ಚಿಕನ್‌ನಲ್ಲಿ ಅತ್ಯಂತ ಅಪಾಯಕಾರಿ ಭಾಗ ಇದೇ.. ನೀವು ತಿನ್ನುತ್ತಿದ್ದೀರಾ? ಹಾಗಾದರೆ ತಕ್ಷಣ ನಿಲ್ಲಿಸಿ!

Published : Oct 16, 2026, 08:28 PM IST
Chicken

ಸಾರಾಂಶ

ಚಿಕನ್ ತಿನ್ನಲು ಇಷ್ಟಪಡುವವರು ಈ ಆರೋಗ್ಯಕರ ಮಾಹಿತಿಯನ್ನು ತಿಳಿದುಕೊಳ್ಳಿ! ನೀವು ಚಿಕನ್ ಇಷ್ಟ ಪಡುತ್ತಿದ್ದರೆ, ಚಿಕನ್ ನ ಈ ಭಾಗಗಳನ್ನು ತಪ್ಪಿಯೂ ತಿನ್ನಬೇಡಿ. ಯಾಕಂದ್ರೆ ಇದರಿಂದ ರುಚಿಯೇನೋ ಸಿಗಬಹುದು, ಆದರೆ ಅದಕ್ಕಿಂತ ಹೆಚ್ಚಾಗಿ ಅಪಾಯಕಾರಿಯಾಗಿದೆ. ಆ ಭಾಗ ಯಾವುದು ಗೊತ್ತಾ?

ಚಿಕನ್ ಪ್ರಿಯರ್ ಇದನ್ನ ತಿನ್ನಲೇಬೇಡಿ

ಭಾನುವಾರ ಬಂತೆಂದರೆ ಊಟದಲ್ಲಿ ಚಿಕನ್, ಮಟನ್ ಬೇಕೇ ಬೇಕು . ಚಿಕನ್‌ನಿಂದ ಕಡಿಮೆ ಸಮಯದಲ್ಲಿಯೇ ವಿವಿಧ ರೀತಿಯ ಆಹಾರಗಳನ್ನು ತಯಾರಿಸಬಹುದು. ಚಿಕನ್ ಆರೋಗ್ಯಕರ ಆಹಾರವಾಗಿದ್ದು, ಸಾಮಾನ್ಯವಾಗಿ ಇದರ ಬೆಲೆಯೂ ಕೈಗೆಟುಕುವಂತಿರುತ್ತದೆ. ಆದರೆ ಚಿಕನ್ ಪ್ರಿಯರಿಗೆ ಒಂದು ಆಘಾತಕಾರಿ ವಿಷಯವೆಂದರೆ, ಚಿಕನ್‌ನಲ್ಲಿ ಪ್ರೋಟೀನ್ ಹೇರಳವಾಗಿದ್ದರೂ ಅದರ ಒಂದು ಭಾಗವನ್ನು ತಪ್ಪಿಯೂ ತಿನ್ನಬಾರದು. ಆ ಭಾಗ ಯಾವುದು? ಅದನ್ನು ಯಾಕೆ ತಿನ್ನಬಾರದು ಎನ್ನುವುದನ್ನು ನೋಡೋಣ.

ಪ್ರಪಂಚದಾದ್ಯಂತ ಚಿಕನ್‌ಗೆ ಸಾಕಷ್ಟು ಬೇಡಿಕೆಯಿದೆ. ಇದರಿಂದ ಸಾರು, ಗ್ರಿಲ್ ಚಿಕನ್, ಬಿರಿಯಾನಿ ಸೇರಿದಂತೆ ಹಲವು ಖಾದ್ಯಗಳನ್ನು ತಯಾರಿಸಬಹುದು.ಹಲವರಿಗೆ ಚಿಕನ್ ವಿಂಗ್ಸ್, ಬ್ರೆಸ್ಟ್, ಲಾಲಿಪಾಪ್‌ನಂತಹ ವಿವಿಧ ಭಾಗಗಳು ಇಷ್ಟವಾಗುತ್ತವೆ. ಒಬ್ಬೊಬ್ಬರಿಗೆ ಒಂದೊಂದು ಭಾಗ ಇಷ್ಟವಾಗಿರುತ್ತದೆ. ಇವುಗಳಲ್ಲಿ ಪೋಷಕಾಂಶಗಳೂ ಇರುತ್ತವೆ. ಆದರೆ ಚಿಕನ್‌ನ ಒಂದು ಭಾಗವನ್ನು ಮಾತ್ರ ತಪ್ಪಿಯೂ ತಿನ್ನಬಾರದು. ಆ ಭಾಗ ಚಿಕನ್ ಸ್ಕಿನ್.

ಚಿಕನ್ ಸ್ಕಿನ್ ತಿನ್ನುವುದು ಅಪಾಯಕಾರಿಯೇ?

ಚಿಕನ್ ಸ್ಕಿನ್ ವಿಚಾರಕ್ಕೆ ಬಂದರೆ, ಅದು ವಿಷಕಾರಿ ಭಾಗವಲ್ಲ. ಆದರೆ ಅದರಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾಗಿರುತ್ತದೆ. ಇದನ್ನು ಡೀಪ್ ಫ್ರೈ ಮಾಡಿದಾಗ ಎಣ್ಣೆಯೂ ಸೇರುತ್ತದೆ. ಇದರಿಂದ ಕ್ಯಾಲೊರಿಗಳು ಮತ್ತು ಕೊಬ್ಬಿನ ಪ್ರಮಾಣ ಹೆಚ್ಚಾಗುತ್ತದೆ. ಕಡಿಮೆ ಕ್ಯಾಲೊರಿಗಳನ್ನು ಸೇವಿಸಲು ಬಯಸುವವರು ಅಥವಾ ಡಯಟ್ ಮಾಡುತ್ತಿರುವವರು ಚಿಕನ್ ಸ್ಕಿನ್ ತಿನ್ನಬಾರದು. ಆದರೆ ಪ್ರತಿಬಾರಿಯೂ ಚಿಕನ್ ಸ್ಕಿನ್ ತೆಗೆದುಹಾಕಲೇಬೇಕೆಂದಿಲ್ಲ. ಸೇವಿಸುವ ಪ್ರಮಾಣ ನಿಯಂತ್ರಿಸಬಹುದು.

ಚಿಕನ್ ಸ್ಕಿನ್‌ನಲ್ಲಿ ಕ್ಯಾಲೊರಿಗಳು ಹೆಚ್ಚಾಗಿರುತ್ತವೆ. ಸ್ಕಿನ್ ಇಲ್ಲದ ಚಿಕನ್ ಬ್ರೆಸ್ಟ್ ತಿನ್ನುವುದು ಆರೋಗ್ಯಕ್ಕೆ ಉತ್ತಮ. ಹೆಚ್ಚು ಕೊಬ್ಬನ್ನು ಸೇವಿಸುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಚಿಕನ್ ಸ್ಕಿನ್ ಜೊತೆ ಡೀಪ್ ಫ್ರೈ ಮಾಡಿ ತಿನ್ನೋದನ್ನು ಅವಾಯ್ಡ್ ಮಾಡಿ.

ಚಿಕನ್ ಲಿವರ್ ತಿನ್ನುವವರು ಈ ವಿಷಯ ತಿಳಿಯಿರಿ!

ಕೆಲವರಿಗೆ ಚಿಕನ್ ಲಿವರ್ ಎಂದರೆ ತುಂಬಾ ಇಷ್ಟ. ಚಿಕನ್ ಸ್ಕಿನ್‌ನಂತೆ ಅಲ್ಲದೆ, ಲಿವರ್‌ಗೂ ಪ್ರತ್ಯೇಕ ಅಭಿಮಾನಿಗಳಿದ್ದಾರೆ. ಆದರೆ ಚಿಕನ್ ಲಿವರ್ ಅನ್ನು ಮಿತವಾಗಿ ಸೇವಿಸುವುದು ಉತ್ತಮ. ಇದರಲ್ಲಿ ಕಬ್ಬಿಣಾಂಶ, ವಿಟಮಿನ್ B12 ಮತ್ತು ವಿಟಮಿನ್ A ಯಂತಹ ಪೋಷಕಾಂಶಗಳಿದ್ದರೂ, ಹೆಚ್ಚಿನ ಪ್ರಮಾಣಾದಲ್ಲಿ ಲಿವರ್ ತಿನ್ನುವುದು ಸೂಕ್ತವಲ್ಲ.

ಇಷ್ಟೇ ಅಲ್ಲದೆ, ಕೆಲವರು ಕೋಳಿಯ ಕಾಲುಗಳು ಅಥವಾ ಕುತ್ತಿಗೆಯ ಭಾಗವನ್ನೂ ತಿನ್ನುತ್ತಾರೆ. ಆದರೆ ಹಸಿ ಅಥವಾ ಸರಿಯಾಗಿ ಬೇಯಿಸದ ಚಿಕನ್‌ನಲ್ಲಿ ಸಾಲ್ಮೊನೆಲ್ಲಾ (Salmonella) ಬ್ಯಾಕ್ಟೀರಿಯಾಗಳು ಇರುವ ಸಾಧ್ಯತೆಯಿದೆ. ಚಿಕನ್ ಅನ್ನು ಸರಿಯಾಗಿ ಕತ್ತರಿಸದಿದ್ದರೂ ಅಥವಾ ಕತ್ತರಿಸುವ ಬೋರ್ಡ್ ಹಾಗೂ ಅಡುಗೆಮನೆಯ ಮೇಲ್ಮೈಗಳಲ್ಲಿರುವ ಬ್ಯಾಕ್ಟೀರಿಯಾಗಳಿಂದಲೂ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಇಂತಹ ಭಾಗಗಳನ್ನು ತಿನ್ನುವುದಕ್ಕಿಂತ ಕೇವಲ ಚಿಕನ್ ಬ್ರೆಸ್ಟ್ ತಿನ್ನುವುದು ಉತ್ತಮ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Food: ಇನ್ಮುಂದೆ ಮನೆಯಲ್ಲೇ ಹೋಟೆಲ್ ಸ್ಟೈಲ್ ದೋಸೆ! ಅಮೆಜಾನ್‌ನಲ್ಲಿ ಅರ್ಧ ಬೆಲೆಗೆ ಸಿಗುತ್ತಿದೆ ದೋಸೆ ಮೇಕಿಂಗ್ ಮೆಷಿನ್!
4 ದಿನದಲ್ಲಿ E-Kyc ಮಾಡದಿದ್ದರೆ ರೇಷನ್​ ಬಂದ್​! ಮೊಬೈಲ್​ನಲ್ಲೇ ಹೀಗೆ ಮಾಡಿ- ಹಂತ ಹಂತದ ಮಾಹಿತಿ