ರಕುಲ್ ಪ್ರೀತ್ ಸಿಂಗ್ ಕಂಪ್ಲೀಟ್ ವೇಗನ್ ಕೇಕ್!

By Suvarna News  |  First Published Jul 3, 2020, 6:47 PM IST

ಬಾಲಿವುಡ್ ನಟಿ ರಕುಲ್ ಸಿಂಗ್ ರುಚಿ ರುಚಿಯಾದ ಪಂಪ್‌ಕಿನ್ ಚಾಕೊಲೇಟ್ ಕೇಕ್ ಮಾಡಿ ಸವಿದಿದ್ದಾರೆ. ಹೇಗೆ ಮಾಡೋದು? ನೀವೂ ತಿಳೀರಿ.


ರಕುಲ್ ಪ್ರೀತ್ ಸಿಂಗ್ ಕಂಪ್ಲೀಟ್ ವೇಗನ್ ಅಂತೆ. ಈಕೆ ಇತ್ತೀಚೆಗೆ ಸೊಗಸಾದ ಪಂಪ್‌ಕಿನ್ ಚಾಕಲೇಟ್ ಕೇಕ್ ಮಾಡಿದ್ದಾರೆ. ಇದೂ ಮೊಟ್ಟೆ ಹಾಕದೆ ಮಾಡಿದ ಕೇಕ್. ಆದ್ದರಿಂದ ಅದೂ ವೇಗನ್. ವೇಗನ್ ಅಂದ್ರೆ ಮೊಟ್ಟೆ ಕೂಡ ತಿನ್ನೊಲ್ಲ. ಕುಂಬಳಕಾಯಿಯ ಚಾಕಲೇಟ್ ಕೇಕ್ ತುಂಬಾ ಡೆಲಿಶಿಯಸ್ ಆಗಿತ್ತು ಅಂತ ಆಕೆ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಸಮೇತ ಪೋಸ್ಟ್ ಮಾಡಿದ್ದಾಳೆ.

 

 

ಇದನ್ನು ಮಾಡೋದು ಹೇಗೆ?

ಕರಾವಳಿಗರ ಮಳೆಗಾಲದ ಮೆಚ್ಚಿನ ತಿನಿಸು ಪತ್ರೊಡೆ 

ಬೇಕಾದ ಐಟಂಗಳು

ತುರಿದ ಕುಂಬಳಕಾಯಿ -1 1/2 ಕಪ್‌

ಮೈದಾ -2 ಕಪ್

ಬೆಣ್ಣೆ -1 / 2 ಕಪ್

ಮೊಸರು -1 / 2 ಕಪ್

ಹಾಲು -1 1/4 ಕಪ್

ಚಾಕಲೇಟ್ ಪೌಡರ್- 2 ಟಿಎಸ್ಪಿ

ಬೇಕಿಂಗ್ ಪೌಡರ್ -2 ಟಿಎಸ್ಪಿ

ಬೇಕಿಂಗ್ ಸೋಡಾ -1 ಟಿಎಸ್ಪಿ

ಸಕ್ಕರೆ -3 / 4 ಕಪ್

ಕುಂಬಳಕಾಯಿ ಬೀಜಗಳು -1 / 4 ಕಪ್

ಸಾಂಪ್ರದಾಯಿಕ ಇಡ್ಲಿಗೆ ಹೊಸ ರುಚಿ ನೀಡಿ ಆಸಕ್ತಿಕರವಾಗಿಸಿ 

ಮಾಡುವ ವಿಧಾನ:

ಮೃದು ಮತ್ತು ಕ್ರೀಮಿ ಆಗೋವರೆಗೆ ಬೆಣ್ಣೆಯನ್ನು ಕಲಸಿರಿ. ಅದಕ್ಕೆ ಹರಳು ಸಕ್ಕರೆ ಸೇರಿಸಿ. ಮೊಸರು ಮತ್ತು ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ

ಬೇಕಿಂಗ್ ಪೌಡರ್ ಮತ್ತು ಅಡಿಗೆ ಸೋಡಾದೊಂದಿಗೆ ಹಿಟ್ಟನ್ನು ಮಿಶ್ರಣ ಮಾಡಿ. ಇದಕ್ಕೆ ಚಾಕಲೇಟ್‌ ಪೌಡರ್‌ ಸೇರಿಸಿ.

ಇದನ್ನು ಬೆಣ್ಣೆ ಮಿಶ್ರಣಕ್ಕೆ ಸೇರಿಸಿ ಮತ್ತು ಸಂಪೂರ್ಣವಾಗಿ ಮಿಶ್ರವಾಗುವವರೆಗೆ ನಿಧಾನವಾಗಿ ಮಿಕ್ಸ್ ಮಾಡಿ. ಅದಕ್ಕೆ ತುರಿದ ಕುಂಬಳಕಾಯಿ ಸೇರಿಸಿ ಮಿಕ್ಸ್ ಮಾಡಿ.

ತುಪ್ಪ ಹಚ್ಚಿದ ತಟ್ಟೆಯಲ್ಲಿ ಪಾಕವನ್ನು ಸುರಿದು, ಅದರ ಮೇಲೆ ಕುಂಬಳಕಾಯಿ ಬೀಜಗಳನ್ನು ಚಿಮುಕಿಸಿ, ಅರ್ಧ ಗಂಟೆ ಕಾಲ ಒವನ್‌ನಲ್ಲಿ ಬೇಯಿಸಿ. ತಣ್ಣಗಾದ ಬಳಿಕ ಕೇಕ್ ಸಿದ್ಧ.

ಗೊತ್ತೇ, ಪೀನಟ್‌ ಬಟರ್‌ನಿಂದ ವಜ್ರ ತೆಗೆಯಬಹುದು! 

click me!