
ಮಾರುಕಟ್ಟೆಗೆ ನೇರಳೆ ಬಣ್ಣದ ಆಲೂಗಡ್ಡೆ ಬಂದಿದೆ. ಈ ಹೊಸ ನೇರಳೆ ಬಣ್ಣದ ಆಲೂಗಡ್ಡೆ ತಳಿಗೆ ಕುಫ್ರಿ ಜಮುನಿಯಾ ಎಂದು ಹೆಸರಿಡಲಾಗಿದ್ದು, ಇದನ್ನು ಕೇಂದ್ರ ಆಲೂಗಡ್ಡೆ ಸಂಶೋಧನಾ ಸಂಸ್ಥೆಅಭಿವೃದ್ಧಿಪಡಿಸಿದೆ. ಇನ್ನು ಇದರ ಉದ್ದೇಶ ನೋಡ ಹೋರಟರೆ, ಸಾಮಾನ್ಯ ಜನರು ಪ್ರತಿದಿನ ಬಳಸುವ ಆಹಾರದಲ್ಲೇ ಪೌಷ್ಟಿಕಾಂಶವನ್ನು ಹೆಚ್ಚಿಸುವ ಮೂಲಕ ದೇಶದಲ್ಲಿನ 'ಮರೆಮಾಚಿದ ಹಸಿವು' ನೀಗಿಸಲು ಸರ್ಕಾರ ಇದನ್ನು ಪ್ರೋತ್ಸಾಹಿಸುತ್ತಿದೆ.
ಈ ತಳಿಯನ್ನು ಅಧಿಕೃತವಾಗಿ 2024 ರಲ್ಲಿ ಬಿಡುಗಡೆ ಮಾಡಲಾಗಿದೆ. ಪೌಷ್ಟಿಕಾಂಶಗಳ ಹೋಲಿಕೆ ನೋಡಿದರೆ, ಕಬ್ಬಿನಾಂಶ ಸಾಮಾನ್ಯ ಆಲೂಗಡ್ಡೆಯಲ್ಲಿ 23.15 ಮಿಗ್ರಾಂ ಇದ್ದರೆ, ಕುಫ್ರಿ ಜಮುನಿಯಾದಲ್ಲಿ 42.75 ಮಿಗ್ರಾಂ ಇದೆ. ಅದರಂತೆ ಸಾಮಾನ್ಯ ತಳಿಯಲ್ಲಿ 0.57 ಮಿಗ್ರಾಂ ಇದ್ದರೆ, ಇದರಲ್ಲಿ 3.22 ಮಿಗ್ರಾಂ ನಷ್ಟಿದೆ. ಸತು ಸಾಮಾನ್ಯ ಆಲೂಗಡ್ಡೆಯಲ್ಲಿ 0.28 ಮಿಗ್ರಾಂ ಇದ್ದರೆ, ಇದರಲ್ಲಿ 2.28 ಮಿಗ್ರಾಂ ಇದೆ. ಅಲ್ಲದೇ ಇದರ ನೇರಳೆ ಬಣ್ಣಕ್ಕೆ ಕಾರಣವಾಗಿರುವ 'ಆಂಥೋಸಯಾನಿನ್' ಎಂಬ ನೈಸರ್ಗಿಕ ವರ್ಣದ್ರವ್ಯವು ಉತ್ತಮ ಆಂಟಿಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ.
ನಿಗದಿಪಡಿಸಿದ ಕೃಷಿ ಪದ್ಧತಿಗಳ ಅಡಿಯಲ್ಲಿ ಪ್ರತಿ ಹೆಕ್ಟೇರ್‌ಗೆ 32 ರಿಂದ 35 ಟನ್ ಇಳುವರಿ ಪಡೆಯಬಹುದು. ಪ್ರಾಯೋಗಿಕ ಪರೀಕ್ಷೆಗಳಲ್ಲಿ ಇದು 90 ದಿನಗಳಲ್ಲಿ ಸುಮಾರು 49 ಟನ್‌ಗಳಷ್ಟು ಗರಿಷ್ಠ ಇಳುವರಿ ನೀಡಿದೆ. ಇದನ್ನು ಉತ್ತರ ಭಾರತದ ಬಯಲು ಸೀಮೆಗಳಲ್ಲಿ ಬೆಳೆಯಲು ಶಿಫಾರಸು ಮಾಡಲಾಗಿದೆ ಹಾಗೂ ಇದು ಉತ್ತಮ ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ.
ಇದು ಸಾಮಾನ್ಯ ಆಹಾರದ ಕೋಟಾಗಳಲ್ಲಿ ಪೌಷ್ಟಿಕಾಂಶ ಸೇರಿಸುವ ಕೃತಕ ಪದ್ಧತಿಯಲ್ಲ. ಬದಲಿಗೆ, ಸಸ್ಯ ತಳಿ ಅಭಿವೃದ್ಧಿ ಮತ್ತು ಸುಧಾರಿತ ಬೇಸಾಯದ ಮೂಲಕ ಬೆಳೆ ಬೆಳೆಯುವಾಗಲೇ ಅದರಲ್ಲಿ ನೈಸರ್ಗಿಕವಾಗಿ ಪೋಷಕಾಂಶಗಳು ಹೆಚ್ಚಾಗುವಂತೆ ಮಾಡುವ 'ಬಯೋಫೋರ್ಟಿಫಿಕೇಶನ್' ತಂತ್ರಜ್ಞಾನವಾಗಿದೆ.
ಇದರ ವಿಭಿನ್ನ ಬಣ್ಣವನ್ನು ಗ್ರಾಹಕರು ಹೇಗೆ ಸ್ವೀಕರಿಸುತ್ತಾರೆ ಮತ್ತು ಮಾರುಕಟ್ಟೆಯಲ್ಲಿ ರೈತರಿಗೆ ಇದು ಆರ್ಥಿಕವಾಗಿ ಎಷ್ಟು ಲಾಭ ತರಲಿದೆ ಎಂಬುದು ಮುಖ್ಯವಾಗಿದೆ. ಆಲೂಗಡ್ಡೆಯನ್ನು ಬೇಯಿಸಿದ ನಂತರವೂ ಅದರಲ್ಲಿನ ಪೋಷಕಾಂಶಗಳು ಎಷ್ಟು ಪ್ರಮಾಣದಲ್ಲಿ ಉಳಿಯುತ್ತವೆ ಮತ್ತು ಅದನ್ನು ದೇಹವು ಎಷ್ಟು ಹೀರಿಕೊಳ್ಳುತ್ತದೆ ಎಂಬುದರ ಕುರಿತು ಇನ್ನಷ್ಟು ಸಂಶೋಧನೆ ಅಗತ್ಯವಾಗಿವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.