ಪುಟ್ಟ ಮಗುವೊಂದು ಘನಾಹಾರ ಆರಂಭಿಸುತ್ತಲೇ ತಿಂದು ಜೀರ್ಣಿಸಿಕೊಳ್ಳಬಹುದಾದ, ರೋಗಿಯು ಕೂಡಾ ಸೇವಿಸಬಹುದಾದ, ವಯಸ್ಸಾದವರಿಗೂ ಅಗಿಯಲು, ಜೀರ್ಣಿಸಿಕೊಳ್ಳಲು ಸುಲಭವಾದಂಥ, ಹಾಗಿದ್ದರೂ ರುಚಿಗೆ ಮೋಸವಿಲ್ಲದ ಆಹಾರ ಕಿಚಡಿ.
ಕಿಚಡಿ ನಮ್ಮ ರಾಷ್ಟ್ರೀಯ ತಿನಿಸು. ಭಾರತ, ಪಾಕಿಸ್ತಾನ, ನೇಪಾಳ ಹಾಗೂ ಬಾಂಗ್ಲಾದೇಶಗಳಲ್ಲಿ ಸಾಮಾನ್ಯವಾಗಿ ತಯಾರಿಸುವ ಅಕ್ಕಿ ಹಾಗೂ ಬೇಳೆಯ ಆಹಾರ. ಆದರೆ, ಪ್ರತಿ ಪ್ರದೇಶಕ್ಕೂ, ಪ್ರತಿ ದೇಶಕ್ಕೂ ಕಿಚಡಿಯ ರುಚಿ, ಫ್ಲೇವರ್ ಬದಲಾಗುತ್ತದೆ. ಸಧ್ಯ ಪಾಲಕ್ ಕಿಚಡಿ, ಹೆಸರುಬೇಳೆ ಕಿಚಡಿ ಹಾಗೂ ಹಿಚಕವರೆ ಕಿಚಡಿ ಮಾಡೋದು ಹೇಗೆ ನೋಡೋಣ.
ಬೀಟ್ರೂಟ್ ರೆಸಿಪಿ: ಹಲ್ವಾ, ಸೂಪ್ ಹಾಗೂ ಸಾಸಿವೆ ಮಾಡೋದ್ಹೀಗೆ!
ಪಾಲಕ್ ಕಿಚಡಿ
ಸರ್ವಿಂಗ್ಸ್: 3
ಬೇಕಾಗುವ ಸಾಮಗ್ರಿಗಳು:
1/2 ಕಪ್ ಅಕ್ಕಿ, 1/2 ಕಪ್ ಹೆಸರುಬೇಳೆ, 1/4 ಕಪ್ ಹೆಸರುಕಾಳು, 4 ಕಪ್ ನೀರು, 1/4 ಟೀ ಚಮಚ ಅರಿಶಿನ ಪುಡಿ, 1 ಚಮಚ ತುಪ್ಪ, 1 ಚಮಚ ಜೀರಿಗೆ, 2 ಏಲಕ್ಕಿ, 1 ಇಂಚು ಚಕ್ಕೆ, 1 ದಾಲ್ಚೀನಿ ಎಲೆ, 1 ಒಣಮೆಣಸು, 1/2 ಈರುಳ್ಳಿ, 1/2 ಚಮಚ ಬೆಳ್ಳುಳ್ಳಿ ಶುಂಠಿ ಪೇಸ್ಟ್, 1 ಹಸಿರು ಮೆಣಸು, 1 ಟೊಮ್ಯಾಟೋ, ಮುಷ್ಠಿಯಷ್ಟು ಪಾಲಕ್ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.
ನವರಾತ್ರಿ ಹಬ್ಬದಲ್ಲಿ ರುಚಿ ನೋಡಲೇಬೇಕಾದ ತಿಂಡಿಗಳ ರೆಸಿಪಿ
ಮಾಡುವ ವಿಧಾನ:
ಕುಕ್ಕರ್‌ನಲ್ಲಿ ಅಕ್ಕಿ, ಹೆಸರುಬೇಳೆ, ಹೆಸರು ಕಾಳು, ಸ್ವಲ್ಪ ಅರಿಶಿನ ಹಾಗೂ 3 ಲೋಟ ನೀರು ಸೇರಿಸಿ 4 ವಿಶಲ್ ಬರಿಸಿ.
ದೊಡ್ಡ ಬಾಣಲೆಯೊಂದರಲ್ಲಿ ತುಪ್ಪ ಬಿಸಿ ಮಾಡಿಕೊಂಡು ಜೀರಿಗೆ, ಏಲಕ್ಕಿ, ಚಕ್ಕೆ, ದಾಲ್ಚೀನಿ ಎಲೆ ಹಾಗೂ ಒಣಮೆಣಸು ಹಾಕಿ ಹುರಿಯಿರಿ. ಮಸಾಲೆ ಪರಿಮಳ ಹೊಮ್ಮುತ್ತಲೇ ಸಣ್ಣದಾಗಿ ಕತ್ತರಿಸಿಕೊಂಡ ಈರುಳ್ಳಿ ಹಾಕಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ಇದಕ್ಕೆ ಶುಂಠಿಬೆಳ್ಳುಳ್ಳಿ ಪೇಸ್ಟ್ ಹಾಗೂ ಮಧ್ಯೆ ಸೀಳಿಕೊಂಡ ಹಸಿಮೆಣಸನ್ನು ಹಾಕಿ ಹುರಿಯಿರಿ. 30 ಸೆಕೆಂಡ್ ಬಳಿಕ ಸಣ್ಣದಾಗಿ ಹೆಚ್ಚಿಟ್ಟುಕೊಂಡ ಟೊಮ್ಯಾಟೋ ಸೇರಿಸಿ. ಟೊಮ್ಯಾಟೋ ಪೂರ್ತಿ ಮೆತ್ತಗಾದ ಬಳಿಕ ಮಿಕ್ಸಿಯಲ್ಲಿ ಸ್ವಲ್ಪ ನೀರಿನೊಂದಿಗೆ ಬ್ಲೆಂಡ್ ಮಾಡಿಕೊಂಡ ಪಾಲಕ್ ಸೊಪ್ಪಿನ ಪ್ಯೂರಿಯನ್ನು ಸೇರಿಸಿ. 5 ನಿಮಿಷ ಬೇಯುವಷ್ಟರಲ್ಲಿ ಪಾಲಕ್ ಬಣ್ಣ ಸ್ವಲ್ಪ ಬದಲಾಗುತ್ತದೆ. ಈಗ ಬೇಯಿಸಿಟ್ಟುಕೊಂಡ ಅನ್ನ ಹಾಗೂ ಹೆಸರುಬೇಳೆಕಾಳುಗಳನ್ನು ಸೇರಿಸಿ. ಇದಕ್ಕೆ ಮತ್ತೊಂದು ಲೋಟ ನೀರು ಹಾಕಿಕೊಂಡು ರುಚಿಗೆ ಅಗತ್ಯವಿರುವಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ಕಿಚಡಿಯು ಪಾಲಕ್ ಫ್ಲೇವರ್ ಎಳೆದುಕೊಳ್ಳುವಂತೆ ಮತ್ತೈದು ನಿಮಿಷ ಸಣ್ಣಉರಿಯಲ್ಲಿ ಬೇಯಿಸಿ. ಕಡೆಯಲ್ಲಿ ಮೇಲಿನಿಂದ 1 ಚಮಚ ತುಪ್ಪ ಹಾಕಿ ತಿನ್ನಲು ಸರ್ವ್ ಮಾಡಿ.
-----------------
ಹೆಸರುಬೇಳೆ ಕಿಚಡಿ
ಉಡುಪಿ ಶೈಲಿಯ ಸಾಂಬಾರ್ ಪುಡಿ ಮಾಡೋದು ಹೇಗೆ?
ಸರ್ವಿಂಗ್ಸ್: 3
ಬೇಕಾಗುವ ಸಾಮಗ್ರಿಗಳು:
1/2 ಕಪ್ ಅಕ್ಕಿ, ಅರ್ಧ ಕಪ್ ಹೆಸರುಬೇಳೆ, ಇಂಗು 1 ಚಿಟಿಕೆ, ನೀರು 3 ಕಪ್, ಅರಿಶಿನ 1 ಚಮಚ, ತುಪ್ಪ 1 ಚಮಚ, ಜೀರಿಗೆ ಪುಡಿ 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ಮನೆಯಲ್ಲಿ ನೀವೂ ಮಾಡಬಹುದು ವಿವಿಧ ಬಗೆಯ ದಾಲ್ ಕಮಾಲ್!
ಮಾಡುವ ವಿಧಾನ:
ಅಕ್ಕಿ ಹಾಗೂ ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ದೊಡ್ಡ ಪಾತ್ರೆಯೊಂದರಲ್ಲಿ ನೀರಿನಲ್ಲಿ ಅರ್ಧ ಗಂಟೆಗಳ ಕಾಲ ನೆನೆಸಿಡಿ.
ಈಗ ಕುಕ್ಕರ್‌ಗೆ ತುಪ್ಪವನ್ನು ಹಾಕಿ ಬಿಸಿ ಮಾಡಿ. ಜೀರಿಗೆ ಹಾಗೂ ಇಂಗು ಸೇರಿಸಿ ಹುರಿಯಿರಿ. ನಂತರ ಹೆಸರು ಬೇಳೆ ಮತ್ತು ಅಕ್ಕಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಅರಿಶಿನ ಮತ್ತು ಜೀರಿಗೆ ಪುಡಿಯನ್ನು ಸೇರಿಸಿ. ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಕುಕ್ಕರ್ ಗೆ ಮುಚ್ಚಳ ಮುಚ್ಚಿ 4 ವಿಶಲ್ ಬರಿಸಿ. ಸಿಂಪಲ್ ಹೆಸರುಬೇಳೆ ಕಿಚಡಿ ರೆಡಿ.
-------
ಹಿಚುಕವರೆ ಕಿಚಡಿ
ಸರ್ವಿಂಗ್ಸ್: 3
ಬೇಕಾಗುವ ಸಾಮಗ್ರಿಗಳು: ಹಿಚುಕವರೆ 1 ಲೋಟ, ಅಕ್ಕಿ 1 ಕಪ್, ನೀರು 3 ಕಪ್, ಈರುಳ್ಳಿ 1, ಜೀರಿಗೆ 1 ಚಮಚ, ಧನಿಯಾ ಪುಡಿ 2 ಚಮಚ, ಕೆಂಪುಮೆಣಸಿನ ಪುಡಿ 2 ಚಮಚ, ಅರಿಶಿನ 1 ಚಿಟಿಕೆ, ತುಪ್ಪ 4 ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
ಅಕ್ಕಿಯನ್ನು ತೊಳೆದು ಪಾತ್ರೆಯಲ್ಲಿ ನೀರಿನೊಂದಿಗೆ 30 ನಿಮಿಷ ನೆನೆಸಿಡಿ.
ಕುಕ್ಕರಿನಲ್ಲಿ 4 ತುಪ್ಪ ಹಾಕಿ ಬಿಸಿಯಾಗುತ್ತಿದ್ದಂತೆಯೇ ಜೀರಿಗೆ ಹಾಕಿ. 30 ಸೆಕೆಂಡ್ ಬಳಿಕ ಸಣ್ಣದಾಗಿ ಹೆಚ್ಚಿಟ್ಟುಕೊಂಡ ಈರುಳ್ಳಿ ಸೇರಿಸಿ. ಕೆಂಪಗಾಗುವವರೆಗೆ ಹುರಿದ ಬಳಿಕ ಅರಿಶಿಣ ಹಾಕಿ ಮಿಕ್ಸ್ ಮಾಡಿ. ಈಗ ಹಿಚುಕವರೆ, ಅಕ್ಕಿ, ಉಪ್ಪು ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ನೀರು ಸೇರಿಸಿ ಕುಕ್ಕರ್ ಮುಚ್ಚಳ ಹಾಕಿ 4 ವಿಶಲ್ ಹಾಕಿಸಿ. ಹಿಚುಕವರೆ ಕಿಚಡಿ ರೆಡಿ. ಮೇಲಿನಿಂದ 1 ಚಮಚ ತುಪ್ಪ ಹಾಕಿ ಸರ್ವ್ ಮಾಡಿ.