
ಮಸಲಾ ಟೀ ಇದ್ದಂತೆ ಮಸಾಲಾ ಕಾಫಿ ಏಕಿಲ್ಲ?
ಜಗತ್ತಿನಲ್ಲಿ ಎಲ್ಲೇ ಹೋದರೂ ಟೀ, ಕಾಫಿ ಈಗ ಸಾಮಾನ್ಯ ಎಂಬಂತಾಗಿದೆ. ಅದರಲ್ಲೂ ಬ್ರಿಟಿಷರಿ ಎಲ್ಲೆಲ್ಲಿ ಆಳ್ವಿಕೆ ನಡೆಸಿದ್ದಾರೋ ಅಲ್ಲೆಲ್ಲಾ ಟೀ ಸಂಪ್ರದಾಯ ಬಳಕೆಯಲ್ಲಿದೆ. ಪ್ರಪಂಚದಲ್ಲಿ ಎಲ್ಲಾ ಕಡೆ ಇದೆ ಅಂತಲ್ಲ, ಆದರೆ ಬಹಳಷ್ಟು ಕಡೆಗಳಲ್ಲಿ ಆತಿಥ್ಯ'ದ ಹೆಸರಿನಲ್ಲಿ ಟೀ (Tea) ನೀಡಲಾಗುತ್ತದೆ. ಕಾಫಿ (Coffee) ಕೊಡುವುದೂ ಕೂಡ ಕಾಮನ್. ಮನೆಯಲ್ಲಿ ಮಾತ್ರವಲ್ಲ ಟೀ ಶಾಪ್‌ಗಳೂ ಜಗತ್ತಿನ ತುಂಬಾ ಸಾಕಷ್ಟಿವೆ. ಹೊಟೆಲ್‌ಗಳಲ್ಲಿ ಕೂಡ ಟೀ-ಕಾಫಿ ಕೊಡುವುದು ಸಾಮಾನ್ಯ.
ಟೀ ಎಂದರೆ ಏಕರೂಪತೆ ಎಂಬುದಿಲ್ಲ. ಚಹಾದಲ್ಲಿ ಬಹಳಷ್ಟು ವಿಧಗಳಿವೆ. ಶುಂಠಿ ಟೀ, ಬೆಲ್ಲದ ಟೀ, ಪುದಿನಾ ಟೀ, ಲೆಮನ್ ಟೀ, ಏಲಕ್ಕಿ ಟೀ, ಮಸಾಲಾ ಟೀ ಸೇರಿದಂತೆ ಹಲವು ಟೀಗಳು ಚಾಲ್ತಿಯಲ್ಲಿವೆ. ಆದರೆ, ಜಗತ್ತಿನ ಯಾವುದೇ ಬಾಗದಲ್ಲಿ ಮಸಾಲೆ ಕಾಫಿ ಅಂತ ಕೊಡೋದಿಲ್ಲ ಏಕೆ? ಏಲಕ್ಕಿ ಟೀ ಕೊಟ್ಟಂತೆ ಏಲಕ್ಕಿ ಕಾಫಿ ಏಕೆ ಕೊಡೋದಿಲ್ಲ? ಪುದಿನಾ ಟೀ ಮಾಡಿದಂತೆ ಪುದಿನಾ ಹಾಕಿ ಕಾಫಿ ಯಾಕೆ ಮಾಡೋದಿಲ್ಲ? ಇಲ್ಲೇ ಇರೋದು ಭಾರೀ ಗುಟ್ಟು!
ಹೌದು, ಟೀ ಅಂದರೆ ಚಹಾದಲ್ಲಿ ಬಹಳಷ್ಟು ಇತರೆ ರುಚಿಕರ ಐಟಂಗಳನ್ನು ಸೇರಿಸಬಹುದು. ಏಲಕ್ಕಿ, ಹಲವು ಮಸಾಲಾ ಸೇರಿಸಿದ 'ಮಸಾಲಾ ಟೀ', ಜಿಂಜರ್ ಟೀ ಸೇರಿದಂತೆ ಹತ್ತು ಹಲವು ಟೀಗಳಿವೆ. ಅದರೆ ಕಾಫಿ ಎಂದರೆ ಕಾಫಿ ಪುಡಿ ಅಷ್ಟೇ ಸೇರಿಸಲಾಗುತ್ತದೆ. ಆಫ್‌ಕೋರ್ಸ್.. ಕಾಫಿಗೆ ಹಾಲು, ಸಕ್ಕರೆ ಸೇರಿಸಿಯೇ ಮಾಡಲಾಗುತ್ತದೆ. ಆದರೆ, ಅದೂ ಕೂಡ ಸಂಪೂರ್ಣ ಸತ್ಯವಲ್ಲ, ಏಕೆಂದರೆ 'ಬ್ಲಾಕ್ ಕಾಫಿ' ಮಾಡಲಾಗುತ್ತದೆ. ಹಲವರು ಈ ಕಪ್ಪು ಕಾಫಿಯನ್ನೂ ಸಹ ಇಷ್ಟಪಟ್ಟು ಕುಡಿಯುತ್ತಾರೆ. ಇನ್ನು ಕೋಲ್ಡ್ ಕಾಫಿ ಕೂಡ ಸಿಗುತ್ತದೆ, ಆದ್ರೆ ಅದು ಒಮದು ತರಹದ ಕಾಫಿಯೇ, ಅದನ್ನೇ ಕೋಲ್ಡ್ ಮಾಡಲಾಗುತ್ತದೆ ಅಷ್ಟೇ.
ಆದರೆ, ಕಾಫಿಯೇ ಇರಲಿ, ಬ್ಲಾಕ್ ಕಾಫಿಯೇ ಇರಲಿ, ಅದಕ್ಕೆ ಏಲಕ್ಕಿ, ಶುಂಠಿ ಅಥವಾ ಮಸಾಲೆ ಸೇರಿಸುವುದಿಲ್ಲ. ಕಾರಣ, ಕಾಫಿ ರುಚಿಗೆ, ಸುವಾಸನೆಗೆ (ಫ್ಲೇವರ್) ಬೇರೆ ಯಾವುದೇ ರುಚಿ ಮಿಕ್ಸ್ ಆಗಲ್ಲ. ಅಂದರೆ, ಕಾಫಿ ಏಲಕ್ಕಿ ಅಥವಾ ಶುಂಟಿ ಹಾಕಿದರೆ ಕೂಡ ಅದನ್ನು ತನ್ನೊಳಗೆ ಸೇರಸಿಕೊಳ್ಳುವುದಿಲ್ಲ. ಕಾಫಿ ಪರಿಮಳವೇ ಡಾಮಿನೇಟ್ ಆಗುತ್ತದೆ, ಇಲ್ಲ ವಿಚಿತ್ರ ವಾಸನೆ ಅದರಿಂದ ಬರುತ್ತದೆ. ಹಾಗೆ ಏನೋನೋ ಸೇರಿಸಿದರೆ ಅದು ಅತ್ತ ಕಾಫಿಯೂ ಆಗದೇ ಇತ್ತ ಬೇರೆ ಹೆಸರಿಗೂ ಸಿಗದೇ ಯಾವುದೇ ನಿರ್ಧಿಷ್ಟ ರುಚಿ ಅಥವಾ ಹೆಸರು ಇಡಲಾಗದೇ ಅತಂತ್ರ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಅದರೆ ಟೀ ವಿಷಯದಲ್ಲಿ ಹಾಗಲ್ಲ..
ಟೀ ತನ್ನ ಜೊತೆ ಏಲಕ್ಕಿ, ಶುಂಠಿ ಅಥವಾ ಬೇರೆ ಮಸಾಲಾಗಳನ್ನು ಹಾಕಿದರೆ ತನ್ನೊಳಗೆ ಸೇರಿಸಿಕೊಂಡು, ತನ್ನತನವನ್ನೂ ಪೂರ್ತಿ ಬಿಟ್ಟುಕೊಡದೇ ಚಹಾ ಹಾಗೇ ಚಹಾ ಆಗಿಯೇ ಉಳಿಯುತ್ತದೆ. ಆದರೆ ಕಾಫಿ ವಿಷಯದಲ್ಲಿ ಹಾಗಲ್ಲ. ಕಾಫಿ ತನ್ನ ಜೊತೆ ಬೇರೆ ರುಚಿಯನ್ನು ಮಿಕ್ಸ್ ಮಾಡಿಕೊಳ್ಳುವುದಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಬೇರೆ ಏನನ್ನೋ ಸೇರಿಸಿದರೆ ಕಾಫಿ ರುಚಿಯೇ ಇರುತ್ತದೆ ಅಥವಾ ಕಾಫಿ ರುಚಿ ಕೆಟ್ಟುಹೋಗುತ್ತದೆ. ಈ ಎಲ್ಲಾ ಕಾರಣಗಳಿಂದ ಮಸಾಲೆ ಟೀ, ಏಲಕ್ಕಿ ಟೀ ಮಾಡಿದಂತೆ ಮಸಾಲೆ ಕಾಫಿ ಮಾಡುವುದಿಲ್ಲ.
ಒಟ್ಟಿನಲ್ಲಿ, ಟೀ ಪ್ರಿಯರಿಗೆ ವೆರೈಟಿ ಟೀ ಸಿಕ್ಕಂತೆ ಕಾಫಿ ಪ್ರಿಯರಿಗೆ ಬಹಳಷ್ಟು ವೆರೈಟಿ ಸಿಗೋದಿಲ್ಲ, ಕಾಫಿ, ಬ್ಲಾಕ್ ಕಾಫಿ ಹಾಗೂ ಕೋಲ್ಡ್ ಕಾಫಿ ಸಿಗುತ್ತದೆ. ಹೆಚ್ಚೆಂದರೆ, ಕಾಫಿ ಪುಡಿಯನ್ನೇ ಮಿಕ್ಸ್ ಮಾಡದ, ಆದರೆ ಹೆಸರು ಮಾತ್ರ 'ಕಾಫಿ' ಎನ್ನುವ 'ಶುಂಠಿ ಕಾಫಿ' ಸೇರಿದಂತೆ ಅದು ಇದು ಹೆಸರಿನ ಕಾಫಿ ಸಿಗಬಹುದಷ್ಟೇ. ಸಾರಾಂಶ ಇಷ್ಟೇ.. ಯಾವುದೇ ಆದರೂ ಚಹಾದಂತೆ ತನ್ನೊಳಗೆ ಸೇರಿಸಿಕೊಂಡರೆ ಏಕ 'ಅನೇಕ' ಆಗಬಹುದು. ಇಲ್ಲದಿದ್ದರೆ ಏಕವು 'ಏಕ'ವಾಗಿಯೇ ಉಳಿಯುತ್ತದೆ 'ಕಾಫಿ' ಇದ್ದಂತೆ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.