ಹಸಿ ಹಾಲು ಸೇವನೆ ಆರೋಗ್ಯಕ್ಕೆ ಪ್ರಯೋಜನಕಾರಿಯೇ ಅಥವಾ ಹಾನಿಕಾರಕವೇ ?

By Suvarna News  |  First Published May 22, 2022, 7:04 PM IST

ಹಾಲು (Milk) ಆರೋಗ್ಯ (Health) ಕ್ಕೆ ಒಳ್ಳೆಯದು. ಈ ವಿಷ್ಯ ಎಲ್ಲರಿಗೂ ತಿಳಿದಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹಾಲು ಕುಡಿಯಬೇಕೆಂದು ವೈದ್ಯರು (Doctors) ಸಲಹೆ ನೀಡ್ತಾರೆ. ಆದ್ರೆ ಕೆಲವೊಬ್ಬರು ಹಸಿ ಹಾಲು (Raw milk) ಕುಡೀತಾರೆ. ಇದು ಆರೋಗ್ಯಕ್ಕೆ (Health) ಒಳ್ಳೆದೋ, ಕೆಟ್ಟದ್ದೋ ?


ಪ್ರತಿ ವಯಸ್ಸಿನಲ್ಲಿ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಹಾಲು (Milk) ಅತ್ಯಗತ್ಯ. ಬಾಲ್ಯದಲ್ಲಿ ದೈಹಿಕ ಬೆಳವಣಿಗೆಗಾಗಿ, ಬೆಳೆಯುತ್ತಿರುವಾಗ ಮಾನಸಿಕ ಆಯಾಸವನ್ನು ತೊಡೆದುಹಾಕಲು ಮತ್ತು ನಂತರ ವೃದ್ಧಾಪ್ಯದಲ್ಲಿ, ದೇಹದ ಕುಸಿಯುತ್ತಿರುವ ಕ್ಯಾಲ್ಸಿಯಂ ಮಟ್ಟವನ್ನು ಕಾಪಾಡಿಕೊಳ್ಳಲು ಹಾಲು ಬೇಕೇ ಬೇಕು. ಹಾಲು ರೋಗ (Disease) ದಿಂದ ನಮ್ಮನ್ನು ದೂರವಿಡುತ್ತದೆ. ಹಾಲಿನಲ್ಲಿ ಕ್ಯಾಲ್ಸಿಯಂ (Calcium), ಪ್ರೊಟೀನ್, ಮೆಗ್ನೀಸಿಯಮ್, ವಿಟಮಿನ್ ಎ, ಡಿ, ಇ ಇತ್ಯಾದಿ ಪೋಷಕಾಂಶಗಳು ಹೇರಳವಾಗಿದೆ. ನಿಯಮಿತವಾಗಿ ಹಾಲಿನ ಸೇವನೆ ಮೂಳೆ (Bone) ಗಳು ಮತ್ತು ಹಲ್ಲು (Teeth) ಗಳು ಗಟ್ಟಿಯಾಗಲು ಸಹಾಯ ಮಾಡುತ್ತದೆ. 

ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ಹಾಲಿನಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳಿವೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಹಾಲು ಸೇವನೆ ಮಾಡಬೇಕೆಂದು ಆರೋಗ್ಯ ತಜ್ಞರು ಸಲಹೆ ನೀಡ್ತಾರೆ. ಹಾಲನ್ನು ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಚಹಾ, ಕಾಫಿ ಸೇರಿದಂತೆ ಹಲವು ಪಾನೀಯಗಳಿಗೆ ಹಾಲನ್ನು ಬಳಸುತ್ತೇವೆ. ಆದರೆ, ಹಸಿ ಹಾಲು (Raw milk) ಕುಡಿಯುವುದು ಒಳ್ಳೆಯದೋ ಅಥವಾ ಕುದಿಸಿ ಕುಡಿಯಬೇಕೋ ಎಂಬ ಗೊಂದಲ ಹಲವರಲ್ಲಿ ಇರುವುದು ಸಹಜ. ಆ ಕುರಿತು ಮಾಹಿತಿ ನಾವ್ ಕೊಡ್ತೇವೆ.

Tap to resize

Latest Videos

ಹಾಲು ಬೇಡ ಅನ್ನೋರು ಪೌಷ್ಠಿಕಾಂಶಕ್ಕಾಗಿ ಈ ಬದಲಿ ಆಹಾರ ಸೇವಿಸಿ

ಫುಡ್ ಪಾಯ್ಸನ್ ಆಗುವ ಅಪಾಯ: ಹಸಿ ಹಾಲು ಕುಡಿಯುವುದರಿಂದ ಆರೋಗ್ಯ ಕೆಡುತ್ತದೆ ಎಂಬುದು ಸತ್ಯ. ಅಮೆರಿಕದ ಆರೋಗ್ಯ ಸಂರಕ್ಷಣಾ ಸಂಸ್ಥೆಯ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಪ್ರಕಾರ, ಹಸಿ ಹಾಲಿನಲ್ಲಿ ಎಸ್ಚೆರಿಚಿಯಾ ಕೋಲಾ (ಇ. ಕೋಲಿ) ಮತ್ತು ಲಿಸ್ಟೇರಿಯಾ, ಸಾಲ್ಮೊನೆಲ್ಲಾ ಇತ್ಯಾದಿ ಹಾನಿಕಾರಕ ಬ್ಯಾಕ್ಟೀರಿಯಾಗಳು (Bacteria) ಇರುತ್ತವೆ. ಹಾಗಾಗಿ ಹಸಿ ಹಾಲು ಕುಡಿದರೆ ಫುಡ್‌ ಪಾಯ್ಸನ್‌ (Food poison) ಆಗುವ ಅಪಾಯವಿರುತ್ತದೆ.

ಸಂಧಿವಾತ ಮತ್ತು ನಿರ್ಜಲೀಕರಣದಂತಹ ಸಮಸ್ಯೆ: ಹಸಿ ಹಾಲಿನಲ್ಲಿರುವ ಬ್ಯಾಕ್ಟೀರಿಯಾವು ನಮ್ಮ ದೇಹಕ್ಕೆ (Body) ಹಾನಿ ಮಾಡುತ್ತದೆ. ಇದು ಅತಿಸಾರ, ಸಂಧಿವಾತ ಮತ್ತು ನಿರ್ಜಲೀಕರಣದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಸಿ ಹಾಲು ಕುಡಿಯುವುದು ಹಾನಿಕಾರಕ. ಏಕೆಂದರೆ ಹಸುವಿನ ಕೆಚ್ಚಲು ಕೊಳಕಾಗಿರುವ ಸಾಧ್ಯತೆ ಇರುತ್ತದೆ. ಶುದ್ಧ ಕೈ ಮತ್ತು ಶುದ್ಧ ಪಾತ್ರೆಗಳನ್ನು ಬಳಸದಿದ್ದರೆ ಹಾಲಿನಲ್ಲಿ ಕೊಳಕು ಬರಬಹುದು. ಹಾಗಾಗಿ ಹಾಲನ್ನು ಕುದಿಸಿದ ನಂತರ ಕುಡಿಯುವುದು ಅವಶ್ಯಕ. ಅಕಸ್ಮಾತ್‌ ಹಾಲಿನಲ್ಲಿ ಬ್ಯಾಕ್ಟೀರಿಯಾಗಳಿದ್ದರೂ ಕುದಿಸಿದಾಗ ಅವೆಲ್ಲವೂ ಸಾಯುತ್ತವೆ.

ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ: ಕಚ್ಚಾ ಹಾಲು ಕುಡಿಯುವುದರಿಂದ ದುರ್ಬಲ ರೋಗ ನಿರೋಧಕ ಶಕ್ತಿ (Immunity power) ಹೊಂದಿರುವವರಲ್ಲಿ ಹೆಚ್ಚಿನ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಮಕ್ಕಳಲ್ಲಿ ಹಾಗೂ ಹಿರಿಯರಲ್ಲಿ ಇಂಥಾ ಸಮಸ್ಯೆ ಬೇಗನೇ ಕಾಣಿಸಿಕೊಳ್ಳಬಹುದು.

ಹಾಲಿನ ಜತೆ ಇದನ್ನು ಬೆರೆಸಿ ಕುಡಿಯಿರಿ.. ಪುರುಷರ 'ಶಕ್ತಿ' ಹೆಚ್ಚಿಸುವ ಅಚ್ಚರಿ ಇಲ್ಲಿದೆ!

ದೇಹದಲ್ಲಿ ಆಮ್ಲೀಯತೆ ಪ್ರಮಾಣ ಹೆಚ್ಚಾಗುತ್ತದೆ: ದೇಹ ಆಸಿಡ್ ಮಟ್ಟವು ಯಾವಾಗಲೂ ನಿಯಂತ್ರಣಲ್ಲಿರುವುದು ಅವಶ್ಯಕ. ಆದರೆ ಹಸಿ ಹಾಲನ್ನು ಸೇವಿಸುವುದರಿಂದ ದೇಹದಲ್ಲಿ ಆಸಿಡ್ ಮಟ್ಟವು ನಿಯಂತ್ರಣದಲ್ಲಿರುವುದಿಲ್ಲ. ಬದಲಾಗಿ ಹೆಚ್ಚುತ್ತಾ ಹೋಗುತ್ತದೆ.

ಹಸಿ ಹಾಲು ಕುಡಿದರೆ ಅಲರ್ಜಿ: ಹಸಿ ಹಾಲು ಸೇವನೆಯಿಂದಾಗಿ ವಾಕರಿಕೆ, ವಾಂತಿ ಅಥವಾ ಭೇದಿ ಇತ್ಯಾದಿಗಳ ಸಾಧ್ಯತೆ ತುಂಬಾ ಹೆಚ್ಚು. ಕಚ್ಚಾ ಹಾಲಿನಲ್ಲಿರುವ ಬ್ಯಾಕ್ಟಿರೀಯಾಗಳು ಟಿಬಿ ಸಮಸ್ಯೆ ಹಾಗೂ ಇನ್ನಿತರ ಅನೇಕ ಮಾರಕ ರೋಗಗಳಿಗೆ ಕಾರಣವಾಗಬಹುದು.

ಇನ್ನು, ಹಸಿ ಹಾಲಿನ ಸೇವನೆಯಿಂದ ಆರೋಗ್ಯಕ್ಕೆ ಪ್ರಯೋಜನಗಳು ಸಹ ಇವೆ. ಪ್ಯಾಕೆಟ್ ಹಾಲು ಕ್ಯಾಲ್ಸಿಯಂನಿಂದ (Calcium) ಪೂರತಿವಾಗಿದ್ದು, ನಮ್ಮ ದೇಹದ ಮೂಳೆಯನ್ನು ಸುಸ್ಥಿತಿಯಲ್ಲಿರಿಸುತ್ತದೆ. ಪ್ಯಾಕೆಟ್ ಹಾಲಿನಲ್ಲಿ ಕಡಿಮೆ ಪ್ರಮಾಣದ ಕೊಬ್ಬಿನಂಶ ಇರುವುದರಿಂದ ರಕ್ತದೊತ್ತಡ ಇರುವವರು ಕೂಡಾ ಇದನ್ನು ಸೇವಿಸಬಹುದು. ಹಸಿ ಹಾಲು ಹಲವು ಬಗೆಯ ಜೀವಸತ್ವಗಳನ್ನು ಹೊಂದಿರುವುದರಿಂದ ಹೃಯ ಸಂಬಂಧಿ ಕಾಯಿಲೆಯಿರುವವರು ಸಹ ಸೇವಿಸಬಹುದು. 

click me!