Viral Video : ವಾವ್..! ಅನಾನಸ್ ಕತ್ತರಿಸೋದು ಇಷ್ಟು ಸುಲಭ ಅಂತ ಗೊತ್ತಿರ್ಲಿಲ್ಲ

By Suvarna News  |  First Published Mar 16, 2023, 12:08 PM IST

ಕೆಲ ಹಣ್ಣುಗಳನ್ನು ಕತ್ತರಿಸೋದು ಕಿರಿಕಿರಿ. ಹಲಸಿನ ಹಣ್ಣು, ಅನಾನಸ್ ಕೂಡ ಇದ್ರಲ್ಲಿ ಸೇರಿದೆ. ಅನಾನಸ್ ಕತ್ತರಿಸೋದು ಬಹಳ ಕಷ್ಟ ಎನ್ನುವವರಿದ್ದಾರೆ. ಅನಾನಸ್ ಹಣ್ಣನ್ನು ಸುಲಭವಾಗಿ ಕತ್ತರಿಸೋದು ಹೇಗೆ ಎಂಬ ಚಿಂತೆ ನಿಮಗಿದ್ದರೆ ಈ ವಿಡಿಯೋ ನೋಡಿ. 
 


ಅನಾನಸ್ ಹಣ್ಣು ತಿನ್ನೋಕೆ ಇಷ್ಟ. ಆದ್ರೆ ಅದನ್ನು ಕತ್ತರಿಸೋದು ಕಷ್ಟ. ಅನೇಕ ಬಾರಿ ಅದನ್ನು ಕತ್ತರಿಸಬೇಕಲ್ಲ ಎನ್ನುವ ಸೋಮಾರಿತನಕ್ಕೆ ನಾವು ಅನಾನಸ್ ಹಣ್ಣನ್ನು ಖರೀದಿ ಮಾಡೋದಿಲ್ಲ. ಕತ್ತರಿಸಿದ ಹಣ್ಣು ಸಿಕ್ಕಿದ್ರೆ ತಿನ್ನಲು ಇಷ್ಟಪಡ್ತೇವೆ. ಇನ್ನು ಕೆಲವರು ಅನಾನಸ್ ಹಣ್ಣನ್ನು ಮನೆಗೆ ತೆಗೆದುಕೊಂಡು ಬಂದು, ಹರಸಾಹಸ ಮಾಡಿ ಅದನ್ನು ಕತ್ತರಿಸುತ್ತಾರೆ. ಸಿಪ್ಪೆ ತೆಗೆಯುವಾಗ ಸ್ವಲ್ಪ, ತಿರುಳು ತೆಗೆಯುವಾಗ ಸ್ವಲ್ಪ ಹಣ್ಣಿನ ಭಾಗ ಹೋಗಿರುತ್ತದೆ. ಕೊನೆಯಲ್ಲಿ ಉಳಿಯೋದು ಅತ್ಯಲ್ಪ ಮಾತ್ರ. ಹಣ್ಣು ಕತ್ತರಿಸಲು ಹೋಗಿ ಅವರು ಅರ್ಧ ಹಣ್ಣನ್ನು ಹಾಳು ಮಾಡಿರ್ತಾರೆ. ನೀವೂ ಇವರಲ್ಲಿ ಒಬ್ಬರು ಅಂತಾ ನನಗೆ ಗೊತ್ತು. ಅನಾನಸ್ ಸಹವಾಸ ಬೇಡ ಅಂತ ಸುಮ್ಮನಿರೋರು ನೀವಾಗಿದ್ರೆ ಇನ್ಮುಂದೆ ಕತ್ತರಿಸುವ ಚಿಂತೆ ಬೇಡ. 

ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಟೆಕ್ನಿಕ್ ಗಳು ವೈರಲ್ ಆಗ್ತಿರುತ್ತವೆ. ಈಗ ನಿಮ್ಮ ಸಮಸ್ಯೆಗೆ ವ್ಯಕ್ತಿಯೊಬ್ಬರು ಪರಿಹಾರ ಕಂಡು ಹಿಡಿದಿದ್ದಾರೆ. ಅವರು ಅನಾನಸ್ (Pineapple) ಸುಲಭವಾಗಿ ಕತ್ತರಿಸೋದು ಹೇಗೆ ಎಂಬುದನ್ನು ತಿಳಿಸಿದ್ದಾರೆ. ಇನ್ಸ್ಟಾಗ್ರಾಮ್ (Instagram) ನ foodiechina888 ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋಕ್ಕೆ  ಅನಾನಸ್ ಕತ್ತರಿಸಲು ಒಂದು ಫೂಲ್ಫ್ರೂಫ್ ಟ್ರಿಕ್, ನೀವು ಇದನ್ನು ಮೊದಲು ಪ್ರಯತ್ನಿಸಿದ್ದೀರಾ? ಎಂದು ಶೀರ್ಷಿಕೆ ಹಾಕಲಾಗಿದೆ. ಇಲ್ಲಿ ಅನಾನಸ್ ಕತ್ತರಿಸಲು ದೊಡ್ಡ ಆಯುಧವೇನೂ ಬೇಡ. ಮೊನಚಾದ ಚಾಕು (Knife) ಇದ್ರೆ ಸಾಕು. ಇದ್ರಲ್ಲಿ ತಿರುಳು ಹಾಗೂ ಸಿಪ್ಪೆ ಯಾವುದನ್ನೂ ಕತ್ತರಿಸುವ ಟೆನ್ಷನ್ ಇಲ್ಲ.

Tap to resize

Latest Videos

ವಿಡಿಯೋದಲ್ಲಿ ತೋರಿಸಿದಂತೆ ವ್ಯಕ್ತಿ ಅನಾನಸ್ ಹಿಂದೆ ಮತ್ತೆ ಮುಂದೆ ಸ್ವಲ್ಪ ಭಾಗವನ್ನು ಕತ್ತರಿಸಿದ್ದಾರೆ. ನಂತ್ರ ಅನಾನಸನ್ನು ಎರಡು ಭಾಗ ಮಾಡಿದ್ದಾರೆ. ಮಾಡಿದ ಭಾಗವನ್ನು ಮತ್ತೆ ಚಿಕ್ಕ ಹೋಳುಗಳಾಗಿ ಕತ್ತರಿಸಿದ್ದಾರೆ. ಸಿಪ್ಪೆಯ ಭಾಗವನ್ನು ಮೇಲಿಟ್ಟು ಕತ್ತರಿಸಲಾಗಿದೆ. ನೀವು ಸಿಪ್ಪೆಯನ್ನು ಹಿಡಿದು ಎತ್ತಿದ್ರೆ ಅದು ಕುಲ್ಫಿಯಂತೆ ನಿಮಗೆ ಸಿಗುತ್ತದೆ. 

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಇದು ಬರೀ ಮೋಜು ನೀಡುವುದಲ್ಲದೆ ಹಣ್ಣನ್ನು ಕತ್ತರಿಸಲು ಉಪಯುಕ್ತ ಮಾರ್ಗವಾಗಿದೆ ಎಂದು ಅನೇಕರು ಒಪ್ಪಿಕೊಂಡಿದ್ದಾರೆ. ಈವರೆಗೆ ನಾನು ಅನಾನಸ್ ಕತ್ತರಿಸುವಾಗ ಸಾಕಷ್ಟು ವ್ಯರ್ಥ ಮಾಡಿದ್ದೆ ಎಂದು ಒಬ್ಬ ಬರೆದಿದ್ದಾನೆ. ಹಣ್ಣಿನ ತಿರುಳು ತಿನ್ನುವುದು ಸರಿಯೇ ಎಂದು ಇನ್ನೊಬ್ಬ ಪ್ರಶ್ನೆ ಮಾಡಿದ್ದಾನೆ. ಈ ರೀತಿ ಹಣ್ಣು ತಿನ್ನುವಾಗ ಅನಾನಸ್ ಮುಳ್ಳು ತುಟಿಗೆ ಚುಚ್ಚಬಹುದು, ಆದ್ರೆ ನನಗೆ ಈ ವಿಧಾನ ತುಂಬಾ ಇಷ್ಟವಾಯ್ತು. ನೋವಿಲ್ಲದೆ ಲಾಭವಿಲ್ಲ ಎಂದು ಬರೆದಿದ್ದಾನೆ. 

ಮುಂದಿನ ಬಾರಿ ನಾನು ಅನಾನಸ್ ಖರೀದಿಸಿದಾಗ, ನಾನು ಅದನ್ನು ಪ್ರಯತ್ನಿಸುತ್ತೇನೆ ಎಂದು ಇನ್ನೊಬ್ಬ ಬಳಕೆದಾರ ಬರೆದಿದ್ದಾನೆ.  ನಾನು ಇಂದಿನಿಂದ್ಲೇ ಈ ಟ್ರಿಕ್ ಪಾಲನೆ ಮಾಡ್ತೇನೆ ಎಂದು ಇನ್ನೊಬ್ಬ ಬರೆದಿದ್ದಾನೆ.

ಕತ್ತರಿಸುವುದು ಹೇಗೆ ಇರಲಿ, ಅನಾನಸ್ ಸೇವನೆ ಮಾತ್ರ ಬಹಳ ಮುಖ್ಯ. ಅನಾನಸ್ ತಿನ್ನೋದ್ರಿಂದ ಸಾಕಷ್ಟು ಪ್ರಯೋಜನವಿದೆ. ಅನಾನಸ್ ಜ್ಯೂಸ್ ವಿಶೇಷವಾಗಿ ಮ್ಯಾಂಗನೀಸ್, ತಾಮ್ರ, ವಿಟಮಿನ್ ಬಿ 6 ಮತ್ತು ಸಿ ಯಲ್ಲಿ ಸಮೃದ್ಧವಾಗಿದೆ. ಈ ಎಲ್ಲಾ ಪೋಷಕಾಂಶಗಳು ಮೂಳೆ ಆರೋಗ್ಯ, ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಸಹಾಯಕಾರಿ. ಇದು ಗಾಯವನ್ನು ಗುಣಪಡಿಸುತ್ತದೆ. ಜೊತೆಗೆ ನಮ್ಮ ದೇಹದಲ್ಲಿ ಶಕ್ತಿ ಉತ್ಪಾದಿಸಲು ನೆರವಾಗುತ್ತದೆ. ಇದ್ರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಸತು, ಕೋಲೀನ್, ವಿಟಮಿನ್ ಕೆ ಮತ್ತು ಬಿ ಸಹ ಇದೆ. 

ಅನಾನಸ್ ಬ್ರೋಮೆಲಿನ್ ಹೊಂದಿರುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹಾನಿಕಾರಕ ಮತ್ತು ಅತಿಸಾರ ಉಂಟುಮಾಡುವ ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತದೆ. ಹೃದಯದ ಆರೋಗ್ಯವನ್ನು ಹೆಚ್ಚಿಸುವ ಜೊತೆಗೆ ಕ್ಯಾನ್ಸರ್ ನಿಂದ ನಮ್ಮನ್ನು ರಕ್ಷಿಸುತ್ತದೆ. ಅನಾನಸ್ ರಸವು ಆಸ್ತಮಾಗೆ ಸಂಬಂಧಿಸಿದ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹ ಪರಿಣಾಮಕಾರಿಯಾಗಿದೆ.
 

 
 
 
 
 
 
 
 
 
 
 
 
 
 
 

A post shared by Wayne Shen (@foodiechina888)

click me!