ಭಾರತದ ಪಾಕಶಾಸ್ತ್ರಕ್ಕೆ ವಿಶ್ವದಾದ್ಯಂತ ಬೇಡಿಕೆ ಇದೆ. ಇಂಡಿಯನ್ ಫುಡ್ ಕಲ್ಚರ್ ಗೆ ವಿದೇಶಿಗರು ಕೂಡ ಮನಸೋಲುತ್ತಾರೆ. ಸ್ವಿಜರ್ಲ್ಯಾಂಡ್ ನಲ್ಲಿ ನಡೆಯಲಿರುವ 44ನೇ ಸ್ಕಿಲ್ ಪರ್ದೆಗೆ ಸ್ಪರ್ಧೆಗೆ ಮಣಿಪಾಲದ ಮೂವರು ಆಯ್ಕೆಯಾಗಿದ್ದಾರೆ .
ಉಡುಪಿ (23): ಭಾರತದ ಪಾಕಶಾಸ್ತ್ರಕ್ಕೆ ವಿಶ್ವದಾದ್ಯಂತ ಬೇಡಿಕೆ ಇದೆ. ಇಂಡಿಯನ್ ಫುಡ್ ಕಲ್ಚರ್ ಗೆ ವಿದೇಶಿಗರು ಕೂಡ ಮನಸೋಲುತ್ತಾರೆ. ಸ್ವಿಜರ್ಲ್ಯಾಂಡ್ ನಲ್ಲಿ ನಡೆಯಲಿರುವ 44ನೇ ಸ್ಕಿಲ್ ಸ್ಪರ್ಧೆಗೆ ಮಣಿಪಾಲದ ಮೂವರು ಆಯ್ಕೆಯಾಗಿದ್ದಾರೆ . ತನ್ಮಯಿ 30 ದೇಶಗಳ ಜೊತೆ ಅಡುಗೆ ಮನೆಯಲ್ಲಿ ಸೆಣೆಸಾಟ ನಡೆಸಲಿದ್ದಾರೆ. ಸ್ವಿಟ್ಜರ್ಲೆಂಡ್‌ನ ಲುಸರ್ನ್‌ನಲ್ಲಿ ನಡೆಯಲಿರುವ ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆಗೆ ಮಾಹೆಯ ವಕ್ಷಾ ಸಂಸ್ಥೆಯಿಂದ ಮೂವರು ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿ ತನ್ಮಯಿ ನಲ್ಲಮುತ್ತು ಪಾಕಶಾಸ್ತ್ರ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. 30 ದೇಶದ ಗೋಲ್ಡ್ ಮೆಡಲಿಸ್ಟ್ ಗಳ ಜೊತೆ ಸ್ವಿಟ್ಜರ್ಲೆಂಡ್ ನ ಕಿಚನ್ ನಲ್ಲಿ ಅಡುಗೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವರ್ಲ್ಡ್ ಸ್ಕಿಲ್ ಕಾಂಪಿಟೀಷನ್ ನಲ್ಲಿ ಭಾರತದಿಂದ 54_ ವಿಭಾಗದಲ್ಲಿ 56 ಸ್ಪರ್ಧಿಗಳು 54 ತರಬೇತುದಾರರು ಭಾಗವಹಿಸುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಆರು ಜ್ಯೂರಿಗಳ ಮುಂದೆ ಅಡುಗೆ ಕೈರುಚಿಯನ್ನು ಸಾಭೀತುಪಡಿಸಬೇಕು. ನಿಗದಿತ ಸಮಯದಲ್ಲಿ ಆಯೋಜಕರು ಕೊಟ್ಟ ಅಡುಗೆ ಸಾಮಾಗ್ರಿಗಳನ್ನು ಬಳಸಿ ಅಂತರಾಷ್ಟ್ರೀಯ ಗುಣಮಟ್ಟಕ್ಕೆ ಹೊಂದಿಕೆಯಾಗುವ ಅಡುಗೆಯನ್ನು ತನ್ಮಯಿ ನಲ್ಲ ಮುತ್ತು ತಯಾರು ಮಾಡಬೇಕು.
undefined
ಸೌತ್ ಇಂಡಿಯನ್ ಫುಡ್ ರುಚಿ ತೋರಿಸಿದ ಧನುಷ್‌ಗೆ ಥ್ಯಾಂಕ್ಸ್ ಎಂದ ಸಾರಾ
ಇದೇ ಸ್ಪರ್ಧೆಗೆ ಮಣಿಪಾಲದ ವಕ್ಷಾ ಪ್ರಾಂಶುಪಾಲ ತಿರುಜ್ಞಾನಸಂಬಂಧಮ್, ಸಹಾಯಕ ಪ್ರಾಧ್ಯಾಪಕ ಪರಿತೋಷ್ ದಬ್ರಾಲ್ ರಾಷ್ಟ್ರೀಯ ತಜ್ಞರಾಗಿ ಆಯ್ಕೆಯಾಗಿದ್ದಾರೆ. ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯ ರಾಜ್ಯಮಟ್ಟ ಮತ್ತು ಪ್ರಾಂತೀಯ ಮಟ್ಟದ ಸ್ಪರ್ಧೆಗಳಲ್ಲಿ ಗೋಲ್ಡ್ ಮೆಡಲ್ ಗೆದ್ದವರನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕಳುಹಿಸುತ್ತಿದೆ. ರೆಸ್ಟೋರೆಂಟ್ ಸೇವಾ ವಿಭಾಗದಲ್ಲಿ ಒರಿಸ್ಸಾದ ಸುಬ್ರತ್ ಪಟೇಲ್ ಗೆ ಮಾಹೆಯಲ್ಲೇ ತರಬೇತಿ ನೀಡಲಾಗಿದೆ.
ವಾವ್ ಏನ್ ಟೇಸ್ಟ್..ಥೈಲ್ಯಾಂಡ್ ಬ್ಲಾಗರ್ ಸೌತ್ ಇಂಡಿಯನ್ ಫುಡ್‌ಗೆ ಫಿದಾ
ಒಲಿಂಪಿಕ್ ಮಾದರಿ ಸ್ಪರ್ಧೆಯಲ್ಲಿ 59 ದೇಶಗಳು ಮತ್ತು ಪ್ರಾಂತ್ಯಗಳ ಭಾಗವಹಿಸಲಿದೆ. ಭಾರತದ ಪ್ರವಾಸೋದ್ಯಮ ಮತ್ತು ಕೌಶಲ್ಯ ಅಭಿವೃದ್ಧಿಗೆ ಈ ಸ್ಪರ್ಧೆ ಪ್ರಮುಖ ಪಾತ್ರವಹಿಸಲಿದೆ. 10 ದಿನಗಳ ಸ್ಪರ್ಧೆಗೆ ಭಾರತದಿಂದ 158 ಜನರ ತಂಡ ಭಾಗವಹಿಸಲಿದ್ದು ನಮ್ಮವರು ಗೆಲ್ಲಲಿ.. ಆಲ್ ದಿ ಬೆಸ್ಟ್.