ಬೇಸಿಗೆ ಬಂತೆಂದ್ರೆ ಐಸ್ ಕ್ರೀಂ, ಕೋಲ್ಡ್ ಡ್ರಿಂಕ್ಸ್ ಗೆ ಬೇಡಿಕೆ ಹೆಚ್ಚಾಗುತ್ತೆ. ಆದ್ರೆ ಈ ಕೋಲ್ಡ್ ಡ್ರಿಂಕ್ಸ್ ಆರೋಗ್ಯ ಹಾಳು ಮಾಡುತ್ತೆ. ಇದ್ರ ಬದಲು ನೀವು ಮನೆಯಲ್ಲೇ ಸೂಪರ್ ಆರೋಗ್ಯ ನೀಡುವ ಜ್ಯೂಸ್ ತಯಾರಿಸಿ ಸೇವನೆ ಮಾಡಿ.
ದಿನೇ ದಿನೇ ಬಿಸಿಲ ತಾಪ ಹೆಚ್ಚಾಗ್ತಿದೆ. ಎಷ್ಟು ನೀರು ಕುಡಿದ್ರೂ ದೇಹ ತಂಪಾಗ್ತಿಲ್ಲ. ಕೆಲವರು ಫ್ರಿಜ್ ನಲ್ಲಿಟ್ಟ ತಣ್ಣನೆ ನೀರನ್ನು ಕುಡಿಯುತ್ತಿದ್ದಾರೆ. ಬೆಳಿಗ್ಗೆ ಗಂಟೆ 11 ಆಗ್ತಿದ್ದಂತೆ ಬಾಯಾರಿಕೆ ಜಾಸ್ತಿ. ಏನಾದ್ರೂ ತಂಪಾಗಿ ಸೇವನೆ ಮಾಡ್ಬೇಕೆಂದುಕೊಳ್ಳುವ ಜನರು ತಂಪು ಪಾನೀಯ ಅಥವಾ ಸೋಡಾ ಕುಡಿಯಲು ಮುಂದಾಗ್ತಾರೆ. ಇದು ಆ ಕ್ಷಣಕ್ಕೆ ಬಾಯಾರಿಕೆಯ ನೀಗಿಸಿದ ಅನುಭವ ನೀಡುತ್ತದೆ. ಆದ್ರೆ ಆರೋಗ್ಯಕ್ಕೆ ಇದು ಒಳ್ಳೆಯದಲ್ಲ.
ಬಿಸಿಲಿನಿಂದ ನೆಮ್ಮದಿ ಬೇಕು, ದಣಿದ ದೇಹ (Body) ಕ್ಕೆ ಆರಾಮ ಸಿಗ್ಬೇಕು, ಬೆವರಿದ ಶಕ್ತಿ ಕಳೆದುಕೊಂಡ ದೇಹ ಶಕ್ತಿ (Strength) ಯನ್ನು ಮರುಪಡೆಯಬೇಕು ಅಂದ್ರೆ ನೀವು ಮನೆಯಲ್ಲಿ ಮಾಡಿದ ಹಣ್ಣಿನ ಜ್ಯೂಸ್ (Juice) ಸೇವನೆ ಮಾಡ್ಬೇಕು. ಅದ್ರಲ್ಲೂ ಕಿತ್ತಳೆ ಪಾನೀಯ ಬೆಸ್ಟ್. ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಇದು ಇಷ್ಟವಾಗುತ್ತದೆ. ಕಿತ್ತಳೆ ಹಣ್ಣು ಆರೋಗ್ಯ (Health) ಕ್ಕೆ ಬಹಳ ಒಳ್ಳೆಯದು. ಹಾಗಾಗಿ ನೀವು ಈ ಬೇಸಿಗೆಯಲ್ಲಿ ಕಿತ್ತಳೆ ಪಾನೀಯ ಮಾಡಿ ಕುಡಿಯಿರಿ. ನಾವಿಂದು ಆರೋಗ್ಯಕರ ಕಿತ್ತಳೆ ಜ್ಯೂಸ್ ಮಾಡೋದು ಹೇಗೆ ಅಂತಾ ನಿಮಗೆ ಹೇಳ್ತೇವೆ.
undefined
VIRAL VIDEO: 500ರ ನೋಟು ಸ್ಠಫ್ ಮಾಡಿ ಪರಾಠ ತಯಾರಿಸಿದ ಮಹಿಳೆ, ಮುಂದೇನಾಯ್ತು ಗೊತ್ತಾ?
ಆರೆಂಜ್ ಮೊಜಿಟೊ ಮಾಡಲು ಬೇಕಾಗುವ ಪದಾರ್ಥ: 2 ದೊಡ್ಡ ಕಿತ್ತಳೆ ಹಣ್ಣು, 20 ಪುದೀನ ಎಲೆಗಳು, 3 ಚಮಚ ಸಕ್ಕರೆ ಪುಡಿ, ಅರ್ಧ ಕಪ್ ಕಿತ್ತಳೆ ರಸ, ಕಾಲು ಚಮಚ ಉಪ್ಪು, 10 – 12 ಐಸ್ ಕ್ಯೂಬ್, ಒಂದು ಕಪ್ ಸೋಡಾ.
ಕಿತ್ತಳೆ ಮೊಜಿಟೊ ಮಾಡುವ ವಿಧಾನ : ಕಿತ್ತಳೆ ಮೊಜಿಟೊ ಮಾಡಲು ಒಂದು ಲೋಟವನ್ನು ತೆಗೆದುಕೊಳ್ಳಿ. ಅದಕ್ಕೆ ಕಿತ್ತಳೆ ಹಣ್ಣಿನ ಸ್ಲೈಸ್ ಹಾಕಿ. ಪುದೀನ ಎಲೆಗಳು, ಪುಡಿ ಮಾಡಿದ ಸಕ್ಕರೆ ಮತ್ತು ಕಿತ್ತಳೆ ರಸವನ್ನು ಸೇರಿಸಿ ಮತ್ತು 1 ರಿಂದ 2 ನಿಮಿಷಗಳ ಕಾಲ ಅದನ್ನು ಚೆನ್ನಾಗಿ ಬೆರೆಸಿ. ನಂತ್ರ ಈ ಮಿಶ್ರಣಕ್ಕೆ 2 ಚಿಟಿಕೆ ಉಪ್ಪು, 6 ಐಸ್ ಕ್ಯೂಬ್‌ಗಳು ಮತ್ತು ಅರ್ಧ ಕಪ್ ಸೋಡಾವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಸರ್ವಿಂಗ್ ಗ್ಲಾಸ್ ಗೆ ಹಾಕಿ ಸರ್ವ್ ಮಾಡಿ.
Health Tips : ಅಡುಗೆ ಮಾಡೋದು ಬರೀ ಕೆಲಸವಲ್ಲ, ಔಷಧಿ..
ಆರೆಂಜ್ ಐಸ್ಡ್ ಟೀ ರೆಸಿಪಿಗೆ ಬೇಕಾಗುವ ಸಾಮಗ್ರಿ : 2 ಟೀಸ್ಪೂನ್ ಬ್ಲ್ಯಾಕ್ ಟೀ, 6 ಕಪ್ ನೀರು, ಕಾಲು ಕಪ್ ಬಿಳಿ ಸಕ್ಕರೆ, 2 ಕಪ್ ಕಿತ್ತಳೆ ರಸ, ಅಲಂಕರಿಸಲು 5-6 ತಾಜಾ ಪುದೀನ ಎಲೆ, 4-5 ಕಿತ್ತಳೆ ಹಣ್ಣಿನ ತೆಳುವಾದ ಸಿಪ್ಪೆ ಹಾಗೂ ಐಸ್ ಪೀಸ್.
ಆರೆಂಜ್ ಐಸ್ಡ್ ಟೀ ರೆಸಿಪಿ ತಯಾರಿಸುವ ವಿಧಾನ : ಒಂದು ಪಾತ್ರೆಗೆ ನೀರು ಹಾಗೂ ಸಕ್ಕರೆ ಹಾಕಿ ಬಿಸಿ ಮಾಡಿ. ಸಕ್ಕರೆ ಕರಗಿದ ಮೇಲೆ ಇದಕ್ಕೆ ಟೀ ಪುಡಿ ಹಾಕಿ ಚೆನ್ನಾಗಿ ಕುದಿಸಿ, 2 -3 ನಿಮಿಷ ಕುದಿಸಿದ ನಂತ್ರ ಗ್ಯಾಸ್ ಆಫ್ ಮಾಡಿ ಮುಚ್ಚಿಡಿ. ಈ ಮಿಶ್ರಣ ತಣ್ಣಗಾದ್ಮೇಲೆ ಕಿತ್ತಳೆ ರಸವನ್ನು ಸೇರಿಸಿ. ಸರ್ವ್ ಮಾಡುವ ಮೊದಲು ಅದನ್ನು ನೀವು ಫ್ರಿಜ್ ನಲ್ಲಿ ಇಡಿ. ನಂತ್ರ ಒಂದು ಗ್ಲಾಸ್ ಗೆ ಆರೆಂಜ್ ಐಸ್ಡ್ ಟೀ ಹಾಕಿ, ಐಸ್ ಪೀಸ್ ಹಾಕಿ. ಕಿತ್ತಳೆ ಹಣ್ಣಿನ ಹೋಳು ಹಾಗೂ ಪುದೀನಾ ಎಲೆಗಳನ್ನು ಮೇಲೆ ಅಲಂಕಾರಕ್ಕೆ ಹಾಕಿ ಸರ್ವ್ ಮಾಡಿ.
ಕಿತ್ತಳೆ ಹಣ್ಣಿನ ಲಾಭಗಳು : ಕಿತ್ತಳೆ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಕಿತ್ತಳೆ ಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಮಲಬದ್ಧತೆಯನ್ನು ತಡೆಯಲು ಇದು ಸಹಕಾರಿ. ವಿಟಮಿನ್ ಸಿ ಇದರಲ್ಲಿರುವ ಕಾರಣ ರೋಗ ನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ. ಕಣ್ಣಿನ ಆರೋಗ್ಯಕ್ಕೆ, ಕ್ಯಾನ್ಸರ್ ನಿಯಂತ್ರಣಕ್ಕೆ, ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಇದು ಸಹಕಾರಿ.