ಸ್ವಿಗ್ಗಿ ರೆಸ್ಟೋರೆಂಟ್ ಅವಾರ್ಡ್ಸ್ 2026: ಬೆಂಗಳೂರಿಗರ ಹಾಟ್‌ 'ಫೇವರಿಟ್' ಹೋಟೆಲ್‌ಗಳ ಪಟ್ಟಿ ಬಿಡುಗಡೆ!

Published : May 07, 2026, 10:49 AM IST
Swiggy Restaurant Awards 2026

ಸಾರಾಂಶ

ಸ್ವಿಗ್ಗಿ ತನ್ನ 'ರೆಸ್ಟೋರೆಂಟ್ ಅವಾರ್ಡ್ಸ್ 2026' ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರಿನ ನೆಚ್ಚಿನ ಹೋಟೆಲ್‌ಗಳನ್ನು ಬಹಿರಂಗಪಡಿಸಿದೆ. ಫುಡ್ ಡೆಲಿವರಿ ವಿಭಾಗದಲ್ಲಿ ಟ್ರಫಲ್ಸ್, ಮೇಘನಾ ಫುಡ್ಸ್ ಮತ್ತು ಡೈನ್-ಔಟ್ ವಿಭಾಗದಲ್ಲಿ ಶರೀಫ್ ಭಾಯ್ ಬಿರಿಯಾನಿ, ಐರನ್ ಹಿಲ್‌ನಂತಹ ಹೋಟೆಲ್‌ಗಳು ವಿಜೇತರಾಗಿವೆ. ಈ ಪ್ರಶಸ್ತಿಗಳನ್ನು 1.3 ಕೋಟಿ ಗ್ರಾಹಕರ ಮತಗಳ ಆಧಾರದ ಮೇಲೆ ನಿರ್ಧರಿಸಲಾಗಿದೆ.

ಬೆಂಗಳೂರು: ಉದ್ಯಾನ ನಗರಿಯ ಆಹಾರ ಪ್ರಿಯರ ಅಭಿರುಚಿ ಯಾವತ್ತೂ ವಿಭಿನ್ನ. ಇದೀಗ ಭಾರತದ ಪ್ರಮುಖ ಆನ್-ಡಿಮ್ಯಾಂಡ್ ಡೆಲಿವರಿ ಪ್ಲಾಟ್‌ಫಾರ್ಮ್ 'ಸ್ವಿಗ್ಗಿ' ತನ್ನ ಬಹುನಿರೀಕ್ಷಿತ 'ಸ್ವಿಗ್ಗಿ ರೆಸ್ಟೋರೆಂಟ್ ಅವಾರ್ಡ್ಸ್ 2026' ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರಿಗರ ನೆಚ್ಚಿನ ಹೋಟೆಲ್‌ಗಳು ಯಾವುವು ಎಂಬುದು ಅಧಿಕೃತವಾಗಿ ಬಹಿರಂಗವಾಗಿದೆ. ರಾಷ್ಟ್ರಮಟ್ಟದಲ್ಲಿ ನಡೆದ ಈ ಅತಿ ದೊಡ್ಡ ಸಮೀಕ್ಷೆಯಲ್ಲಿ, ಫುಡ್ ಡೆಲಿವರಿ ಹಾಗೂ ಡೈನ್-ಔಟ್ ವಿಭಾಗಗಳಲ್ಲಿ ಬೆಂಗಳೂರಿನ ಲೆಗಸಿ ಬ್ರ್ಯಾಂಡ್‌ಗಳು ಮತ್ತು ಹೊಸ ತಲೆಮಾರಿನ ನೆಚ್ಚಿನ ಹೋಟೆಲ್‌ಗಳು ಚಾಂಪಿಯನ್ ಆಗಿ ಹೊರಹೊಮ್ಮಿವೆ.

ಬೆಂಗಳೂರಿನ ನೆಚ್ಚಿನ ಹೋಟೆಲ್‌ಗಳಾವುವು? 

ಬೆಂಗಳೂರಿನ ಗ್ರಾಹಕರು ತಮಗಿರುವ ವಿಭಿನ್ನ ಹಾಗೂ ವೈವಿಧ್ಯಮಯ ರುಚಿಯ ಒಲವನ್ನು ವೋಟಿಂಗ್ ಮೂಲಕ ಸಾಬೀತುಪಡಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಅತಿಹೆಚ್ಚು ಮೆಚ್ಚುಗೆ ಪಡೆದ ಹೋಟೆಲ್‌ಗಳ ವಿವರ ಇಲ್ಲಿದೆ:

ಫುಡ್ ಡೆಲಿವರಿ ವಿಜೇತರು: ಮನೆಗೆ ಅಥವಾ ಕಚೇರಿಗೆ ಆನ್‌ಲೈನ್ ಮೂಲಕ ಅತಿ ಹೆಚ್ಚು ಆರ್ಡರ್ ಮತ್ತು ಮೆಚ್ಚುಗೆ ಪಡೆದ ಹೋಟೆಲ್‌ಗಳ ಪಟ್ಟಿಯಲ್ಲಿ ಟ್ರಫಲ್ಸ್, ನಂದನ ಪ್ಯಾಲೇಸ್, ಮೇಘನಾ ಫುಡ್ಸ್, ಮ್ಯಾಗ್ನೋಲಿಯಾ ಬೇಕರಿ ಹಾಗೂ ಆರ್‌ಎನ್‌ಆರ್ ಬಿರಿಯಾನಿ - ಟೇಸ್ಟ್ ಆಫ್ 1953 ಅಗ್ರಸ್ಥಾನ ಪಡೆದುಕೊಂಡಿವೆ.

ಡೈನ್-ಔಟ್ ವಿಜೇತರು: ವಾರಾಂತ್ಯ ಅಥವಾ ಬಿಡುವಿನ ವೇಳೆಯಲ್ಲಿ ಕುಟುಂಬ, ಸ್ನೇಹಿತರೊಂದಿಗೆ ಭೇಟಿ ನೀಡಿ ಊಟ ಸವಿಯುವ ಅತ್ಯುತ್ತಮ ತಾಣಗಳಾಗಿ ಲಿಯಾನ್ಸ್-ಬರ್ಗರ್ಸ್ & ವಿಂಗ್ಸ್, ಹಾರ್ಲಿಸ್ ಫೈನ್ ಬೇಕಿಂಗ್, ಶರೀಫ್ ಭಾಯ್ ಬಿರಿಯಾನಿ, ಗ್ಲಾಡಿಯಾ ಬ್ರೂವರಿ & ಕಿಚನ್ ಹಾಗೂ ಐರನ್ ಹಿಲ್ ಬೆಂಗಳೂರು ಆಯ್ಕೆಯಾಗಿವೆ.

1.3 ಕೋಟಿ ಮತಗಳು; ಇತಿಹಾಸ ನಿರ್ಮಿಸಿದ ಸ್ವಿಗ್ಗಿ ಅವಾರ್ಡ್ಸ್!

ಈ ಬಾರಿಯ ಪ್ರಶಸ್ತಿ ಸಮಾರಂಭವು ಸ್ವಿಗ್ಗಿಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಆವೃತ್ತಿಯಾಗಿದೆ. ದೇಶಾದ್ಯಂತ ಒಟ್ಟು 6.43 ಲಕ್ಷ ವಿಶಿಷ್ಟ ಗ್ರಾಹಕರು ಬರೋಬ್ಬರಿ 1.3 ಕೋಟಿಗೂ ಅಧಿಕ ಮತಗಳನ್ನು ಚಲಾಯಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 2.2 ಪಟ್ಟು ಹೆಚ್ಚಿನ ಮತದಾನ ದಾಖಲಾಗಿದೆ. ಸುಮಾರು 43.8 ಲಕ್ಷ ಗ್ರಾಹಕರು ಈ ವೋಟಿಂಗ್ ಲಿಂಕ್‌ಗಳನ್ನು ತಮ್ಮವರೊಂದಿಗೆ ಹಂಚಿಕೊಂಡಿದ್ದು, 25,000 ಹೊಸ ಗ್ರಾಹಕರು ಮೊದಲ ಬಾರಿಗೆ ಪ್ಲಾಟ್‌ಫಾರ್ಮ್‌ಗೆ ಸೇರ್ಪಡೆಯಾಗಿ ವೋಟ್ ಮಾಡಿದ್ದಾರೆ.

ದೆಹಲಿಯಂತಹ ಅತಿ ಹೆಚ್ಚು ವಹಿವಾಟು ನಡೆಯುವ ನಗರಗಳ ಮೇಲೆ ವಿಶೇಷ ಗಮನಹರಿಸುವ ಜೊತೆಗೆ 160ಕ್ಕೂ ಹೆಚ್ಚು ನಗರಗಳಲ್ಲಿ 110 ವಿಭಾಗಗಳ ಅಡಿಯಲ್ಲಿ 15,000 ಬ್ರ್ಯಾಂಡ್‌ಗಳು ಪ್ರಶಸ್ತಿ ಪಡೆದುಕೊಂಡಿವೆ.

ಆಹಾರದ ಮೇಲಿನ ಬೆಂಗಳೂರಿಗರ ಪ್ರೀತಿ ಅದ್ಭುತ

ಈ ಅಭೂತಪೂರ್ವ ಪ್ರತಿಕ್ರಿಯೆ ಕುರಿತು ಮಾತನಾಡಿರುವ ಸ್ವಿಗ್ಗಿ ಫುಡ್ ಮಾರ್ಕೆಟ್‌ಪ್ಲೇಸ್‌ನ ಮುಖ್ಯ ವ್ಯಾಪಾರ ಅಧಿಕಾರಿ (ಸಿಬಿಒ) ಸಿದ್ಧಾರ್ಥ್ ಭಾಕೂ, "ಭಾರತದ ಅತ್ಯಂತ ಕ್ರಿಯಾಶೀಲ ಆಹಾರ ಮಾರುಕಟ್ಟೆಗಳಲ್ಲಿ ಬೆಂಗಳೂರು ಮುಂಚೂಣಿಯಲ್ಲಿದ್ದು, ಇಲ್ಲಿನ ಗ್ರಾಹಕರು ತಮ್ಮ ಆಯ್ಕೆಗಳ ಮೂಲಕವೇ ಹೊಸ ಟ್ರೆಂಡ್‌ಗಳನ್ನು ಸೃಷ್ಟಿಸುತ್ತಾರೆ. ಈ ಬಾರಿಯ ಸ್ವಿಗ್ಗಿ ರೆಸ್ಟೋರೆಂಟ್ ಅವಾರ್ಡ್ಸ್‌ನಲ್ಲಿ ಕಂಡುಬಂದಿರುವ ಬೃಹತ್ ಸ್ಪಂದನೆ, ಬೆಂಗಳೂರಿಗರಿಗೆ ಊಟದ ಮೇಲಿರುವ ಅಪಾರ ಪ್ರೀತಿಯನ್ನು ತೋರಿಸುತ್ತದೆ. ಹಳೆಯ ಐಕಾನಿಕ್ ಬ್ರ್ಯಾಂಡ್‌ಗಳಿಂದ ಹಿಡಿದು ಹೊಸ ತಲೆಮಾರಿನ ಫೇವರಿಟ್‌ಗಳವರೆಗೆ, ಬೆಂಗಳೂರಿನ ವಿಶಿಷ್ಟ ಆಹಾರ ಸಂಸ್ಕೃತಿಯನ್ನು ಪ್ರತಿನಿಧಿಸುವ ಈ ಹೋಟೆಲ್‌ಗಳನ್ನು ಸನ್ಮಾನಿಸಲು ನಮಗೆ ಅತ್ಯಂತ ಸಂತೋಷವಾಗುತ್ತಿದೆ," ಎಂದಿದ್ದಾರೆ.

ದೇಶಾದ್ಯಂತ ಮತ್ತೆ 'ಬಿರಿಯಾನಿ'ಗೇ ನಂಬರ್ 1 ಪಟ್ಟ; ಹೊಸ ಟ್ರೆಂಡ್‌ಗಳ ದರ್ಬಾರ್‌

ರಾಷ್ಟ್ರಮಟ್ಟದಲ್ಲಿ ಒಟ್ಟು 7.02 ಲಕ್ಷ ಮತಗಳನ್ನು ಪಡೆಯುವ ಮೂಲಕ 'ಬಿರಿಯಾನಿ' ಮತ್ತೊಮ್ಮೆ ಅತಿ ಜನಪ್ರಿಯ ಖಾದ್ಯವಾಗಿ ಹೊರಹೊಮ್ಮಿದೆ. ಇದರ ನಂತರದ ಸ್ಥಾನಗಳನ್ನು ಪಿಜ್ಜಾ, ನಾರ್ತ್ ಇಂಡಿಯನ್, ಬರ್ಗರ್ ಮತ್ತು ಚೈನೀಸ್ ಖಾದ್ಯಗಳು ಪಡೆದುಕೊಂಡಿವೆ.

2026ರ ಆವೃತ್ತಿಯಲ್ಲಿ ಗ್ರಾಹಕರ ಹೊಸ ಟ್ರೆಂಡ್‌ಗಳಿಗೆ ತಕ್ಕಂತೆ ಈಟ್‌ರೈಟ್, ಕಾರ್ಪೊರೇಟ್/ಡೆಸ್ಕ್ ಈಟ್ಸ್ ಜೊತೆಗೆ ಪಾಸ್ತಾ, ಅರೇಬಿಕ್ ಶೈಲಿಯ ಆಹಾರ, ಚೀಸ್‌ಕೇಕ್, ಮಂಡಿ, ಮತ್ತು ಗ್ರಿಲ್ಸ್ & ಶಾವಯ ವಿಭಾಗಗಳನ್ನು ಹೊಸದಾಗಿ ಸೇರಿಸಲಾಗಿತ್ತು.

ಅಲ್ಲದೆ, ಸ್ಥಳೀಯ ಸಂಸ್ಕೃತಿಗೆ ಒತ್ತು ನೀಡುವ ನಿಟ್ಟಿನಲ್ಲಿ ಈ ಬಾರಿ ನಾಟಿ ಸ್ಟೈಲ್ ಬಿರಿಯಾನಿ, ರಾಯಲಸೀಮಾ ಖಾದ್ಯಗಳು, ದಕ್ಷಿಣ ಭಾರತೀಯ ಉಪಹಾರಗಳು, ಮತ್ತು ಮರಾಠಿ ಆಹಾರದಂತಹ ಪ್ರಾದೇಶಿಕ ವಿಭಾಗಗಳನ್ನು ಸೇರ್ಪಡೆ ಮಾಡಲಾಗಿತ್ತು. ಇದು ಪ್ರಶಸ್ತಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Mango Pickle: ಮಾವಿನಕಾಯಿ ಉಪ್ಪಿನಕಾಯಿ ಹಾಕ್ತಾ ಇದ್ದೀರಾ? ಬೂಸ್ಟ್ ಬರದಂತೆ ಇರಲು ಹೀಗೆ ಮಾಡಿ
ಕಸದ ಬುಟ್ಟಿಗೆ ಎಸೆಯುವ ಸಿಪ್ಪೆಯಲ್ಲಿ ಅಡಗಿದೆ ನಿಮ್ಮ ಕಪ್ಪುಕೂದಲು ಸೀಕ್ರೆಟ್; ಇನ್ಮುಂದೆ ಚಿಂತೆ ಬೇಡ!