ಇಮ್ಯನಿಟಿ ಹೆಚ್ಚಿಸೋಕೆ ಬಿದಿರಿನ ಬಿಸ್ಕತ್, ಜೇನು ಲಾಂಚ್ ಮಾಡಿದ ತ್ರಿಪುರಾ ಸಿಎಂ

By Suvarna News  |  First Published Sep 19, 2020, 6:25 PM IST

ತ್ರಿಪುರಾದ ಸಿಎಂ ಬಿಪ್ಲವ್ ದೇವ್ ಅವರು ಇಮ್ಯುನಿಟಿ ಹೆಚ್ಚಿಸುವಂತಹ ಬಿದಿರಿನ ಜೇನು ಬಾಟಲ್ ಮತ್ತು ಬಿದಿರಿನಲ್ಲಿ ಮಾಡಿದ ಬಿಸ್ಕತ್‌ ಲಾಂಚ್ ಮಾಡಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ವೋಕಲ್ ಫಾರ್ ಲೋಕಲ್ ಎಂದು ಕರೆ ನೀಡಿದ ಬೆನ್ನಲ್ಲೇ ತ್ರಿಪುರಾದ ಸಿಎಂ ಬಿಪ್ಲವ್ ದೇವ್ ಅವರು ಇಮ್ಯುನಿಟಿ ಹೆಚ್ಚಿಸುವಂತಹ ಬಿದಿರಿನ ಜೇನು ಬಾಟಲ್ ಮತ್ತು ಬಿದಿರಿನಲ್ಲಿ ಮಾಡಿದ ಬಿಸ್ಕತ್‌ ಲಾಂಚ್ ಮಾಡಿದ್ದಾರೆ.

ವಿಶ್ವ ಬಿದಿರು ದಿನಾಚರಣೆ ಅಂಗವಾಗಿ ಇದನ್ನು ಲಾಂಚ್ ಮಾಡಲಾಗಿದೆ. ಈ ಉತ್ಪನ್ನಗಳು ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿದೆ. ಕೇಂದ್ರ ಸರ್ಕಾರದ ವೋಕಲ್ ಫಾರ್ ಲೋಕಲ್ ಅಭಿಯಾನ ಬೆಂಬಲಿಸಲು ಇದನ್ನು ಲಾಂಚ್ ಮಾಡಲಾಗಿದೆ.

Tap to resize

Latest Videos

ತನಗೆ ಕೊರೋನಾ ಚಿಕಿತ್ಸೆ ನೀಡಿದ ವೈದ್ಯರಿಗೆ ಕೈಯಾರೆ ಬೆಳೆದ ಅಕ್ಕಿ ನೀಡಿದ ವೃದ್ಧ..!

ಈ ಬಗ್ಗೆ ಟ್ವೀಟ್ ಮಾಡಿದ ಸಿಎಂ ಬಿಪ್ಲವ್ ದೇವ್, ವಿಶ್ವ ಬಿದಿರಿನ ದಿನದಂದು ಬಿದಿರಿನ ಕುಕ್ಕೀಸ್ ಮತ್ತು ಬಿದಿರಿನಲ್ಲಿ ಮಾಡಿದ ಜೇನಿನ ಬಾಟಲ್ ಲಾಂಚ್ ಮಾಡಿದ್ದೇವೆ. ಇದು ನಮ್ಮ ಇನ್ನೊಂದು ಹಿರಿಮೆ. ಇದು ಬಹಳಷ್ಟು ಜನಕ್ಕೆ ಜೀವನಕ್ಕೆ ದಾರಿ ಮಾಡಿಕೊಡುವುದರ ಜೊತೆಗೆ ಪ್ರಧಾನಿಯವರ ಆತ್ಮನಿರ್ಭರತೆಯನ್ನೂ ಬೆಂಬಲಿಸಲಾಗುತ್ತಿದೆ ಎಂದಿದ್ದಾರೆ.

On the ocassion of World Bamboo day launched Bamboo Cookies and Bamboo made honey bottle.

Bamboo cookies and Honey bottle will now add another feather to our cap.

It will generate livelihood opportunities for many & fullfill PM Ji's vision of . pic.twitter.com/x9oKZqFhSL

— Biplab Kumar Deb (@BjpBiplab)

ಕುಕೀಸ್‌ಗಳನ್ನು ಸಿಹಿಬಿದಿರಿನಿಂದ ಮಾಡಲಾಗಿದೆ. ಇದರಲ್ಲಿ ಆರೋಗ್ಯಕರ ಫೈಬರ್, ಕಡಿಮೆ ಫ್ಯಾಟ್ ಇದೆ. ಅಗರ್ತಲಾದ ಬಿದಿರು ಮತ್ತು ಕನ್ನು ಅಭಿವೃದ್ಧಿ ಸಂಸ್ಥೆ ಈ ಅಪರೂಪದ ಕುಕ್ಕೀಸ್‌ಗಳನ್ನು ರೆಡಿ ಮಾಡಿದೆ.

click me!