ಜನರ ಆರೋಗ್ಯದ ಜೊತೆ ಚೆಲ್ಲಾಟವಾಡ್ತಿವೆಯಾ ಆನ್‌ಲೈನ್ ಡೆಲಿವರಿ ಆ್ಯಪ್‌ಗಳು?: ಕೊಳೆತ ಮೊಟ್ಟೆ ವೈರಲ್ ವಿಡಿಯೋ ನೀಡಿದ ಎಚ್ಚರಿಕೆ!

Published : Sep 30, 2026, 03:22 PM IST
Swiggy Instamart Order Sparks Food Safety Debate Rotten egg Viral Video

ಸಾರಾಂಶ

ಕ್ವಿಕ್‌ ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಆಹಾರ ಮತ್ತು ದಿನಸಿ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಮತ್ತೊಮ್ಮೆ ಚರ್ಚೆ ಶುರುವಾಗಿದೆ. ಸ್ವಿಗಿ ಇನ್‌ಸ್ಟಾಮಾರ್ಟ್‌ ಮೂಲಕ ಆರ್ಡರ್‌ ಮಾಡಿದ್ದ ಮೊಟ್ಟೆಗಳ ಟ್ರೇನಲ್ಲಿ ಬಹುತೇಕ ಮೊಟ್ಟೆಗಳು ಕೊಳೆತ ಸ್ಥಿತಿಯಲ್ಲಿ ಬಂದಿವೆ ಎಂದ ಪೋಸ್ಟ್‌ ಇದೀಗ ವೈರಲ್‌ ಆಗಿದೆ.

ಕ್ವಿಕ್‌ ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಆಹಾರ ಮತ್ತು ದಿನಸಿ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಮತ್ತೊಮ್ಮೆ ಚರ್ಚೆ ಶುರುವಾಗಿದೆ. ಸ್ವಿಗಿ ಇನ್‌ಸ್ಟಾಮಾರ್ಟ್‌ ಮೂಲಕ ಆರ್ಡರ್‌ ಮಾಡಿದ್ದ ಮೊಟ್ಟೆಗಳ ಟ್ರೇನಲ್ಲಿ ಬಹುತೇಕ ಮೊಟ್ಟೆಗಳು ಕೊಳೆತ ಸ್ಥಿತಿಯಲ್ಲಿ ಬಂದಿವೆ ಎಂದು ಆರೋಪಿಸಿ ಮಾಡಲಾದ ಸಾಮಾಜಿಕ ಜಾಲತಾಣದ ಪೋಸ್ಟ್‌ ಇದೀಗ ವೈರಲ್‌ ಆಗಿದೆ. ಸುಶಾಂತ್ ಸಿನ್ಹಾ ಅವರು ಸೆಪ್ಟೆಂಬರ್‌ 30ರಂದು ಎಕ್ಸ್‌ (X)ನಲ್ಲಿ ಈ ಕುರಿತು ಪೋಸ್ಟ್‌ ಹಂಚಿಕೊಂಡಿದ್ದಾರೆ.

“क्या ही ज़िंदगी जी रहे हैं हम?” ಎಂದು ಪೋಸ್ಟ್‌ ಆರಂಭಿಸಿರುವ ಅವರು, ತಮಗೆ ಬಂದ ಮೊಟ್ಟೆಗಳ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಟ್ರೇನಲ್ಲಿದ್ದ ಒಂದೆರಡು ಮೊಟ್ಟೆಗಳಷ್ಟೇ ಅಲ್ಲ, ಬಹುತೇಕ ಮೊಟ್ಟೆಗಳು ಹಾಳಾಗಿರುವಂತೆ ಕಂಡುಬಂದಿವೆ ಎಂದು ಅವರು ಆರೋಪಿಸಿದ್ದಾರೆ. “Dr Hen ಕಂಪನಿಯ ಮೊಟ್ಟೆಗಳ ಒಂದು ಟ್ರೇ ಅನ್ನು Swiggy Instamart ಮೂಲಕ ಆರ್ಡರ್ ಮಾಡಿದ್ದೆ. ಮೊಟ್ಟೆಗಳ ಹೆಸರಿನಲ್ಲಿ ಏನು ಬಂದಿದೆ ನೋಡಿ. ಒಂದಲ್ಲ, ಬಹುತೇಕ ಪ್ರತಿಯೊಂದು ಮೊಟ್ಟೆಯೂ ಹೀಗೆಯೇ ಇತ್ತು” ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಗ್ರಾಹಕರು ತೆರಿಗೆ ಸೇರಿದಂತೆ ಹೆಚ್ಚುವರಿ ಶುಲ್ಕಗಳನ್ನು ಪಾವತಿಸಿದ ಬಳಿಕವೂ ಗುಣಮಟ್ಟದ ಆಹಾರ ಸಿಗದಿರುವ ಬಗ್ಗೆ ಅವರು ಪ್ರಶ್ನೆ ಎತ್ತಿದ್ದಾರೆ. ಕಳಪೆ ಗುಣಮಟ್ಟದ ಆಹಾರ ಸೇವನೆಯಿಂದ ಆರೋಗ್ಯ ಸಮಸ್ಯೆ ಎದುರಾಗುವ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಪೋಸ್ಟ್‌ಗೆ ಭಾರೀ ಪ್ರತಿಕ್ರಿಯೆ

ಸುಶಾಂತ್ ಸಿನ್ಹಾ ಅವರ ಪೋಸ್ಟ್‌ ಎಕ್ಸ್‌ನಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಸಾವಿರಾರು ಲೈಕ್ಸ್‌ ಮತ್ತು ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಮೊಟ್ಟೆಗಳ ಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಆನ್‌ಲೈನ್‌ ಮೂಲಕ ಮೊಟ್ಟೆ ಹಾಗೂ ದಿನಸಿ ಆರ್ಡರ್‌ ಮಾಡುವಾಗ ತಮಗೂ ಇದೇ ರೀತಿಯ ಅನುಭವವಾಗಿದೆ ಎಂದು ಹೇಳಿಕೊಂಡಿದ್ದಾರೆ. ಒಬ್ಬ ಬಳಕೆದಾರರು Amazon Now ಮೂಲಕ Dr Hen ಮೊಟ್ಟೆಗಳನ್ನು ಆರ್ಡರ್‌ ಮಾಡಿದ್ದಾಗಲೂ ಹಲವು ಮೊಟ್ಟೆಗಳು ಇದೇ ರೀತಿ ಹಾಳಾಗಿದ್ದವು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಗುಣಮಟ್ಟದ ಉತ್ಪನ್ನಕ್ಕಾಗಿ ಹಣ ಪಾವತಿಸುತ್ತಿರುವ ಗ್ರಾಹಕರಿಗೆ ಇಂತಹ ಉತ್ಪನ್ನಗಳು ಸಿಗಬಾರದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬ ಬಳಕೆದಾರರು ಸ್ವಿಗಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಇಂತಹ ಅನುಭವದ ಬಳಿಕ ತಾವು ಸ್ವಿಗಿ ಬಳಸುವುದನ್ನೇ ನಿಲ್ಲಿಸಿರುವುದಾಗಿ ಕಾಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು 10 ನಿಮಿಷದೊಳಗೆ ದಿನಸಿ ತಲುಪಿಸುವ ಕ್ವಿಕ್‌ ಕಾಮರ್ಸ್‌ ಆ್ಯಪ್‌ಗಳಲ್ಲಿ ಆಹಾರ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಹೆಚ್ಚಿನ ಗಮನ ಅಗತ್ಯ ಎಂದು ಹೇಳಿದ್ದಾರೆ. ತಮ್ಮ ಸಮಸ್ಯೆಗಳನ್ನು ದೊಡ್ಡ ಮಟ್ಟದಲ್ಲಿ ಹೇಳಿಕೊಳ್ಳಲು ಸಾಧ್ಯವಾಗದ ಅನೇಕ ಗ್ರಾಹಕರು ಇಂತಹ ಅನುಭವಗಳನ್ನು ಎದುರಿಸುತ್ತಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಬ್ಬ ಬಳಕೆದಾರರು ಮೊಟ್ಟೆಗಳನ್ನು ಕ್ವಿಕ್‌ ಕಾಮರ್ಸ್‌ ಆ್ಯಪ್‌ಗಳ ಬದಲಿಗೆ ಸ್ಥಳೀಯ ಅಂಗಡಿಗಳಿಂದ ಖರೀದಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ಸದ್ಯ ಸುಶಾಂತ್ ಸಿನ್ಹಾ ಹಂಚಿಕೊಂಡಿರುವ ಪೋಸ್ಟ್‌ ಆಧರಿಸಿ ಸ್ವಿಗಿ ಇನ್‌ಸ್ಟಾಮಾರ್ಟ್‌ನಲ್ಲಿ ಡೆಲಿವರಿ ಆದ ಮೊಟ್ಟೆಗಳ ಗುಣಮಟ್ಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಈ ಆರೋಪಗಳ ಕುರಿತು ಸಂಬಂಧಪಟ್ಟ ಸಂಸ್ಥೆಗಳ ಅಧಿಕೃತ ಪ್ರತಿಕ್ರಿಯೆ ಏನು ಎಂಬುದು ಸ್ಪಷ್ಟವಾಗಬೇಕಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆನೆಸೋ, ಹುಳಿಬರಿಸೋ ಅಗತ್ಯವಿಲ್ಲ : 20 ನಿಮಿಷದಲ್ಲಿ ಗರಿಗರಿಯಾದ ಓಟ್ಸ್ ದೋಸೆ ರೆಡಿ , ಸ್ಟೆಪ್ ಬೈ ಸ್ಟೆಪ್ ಮಾಹಿತಿ ಇಲ್ಲಿದೆ
ಲಿವರ್ ಆರೋಗ್ಯ ಹೆಚ್ಚಿಸಲು ನೀವು ತಿನ್ನಲೇಬೇಕಾದ 5 ಗೆಡ್ಡೆ-ಗೆಣಸುಗಳು ಇವು!