ತಾಯಿ ದೋಸೆ ರೆಸಿಪಿಯಿಂದ ತಿಂಗಳಿಗೆ 12 ಲಕ್ಷ ರೂ ಆದಾಯ, ಬೆಂಗಳೂರಿನ ಅಣ್ಣ-ತಂಗಿಯ ಯಶಸ್ಸಿನ ಕತೆ

Published : Sep 04, 2026, 03:25 PM IST
Bengaluru Brother Sister Earn Rs 12 Lakh Monthly

ಸಾರಾಂಶ

ಚಾರ್ಟೆಡ್ ಅಕೌಂಟೆಂಟ್ ಕನಸು ಕಂಡಿದ್ದ ಗಣೇಶ್ ಇದೀಗ ತಿಂಗಳಿಗೆ 12 ಲಕ್ಷ ರೂಪಾಯಿ ಆದಾಯಗಳಿಸುತ್ತಿದ್ದಾರೆ. ಗಣೇಶ್ ತಾಯಿಯ ಮಾಡುತ್ತಿದ್ದ ಅತ್ಯಂತ ರುಚಿಕರ ದೋಸೆ ರೆಸಿಪಿಯನ್ನು ಬಳಸಿಕೊಂಡು ಆರಂಭಿಸಿದ ಉದ್ಯಮ ಇದೀಗ ಭರ್ಜರಿ ಲಾಭಗಳಿಸುತ್ತಿದೆ.

ಮುಂಬೈ (ಸೆ.04) ತಾಯಿ ಮಾಡುತ್ತಿದ್ದ ದೋಸೆ ಅತ್ಯಂತ ರುಚಿಕರವಾಗಿತ್ತು. ಆಪ್ತರು, ಸಂಬಂಧಿಕರು ಸೇರಿದಂತೆ ಹಲವರು ಇದೇ ಮಾತನ್ನೇ ಹೇಳುತ್ತಿದ್ದರು. ಕೊನೆಗೆ ತಾಯಿ ಈ ರುಚಿಕರ ದೋಸೆ ರೆಸೆಪಿ ಬಳಸಿ ಬೆಂಗಳೂರಿನ ರಸ್ತೆ ಬದಿಯಲ್ಲಿ ಉದ್ಯಮ ಆರಂಭಿಸಿದ ಅಣ್ಣ ಹಾಗೂ ತಂಗಿ ಇದೀಗ ತಿಂಗಳಿಗೆ 12 ಲಕ್ಷ ರೂಪಾಯಿ ಆದಾಯಗಳಿಸುತ್ತಿದ್ದಾರೆ. ಪ್ರತಿ ದಿನ 40 ಸಾವಿರ ರೂಪಾಯಿ ಗಳಿಸುತ್ತಾರೆ. ಅಣ್ಣ ಹಾಗೂ ತಂಗಿ ಇಬ್ಬರು ಸೇರಿ ಆರಂಭಿಸಿದ ಸಣ್ಣ ಉದ್ಯಮ ಇದೀಗ ಯಶಸ್ವಿಯಾಗಿದೆ.ರುಚಿಕರ ದೋಸೆಗೆ ಜನ ಕ್ಯೂ ನಿಲ್ಲುತ್ತಿದ್ದಾರೆ.

ಮುಂಬೈನ ಥಾಣೆಯ ಗಣೇಶ್ ಸಾಥೆ ಹಾಗೂ ತಂಗಿ ಸಪ್ನಾ ಸಾಥೆ ತಾಯಿ ಮನೆಯಲ್ಲಿ ಉತ್ತಮ ದೋಸೆ ಮಾಡುತ್ತಿದ್ದರು. ಉತ್ತಮವಾಗಿ ಓದಿ ಸಿಎ (ಚಾರ್ಟೆಡ್ ಅಕೌಂಟ್) ಆಗಬೇಕು ಎಂದು ಕನಸು ಕಂಡಿದ್ದ ಗಣೇಶ್ ಇದೀಗ ಉದ್ಯಮಿಯಾಗಿ ಬೆಳೆದಿದ್ದಾರೆ. ಚಾರ್ಟೆಡ್ ಅಕೌಂಟೆಂಟ್ ಆಗಬೇಕು ಎಂದು ಪ್ರಯತ್ನ ಆರಂಭಿಸಿದ ಗಣೇಶ್‌ಗೆ ಆರ್ಥಿಕ ಸಮಸ್ಯೆಗಳು ಎದುರಾಗಿತ್ತು. ಹೀಗಾಗಿ ಸಣ್ಣದಾಗಿ ಏನಾದರೂ ಮಾಡಿಕೊಂಡು ಓದಬೇಕು ಎಂದು ಆಲೋಚನೆ ಮಾಡಿದಾಗ ತಾಯಿಯ ಬೆಣ್ಣೆ ದೋಸೆ ನೆನಪು ಬಂದಿದೆ. ರಸ್ತೆ ಬದಿಯಲ್ಲಿ ಗಾಡಿ ಇಟ್ಟು ಅದರಲ್ಲಿ ತಾಯಿಯ ರುಚಿಕರ ದೋಸೆ ಮಾರಾಟ ಮಾಡಿದರೆ ಹೇಗೆ ಅನ್ನೋ ಪ್ರಶ್ನೆ ಮೂಡಿದೆ.

50 ಸಾವಿರ ರೂಪಾಯಿ ಸಾಲ ಪಡೆದು ಉದ್ಯಮ ಆರಂಭ

ಗಣೇಶ್ ಸಾಥೆ ತಾಯಿಯ ದೋಸೆ ರೆಸಿಪಿ ಬಳಸಿಕೊಂಡು ಸಣ್ಣ ಗಾಡಿಯಲ್ಲಿ ಉದ್ಯಮ ಆರಂಭಿಸಲು ಮುಂದಾಗಿದ್ದಾರೆ. ಇದಕ್ಕಾಗಿ 50 ಸಾವಿರ ರೂಪಾಯಿ ನೀಡಿ ಹಳೇ ವಾಹನ ಖರೀದಿಸಿದ್ದಾರೆ. ಬೆಣ್ಣೆ ದೋಸೆ ಸ್ಟಾಲ್ ಆರಂಭಿಸಿ ವ್ಯಾಪಾರ ಆರಂಭಗೊಂಡಿತು. ಆದರೆ ಆರಂಭದಲ್ಲೇ ಯಾವ ಪ್ಲಾನ್ ವರ್ಕ್ ಆಗಲಿಲ್ಲ. ಗ್ರಾಹಕರು ಸಂಖ್ಯೆಯೂ ಕಡಿಮೆ, ಜೊತೆಗೆ ಪ್ರತಿ ದಿನ 200 ರೂಪಾಯಿ ನಷ್ಟವಾಗುತಿತ್ತು. ಹಲವು ಫುಡ್ ಟ್ರಕ್ ಜೊತೆ ಸ್ಪರ್ಧೆ, ಪೈಪೋಟಿ ಹೆಚ್ಚಾಯಿತು, ಗ್ರಾಹಕರು ಇಲ್ಲದಾಯಿತು. ನಷ್ಟ ಹೆಚ್ಚಾಯಿತು.

ಸೋಶಿಯಲ್ ಮೀಡಿಯಾ ಮೊರೆ ಹೋದ ಅಣ್ಣ ತಂಗಿ

ಗಣೇಶ್ ಹಾಗೂ ಸಪ್ನಾ ಇಬ್ಬರು ಸೇರಿ ಏನು ಮಾಡಬಹುದು ಅನ್ನೋ ಕುರಿತು ಚರ್ಚೆ ನಡೆಸಿದ್ದಾರೆ. ಉದ್ಯಮ ಇಲ್ಲಿಗೆ ನಿಲ್ಲಿಸಿದರೆ ನಷ್ಟ ಮಾತ್ರವಲ್ಲ ಮುಂದೆ ಉದ್ಯಮ ಆರಂಭಿಸಲು ಆಗುವುದಿಲ್ಲ. ಹೀಗಾಗಿ ಮುಂದುವರಿಸಲು ನಿರ್ಧರಿಸಿದ್ದಾರೆ. ಆದರೆ ಕೆಲ ಬದಲಾವಣೆ ಮೂಲಕ ವ್ಯಾಪಾರ ಚುರುಕುಗೊಳಿಸಲು ನಿರ್ಧರಿಸಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ತಮ್ಮ ದೋಸೆ ಸೇರಿದಂತೆ ಕೆಲ ಸ್ಪೆಷಲ್ ದೋಸೆಗಳ ಮಾಹಿತಿ ನೀಡಿದರು. ವಿಡಿಯೋ ಮಾಡಿ ಪೋಸ್ಟ್ ಮಾಡಿದರು. ಖುದ್ದು ತಾಯಿಯಿಂದಲೇ ದೋಸೆ ಹಿಟ್ಟು ತಯಾರಿಸಿ ತಂದು ವ್ಯಾಪಾರ ಆರಂಭಿಸಿದರು. ಅಮ್ಮನ ಕೈರುಚಿ, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಎಲ್ಲವೂ ಸೇರಿ ವ್ಯಾಪಾರ ಚುರುಕುಕೊಂಡಿತು.

ಗ್ರಾಹಕರು ಬರಲು ಆಗಮಿಸಿದರು. ಇತ್ತ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳು ವೈರಲ್ ಆಯಿತು. ಗ್ರಾಹಕರ ಸಂಖ್ಯೆ ಹೆಚ್ಚಾಯಿತು. ವ್ಯಾಪಾರ ವೃದ್ಧಿಸಿತು. ಇದೀಗ ಪ್ರತಿ ದಿನ 400ಕ್ಕೂ ಹೆಚ್ಚು ಜನ ದೋಸೆ ಸವಿಯಲು ಬರುತ್ತಿದ್ದಾರೆ. ಪ್ರತಿ ದಿನ 40 ಸಾವಿರಕ್ಕೂ ಹೆಚ್ಚು ರೂಪಾಯಿ ಸಂಪಾದಿಸುತ್ತಿದ್ದಾರೆ. ತಿಂಗಳಿಗೆ 12 ಲಕ್ಷ ರೂಪಾಯಿ ಗಳಿಕೆಯಾಗಿ ಹೊರಹೊಮ್ಮಿತು. ದಿ ಬೆಣ್ಣೆ ಇದೀಗ ಜನಪ್ರಿಯ ದೋಸೆ ಸ್ಟಾಲ್ ಆಗಿ ಮಾರ್ಪಟ್ಟಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜಿಮ್ ಇಲ್ಲ, ಡಯಟ್ ಇಲ್ಲ, 41ರಲ್ಲೂ ಎರಡು ಮಕ್ಕಳ ತಾಯಿ ನಯನತಾರಾ ಫಿಟ್‌ನೆಸ್ ಸೀಕ್ರೆಟ್ ಸಿಂಪಲ್ ಇದೆ ನೋಡಿ!
Top 5 flour ranking for roti: ರಾಗಿ, ಜೋಳ, ಗೋಧಿ.. ಯಾವ ಹಿಟ್ಟು ಆರೋಗ್ಯಕ್ಕೆ ಬೆಸ್ಟ್? ಇಲ್ಲಿದೆ ವೈದ್ಯರ ಉತ್ತರ