ಬೀದಿ ವ್ಯಾಪಾರಿಗಳು ಕರಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸುವುದನ್ನೇ ಜನರು ವೈರಲ್ ಮಾಡಿ ಬಿಡುತ್ತಾರೆ. ಆದ್ರೆ ಇಲ್ಲೊಂದೆಡೆ ಪರಾಠ ಮಾಡೋ ವೀಡಿಯೋ ನೋಡಿದ್ರೆ ಯಾರಾದ್ರೂ ಗಾಬರಿಯಾಗೋದು ಖಂಡಿತ. ಅದ್ಯಾಕೆ..ಇಲ್ಲಿದೆ ನೋಡಿ ಡೀಟೈಲ್ಸ್.
ಆರೋಗ್ಯದ ವಿಷಯಕ್ಕೆ ಬಂದಾಗ ಜನರು ಸ್ಥಿರವಾದ ಕೊಲೆಸ್ಟ್ರಾಲ್ ಮಟ್ಟವನ್ನು ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಣ್ಣೆಯುಕ್ತ ಆಹಾರಗಳಿಂದ ದೂರವಿರುತ್ತಾರೆ. ಎಣ್ಣೆಯುಕ್ತ ಆಹಾರವನ್ನು ತಿನ್ನುವುದಾದರೂ ಉತ್ತಮ ಗುಣಮಟ್ಟದ ಎಣ್ಣೆಯನ್ನು ಬಳಸುವುದನ್ನು ಖಾತರಿಪಡಿಸಿಕೊಳ್ಳುತ್ತಾರೆ. ಆದರೆ ಇತ್ತೀಚಿಗೆ ವೈರಲ್ ಆದ ವೀಡಿಯೋ ಜನರ ಆರೋಗ್ಯದ ಕಾಳಜಿಯನ್ನು ಪ್ರಶ್ನಿಸುವಂತೆ ಮಾಡಿದೆ. ಬೀದಿ ವ್ಯಾಪಾರಿಗಳು ಕರಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸುವುದನ್ನೇ ಜನರು ವೈರಲ್ ಮಾಡಿ ಬಿಡುತ್ತಾರೆ. ಆದ್ರೆ ಇಲ್ಲೊಂದೆಡೆ ಡೀಸೆಲ್‌ನಲ್ಲಿ ಪರಾಠ ಮಾಡೋ ವೀಡಿಯೋ ವೈರಲ್ ಆಗಿದೆ.
ಗ್ಯಾಸ್ ಸ್ಟವ್ ಎದುರು ನಿಂತಿರುವ ವ್ತಕ್ತಿ ಪರಾಠವನ್ನು ಮಾಡಲು ಭರ್ಜರಿಯಾಗಿ ತಯಾರಿ ಮಾಡುತ್ತಿರುತ್ತಾನೆ. ಇನ್ನೇನು ರುಚಿಕರವಾದ ಪರಾಠ ರೆಡಿಯಾಗುತ್ತಿದೆ ಎನ್ನುವಾಗ್ಲೇ ಕ್ಯಾನ್‌ನಿಂದ ಡೀಸೆಲ್‌ನ್ನು ಸುರಿಯುವುದನ್ನು ನೋಡಬಹುದು. ಕಪ್ಪು ಮತ್ತು ಕಂದು ಬಣ್ಣವನ್ನು ಪಡೆಯುವವರೆಗೆ ಪರಾಠ ಮಾಡುವ ಪ್ರಕ್ರಿಯೆಯು ಮುಂದುವರಿಯುತ್ತದೆ. ಈ ಅಸಾಂಪ್ರದಾಯಿಕ ಪರಾಠ ಮೇಕಿಂಗ್ ವಿಧಾನವು ಗ್ರಾಹಕರಲ್ಲಿ ಗಮನಾರ್ಹ ಬೇಡಿಕೆಯನ್ನು ಗಳಿಸಿದೆ ಎಂದು ತಿಳಿದುಬಂದಿದೆ.
Health Tips : ಪರಾಠ ಜೊತೆ ಬಿಸಿ ಟೀ ರುಚಿಯಾದ್ರೂ, ಆರೋಗ್ಯಕ್ಕೆ ಅಪಾಯ!
ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆದ ವೀಡಿಯೋಗೆ, 'ಕ್ಯಾನ್ಸರ್‌ಗೆ ನಿಜವಾದ ಪಾಕವಿಧಾನ. ಪೆಟ್ರೋಲ್ ಡೀಸೆಲ್ ವಾಲಾ ಪರಾಠ. ನಾವು ಎಲ್ಲಿಗೆ ಹೋಗುತ್ತಿದ್ದೇವೆ' ಎಂದು ಶೀರ್ಷಿಕೆ ನೀಡಲಾಗಿದೆ. ಈ ಡೀಸೆಲ್-ಫ್ರೈಡ್ ಪರಾಠವನ್ನು ಎಲ್ಲಿ ತಯಾರಿಸಲಾಗುತ್ತದೆ ಎಂಬುದನ್ನು ವೀಡಿಯೊ ಬಹಿರಂಗಪಡಿಸುತ್ತದೆ.
ವೈರಲ್ ಆದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬರೋಬ್ಬರಿ 400,000 ಲೈಕ್ಸ್ ಗಳಿಸಿದೆ. ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. 'ಹೊಸ ಅನಾರೋಗ್ಯಕರ ಅಡುಗೆ ಎಣ್ಣೆಗಳ ಪಟ್ಟಿಗೆ ಹೊಸ ಸೇರ್ಪಡೆ ಪೆಟ್ರೋಲ್ ಎಣ್ಣೆ' ಎಂದು ವ್ಯಂಗ್ಯವಾಗಿ ಹೇಳಿದ್ದಾನೆ. ಇನ್ನೊಬ್ಬ ವ್ಯಕ್ತಿ, 'ಶೀಘ್ರದಲ್ಲೇ ಈ ವ್ಯಾಪಾರಿ ಫೆರಾರಿಯನ್ನು ಖರೀದಿಸುತ್ತಾನೆ. ಆದರೆ ಅವನ ಗ್ರಾಹಕರು ಕ್ಯಾನ್ಸರ್ ಚಿಕಿತ್ಸೆಗಾಗಿ ಶೀಘ್ರದಲ್ಲೇ ತಮ್ಮ ಮನೆ ಮತ್ತು ಕಾರುಗಳನ್ನು ಮಾರಾಟ ಮಾಡುತ್ತಾರೆ' ಎಂದು ಕಾಮೆಂಟ್ ಮಾಡಿದ್ದಾರೆ.
ಕ್ಯಾನ್‌ನಿಂದಲೇ ತವಾಗೆ ಎಣ್ಣೆ ಸುರಿದು ಪರಾಠ ಮಾಡೋ ವ್ಯಾಪಾರಿ, ನೆಟ್ಟಿಗರಿಗೆ ಗಾಬರಿ!
ಇನ್ನೊಬ್ಬರು, 'ಕನಿಷ್ಠ ಅವರು ತಲೆಯ ಮೇಲೆ ಕ್ಯಾಪ್ ಧರಿಸಿದ್ದರು. ಆದ್ದರಿಂದ ಈ ಪರಾಠದಲ್ಲಿ ಯಾವುದೇ ಕೂದಲು ಇರುವ ಸಾಧ್ಯತೆಯಿಲ್ಲ' ಎಂದಿದ್ದಾರೆ. 'ಈ ವೀಡಿಯೊವನ್ನು ನೋಡಿದ ನಂತರ Fssai ಸ್ಥಿತಿ ಏನಿರಬಹುದು' ಎಂದು ಇನ್ನೊಬ್ಬರು ವ್ಯಂಗ್ಯವಾಡಿದ್ದಾರೆ. 'ವ್ಯಾಪಾರಿ ಕನ್ನಡಕ ಹಾಕಿಕೊಂಡಿರುವುದರ ಹಿಂದೆ ಕಾರಣವಿದೆ. ಅವರಿಗೇ ಇದನ್ನು ನೋಡಲಾಗುತ್ತಿಲ್ಲ' ಎಂದು ಹೀಯಾಳಿಸಿದ್ದಾರೆ. 'ಭಾರತದಲ್ಲಿ ಬೀದಿ ಆಹಾರಗಳಿಗೆ ಯಾವುದೇ ರೀತಿಯ ಆಹಾರ ಸುರಕ್ಷತಾ ನಿಯಮಗಳು ಇಲ್ಲವೇ' ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.
What’s next??
Harpic Parantha
When ICMR recommends you to avoid whey protein and FSSAI don’t care about the Ethylene oxide level in the masala…what can we say. No wonder India is the cancer capital of the world. pic.twitter.com/O3aeqlJUAR