ಅಲ್ಲ ಎಂಥವರೆಲ್ಲಾ ಇರ್ತಾರೆ ನೋಡಿ. ಹೆಂಡ್ತಿ (Wife) ಅಡುಗೆ (Cooking) ಚೆನ್ನಾಗಿ ಮಾಡಲ್ಲ ಅಂತ ಗಂಡ (Husband) ದೂರೋದನ್ನು ನೋಡಿದ್ದೀವಿ. ಭಾನುವಾರ ಬಾಡೂಟ ಮಾಡಿಲ್ಲಾಂತ ಕಿರುಚಾಡೋದನ್ನು ಕೇಳಿದ್ದೀವಿ. ಆದ್ರೆ ಇಲ್ಲೊಬ್ಬ ಭೂಪ ಹೆಂಡ್ತಿ ರೊಟ್ಟಿ (Roti) ಮಾಡಿಲ್ಲಾಂತ ಸಿಟ್ಟಿಗೆದ್ದು ನೇಣು ಹಾಕ್ಕೊಂಡಿದ್ದಾನೆ. ಯಪ್ಪಾ ಹೀಗೆಲ್ಲಾ ಮಾಡ್ತಾರ ಅಂತ ಗಾಬರಿಯಾಗ್ಬೇಡಿ. ಫುಲ್ ಸ್ಟೋರಿ ಓದ್ಬಿಡಿ.
ಜೀವನದಲ್ಲಿ (Life) ಹಲವಾರು ಸಮಸ್ಯೆಗಳು ಬರುತ್ತವೆ. ಕೌಟುಂಬಿಕ ಸಮಸ್ಯೆ, ಸಾಮಾಜಿಕ ಸಮಸ್ಯೆ, ಆರ್ಥಿಕ ಸಮಸ್ಯೆ ಹೀಗೆ ಒಬ್ಬೊಬ್ಬರ ಜೀವನದಲ್ಲೂ ಒಂದೊಂದು ರೀತಿಯ ಸಮಸ್ಯೆ ಇರುತ್ತದೆ. ಆದ್ರೆ ಸಮಸ್ಯೆಗಳು ಬಂದಾಗ ಅವುಗಳನ್ನು ಎದುರಿಸಬೇಕು. ಬದಲು ಸಮಸ್ಯೆಗಳಿಗೆ ಭಯ ಪಟ್ಟು ಕೈ ಚೆಲ್ಲಿ ಹೇಡಿಯಂತೆ ಆತ್ಮಹತ್ಯೆ (Sucide) ಮಾಡಿಕೊಳ್ಳಬಾರದು ಎಂದು ಹಿರಿಯರು ಹೇಳುತ್ತಾರೆ. ಹಿಂದೆಲ್ಲಾ ಜನರು ಕೂಡಾ ಹಾಗಿದ್ದರು. ಎಷ್ಟು ಕಷ್ಟ ಬಂದರೂ ಎಲ್ಲವನ್ನೂ ಅಂಜದೆ ಎದುರಿಸುತ್ತಿದ್ದರು. ಆದ್ರೆ ಇವತ್ತಿನ ದಿನಗಳಲ್ಲಿ ಜನರು ಹಾಗಿಲ್ಲ. ಸಣ್ಣ ಪುಟ್ಟ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಪ್ಪ ಬೈದ್ರು, ಅಮ್ಮ ಮೊಬೈಲ್ ಕೊಡ್ಲಿಲ್ಲ, ಕ್ಲಾಸ್‌ಮೇಟ್ ಹೀಯಾಳಿಸಿದ ಹೀಗೆ ಎಲ್ಲವೂ ಸಣ್ಣಪುಟ್ಟ ಕಾರಣಗಳೇ.
ಹೆಂಡ್ತಿ ಅಡುಗೆ (Cooking) ಚೆನ್ನಾಗಿ ಮಾಡಲ್ಲ ಅಂತ ಗಂಡ ದೂರೋದನ್ನು ನೋಡಿದ್ದೀವಿ. ಭಾನುವಾರ ಬಾಡೂಟ ಮಾಡಿಲ್ಲಾಂತ ಕಿರುಚಾಡೋದನ್ನು ಕೇಳಿದ್ದೀವಿ. ಆದ್ರೆ ಇಲ್ಲೊಬ್ಬ ಭೂಪ ಹೆಂಡ್ತಿ ರೊಟ್ಟಿ (Roti) ಮಾಡಿಲ್ಲಾಂತ ಸಿಟ್ಟಿಗೆದ್ದು ನೇಣು ಹಾಕ್ಕೊಂಡಿದ್ದಾನೆ. ಇಂಥಹದ್ದೊಂದು ವಿಲಕ್ಷಣ ಘಟನೆ ತೆಲಂಗಾಣ (Telangana)ದಲ್ಲಿ ನಡ್ದಿದೆ. ತನ್ನ ಪತ್ನಿ ರೊಟ್ಟಿ ಮಾಡಿಕೊಡಲಿಲ್ಲ ಎಂಬ ಒಂದೇ ಕಾರಣಕ್ಕೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಿಹಾರ ಮೂಲದ ಮೊಹಮ್ಮದ್ ಸಾಬರ್ (30) ಮೃತ ವ್ಯಕ್ತಿ. ಸಂಗಾರೆಡ್ಡಿ ಜಿಲ್ಲೆಯ ಖಾಸಗಿ ಕಂಪನಿಯಲ್ಲಿ ಕಾರ್ಮಿಕನಾಗಿದ್ದ. ಮೊಹಮ್ಮದ್ ಸಾಬರ್ ಜಿಲ್ಲೆಯ ಪಾಸಮೈಲಾರಂ ಗ್ರಾಮದಲ್ಲಿ ಕುಟುಂಬ ಸಮೇತ ಕೆಲ ವರ್ಷಗಳಿಂದ ವಾಸವಾಗಿದ್ದನು. ಸೋಮವಾರ ರಾತ್ರಿ ಕೆಲಸ ಮುಗಿಸಿ ದಣಿದು ಮನೆಗೆ ಬಂದ ಸಾಬರ್, ರೊಟ್ಟಿ ಮಾಡುವಂತೆ ಪತ್ನಿಗೆ ಹೇಳಿದ್ದಾನೆ.
ಹೆಂಡ್ತಿ ಮಟನ್ ಕರಿ ಮಾಡ್ಲಿಲ್ಲ ಸಾರ್..100 ಡಯಲ್ ಮಾಡಿ ದೂರು ಕೊಟ್ಟ ಗಂಡ !
ಆದ್ರೆ ಹೆಂಡ್ತಿ ಅದ್ಯಾವುದೋ ಕಾರಣಕ್ಕೆ ಗಂಡನ (Husband) ಮೇಲೆ ಮುನಿಸಿಕೊಂಡಿದ್ದರಿಂದ ರೊಟ್ಟಿ ಮಾಡಲು ನಿರಾಕರಿಸಿದಳು. ಇದರಿಂದ ಕೋಪಗೊಂಡ ಮೊಹಮ್ಮದ್ ಸಾಬರ್ ಇದು ತನಗಾದ ಅವಮಾನ ಎಂದೇ ಪರಿಗಣಿಸಿ ಮಧ್ಯರಾತ್ರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತಿ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಗಮನಿಸಿದ ಪತ್ನಿ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾಳೆ. ಬಳಿಕ ಪೊಲೀಸರಿಗೂ ಮಾಹಿತಿ ನೀಡಲಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತನ ಪತ್ನಿ ಹಾಗೂ ಸ್ಥಳೀಯರನ್ನು ವಿಚಾರಣೆ ನಡೆಸಿದಾಗ ಆತನ ಆತ್ಮಹತ್ಯೆಗೆ ಕಾರಣ ರೊಟ್ಟಿಯೇ ಎಂಬುದು ತಿಳಿದುಬಂದಿದೆ. ಬಿಡಿಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೀಮೆ ಎಣ್ಣೆ ಸುರಿದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಯತ್ನ: ರಕ್ಷಿಸಲು ಹೋದ ಪೊಲೀಸರಿಗೂ ತಗುಲಿದ ಬೆಂಕಿ
ಹೈದಾರಾಬಾದ್‌ನಲ್ಲಿ ಚಿಕನ್ ಕರಿ ಮಾಡಿಲ್ಲಾಂತ ಆತ್ಮಹತ್ಯೆ ಮಾಡ್ಕೊಂಡಿದ್ದ ವ್ಯಕ್ತಿ
ಈ ಹಿಂದೆ ಮಾರ್ಚ್ ತಿಂಗಳಿನಲ್ಲಿಯೂ ಹೈದಾರಾಬಾದ್‌ನಲ್ಲಿ ಇಂಥಹದ್ದೇ ಘಟನೆಯೊಂದು ನಡೆದಿತ್ತು. ದಿಂಡಿಗಲ್ ಬಳಿ ಹೆಂಡ್ತಿಯ ಬಳಿ ಚಿಕನ್ ಕರಿ ಮಾಡಲು ಹೇಳಿದ್ದ ವ್ಯಕ್ತಿಯೊಬ್ಬ ಹೆಂಡ್ತಿ ಕೋಳಿ ಸಾರು ಮಾಡಿಲ್ಲಾಂತ ಆತ್ಮಹತ್ಯೆಗೆ ಶರಣಾಗಿದ್ದ. ಆಟೋ ಡ್ರೈವರ್ ಆಗಿದ್ದ ವ್ಯಕ್ತಿ ಮನೆಗೆ ಬರುವ ಕೋಳಿ ಮಾಮಸ ತೆಗೆದುಕೊಂಡು ಬಂದಿದ್ದ. ಆದ್ರೆ ಮಗಳಿಗೆ ಚಿಕನ್ ಫಾಕ್ಸ್ ಇರುವ ಕಾರಣ ಹೆಂಡ್ತಿ ಮನೆಯಲ್ಲಿ ಕೋಳಿ ಸಾರು ಮಾಡಲು ನಿರಾಕರಿಸಿದಳು. ಈ ವಿಚಾರವಾಗಿ ಗಂಡ-ಹೆಂಡ್ತಿ ಮಧ್ಯೆ ವಾದ-ವಿವಾದ ನಡೆದಿತ್ತು. ಸಿಟ್ಟಿಗೆದ್ದ ಗಂಡ ತಕ್ಷಣ ಆತ್ಮಹತ್ಯೆ ಮಾಡಿಕೊಂಡಿದ್ದ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದ.
ಅದೇನೆ ಇರ್ಲಿ, ಇಂಥಾ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಜನರ ಸ್ವಭಾವ ವಿಚಿತ್ರವೇ ಸರಿ.