ಚಾಣಕ್ಯ ನೀತಿ: ಸೇವಿಸುವ ಆಹಾರ ವಿಷವಾಗೋದು ಈ ಸಂದರ್ಭದಲ್ಲಿ!

Published : Jan 31, 2026, 09:00 PM IST
chanakya niti

ಸಾರಾಂಶ

ಚಾಣಕ್ಯ ನೀತಿಯು ಊಟದ ಬಗ್ಗೆ ಅಮೂಲ್ಯ ಪಾಠಗಳನ್ನು ನೀಡುತ್ತದೆ. ಆಹಾರದಿಂದ ಆರೋಗ್ಯಕರ ಜೀವನ ಸಾಧ್ಯ, ಆದರೆ ಸರಿಯಾದ ಕ್ರಮದಲ್ಲಿ ಆಹಾರ ಸೇವಿಸಿದಾಗ ಮಾತ್ರ. ಅದು ಹೇಗೆ? ಚಾಣಕ್ಯ ಇದನ್ನು ಕೆಲವು ಸೂತ್ರಗಳಲ್ಲಿ ತಿಳಿಸುತ್ತಾನೆ.

ಭಾರತೀಯ ಸಂಸ್ಕೃತಿಯಲ್ಲಿ “ಅನ್ನವೇ ಪ್ರಾಣ” ಎನ್ನುವ ಮಾತಿದೆ. ನಮ್ಮ ಪೂರ್ವಜರು ಊಟವನ್ನು ಕೇವಲ ಹೊಟ್ಟೆ ತುಂಬಿಸುವ ಕೆಲಸವೆಂದು ನೋಡಲಿಲ್ಲ. ಅದು ಆರೋಗ್ಯ, ಸ್ವಭಾವ ಮತ್ತು ಬುದ್ಧಿವಂತಿಕೆಯ ಪ್ರತಿಬಿಂಬವೆಂದು ನಂಬಿದ್ದರು. ಚಾಣಕ್ಯನೀತಿಯಲ್ಲೂ ಊಟಕ್ಕೆ ವಿಶೇಷ ಮಹತ್ವವಿದೆ. ಚಾಣಕ್ಯನು ರಾಜನಿಗೆ ಮಾತ್ರವಲ್ಲ, ಸಾಮಾನ್ಯ ಮನುಷ್ಯನಿಗೂ ಅನ್ವಯವಾಗುವಂತಹ ಜೀವನ ಪಾಠಗಳನ್ನು ಹೇಳಿದ್ದಾನೆ. ಅದರಲ್ಲಿ ಊಟದ ಬಗ್ಗೆ ಅವನು ನೀಡಿರುವ ಸಲಹೆಗಳು ಇಂದಿನ ಫಾಸ್ಟ್ ಫುಡ್ ಕಾಲದಲ್ಲೂ ಬಹಳ ಪ್ರಸ್ತುತ.

1. ಅತಿಯಾಗಿ ತಿನ್ನುವುದು ಬುದ್ಧಿಯ ಶತ್ರು

ಚಾಣಕ್ಯನ ಪ್ರಕಾರ, ಅತಿಯಾದ ಊಟ ಸೋಮಾರಿತನ, ಆಲಸ್ಯ ಮತ್ತು ರೋಗಗಳಿಗೆ ಕಾರಣವಾಗುತ್ತದೆ. ಇಂದು ಬಫೆ ಊಟ, ಮಿಡ್‌ನೈಟ್ ಸ್ನ್ಯಾಕ್ಸ್, ಸ್ಟ್ರೀಟ್ ಫುಡ್ ಕ್ರೇಜ್—all you can eat ಸಂಸ್ಕೃತಿಯಲ್ಲಿ ನಾವು ಈ ಮಾತನ್ನು ಮರೆತುಬಿಟ್ಟಿದ್ದೇವೆ. ಆದರೆ ಆಯುರ್ವೇದವೂ ಇದನ್ನೇ ಹೇಳುವುದು- “ಅರ್ಧ ಹೊಟ್ಟೆ ಆಹಾರಕ್ಕೆ, ಕಾಲು ಭಾಗ ನೀರಿಗೆ, ಉಳಿದ ಭಾಗ ಗಾಳಿಗೆ” ಎನ್ನುತ್ತದೆ. ಅಂದರೆ ಮುಕ್ಕಾಲು ಭಾಗ ಮಾತ್ರ ತುಂಬಿರಬೇಕು. ಹೊಟ್ಟೆ ಬರಿಯ ಸೇವಿಸುವುದು ಸಲ್ಲ.

2. ಹಸಿವಿರುವಾಗ ಮಾತ್ರ ಊಟ ಮಾಡಬೇಕು

ಚಾಣಕ್ಯ ನೀತಿಯಲ್ಲಿ ಹೇಳುವಂತೆ, ಹಸಿವಿಲ್ಲದಾಗ ತಿನ್ನುವುದು ದೇಹವನ್ನು ದುರ್ಬಲಗೊಳಿಸುತ್ತದೆ. ಇದು ಇಂದಿನ “ಟೈಮ್ ಟೇಬಲ್ ಊಟ”ಕ್ಕೆ ವಿರುದ್ಧವಾದ ವಿಚಾರ. ಗಂಟೆ ನೋಡಿ ತಿನ್ನುವುದಕ್ಕಿಂತ ದೇಹದ ಹಸಿವಿನ ಸೂಚನೆಗೆ ಕಿವಿಗೊಡಬೇಕು. ನಮ್ಮ ಅಜ್ಜಿ-ತಾತಂದಿರು ಹೇಳುತ್ತಿದ್ದ “ಹಸಿದಾಗ ಅನ್ನಕ್ಕೆ ರುಚಿ” ಎಂಬ ಮಾತು ಇದನ್ನೇ ಸೂಚಿಸುತ್ತದೆ.

3. ಸರಳ ಆಹಾರವೇ ಶ್ರೇಷ್ಠ

ಚಾಣಕ್ಯ ವೈಭವದ ಊಟಕ್ಕಿಂತ ಸರಳ, ಸಾತ್ವಿಕ ಆಹಾರಕ್ಕೆ ಒತ್ತು ನೀಡಿದ್ದಾನೆ. ಅತಿ ಮಸಾಲೆ, ಅತಿ ಆಸೆ – ಇವು ಎರಡೂ ಆರೋಗ್ಯಕ್ಕೂ ಮನಸ್ಸಿಗೂ ಹಾನಿಕರ. ಇದು ನಮ್ಮ ಪರಂಪರೆಯ ಸಾಧಾರಣ ದಕ್ಷಿಣ ಭಾರತೀಯ ಊಟದ ತಟ್ಟೆ - ಅನ್ನ, ಸಾಂಬಾರ್, ತರಕಾರಿ, ಮೊಸರು - ಇವುಗಳ ಮಹತ್ವವನ್ನು ನೆನಪಿಸುತ್ತದೆ. ನಮ್ಮ ಊಟ ಎಲ್ಲ ಬಗೆಯ ಪೌಷ್ಟಿಕಾಂಶಗಳಿಂದ ಕೂಡಿರುತ್ತದೆ. ಪಾಶ್ಚಾತ್ಯ ಆಹಾರ ಹಾಗಲ್ಲ.

4. ಊಟ ಮಾಡುವಾಗ ಶಾಂತ ಮನಸ್ಸು ಅಗತ್ಯ

ಚಾಣಕ್ಯನ ಪ್ರಕಾರ, ಕೋಪ, ದುಃಖ ಅಥವಾ ಅಶಾಂತ ಮನಸ್ಸಿನಲ್ಲಿರುವಾಗ ಊಟ ಮಾಡಿದರೆ ಅದು ವಿಷದಂತೆ ಕೆಲಸ ಮಾಡುತ್ತದೆ. ಇಂದು ಮೊಬೈಲ್ ನೋಡುತ್ತಾ, ಟಿವಿ ಮುಂದೆ ಕೂತು ಊಟ ಮಾಡುವ ಅಭ್ಯಾಸ ಸಾಮಾನ್ಯವಾಗಿದೆ. ಆದರೆ ಚಾಣಕ್ಯ ಹೇಳುವುದೇ ಬೇರೆ - ಊಟ ಮಾಡುವಾಗ ಸಂಪೂರ್ಣ ಗಮನ ಆಹಾರಕ್ಕೆ ಇರಬೇಕು. ಇದು ದೇಹಕ್ಕೂ ಮನಸ್ಸಿಗೂ ಶುದ್ಧಿ ನೀಡುತ್ತದೆ.

5. ಆಹಾರಕ್ಕೆ ಗೌರವ ಕೊಡಬೇಕು

ಭಾರತೀಯ ಸಂಸ್ಕೃತಿಯಲ್ಲಿ ಅನ್ನದೇವತೆ ಎಂಬ ಕಲ್ಪನೆ ಇದೆ. ಚಾಣಕ್ಯನೂ ಆಹಾರವನ್ನು ವ್ಯರ್ಥ ಮಾಡಬಾರದು, ಅವಮಾನಿಸಬಾರದು ಎಂದು ಎಚ್ಚರಿಸುತ್ತಾನೆ. ತಟ್ಟೆಯಲ್ಲಿ ಬೇಡದಿದ್ದರೂ ತುಂಬಾ ತುಂಬಿಸಿಕೊಂಡು ಚೆಲ್ಲುವುದು ಅನ್ನದೇವತೆಗೆ ಮಾಡುವ ಅವಮಾನ. ಇಂದು ಮದುವೆ, ಪಾರ್ಟಿಗಳಲ್ಲಿ ಆಹಾರ ವ್ಯರ್ಥವಾಗುತ್ತಿರುವ ಸಂದರ್ಭಗಳಲ್ಲಿ ಈ ನೀತಿ ಇನ್ನಷ್ಟು ಅಗತ್ಯವಾಗಿದೆ.

ಚಾಣಕ್ಯನ ದೃಷ್ಟಿಯಲ್ಲಿ ಊಟವು ಕೇವಲ ದೈಹಿಕ ಅಗತ್ಯವಲ್ಲ, ಅದು ಶಿಸ್ತು, ಸಂಯಮ ಮತ್ತು ಬುದ್ಧಿವಂತ ಜೀವನದ ಭಾಗ. ಆಧುನಿಕ ಜೀವನಶೈಲಿಯಲ್ಲಿ ಎಷ್ಟೇ ಬದಲಾವಣೆಗಳಾದರೂ, ಊಟದ ವಿಷಯದಲ್ಲಿ ಚಾಣಕ್ಯನ ನೀತಿಗಳು ಎಂದಿಗೂ ಹಳೆಯದಾಗುವುದಿಲ್ಲ. ಒಳ್ಳೆಯ ಆಹಾರ + ಸರಿಯಾದ ಪ್ರಮಾಣ + ಶಾಂತ ಮನಸ್ಸು = ಆರೋಗ್ಯಕರ ಜೀವನ ಎಂಬುದು ಚಾಣಕ್ಯನ ಊಟದ ತತ್ವದ ಸಾರ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾಳೆ ಭಾನುವಾರ, ಬಾಯಲ್ಲಿ ನೀರೂರಿಸುವ ಕೇರಳ ಶೈಲಿಯ ಈ ಚಿಕನ್ ಫ್ರೈ ಟ್ರೈ ಮಾಡಿ
Chicken 65: ಚಿಕನ್ 65 ನಿಜವಾದ ಅರ್ಥ ಇದೇನಾ?, ಈ ದೇಸಿ ಖಾದ್ಯದ ಹಿಂದಿದೆ ಒಂದು ಇಂಟ್ರೆಸ್ಟಿಂಗ್ ಕಹಾನಿ