Food
ಭಾರತೀಯ ಮನೆಗಳಲ್ಲಿ ಚಪಾತಿ ಪ್ರಧಾನ ಆಹಾರವಾಗಿದೆ. ಆದರೆ ಪರ್ಫೆಕ್ಟ್ ಚಪಾತಿ ತಯಾರಿಸುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ಅದು ದುಂಡಗೆ ಆಗುವುದಿಲ್ಲ. ಇನ್ನು ಕೆಲವೊಮ್ಮೆ ಬೇಯುವುದಿಲ್ಲ.
ಚಪಾತಿ ದುಂಡಗಿದ್ದರೆ ನೋಡಲು ಖುಷಿಯಾಗುತ್ತದೆ. ತಿನ್ನಲು ಚೆನ್ನಾಗಿರುತ್ತದೆ. ಹಾಗಿದ್ರೆ ಚಪಾತಿ ದುಂಡಗೆ ಆಗಲು ಏನು ಮಾಡಬೇಕು
ಒಂದು ಬಟ್ಟಲಿನಲ್ಲಿ ಗೋಧಿ ಹಿಟ್ಟನ್ನು ತೆಗೆದುಕೊಂಡು ನಿಧಾನವಾಗಿ ನೀರನ್ನು ಸೇರಿಸಲು ಪ್ರಾರಂಭಿಸಿ. ಕೈಯಿಂದ ಅವುಗಳನ್ನು ಮಿಶ್ರಣ ಮಾಡಿ. ಹಿಟ್ಟನ್ನು ಚೆನ್ನಾಗಿ ನಾದಿಡುವುದನ್ನು ಮರೆಯಬೇಡಿ
ಚಪಾತಿ ದುಂಡಗೆ ಆಗಬೇಕಾದರೆ ಹಿಟ್ಟು ನಯವಾಗಿರಬೇಕು. ಹಿಟ್ಟನ್ನು ನಯವಾಗಿಸಲು ಚೆನ್ನಾಗಿ ಬೆರೆಸಿಕೊಳ್ಳುವುದು ಮುಖ್ಯ.
ಚಪಾತಿ ಉಂಡೆಗಳನ್ನು ಮಾಡುವಾಗ ಕೈಗೆ ಎಣ್ಣೆ ಲೇಪಿಸುವುದನ್ನು ಮರೆಯಬೇಡಿ. ಇದರಿಂದ ಚಪಾತಿಯ ಉಂಡೆ ಹೆಚ್ಚು ನಯವಾಗುತ್ತದೆ. ಜೊತೆಗೆ ಚಪಾತಿ ಸಹ ದುಂಡಗೆ ಆಗುತ್ತದೆ.
ಹಿಟ್ಟನ್ನು ಬಟ್ಟೆಯಿಂದ ಮುಚ್ಚಿ ಮತ್ತು 15-30 ನಿಮಿಷಗಳ ಕಾಲ ಬಿಡಿ. ಇದು ಹಿಟ್ಟಿನಿಂದ ಗ್ಲುಟನ್ ಅನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.
ಚಪಾತಿ ಕಾಯಿಸುವಾಗ ಯಾವಾಗಲೂ ತವಾವನ್ನು ಮಧ್ಯಮ ಉರಿಯಲ್ಲಿ ಇರಿಸಿ. ಇದರಿಂದ ಚಪಾತಿ ಸರಿಯಾಗಿ ಬೇಯುತ್ತದೆ. ರೊಟ್ಟಿಯ ಬಣ್ಣ ಬದಲಾದಾಗ ತಿರುಗಿಸಿ ಹಾಕಿ ಬೇಯಿಸಿಕೊಳ್ಳಿ.