ಅಬ್ಬಬ್ಬಾ ಇದನ್ನು ತಿನ್ನೋಕೆ ಯುಕೆಯಿಂದ ಇಟಲಿಗೆ ಹಾರಿದ ಸ್ನೇಹಿತರು, ಇದ್ಯಾವ ರೀತಿ ಕ್ರೇಜ್!

By Roopa Hegde  |  First Published May 11, 2024, 2:40 PM IST

ಪಿಜ್ಜಾ ತಿನ್ಬೇಕು ಅಂತ ಆಸೆಯಾದ್ರೆ ನಾವು ಶಾಪಿಗೆ ಹೋಗ್ತೇವೆ. ಇಲ್ಲವೆ ಆನ್ಲೈನ್ ಆರ್ಡರ್ ಹಾಕ್ತೇವೆ. ಆದ್ರೆ ಈ ಮಹಿಳೆಯರು ಪಿಜ್ಜಾ ಜೊತೆ ಒನ್ ಡೇ ಟ್ರಿಪ್ ಎಂಜಾಯ್ ಮಾಡಲು ಆಸಕ್ತಿಕರ ಕೆಲಸ ಮಾಡಿದ್ದಾರೆ.
 


ವಾರದಲ್ಲಿ ಒಮ್ಮೆ ಪಿಜ್ಜಾ ತಿಂದಿಲ್ಲ ಅಂದ್ರೆ ಕೆಲವರಿಗೆ ಚಡಪಡಿಕೆ ಶುರುವಾಗುತ್ತೆ.  ಜನರು ತಮ್ಮಿಷ್ಟದ ಪಿಜ್ಜಾ ತಿನ್ನಲು ಊರಿಂದ ಊರಿಗೆ ಹೋಗ್ತಾರೆ. ಒಂದು ಪಟ್ಟಣದಿಂದ ಇನ್ನೊಂದು ಪಟ್ಟಣಕ್ಕೆ ಹೋಗಿ, ಅಲ್ಲಿರುವ ಬೆಸ್ಟ್ ರೆಸ್ಟೋರೆಂಟ್ ನಲ್ಲಿ ಪಿಜ್ಜಾ ತಿಂದು ಬರ್ತಾರೆ. ಆದ್ರೆ ಈ ಮಹಿಳೆಯರು ಒಂದು ಕೈ ಮುಂದಿದ್ದಾರೆ. ಅವರು ಒಂದೂರಿನಿಂದ ಇನ್ನೊಂದು ಊರಿಗೆ ಪಿಜ್ಜಾ ತಿನ್ನೋಕೆ ಹೋಗಿಲ್ಲ. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗಿದ್ದಾರೆ. ಇಷ್ಟಾದ್ರೂ ಅವರ ಪಿಜ್ಜಾ ಖರ್ಚು, ದೇಶದೊಳಗಿನ ಪ್ರವಾಸಕ್ಕಿಂತ ಕಡಿಮೆ ಇತ್ತು ಎಂದಿದ್ದಾರೆ.

ಪಿಜ್ಜಾ (Pizza) ತಿನ್ನಲು ಯುಕೆಯಿಂದ ಇಟಲಿಗೆ ಹೋದ ಸ್ನೇಹಿತೆಯರು ಒಂದೇ ದಿನದಲ್ಲಿ ಪಿಜ್ಜಾ, ಶಾಪಿಂಗ್ (Shopping) ಅಂತ ರಜೆ ಎಂಜಾಯ್ ಮಾಡಿ ತವರಿಗೆ ವಾಪಸ್ ಮಾಡಿದ್ದಾರೆ. ವಿಶೇಷ ಅಂದ್ರೆ ಮರುದಿನ ಅವರು ಕೆಲಸಕ್ಕೆ ಮರುಳಿದ್ದಾರೆ.

Latest Videos

undefined

ತೂಕ ಇಳಿಸೋ ಐಸ್‌ಕ್ರೀಂ ಇದು, ದೀಪಿಕಾ ಪಡುಕೋಣೆ ನೀಡೋ ಫಿಟ್ನೆಸ್ ಟಿಪ್ಸ್ ಇದು

ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗ್ಬೇಕು ಅಂದ್ರೆ ನಾವು ಸಾಕಷ್ಟು ತಯಾರಿ ನಡೆಸ್ತೇವೆ. ಒಂದಿಷ್ಟು ಬ್ಯಾಗ್ ಪ್ಯಾಕ್ ಮಾಡ್ತೇವೆ. ಕನಿಷ್ಟ ಒಂದು ವಾರವಾದ್ರೂ ಅಲ್ಲಿ ಇರುವ ಪ್ಲಾನ್ ಮಾಡ್ತೇವೆ. ಆದ್ರೆ ಈ ಸ್ನೇಹಿತೆಯರು ಭಿನ್ನವಾಗಿ ಆಲೋಚನೆ ಮಾಡಿದ್ದಾರೆ. ಅವರಿಬ್ಬರಿಗೂ ಒಂದು ದಿನದ ರಜೆ ಅವಶ್ಯಕತೆಯಿತ್ತು. ರಜೆಯನ್ನು ತಮ್ಮಿಷ್ಟದಂತೆ ಕಳೆಯಲು ನಿರ್ಧರಿಸಿದ ಸ್ನೇಹಿತೆಯರು ಇಟಲಿ (Italy) ಗೆ ಹೋಗುವ ಯೋಜನೆ ರೂಪಿಸಿದ್ರು. 

27 ವರ್ಷದ ಮೋರ್ಗಾನ್ ಬೌಲ್ಡ್  ಮತ್ತು ಅವಳ ಸ್ನೇಹಿತ 26 ವರ್ಷದ ಜೆಸ್ ವುಡರ್ ಲಿವರ್‌ಪೂಲ್‌ನಿಂದ ಇಟಲಿಯ ಪಿಸಾ (Pisa) ಗೆ ವಿಮಾನ ಏರಿದ್ರು. ಬೆಳಿಗ್ಗೆ ಆರು ಗಂಟೆಗೆ ಅವರು ಲಿವರ್‌ಪೂಲ್‌ನಿಂದ ಮ್ಯಾಂಚೆಸ್ಟರ್ ವಿಮಾನ ಹತ್ತಿದ್ರು. ಶಾಪಿಂಗ್ (Shopping), ಸೈಟ್ ಸೀಯಿಂಗ್ (Site Seeing) ಮತ್ತು ಪಿಜ್ಜಾವನ್ನು ಆನಂದಿಸಿದ ನಂತರ ಅವರು ರಾತ್ರಿ ತಮ್ಮ ದೇಶಕ್ಕೆ ವಾಪಸ್ ಆಗಿದ್ದಾರೆ. ಅವರ ಬಳಿ ಯಾವುದೇ ಹೆಚ್ಚುವರಿ ಬ್ಯಾಗ್ ಇರಲಿಲ್ಲ. ಹಾಗಾಗಿ ಅವರು ವಿಮಾನ ನಿಲ್ದಾಣದಲ್ಲಿ ಹೆಚ್ಚು ಸಮಯ ಕ್ಯೂನಲ್ಲಿ ನಿಲ್ಲೋದು ತಪ್ಪಿತ್ತು. ಸುತ್ತಾಟ ಕೂಡ ಇದ್ರಿಂದ ಅವರಿಗೆ ಸುಲಭವಾಯ್ತು. ವಿಮಾನ ಏರುವ ಮೊದಲೇ ರಿಟರ್ನ್ ಫ್ಲೈಟ್ ಬುಕ್ ಮಾಡಿದ್ದರು. ವಿಮಾನದ ಟಿಕೆಟ್, ಆಹಾರ, ಇತರ ಚಟುವಟಿಕೆ ಸೇರಿದಂತೆ ಅವರು ಒಂದು ದಿನಕ್ಕೆ ಕೇವಲ 170 ಪೌಂಡ್‌ ಅಂದ್ರೆ ಸುಮಾರು 17,715 ರೂಪಾಯಿ ಖರ್ಚು ಮಾಡಿದ್ದರು. 

ಇಟಲಿಗೆ ಹೋದ ಮೋರ್ಗಾನ್ ಬೌಲ್ಡ್ , ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ನಾವು ಲಿವರ್‌ಪೂಲ್‌ನಿಂದ ಲಂಡನ್‌ಗೆ ಹೋಗುವ ಬದಲು ಇಟಲಿಗೆ ಹೋಗಿದ್ದೆವು. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗೋದು, ಲಿವರ್‌ಪೂಲ್‌ನಿಂದ ಲಂಡನ್‌ಗೆ ಹೋಗಿದ್ದಕ್ಕಿಂತ ಅಗ್ಗವಾಗಿತ್ತು ಎಂದಿದ್ದಾರೆ. ಲಂಡನ್ ಗೆ ನಾವು ರೈಲಿನಲ್ಲಿ ಪ್ರಯಾಣ ಬೆಳೆಸಬೇಕು ಅಂದ್ರೆ 100 ಪೌಂಡ್ ಅಂದ್ರೆ ಸುಮಾರು 10,420 ರೂಪಾಯಿ ಖರ್ಚಾಗುತ್ತಿತ್ತು. ಇದು ದುಬಾರಿ ಆಹಾರ ಮತ್ತು ಖರ್ಚನ್ನು ಹೊರತುಪಡಿಸಿದ್ದಾಗಿದೆ. ಅದೇ ಇಟಲಿಗೆ ಹೋದ ನಮಗೆ ಖರ್ಚು ಕಡಿಮೆ ಇತ್ತು. ಅಲ್ಲಿ ಕಡಿಮೆ ಬೆಲೆಗೆ ಉತ್ತಮ ಆಹಾರ ಸಿಕ್ಕಿದೆ ಎಂದು ಬೌಲ್ಡ್ ಹೇಳಿದ್ದಾಳೆ. 

ಫಾಸ್ಟ್‌ಫುಡ್‌, ಕೂಲ್‌ಡ್ರಿಂಕ್ಸ್ ತಿನ್ನೋಕಷ್ಟೇ ಚಂದ, ಆಯಸ್ಸು ಕಡಿಮೆಯಾಗುತ್ತೆ ಹುಷಾರ್‌!

ಮಿಸ್ ಬೌಲ್ಡ್ ಮತ್ತು ಮಿಸ್ ವುಡರ್ ಪಿಸಾದ ಲೀನಿಂಗ್ ಟವರ್‌ನ ಮುಂದೆ ಫೋಟೋ ಕ್ಲಿಕ್ಕಿಸಿದ್ದಾರೆ. ಉತ್ತಮ ಪಿಜ್ಜಾ ಎಲ್ಲಿ ಸಿಗುತ್ತೆ ಎಂದು ನ್ಯಾವಿಗೇಟರ್ (Navigator) ಮಾಡಲು ಅವರು ಗೂಗಲ್ (Google) ಸಹಾಯ ಪಡೆದಿದ್ದರು. ಲೀನಿಂಗ್ ಟವರ್ ಆಫ್ ಪಿಸಾ ನೋಡ್ತಾ ಪಿಜ್ಜಾ ತಿನ್ನುವ ಅವಕಾಶ ಅವರಿಗೆ ಸಿಕ್ಕಿತ್ತು. ಇಡೀ ದಿನವನ್ನು ನಾವು ಖುಷಿಯಾಗಿ ಕಳೆದೆವು ಎಂದು ಮಿಸ್ ಬೌಲ್ಡ್ ಹೇಳಿದ್ದಾಳೆ. 

click me!