ನೀರಿಗೆ ಮೊದಲು ಹಾಲು ಹಾಕ್ಬೇಕಾ ಇಲ್ಲ ಶುಂಠಿ? ರುಚಿಯಾದ ಆರೋಗ್ಯಕರ ಶುಂಠಿ ಚಹಾ ಮಾಡೋ ವಿಧಾನ ಇದು

Published : Nov 20, 2025, 08:17 PM IST
 ginger tea

ಸಾರಾಂಶ

ಆರೋಗ್ಯಕ್ಕೆ ಶುಂಠಿ ಟೀ ಉತ್ತಮ. ಆದ್ರೆ ಎಲ್ಲರಿಗೂ ರುಚಿಕರವಾಗಿ ಈ ಟೀ ತಯಾರಿಸೋಕೆ ಬರೋದಿಲ್ಲ. ತಪ್ಪು ವಿಧಾನ ಬಳಸಿ ಟೀ ಕಹಿಯಾಗುತ್ತೆ ಇಲ್ಲ ಸುವಾಸನೆ ಕಳೆದುಕೊಳ್ಳುತ್ತೆ. ರುಚಿ ಹಾಗೂ ಆರೋಗ್ಯ ಎರಡೂ ಬೇಕು ಅನ್ನೋರಿಗೆ ಟೀ ರೆಸಿಪಿ ಟಿಪ್ಸ್ ಇಲ್ಲಿದೆ.

ಚಳಿಗಾಲದಲ್ಲಿ ಬಿಸಿ ಬಿಸಿ ಟೀ (Tea) ಕುಡಿಯೋ ಮಜವೇ ಬೇರೆ. ದಿನಕ್ಕೆ ಎರಡು – ಮೂರು ಬಾರಿ ಟೀ ಕುಡಿಯೋರ ಸಂಖ್ಯೆಯೇ ಹೆಚ್ಚು. ಬೆಳಿಗ್ಗೆ ಎದ್ದಾಗ ಬೆಡ್ ಟೀ, ಸಂಜೆ ಸ್ನ್ಯಾಕ್ ಜೊತೆ ಟೀ ಅಂತ ಜನರು ಮೈ ಬೆಚ್ಚಗೆ ಮಾಡ್ಕೊಳ್ಳೊಕೆ ಟೀ ಹೀರ್ತಾರೆ. ಆದ್ರೆ ಎಲ್ಲ ಟೈಂನಲ್ಲೂ ಟೀ ಒಂದೇ ರುಚಿ ಬರೋದಿಲ್ಲ. ಹಾಗೆ ಅದೇ ಪ್ಲೇನ್ ಟೀ ಕುಡಿದು ಬಾಯಿ ರುಚಿ ಕೆಟ್ಟಿರುತ್ತೆ. ಆರೋಗ್ಯಕ್ಕೆ ಒಳ್ಳೆಯದೂ ಆಗಿರ್ಬೇಕು, ರುಚಿಯೂ ಡಬಲ್ ಆಗಿರ್ಬೇಕು ಅಂತ ಟೀ ತಯಾರಿಸೋದು ಹೇಗೆ ಅಂತ ಜನರು ಯೂಟ್ಯೂಬ್, ಇಂಟರ್ನೆಟ್ ಸರ್ಚ್ ಮಾಡ್ತಾರೆ. ಸಾಮಾನ್ಯವಾಗಿ ಶುಂಠಿ ಟೀ ರುಚಿ ಹೆಚ್ಚು. ಆದ್ರೆ ಇದನ್ನು ಮಾಡೋ ವಿಧಾನ ಬಹುತೇಕರಿಗೆ ಗೊತ್ತಿಲ್ಲ. ಮೊದಲು ಹಾಲು ಹಾಕ್ಬೇಕಾ ಇಲ್ಲ ಶುಂಠಿ ಹಾಕ್ಬೇಕಾ ಎನ್ನುವ ಅನುಮಾನ ಕಾಡೋದಿದೆ.

ಶುಂಠಿ ಟೀ (ginger tea) ಮಾಡೋ ವಿಧಾನ : 

1.ಶುಂಠಿ ಟೀ ತಯಾರಿಸ್ತೀರಿ ಎಂದಾದ್ರೆ ಯಾವಾಗ್ಲೂ ನೀರಿನಲ್ಲಿ ಶುಂಠಿಯನ್ನು ಕುದಿಸ್ಬೇಕು. ನೀವು ಹಾಲಿನ ಜೊತೆ ಶುಂಠಿ ಕುದಿಸಿದ್ರೆ ಹಾಲು ಮೊಸರಾಗೋ ಸಾಧ್ಯತೆ ಹೆಚ್ಚು. ಅಲ್ದೆ ನಿಮ್ಮ ಟೀ ಕಹಿ ಆಗ್ಬಹುದು. ನೀವು ನೀರಿನಲ್ಲಿ ಶುಂಠಿ ಕುದಿಸಿದ್ರೆ ಶುಂಠಿಯ ಔಷಧಿ ಗುಣ ಹಾಗೇ ಇರುತ್ತೆ. ಜೊತೆಗೆ ಶುಂಠಿ ಸುವಾಸನೆ ಕೂಡ ನಿಮ್ಮ ಟೀನಲ್ಲಿರುತ್ತೆ.

 2.ಅರ್ಧದಿಂದ ಒಂದು ಇಂಚಿನ ಶುಂಠಿಯನ್ನು ತೆಗೆದುಕೊಳ್ಳಿ. ಈ ಶುಂಠಿಯನ್ನು ಜಜ್ಜಬೇಕು. ಇಲ್ಲವೆ ಪುಡಿ ಮಾಡಿದ ಶುಂಠಿಯನ್ನು ಹಾಕಿ. ಯಾವುದೇ ಕಾರಣಕ್ಕೂ ಶುಂಠಿಯನ್ನು ತುರಿಯಬೇಡಿ. ಇದು ಟೀಯನ್ನು ಕಹಿ ಮಾಡುತ್ತದೆ.

ಟೀ ಮಾಡುವಾಗ ಈ ಒಂದು ಪದಾರ್ಥ ಸೇರಿಸಿ.. ಎಲ್ಲೂ ಸಿಗಲಾರದ ಟೇಸ್ಟ್ ಬರುತ್ತೆ

 3.ಶುಂಠಿ ನೀರಿನಲ್ಲಿ ಕುದಿಯುತ್ತಿರುವ ವೇಳೆ ಟೀ ಪುಡಿಯನ್ನು ಅದಕ್ಕೆ ಹಾಕಿ. ನೀರಿನಲ್ಲಿ ಶುಂಠಿ ಚೆನ್ನಾಗಿ ಕುದ್ದ ನಂತ್ರವೇ ನೀವು ಟೀ ಪುಡಿ ಸೇರಿಸಬೇಕು. 1 -2 ನಿಮಿಷ ಟೀ ಪುಡಿ ಬೆರೆಸಿದ ನೀರನ್ನು ಕುದಿಸಿ. 

4.ನಂತ್ರ ನೀವು ಹಾಲನ್ನು ಸೇರಿಸಿ ಕುದಿಸಬೇಕು. 2 -3 ನಿಮಿಷ ಕುದಿಸಬೇಕು. 5.ಇದಾದ್ಮೇಲೆ ನೀವು ಟೀಗೆ ಸಕ್ಕರೆ ಅಥವಾ ಬೆಲ್ಲವನ್ನು ಹಾಕಬೇಕು. ಬೆಲ್ಲ ಹಾಕುವುದು ಒಳ್ಳೆಯದು. ಇದು ಆರೋಗ್ಯವನ್ನು ವೃದ್ಧಿಸುತ್ತದೆ. ಜೊತೆಗೆ ಟೀ ರುಚಿಯನ್ನೂ ಹೆಚ್ಚಿಸುತ್ತದೆ. 6.ಚಹಾ ಸೋಸಿ ನಂತ್ರ ಸರ್ವ್ ಮಾಡಿ. ಬಿಸಿ ಬಿಸಿ ಇರುವಾಗ್ಲೇ ನೀವು ಚಹಾ ಕುಡಿಯಬೇಕು.

ಏಲಕ್ಕಿ ಯಾವಾಗ ಹಾಕ್ಬೇಕು? :

ಇದೇ ಟೀಗೆ ನೀವು ಏಲಕ್ಕಿ ಬಳಸ್ತೀರಿ ಇಲ್ಲ ದಾಲ್ಚಿನಿ ಸೇರಿದಂತೆ ಬೇರೆ ಮಸಾಲೆ ಹಾಕ್ಬೇಕು ಅಂದ್ರೆ ಹಾಲು ಹಾಕಿದ ನಂತ್ರ ಏಲಕ್ಕಿ ಇಲ್ಲವೇ ದಾಲ್ಚಿನಿಯನ್ನು ಹಾಕ್ಬೇಕು. ಶುಂಠಿ ರಸ, ಟೀ ಪುಡಿ, ಹಾಲು ಹಾಕಿದ ನಂತ್ರ ಏಲಕ್ಕು ಹಾಕಿ ಕುದಿಸಿ. ಏಲಕ್ಕಿ ವಾಸನೆ ಟೀನಲ್ಲಿ ಹಾಗೇ ಇರುತ್ತೆ. ಏಲಕ್ಕಿ, ದಾಲ್ಚಿನಿ ಎಲ್ಲವೂ ಟೀ ರುಚಿ ಹೆಚ್ಚಿಸೋದು ಮಾತ್ರವಲ್ಲ ಆರೋಗ್ಯಕ್ಕೂ ಉತ್ತಮವಾಗಿದೆ.

Winter Recipe: ಚಳಿಗಾಲದಲ್ಲಿ ಇಡೀ ದೇಹವನ್ನು ಬೆಚ್ಚಗಿಡುವ ಪೆಪ್ಪರ್ ರಸಂ ಸಿಂಪಲ್ ರೆಸಿಪಿ

ಶುಂಠಿ ಟೀಯಿಂದ ಆಗುವ ಲಾಭಗಳು :

ಶುಂಠಿ ಭಾರತೀಯ ಪಾಕಪದ್ಧತಿಯಲ್ಲಿ ಒಂದು ಸೂಪರ್ಫುಡ್. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಶೀತ ಮತ್ತು ಕೆಮ್ಮಿಗೆ ಮದ್ದು. ದೇಹದ ರೋಗನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತೆ. ಉಸಿರಾಟ ಸಮಸ್ಯೆಯಗೆ ಮುಕ್ತಿ ನೀಡುತ್ತದೆ. ಶುಂಠಿ ಟೀ ದೇಹವನ್ನು ಬೆಚ್ಚಗಿಡುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ. ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಕಿಮೋಥೆರಪಿಯಿಂದ ಉಂಟಾಗುವ ವಾಕರಿಕೆಯನ್ನು ಶಮನಗೊಳಿಸುತ್ತದೆ. ಕ್ಯಾನ್ಸರ್ ತಡೆಗಟ್ಟಲು ಮತ್ತು ಹೋರಾಡಲು ಸಹಾಯ ಮಾಡುತ್ತದೆ. ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫ್ರಿಡ್ಜ್ ಎಷ್ಟು ವರ್ಷ ಬಾಳಿಕೆ ಬರುತ್ತೆ?, ನಿಮ್ಗೆ ಈ ವಿಚಾರ ಗೊತ್ತಿಲ್ಲವೆಂದ್ರೆ ಕರೆಂಟ್ ಬಿಲ್ ಜಾಸ್ತಿ ಬರುತ್ತೆ
ಭಾರತದ ನಗರ ಪೈಕಿ ಬೆಂಗಳೂರು ಬೆಸ್ಟ್ ಫುಡ್ ಸಿಟಿ, ಸ್ಕಾಟಿಶ್ ಪ್ರವಾಸಿಗನ ಮನತಣಿಸಿದ ಬ್ರೇಕ್‌ಪಾಸ್ಟ್