ಪಿಜ್ಜಾ, ಬರ್ಗರ್ ಪ್ರಿಯರಿಗೆ ಮೆಕ್‌ಡೋನಾಲ್ಡ್ ಶಾಕ್ ನೀಡಿದೆ. ಇನ್ನು ಮುಂದೆ ಭಾರತದಲ್ಲಿ ಪಿಜ್ಜಾ ಹಾಗೂ ಬರ್ಗರ್‌ನಲ್ಲಿ ಟೊಮೆಟೋ ಬಳಕೆ ಇಲ್ಲ ಎಂದು ಮೆಕ್ಡೋನಾಲ್ಡ್ ಹೇಳಿದೆ.
ನವದೆಹಲಿ(ಜು.07) ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಪಿಜ್ಜಾ, ಬರ್ಗರ್ ನೆಚ್ಚಿನ ಫಾಸ್ಟ್ ಫುಡ್. ಪಿಜ್ಜಾ, ಬರ್ಗರ್‌ನಲ್ಲೇ ಬದುಕಿದವರು ಇದ್ದಾರೆ. ಇದೀಗ ಪಿಜ್ಜಾ ಹಾಗೂ ಬರ್ಗರ್ ಪ್ರಿಯರಿಗೆ ಮೆಕ್‌ಡೋನಾಲ್ಡ್ ಶಾಕ್ ನೀಡಿದೆ. ಭಾರತದ ಹಲವು ಭಾಗದಲ್ಲಿ ಪಿಜ್ಜಾ ಹಾಗೂ ಬರ್ಗರ್‌ನಲ್ಲಿ ಟೊಮೆಟೋ ಬಳಕೆ ಮಾಡುವುದಿಲ್ಲ ಎಂದು ಮೆಕ್ಡೋನಾಲ್ಡ್ ಹೇಳಿದೆ. ಟೊಮೆಟೊ ಬೆಲೆ ಗಗನಕ್ಕೇರಿರುವುದು ಇದರ ಹಿಂದಿನ ಕಾರಣಲ್ಲ. ಬೆಲೆ ಗಗನಕ್ಕೇರಿರುವ ಕಾರಣ ಗುಣಟ್ಟದ ಟೊಮೆಟೊಗಳು ಲಭ್ಯವಾಗುತ್ತಿಲ್ಲ. ಹೀಗಾಗಿ ಗ್ರಾಹಕರಿಗೆ ಗುಣಟ್ಟದ ಟೊಮೆಟೊ ನೀಡಲು ಸಾಧ್ಯವಾಗದ ಕಾರಣ ಮೆಕ್‌ಡೋನಾಲ್ಡ್ ಪಿಜ್ಜಾ ಹಾಗೂ ಬರ್ಗರ್‌ನಿಂದ ಟೊಮೆಟೊಗೆ ಮುಕ್ತಿ ನೀಡಿದೆ. ಇಷ್ಟೇ ಅಲ್ಲ ಮೆಕ್‌ಡೋನಾಲ್ಡ್ ಮೆನವಿನಲ್ಲಿನ ಟೊಮೆಟೋ ಖಾದ್ಯಗಳನ್ನು ತಾತ್ಕಾಲಿಕವಾಗಿ ತೆಗೆದು ಹಾಕುವುದಾಗಿ ಹೇಳಿದೆ.
ಭಾರತದ ಹಲವು ಭಾಗದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಶೇಕಡಾ 300ಕ್ಕಿಂತಲೂ ಹೆಚ್ಚಾಗಿದೆ. ಈಶಾನ್ಯ ಭಾರತದಲ್ಲಿ ಟೊಮೆಟೊ ಬೆಲೆ 200 ರೂಪಾಯಿ ಗಡಿ ದಾಟಿದೆ. ಭಾರತದ ಹಲವು ಭಾಗದಲ್ಲಿ ಟೊಮೆಟೊ ಬೆಲೆ 160 ರೂಪಾಯಿಗೆ ಏರಿಕೆಯಾಗಿದೆ. ಟೊಮೆಟೊ ಅಭಾವ ಸೃಷ್ಟಿಯಾಗಿದೆ. ಹೀಗಾಗಿ ಉತ್ತಮ ಗುಣಮಟ್ಟದ ಟೊಮೆಟೊ ಸಿಗುತ್ತಿಲ್ಲ. ಸದ್ಯ ಲಭ್ಯವಾಗುತ್ತಿರುವ ಟೊಮೆಟೊ ನಮ್ಮ ಕ್ವಾಲಿಟಿ ಚೆಕ್‌ನಲ್ಲಿ ಫೇಲ್ ಆಗಿದೆ. ಗ್ರಾಹಕರಿಗೆ ಉತ್ತಮ ಗುಣಟ್ಟದ ಟೊಮೆಟೊ ನೀಡಲು ಸಾಧ್ಯವಾಗದ ಕಾರಣ ಅನಿವಾರ್ಯವಾಗಿ ಟೊಮೆಟೊ ಬಳಕೆ ನಿಲ್ಲಿಸುತ್ತಿದ್ದೇವೆ ಎಂದು ಮೆಕ್ಡೋನಾಲ್ಡ್ ಹೇಳಿದೆ.
undefined
ಗಗನಕ್ಕೇರಿದ ಬೆಲೆ: ಟೊಮೆಟೋ ವ್ಯಾಪಾರಿ, ಬೆಳೆಗಾರರಿಗೆ ಕಳ್ಳರ ಕಾಟ: ಹೊಲದಿಂದಲೇ ಬೆಳೆ ಮಾಯಾ
ನಮ್ಮ ಬ್ರ್ಯಾಂಡ್ ಆಹಾರದ ಗುಣಮಟ್ಟಮತ್ತು ಸುರಕ್ಷತೆಗೆ ಬದ್ಧವಾಗಿದೆ. ಕಾರಣಾಂತರಗಳಿಂದ ಟೊಮೆಟೋಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೇವಲ ತಾತ್ಕಾಲಿಕವಾಗಷ್ಟೇ ನಾವು ನಮ್ಮ ಕೆಲ ರೆಸ್ಟೋರೆಂಟ್‌ಗಳಲ್ಲಿ ಟೊಮೆಟೋ ಖಾದ್ಯಗಳನ್ನು ತೆಗೆದು ಹಾಕಿದ್ದೇವೆ’ ಎಂದು ಕಂಪನಿ ಸ್ಪಷ್ಟಪಡಿಸಿದೆ.
ದೆಹಲಿ ಹಾಗೂ ನೋಯ್ಡಾದ ಹಲವು ಮೆಕ್‌ಡೋನಾಲ್ಡ್ ರೆಸ್ಟೋರೆಂಟ್‌ಗಳಲ್ಲಿ ಟೊಮೆಟೊ ಬಳಕೆ ಇಲ್ಲ ಅನ್ನೋ ನೋಟಿಸ್ ಹಾಕಲಾಗಿದೆ. ಭಾರತದ ಕೆಲ ರಾಜ್ಯದಲ್ಲಿ ಟೊಮೆಟೊ ಬಳಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಮೆಕ್‌ಡೋನಾಲ್ಡ್ ರೆಸ್ಟೊರೆಂಟ್‌ಗಳಲ್ಲಿ ನೋಟಿಸ್ ಹಾಕಿದೆ. ಗುಣಮಟ್ಟದ ಟೊಮೆಟೊ ಖರೀದಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ. ಆದರೆ ಮೆಕ್‌ಡೋನಾಲ್ಡ್ ಕ್ವಾಲಿಟಿ ಚೆಕ್‌ನಲ್ಲಿ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಟೊಮೆಟೊಗಳು ಅತ್ಯಂತ ಕಳಪೆ ಗುಣಟ್ಟದ್ದಾಗಿದೆ ಎಂದು ಮೆಕ್ಡೋನಾಲ್ಡ್ ಹೇಳಿದೆ.
ಅನಿವಾರ್ಯವಾಗಿ ನಾವು ಪಿಜ್ಜಾ ಹಾಗೂ ಬರ್ಗರ್ ಟೊಮೆಟೊ ಇಲ್ಲದೆ ನೀಡಬೇಕಾಗಿದೆ ಎಂದು ಮೆಕ್ಡೋನಾಲ್ಡ್ ಹೇಳಿದೆ. ಹಲವು ಪಿಜ್ಜಾ ಹಾಗೂ ಬರ್ಗರ್ ಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಿಜ್ಜಾ ಹಾಗೂ ಬರ್ಗರ್ ಸ್ವಾದ ಟೊಮೆಟೊದಿಂದ ಹೆಚ್ಚಾಗಲಿದೆ. ಆದರೆ ಗುಣಟ್ಟದ ಟೊಮೆಟೊ ಇಲ್ಲದ ಕಾರಣ ಪಿಜ್ಜಾ, ಬರ್ಗರ್ ತಿನ್ನುವ ಮನಸ್ಸಾಗುತ್ತಿಲ್ಲ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ರಾಜಸ್ಥಾನದ ಚುರುನಲ್ಲಿ ಟೊಮೆಟೋ ಬೆಲೆ ಕೇವಲ 31 ರು. ದೇಶದಲ್ಲೇ ಅತೀ ಕಡಿಮೆ ದರ
ದೇಶಾದ್ಯಂತ ತೀವ್ರ ಏರಿಕೆಯಾಗಿರುವ ಟೊಮೆಟೋ ದರ ಉತ್ತರಾಖಂಡದಲ್ಲಿ 250 ರು. ಗಡಿ ತಲುಪಿದೆ. ಇಲ್ಲಿನ ಗಂಗೋತ್ರಿ ಧಾಮದಲ್ಲಿ ಕೇಜಿಗೆ ಟೊಮೆಟೊ ಬೆಲೆ 250 ರು. ಗೆ ಏರಿಕೆಯಾಗಿದ್ದು ಇದು ಈ ವರ್ಷದ ದಾಖಲೆಯ ಟೊಮೆಟೋ ಬೆಲೆ ಎನ್ನಿಸಿಕೊಂಡಿದೆ. ಇನ್ನು ಉತ್ತರಕಾಶಿಯಲ್ಲಿ ಕೇಜಿ ಟೊಮೆಟೋ ಬೆಲೆ 180 ರು.ನಿಂದ 200 ರು.ಗೆ ಮಾರಾಟವಾಗುತ್ತಿದೆ. ಹೀಗಾಗಿ ಈ ಭಾಗದಲ್ಲಿ ಜನರು ಟೊಮೆಟೋ ಖರೀದಿಗೂ ಮುಂದಾಗುತ್ತಿಲ್ಲ ಎಂದು ವ್ಯಾಪಾರಸ್ಥರು ಹೇಳಿದ್ದಾರೆ. ಕೆಲವಡೆ ಭಾರೀ ಮಳೆಯಿಂದಾಗಿ, ಕೆಲವೆಡೆ ಮಳೆಯ ಕೊರತೆಯಿಂದಾಗಿ ಹಾಗೂ ಇನ್ನಿತರ ಕಾರಣಗಳಿಂದ ಈ ಬಾರಿಯ ಟೊಮೆಟೋ ಉತ್ಪನ್ನ ತೀವ್ರವಾಗಿ ಕುಸಿದಿದ್ದೇ ಬೆಲೆ ಏರಿಕೆಗೆ ಕಾರಣವಾಗಿದೆ. ದೇಶದ ಅನೇಕ ಭಾಗಗಳಲ್ಲಿ ಟೊಮೆಟೋ ಬೆಲೆ ಕೇಜಿಗೆ 100 ರು. ನಿಂದ 130 ರು. ಇದೆ.