ಷಹಜಹಾನ್ ಪತ್ನಿ ಮಮ್ತಾಜ್ ಕಂಡುಕೊಂಡ ಈ ಹೊಸ ರೆಸಿಪಿ, ಇಂದು ಪ್ರತಿಯೊಬ್ಬರಿಗೂ ಫೇವರೇಟ್!

By Suvarna News  |  First Published Feb 3, 2024, 3:59 PM IST

ಷಹಜಹಾನ್ ತನ್ನ ಪ್ರೀತಿಯ ಪತ್ನಿಗಾಗಿ ತಾಜ್ ಮಹಲ್ ಕಟ್ಟಿಸಿದ. ಅದೇ ಪತ್ನಿ ಮಮ್ತಾಜ್ ಪತಿಗೆ ಪ್ರೀತಿ ತೋರಿಸಲು ಹೊಸ ರೆಸಿಪಿಯೊಂದನ್ನು ಕಂಡು ಹಿಡಿದಳು. ಇಂದು ಅದು ಪ್ರತಿಯೊಬ್ಬರಿಗೂ ಫೇವರೇಟ್ ಆಗಿದೆ. 


ಸಾಮಾನ್ಯವಾಗಿ ಗಂಡಸರು ತಮ್ಮ ಪ್ರೀತಿಯನ್ನು ಪತ್ನಿಗೆ ಬಟ್ಟೆ, ಬಂಗಾರ ಇತ್ಯಾದಿ ಕೊಡಿಸುವುದರಲ್ಲಿ ತೋರಿಸುತ್ತಾರೆ. ಅದೇ ಹೆಂಗಸರು, ರುಚಿಯಾದ ಅಡುಗೆ ಮಾಡಿ ಬಡಿಸಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಆಹಾರದಲ್ಲಿ ಕೇವಲ ಶಕ್ತಿಯಲ್ಲ, ಆಹಾರಪ್ರಿಯರಿಗೆ ಅದರಲ್ಲೇ ಜೀವನದ ಸಾರ ಇರುವುದು. ಆಹಾರಗಳು ಮನೆಯ ಸದಸ್ಯರ ಶಕ್ತಿ, ಸಂತೋಷ, ಆರೋಗ್ಯ ಎಲ್ಲಕ್ಕೂ ಕಾರಣವಾಗುತ್ತವೆ. 
ಷಹಜಹಾನ್  ಪತ್ನಿಗಾಗಿ ತಾಜ್‌ಮಹಲ್ ಕಟ್ಟಿಸಿ ಇಡೀ ಜಗತ್ತಿಗೇ ತನ್ನ ಪ್ರೀತಿಯನ್ನು ಸಾರಿದ. ಅಂತೆಯೇ ಆತನ ಪತ್ನಿ ಪತಿ ಹಾಗೂ ಸೈನಿಕರಿಗಾಗಿ ಒಂದು ವಿಶಿಷ್ಠ ರುಚಿಯ ಅಡುಗೆ ಕಂಡು ಹಿಡಿದಳು. ಅದು ಕೂಡಾ ಈಗ ಜಗತ್ತಿನ್ನೆಲ್ಲೆಡೆ ಬಹಳ ಜನಪ್ರಿಯವಾಗಿದೆ. ಷಹಜಹಾನ್ ಪತ್ನಿ ಮಮ್ತಾಜ್ ಕಂಡು ಹಿಡಿದ ಆ ಅಡುಗೆ ಪದಾರ್ಥವೇ ಬಿರಿಯಾನಿ. ಹೌದು, ಇಂದು ಎಲ್ಲರ ಮೆಚ್ಚಿನ ಆಹಾರವಾಗಿರುವ ಬಿರಿಯಾನಿಯನ್ನು ಕಂಡು ಹಿಡಿದಾಕೆ ಷಹಜಹಾನ್‌ನ ಬೇಗಂ ಮುಮ್ತಾಜ್ ಮಹಲ್‌.

ಬಿರಿಯಾನಿಯ ಇತಿಹಾಸ
ಬಿರಿಯಾನಿ ದಕ್ಷಿಣ ಏಷ್ಯಾದ ಅತ್ಯಂತ ಜನಪ್ರಿಯ ಭಕ್ಷ್ಯಗಳಲ್ಲಿ ಒಂದಾಗಿದೆ. ಇರಾಕ್, ಮ್ಯಾನ್ಮಾರ್, ಥೈಲ್ಯಾಂಡ್ ಮತ್ತು ಮಲೇಷಿಯಾದಂತಹ ಪ್ರಪಂಚದ ಇತರ ಭಾಗಗಳಲ್ಲಿಯೂ ಇದೇ ರೀತಿಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಭಾರತೀಯ ಆನ್‌ಲೈನ್ ಆಹಾರ ಆರ್ಡರ್ ಮತ್ತು ವಿತರಣಾ ಸೇವೆಗಳಲ್ಲಿ ಬಿರಿಯಾನಿ ಹೆಚ್ಚು ಆರ್ಡರ್ ಮಾಡಿದ ಆಹಾರವಾಗಿದೆ ಮತ್ತು ಭಾರತದಲ್ಲಿನ ಅತ್ಯಂತ ಜನಪ್ರಿಯ ಆಹಾರವಾಗಿದೆ.

ಇಲಿಯಾನಾ ಮಗನಿಗೆ ಕೋಯಾ ಫೀನಿಕ್ಸ್ ಎಂದು ಹೆಸರಿಟ್ಟಿದ್ದೇಕೆ?

Tap to resize

Latest Videos

undefined

ಬಿರಿಯಾನಿ ಎಂಬ ಹೆಸರಿನ ಮೂಲವನ್ನು ಪರ್ಷಿಯನ್ 'ಬಿರಂಜ್ ಬಿರಿಯಾನ್' ಎಂದು ಗುರುತಿಸಬಹುದು. ಅದು ಅಕ್ಷರಶಃ ಫ್ರೈಡ್ ರೈಸ್. ಬಿರಿಯಾನಿ ದಕ್ಷಿಣ ಏಷ್ಯಾದ ಮುಸ್ಲಿಮರಲ್ಲಿ ಮಿಶ್ರ ಅಕ್ಕಿ ಭಕ್ಷ್ಯವಾಗಿದೆ. ಭಾರತೀಯ ಮಸಾಲೆಗಳು, ತರಕಾರಿಗಳು, ಅಕ್ಕಿ ಮತ್ತು ಸಾಮಾನ್ಯವಾಗಿ ಕೆಲವು ರೀತಿಯ ಮಾಂಸದಿಂದ ಇದನ್ನು ತಯಾರಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಬಿರಿಯಾನಿಯನ್ನು ಮಾಂಸವಿಲ್ಲದೆ ಬೇಯಿಸಲಾಗುತ್ತದೆ ಮತ್ತು ಕೆಲವೊಮ್ಮೆ ಮೊಟ್ಟೆ ಮತ್ತು ಆಲೂಗಡ್ಡೆಗಳೊಂದಿಗೆ ಕೂಡ ಬೇಯಿಸಲಾಗುತ್ತದೆ.

ಬಿರಿಯಾನಿ ಆವಿಷ್ಕಾರದ ಕುತೂಹಲಕಾರಿ ಕಥೆ
ಮೊಘಲರ ಕಾಲದ (1526-1857) ಸಮಯ. ಆ ಸಮಯದಲ್ಲಿ ಷಹಜಹಾನ್ ಭಾರತದ ರಾಜನಾಗಿದ್ದನು ಮತ್ತು ಮುಮ್ತಾಜ್ ಮಹಲ್ ರಾಣಿಯಾಗಿದ್ದಳು. ಮುಮ್ತಾಜ್ ಮಹಲ್ ಆಹಾರ ಇಷ್ಟ ಪಡುತ್ತಿದ್ದಳು. ಆದ್ದರಿಂದ ಅವಳು ಆಗಾಗ್ಗೆ ರಾಜಮನೆತನದ ಅಡುಗೆಮನೆಗೆ ಭೇಟಿ ನೀಡುತ್ತಿದ್ದಳು. ಒಮ್ಮೆ ಅಡುಗೆಮನೆಯ ಕಡೆಗೆ ಹೋಗುವಾಗ ಮೊಘಲ್ ಸೈನಿಕರು ಆಕೆಗೆ ತುಂಬಾ ದುರ್ಬಲರಾಗಿ ಕಂಡರು. ಪೌಷ್ಟಿಕ ಆಹಾರದ ಅಗತ್ಯ ಮಮ್ತಾಜ್‌ಗೆ ಕಾಣಿಸಿತು. ಇದನ್ನು ಗಮನದಲ್ಲಿಟ್ಟುಕೊಂಡು, ಆಕೆ ಸೈನಿಕರಿಗೆ ಸಂಪೂರ್ಣ ಶಕ್ತಿ ನೀಡುವಂಥ ಅಕ್ಕಿ ಮತ್ತು ಮಾಂಸವನ್ನು ಹೊಂದಿರುವ ಏನನ್ನಾದರೂ ತಯಾರಿಸಲು ರಾಜಮನೆತನದ ಅಡುಗೆಯವರಿಗೆ ಆದೇಶಿಸಿದರು. 

ಚಳಿಗಾಲದಲ್ಲಿ ನಿಮ್ಮ ಈ ಸಿಂಪಲ್ ತಪ್ಪುಗಳು ಹೃದಯಾಘಾತಕ್ಕೆ ಕಾರಣವಾಗಬಹುದು! ಎಚ್ಚರ

ರಾಜಮನೆತನದ ಬಾಣಸಿಗನು ಅದೇ ರೀತಿ ಮಾಡಿದನು ಮತ್ತು ಪರ್ಷಿಯನ್ ಭಾಷೆಯಲ್ಲಿ 'ಬಿರಿಯಾನಿ' ಎಂದು ಕರೆಯಲ್ಪಡುವ ಮಸಾಲೆಗಳು, ಅಕ್ಕಿ ಮತ್ತು ಮಾಂಸದಿಂದ ಭಕ್ಷ್ಯವನ್ನು ತಯಾರಿಸಿದನು. 
ಮೊಘಲರ ಕಾಲದವರೆಗೆ ಅರಿಶಿನ, ಮೆಣಸಿನಕಾಯಿ, ಕೊತ್ತಂಬರಿ ಮುಂತಾದ ಮಸಾಲೆಗಳು ಇರಲಿಲ್ಲ. 18ನೇ ಶತಮಾನದಲ್ಲಿ ಮೆಣಸಿನಕಾಯಿ ಮರಾಠರೊಂದಿಗೆ ದೆಹಲಿಯನ್ನು ತಲುಪಿತು ಮತ್ತು ಅರಿಶಿನವು ಬ್ರಿಟಿಷರೊಂದಿಗೆ ಭಾರತಕ್ಕೆ ಬಂದಿತು. ಆದ್ದರಿಂದ ಎಲ್ಲಾ ರಾಜ ಮೊಘಲ್ ಭಕ್ಷ್ಯಗಳು ಆ ಸಮಯದಲ್ಲಿ ಮಸಾಲೆಗಳಿಲ್ಲದವಾಗಿಯೇ ತಯಾರಾಗುತ್ತಿದ್ದವು.
 

click me!