
ಫ್ರೆಂಚ್ ಜನರು, ವಿಶೇಷವಾಗಿ ಮಹಿಳೆಯರು, ಬ್ರೆಡ್, ಚೀಸ್, ವೈನ್, ಮತ್ತು ಸಿಹಿತಿಂಡಿಗಳಂತಹ ಆರೋಗ್ಯಕರವಲ್ಲದ ಆಹಾರವನ್ನು ಸಿಕ್ಕಪಟ್ಟೆ ಇಷ್ಟಪಟ್ಟು ತಿಂದ್ರೂ ದಪ್ಪಗಾಗದ ತೆಳ್ಳಗೆ ಬಳುಕುವ ಬಳ್ಳಿಯಂತೆ ಇರುವುದುನ್ನು ನೀವು ಗಮನಿಸಿದ್ದೀರಾ? ಈ ಆಹಾರಗಳು ಸಾಮಾನ್ಯವಾಗಿ ತೂಕ ಹೆಚ್ಚಿಸುತ್ತವೆ ಪರಿಗಣಿಸಲಾಗಿದ್ದರೂ, ಫ್ರೆಂಚ್ ಮಹಿಳೆಯರು ವಿರಳವಾಗಿ ಅಧಿಕ ತೂಕ ಹೊಂದಿರುವುದು ಕಂಡುಬರುತ್ತದೆ.
ಫ್ರೆಂಚ್ ಮಹಿಳೆಯರು ಯಾಕೆ ದಪ್ಪ ಆಗುವುದಿಲ್ಲ?
2004ರಲ್ಲಿ ಬಿಡುಗಡೆಯಾದ 'ಫ್ರೆಂಚ್ ವುಮೆನ್ ಡೋಂಟ್ ಗೆಟ್ ಫ್ಯಾಟ್' ಎಂಬ ಬೆಸ್ಟ್‌ಸೆಲ್ಲರ್ ಪುಸ್ತಕದ ಲೇಖಕಿ ಮಿರೆಲ್ಲೆ ಗಿಲಿಯಾನೊ ಒಂದು ಸಂದರ್ಶನದಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಫ್ರೆಂಚ್ ಮಹಿ ಳೆಯರು ಏಕೆ ದಪ್ಪವಾಗುವುದಿಲ್ಲ ಎಂದು ಕೇಳಿದಾಗ, ಅವರು, ಏಕೆಂದರೆ ಅವರು ಸಂತೋಷಕ್ಕಾಗಿ ತಿನ್ನುತ್ತಾರೆ ಮತ್ತು ತಮ್ಮ ಐದು ಇಂದ್ರಿಯಗಳಿಂದ ಆಹಾರವನ್ನು ಆನಂದಿಸುತ್ತಾರೆ ಎಂದು ಉತ್ತರಿಸಿದರು.
ನಿಧಾನವಾಗಿ ತಿನ್ನುತ್ತೇವೆ:
ಗಿಲಿಯಾನೊ ವಿವರಿಸುವ ಪ್ರಕಾರ, ನಾವು ನಿಧಾನವಾಗಿ ತಿನ್ನುತ್ತೇವೆ, ಸಮಯ ತೆಗೆದುಕೊಳ್ಳುತ್ತೇವೆ. ಒಂದು ಕಚ್ಚುವಿಕೆಯ ನಂತರ ಫೋರ್ಕ್ ಮತ್ತು ಚಾಕುವನ್ನು ಕೆಳಗಿಡುತ್ತೇವೆ. ನಿಧಾನವಾಗಿ ಮತ್ತು ಒತ್ತಡ ರಹಿತವಾಗಿ ತಿಂದರೆ, ಚೆನ್ನಾಗಿ ಅಗೆದು ತಿನ್ನುವುದರಿಂದ ರುಚಿ ಮೊಗ್ಗುಗಳು ತೃಪ್ತಿಗೊಳ್ಳುತ್ತವೆ. ಆದ್ದರಿಂದ, ಹೆಚ್ಚು ತಿನ್ನುವ ಅಗತ್ಯಬಿಳುವುದಿಲ್ಲ. ಕಡಿಮೆ ಕೊಬ್ಬು ಅಥವಾ ಸಕ್ಕರೆ ರಹಿತ ಆಹಾರವನ್ನು ಫ್ರೆಂಚ್ ಜನರು ಆದ್ಯತೆ ನೀಡದಿರಲು ಕಾರಣವೇನು ಎಂದು ಪ್ರಶ್ನಿಸಿದಾಗ, 'ಅಂತಹ ಆಹಾರ ರುಚಿಕರವಾಗಿರುವುದಿಲ್ಲ' ಎಂದು ಅವರು ಹೇಳುತ್ತಾರೆ.
ಬೆಣ್ಣೆ, ಚಾಕೊಲೇಟ್, ಅಥವಾ ಬಾತುಕೋಳಿ ಕೊಬ್ಬು ಕೆಟ್ಟದ್ದಲ್ಲ:
ಬೆಣ್ಣೆ, ಚಾಕೊಲೇಟ್, ಅಥವಾ ಬಾತುಕೋಳಿ ಕೊಬ್ಬು ಕೆಟ್ಟದ್ದಲ್ಲ. ಆದರೆ ದಿನಕ್ಕೆ ಮೂರು ಬಾರಿ ಅಥವಾ ದೊಡ್ಡ ಪ್ರಮಾಣದಲ್ಲಿ ಸೇವಿಸಿದರೆ ಅದು ಸಮಸ್ಯೆಯಾಗಬಹುದು ಎಂದು ಸಲಹೆ ನೀಡುತ್ತಾರೆ.
ಮಿರೆಲ್ಲೆ ಗಿಲಿಯಾನೊ ಯಾರು?
ಫ್ರಾನ್ಸ್‌ನ ಲೋರೈನ್‌ನ ಮೊಯೆವ್ರೆ-ಗ್ರಾಂಡೆಯಲ್ಲಿ 1946ರ ಏಪ್ರಿಲ್ 14ರಂದು ಜನಿಸಿದ ಮಿರೆಲ್ಲೆ ಗಿಲಿಯಾನೊ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾದ ಲೇಖಕಿ, ಉದ್ಯಮಿ, ಮತ್ತು ವರ್ಣಚಿತ್ರಕಾರರಾಗಿದ್ದಾರೆ. ಅವರು ಷಾಂಪೇನ್ ವೀವ್ ಕ್ಲಿಕ್ ಕೋಟ್‌ನ ವಕ್ತಾರರಾಗಿದ್ದವರು ಮತ್ತು ಕ್ಲಿಕ್‌ಕೋಟ್, ಇಂಕ್ (LVMH)ನ ಮಾಜಿ ಅಧ್ಯಕ್ಷ ಮತ್ತು CEO ಆಗಿದ್ದರು.ಫ್ರೆಂಚ್ ಮಹಿಳೆಯರು ಕ್ಯಾಲೊರಿಗಳನ್ನು ಎಣಿಸುತ್ತಾರೆಯೇ ಎಂದು ಕೇಳಿದಾಗ, ಗಿಲಿಯಾನೊ ಸರಳವಾಗಿ "ಇಲ್ಲ" ಎಂದು ಉತ್ತರಿಸಿದರು. ಆನಂದಕ್ಕಾಗಿ, ನಿಧಾನವಾಗಿ, ಮತ್ತು ಸರಿಯಾದ ಪ್ರಮಾಣದಲ್ಲಿ ತಿನ್ನುವ ಫ್ರೆಂಚ್ ಜೀವನಶೈಲಿಯೇ ಆಕಾರದ ರಹಸ್ಯವೆಂದು ಅವರ ಸಂದರ್ಶನ ತಿಳಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.