಲೆ ದೋಸೆ ನಂತರದ ಸ್ಥಾನದಲ್ಲಿದೆ. ಹೈದರಾಬಾದ್‌ನಲ್ಲಿ ಜನರು ಸ್ನಾಕ್ ಟೈಮ್‌ನಲ್ಲಿ ಹೆಚ್ಚು ದೋಸೆಗಳನ್ನೇ ಅರ್ಡರ್ ಮಾಡಿದ್ದಾರೆ. ಕೊಯಮತ್ತೂರಿನ ಗ್ರಾಹಕರೊಬ್ಬರು ವರ್ಷದಲ್ಲಿ 447 ಪ್ಲೇಟ್ ದೋಸೆಗಳನ್ನು ಆರ್ಡರ್ ಮಾಡಿ ದೇಶದ ದೋಸೆ ಚಾಂಪಿಯನ್ ಆಗಿದ್ದಾರೆ.
ಕ್ರಿಕೆಟ್ ವರ್ಲ್ಡ್ ಕಪ್, ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ರಂಜಾನ್‌ನಂತಹ ಪ್ರಮುಖ ಘಟನೆ ಹಾಗೂ ಹಬ್ಬಗಳ ಸಮಯದಲ್ಲಿ, ದೋಸೆಯನ್ನು ಅತಿ ಹೆಚ್ಚು ಆರ್ಡರ್ ಮಾಡಲಾಗಿದೆ. ಹೆಚ್ಚುವರಿಯಾಗಿ, ನವರಾತ್ರಿಯ ಸಮಯದಲ್ಲಿ, ಇದು ಅತ್ಯಂತ ಜನಪ್ರಿಯ ಸಸ್ಯಾಹಾರಿ ಭಕ್ಷ್ಯವಾಗಿದೆ.