
44 ವರ್ಷದ ಮ್ಯಾಕ್ಸಿಮ್ ಲ್ಯುಟಿ ರಷ್ಯಾದ ಹಸಿ ಆಹಾರದ ಇನ್ಫ್ಲುಯೆನ್ಸರ್. ಕಚ್ಚಾ ಆಹಾರ ಡಯಟ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ನೀಡುತ್ತಾ ಫೇಮಸ್ ಆಗಿದ್ದ. ಆದರೆ, ಆತ ತನ್ನ ಮಗುವಿನ ಮೇಲೆ ತನ್ನದೇ ಹೊಸ ‘ಸನ್‌ಶೈನ್ ಡಯಟ್’ ಪ್ರಯೋಗ ಮಾಡಲು ಹೋಗಿ ಮಗುವಿನ ಸಾವಿಗೆ ಕಾರಣನಾಗಿದ್ದಾನೆ.
ಈ ಡಯಟ್‌ನಂತೆ ಮಗು ಕೇವಲ ಸೂರ್ಯನ ಬೆಳಕನ್ನು ಸೇವಿಸಬೇಕಿತ್ತಂತೆ. ಜೊತೆಗೆ ತಣ್ಣನೆಯ ನೀರಿನಲ್ಲಿ ಮಗುವನ್ನು ಬಿಡುತ್ತಿದ್ದ. ಹೀಗೆ ಮಾಡಿದರೆ ಮಗು ಗಟ್ಟಿಯಾಗುತ್ತದೆ ಎಂದಾತ ನಂಬಿದ್ದ. ಈ ಸೂರ್ಯರಶ್ಮಿಯ ಡಯಟ್ ಎಸ್ಟು ಸ್ಟ್ರಿಕ್ಟ್ ಆಗಿತ್ತೆಂದರೆ, ಆತ ಪತ್ನಿಗೆ ಮಗುವಿಗೆ ಎದೆಹಾಲು ನೀಡಲೂ ಬಿಡುತ್ತಿರಲಿಲ್ಲ. ಪರಿಣಾಮವಾಗಿ ಹಸಿವಿನಿಂದ ಬಳಲಿದ ಮಗು ನ್ಯುಮೋನಿಯಾ ಮತ್ತು ಪೋಷಕಾಂಶಗಳ ಕೊರತೆಯಿಂದ ಸಾವು ಕಂಡಿದೆ. ಆತ ನರಳುತ್ತಿದ್ದರೂ, ಮಗುವನ್ನು ವೈದ್ಯರ ಬಳಿಗೆ ಕರೆದೊಯ್ಯಲಿಲ್ಲ.
ತನ್ನ ಅಜ್ಞಾನದಿಂದ ಮಗುವಿನ ಸಾವಿಗೆ ಕಾರಣನಾದ ಈತನಿಗೆ ಕೋರ್ಟ್ 8 ವರ್ಷಗಳ ಜೈಲು ಮತ್ತು ದಂಡ ವಿಧಿಸಿದೆ. ರಷ್ಯಾದ ನಗರವಾದ ಸೋಚಿಯಲ್ಲಿನ ನ್ಯಾಯಾಲಯವು, ಮಗುವಿಗೆ ಸೂರ್ಯನ ಬೆಳಕನ್ನು ನೀಡುವ ನಿರ್ಧಾರದಿಂದಾಗಿ ಪ್ರಭಾವಿಯು ಉದ್ದೇಶಪೂರ್ವಕವಾಗಿ ಗಂಭೀರವಾದ ದೈಹಿಕ ಹಾನಿಯನ್ನು ಉಂಟು ಮಾಡಿದ ಅಪರಾಧಿಯಾಗಿದ್ದಾನೆ ಎಂದು ನ್ಯಾಯಾಲಯ ಘೋಷಿಸಿದೆ.
ತನ್ನ ಮಗನು ಆಹಾರ ಅಥವಾ ನೀರಿಲ್ಲದೆ ದೀರ್ಘಾವಧಿಯವರೆಗೆ ಕೇವಲ ಸೂರ್ಯರಶ್ಮಿ ಸೇವಿಸಿ ಇರುವುದನ್ನು ತನ್ನ ಬೆಂಬಲಿಗರಿಗೆ ತೋರಿಸುವ ಬಯಕೆ ಅವನದಾಗಿತ್ತು!
ಲ್ಯುಟಿ ತನ್ನ ಸಂಗಾತಿ ಒಕ್ಸಾನಾ ಮಿರೊನೊವಾಗೆ ಮಗುವಿಗೆ ಹಾಲುಣಿಸಲು ಬಿಡುತ್ತಿರಲಿಲ್ಲ. ಮತ್ತು ಆಕೆಯನ್ನು ತಾನು ಹೇಳಿದ್ದೇ ತಿನ್ನುವಂತೆ ಒತ್ತಾಯ ಹೇರಿ ಗುಲಾಮಳಾಗಿಸಿಕೊಂಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆಕೆ ಕೂಡಾ ಪೋಷಕಾಂಶಗಳ ಕೊರತೆ ಎದುರಿಸುತ್ತಿದ್ದರು ಮತ್ತು ಮಗು ಹುಟ್ಟುವಾಗ ಅದು ಕಡಿಮೆ ತೂಕ ಹೊಂದಿತ್ತು.
ಅವನು ತನ್ನ ಮಗನನ್ನು ಕೊಲ್ಲುವ ಉದ್ದೇಶವನ್ನು ಹೊಂದಿರಲಿಲ್ಲ ಮತ್ತು ಅದನ್ನು ಪ್ರೀತಿಸುವುದಾಗಿ ನ್ಯಾಯಾಧೀಶರ ಬಳಿ ಹೇಳಿದ್ದಾನೆ. ಜೊತೆಗೆ ಅಪಾದನೆಗಳನ್ನು ಪತ್ನಿಯ ತಲೆಗೆ ಕಟ್ಟಲು ಪ್ರಯತ್ನವನ್ನೂ ಮಾಡಿದ್ದಾನೆ. ತಂದೆಗೆ £ 860 ದಂಡವನ್ನೂ ವಿಧಿಸಲಾಯಿತು.
ಪತ್ನಿಗೂ ಜೈಲು
ಈ ಮಧ್ಯೆ ಪತ್ನಿ ಮಿರನೋವಾಗೆ ಆಕೆಯ ಪೋಷಕರು ಸಾಕಷ್ಟು ಬಾರಿ ಲ್ಯುಟಿ ಹುಚ್ಚನಾಗಿದ್ದು, ಅವನನ್ನು ಬಿಡುವಂತೆ ಹೇಳಿದರೂ ಆಕೆ ಕೇಳಿರಲಿಲ್ಲ. ಇನ್ನು ಮಿನ್ರೋವಾ ಅವರ ಸಂಬಂಧಿಕರು ಅವರು ಹಲವಾರು ಬಾರಿ ಮಗುವಿಗೆ ಆಹಾರವನ್ನು ನೀಡುವಂತೆ ಬಲವಂತಪಡಿಸಿದರೂ ಆಕೆ ಹಾಗೆ ಮಾಡಲಿಲ್ಲ. ಮಗುವಿಗೆ ರಹಸ್ಯವಾಗಿ ಹಾಲುಣಿಸುವ ಆಕೆಯ ಯತ್ನವೂ ವಿಫಲವಾಯಿತು ಎಂದು ತಿಳಿದುಬಂದಿದೆ.
ತನ್ನ ಪೋಷಕರ ಜವಾಬ್ದಾರಿಗಳನ್ನು ಪೂರೈಸುವಲ್ಲಿ ವಿಫಲವಾದ ಮತ್ತು ಶಿಶುವಿಗೆ ನೆರವು ನೀಡಲು ವಿಫಲವಾದ ಮಿರೊನೊವಾ ತಪ್ಪಿತಸ್ಥರೆಂದು ನ್ಯಾಯಾಲಯ ಹೇಳಿದೆ. ಆಕೆಗೆ ಎರಡು ವರ್ಷಗಳ ಕಠಿಣ ಪರಿಶ್ರಮದ ಶಿಕ್ಷೆ ವಿಧಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.