
ಸಂಡೇ ಅಂದ್ರೆ ಸಾಕು ಬಹುತೇಕ ನಾನ್‌ವೆಜ್ ಪ್ರಿಯರು ಮಾಂಸಾಹಾರ ಮಾಡ್ತಾರೆ. ಹೀಗೆ ಮಾಂಸಾಹಾರ ಮಾಡುವವರಿಗಾಗಿ ರುಚಿರುಚಿಯಾದ ಕೇರಳ ಸ್ಟೈಲ್ ಮಟನ್ ಕರಿ ರೆಸಿಪಿ ಮಾಡುವ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ. ಖಾರ ಖಾರವಾಗಿ ತಿನ್ಬೇಕು ಅಂತ ಬಯಸುವ ಖಾರಪ್ರಿಯರಿಗೆ ಇದು ಬೆಸ್ಟ್ ರೆಸಿಪಿ. ದಕ್ಷಿಣ ಭಾರತೀಯ ಶೈಲಿಯ ಈ ರೆಸಿಪಿ ನಿಮಗೂ ಇಷ್ಟವಾಗ್ಬಹುದು.
ಮೊದಲಿಗೆ ಕೇರಳ ಸ್ಟೈಲ್ ಮಟನ್ ಕರಿ ಮಾಡಲು ಬೇಕಾದ ಸಾಮಗ್ರಿಗಳು
ಕೇರಳ ಸ್ಟೈಲ್ ಮಟನ್ ಕರಿ ಮಾಡುವುದು ಹೇಗೆ?
ಮೊದಲಿಗೆ ಮಟನ್ ಅನ್ನು ಚೆನ್ನಾಗಿ ಬೇಯಿಸಿಕೊಳ್ಲಬೇಕು. ಮಟನ್ ಬೇಯಿಸುವುದಕ್ಕೆ ಕುಕ್ಕರನ್ನು ಬಳಸಿ. ಮಟನ್ ಜೊತೆ ಅರಿಶಿಣ ಪುಡಿ, ಕರಿಬೇವಿನ ಎಲೆಗಳು, ಶುಂಠಿ, ಬೆಳ್ಳುಳ್ಳಿ, ಕತ್ತರಿಸಿದ್ದ ಸಣ್ಣ ಈರುಳ್ಳಿ(shallots), ಹಸಿ ಮೆಣಸು ಹಾಗೂ ಉಪ್ಪು ಇವಿಷ್ಟನ್ನು ಹಾಕಿದ ಮಟನ್ ಮಾಂಸವನ್ನು ಮೊದಲಿಗೆ ಕುಕ್ಕರ್‌ಗೆ ಹಾಕಿ 15ರಿಂದ 20 ನಿಮಿಷಗಳ ಕಾಲ ಬೇಯಿಸಿ.
ಗ್ಯಾಸ್ ಸಣ್ಣ ಉರಿಯಲ್ಲಿ ಇಟ್ಟು ಈಗ ಒಂದು ಪಾತ್ರೆಗೆ ಕೊಬ್ಬರಿ ಎಣ್ಣೆ ಹಾಕಿ, ಒಲೆ ಮೇಲೆ ಇಡಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಕರಿಬೇವಿನ ಎಲೆಗಳನ್ನು ಹಾಗೂ ನಂತರ ಈರುಳ್ಳಿಯನ್ನು ಹಾಕಿ, ನಂತರ ಸೌಟ್‌ನಲ್ಲಿ ಅತ್ತಿತ್ತ ತಿರುಗಿಸಿ ಎರಡು ನಿಮಿಷದ ನಂತರ ಅದಕ್ಕೆ ಬೆಳ್ಳುಳ್ಳಿ ಹಾಗೂ ಶುಂಠಿ ಹಾಕಿ.
ನಂತರ ಕತ್ತರಿಸಿ ಇಟ್ಟ ತೆಂಗಿನ ಕಾಯಿ ಹಾಗೂ ಟೊಮೆಟೋ ಹಾಗೂ ಕೆಂಪು ಮೆಣಸಿನ ಹುಡಿಯನ್ನು ಅದಕ್ಕೆ ಸೇರಿಸಿ ನಂತರ ಸೌಟ್‌ನಲ್ಲಿ ಕೆಲ ನಿಮಿಷ ತಿರುಗಿಸಿದ ನಂತರ ಈಗಾಗಲೇ ಬೇಯಿಸಿದ ಮಟನ್ ಅನ್ನು ಕೂಡ ಇದಕ್ಕೆ ಸೇರಿಸಿ ಈಗ ಬೆಂಕಿ ಕಡಿಮೆ ಮಾಡಿ ಹಾಗೂ ಮುಚ್ಚಳ ಮುಚ್ಚಿ 20ರಿಂದ 25 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಲು ಬಿಡಿ ನಡು ನಡುವೆ ಆಗಾಗ ಸೌಟು ಹಾಕಿ ತಿರುಗಿಸುತ್ತಿರಿ. 25 ನಿಮಿಷದ ನಂತರ ಈ ಕೇರಳ ಸ್ಟೈಲ್ ಮಟನ್ ಕರಿ ರೆಡಿಯಾಗಿರುತ್ತೆ. ಬಿಸಿ ಬಿಸಿಯಾಗಿ ಊಟದ ಜೊತೆ ಸೇವಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.