ಡೈಲಿ ಅದೆಷ್ಟು ಸಾರಿ ವೆಜ್ ತಿಂದ್ರೂ ಸರಿ, ಸಂಡೇ ಬಂತು ಅಂದ್ರೆ ಕೆಲವೊಬ್ಬರಿಗೆ ನಾನ್‌ವೆಜ್ (Nonveg) ಬೇಕೇ ಬೇಕು. ಇಲ್ಲಾಂದ್ರೆ ಮೂಡ್ ಹಾಳಾಗುತ್ತೆ. ಸಿಟ್ಟು ಬರುತ್ತೆ. ಆದ್ರೆ ತೆಲಂಗಾಣ (Telangana)ದಲ್ಲೊಬ್ಬ ಭೂಪ ವೀಕೆಂಡ್‌ಲ್ಲಿ ಹೆಂಡ್ತಿ ಮಟನ್ ಕರಿ (Mutton Curry) ಮಾಡಿಲ್ಲಾಂತ ಅದೇನ್ ಮಾಡಿದ್ದಾನೆ ನೋಡಿ.
ವೀಕೆಂಡ್ (Weekend) ಬಂತು ಅಂದ್ರೆ ಸಾಕು ಎಲ್ರೂ ರಜೆ ಅಂತ ಎಂಜಾಯ್ ಮಾಡ್ತಾರೆ. ಫ್ಯಾಮಿಲಿ ಜತೆ ಜಾಲಿಯಾಗಿ ಟ್ರಿಪ್‌ಗೆ ಹೋಗ್ತಾರೆ. ಹೊಟೇಲ್, ರೆಸ್ಟೋರೆಂಟ್‌ನಲ್ಲಿ ವೆರೈಟಿ ಫುಡ್ ತಿನ್ತಾರೆ. ನಾನ್ ವೆಜಿಟೇರಿಯನ್ಸ್‌ಗಂತೂ ವೀಕೆಂಡ್‌ನಲ್ಲಿ ಚಿಕನ್, ಮಟನ್, ಕಬಾಬ್ ಬಿರಿಯಾನಿ (Biriyani) ಸ್ಪೆಷಲ್ ಆಗಿ ರೆಡಿಯಾಗ್ಲೇಬೇಕು. ವಾರ ಪೂರ್ತಿ ತಿನ್ನೋಕಾಗದಿದ್ರೂ ಕೆಲವರಂತೂ ವೀಕೆಂಡ್‌ನಲ್ಲಾದ್ರೂ ಸ್ಪೆಷಲ್ ಆಗಿ ನಾನ್‌ವೆಜ್ ರೆಸಿಪಿಗಳನ್ನು ತಯಾರಿಸಿ ತಿನ್ತಾರೆ. ಶನಿವಾರ, ಭಾನುವಾರ ಬಂತು ಅಂದ್ರೆ ಗಂಡಂದಿರು ಬೆಳಗ್ಗೇ ಹೋಗಿ ಚಿಕನ್, ಮಟನ್ ತಂದು ಕೊಡ್ತಾರೆ. ಹೆಂಡ್ತಿಯಂದಿರು ಮಧ್ಯಾಹ್ನಕ್ಕೆ ಬಿಸಿ ಬಿಸಿಯಾಗಿ ಅಡುಗೆ ಮಾಡ್ತಾರೆ. ನಂತ್ರ ಎಲ್ರೂ ಸೇರಿ ಚೆನ್ನಾಗಿ ಬ್ಯಾಟಿಂಗ್ ಮಾಡ್ತಾರೆ. ಇದು ಒಂಥರಾ ಅನ್ ರಿಟರ್ನ್ ರೂಲ್ಸ್.
ಪ್ರತಿದಿನ ವೆಜ್ ತಿಂದ್ರೂ ಪರ್ವಾಗಿಲ್ಲ. ವೀಕೆಂಡ್‌ನಲ್ಲಿ ನಾನ್‌ವೆಜ್ (Nonveg) ಇಲ್ಲಾಂದ್ರೆ ಕೆಲವರಿಗೆ ಸಿಟ್ಟು ಬರುವುದೂ ಇದೆ. ಅದ್ಕೆ ಸಿಟ್ಟುಗೊಂಡು ಹೆಂಡ್ತಿ ಮೇಲೆ ರೇಗಾಡೋದು, ಊಟ ಮಾಡದೆ ಇರೋದು ಎಲ್ಲಾ ಮಾಡ್ತಾರೆ. ಆದ್ರೆ ತೆಲಂಗಾಣದಲ್ಲೊಬ್ಬ ಭೂಪ ಹೆಂಡ್ತಿ ವೀಕೆಂಡ್‌ನಲ್ಲಿ ಮಟನ್ ಕರಿ ಮಾಡಿಲ್ಲಾಂತ ಏನ್ ಮಾಡಿದ್ದಾನೆ ನೋಡಿ.
ಮಟನ್. ಮಾಂಸಾಹಾರಿಗಳ ಫೇವರಿಟ್ ಫುಡ್. ವಾರಾಂತ್ಯದಲ್ಲಿ ಮಟನ್ ಬಿರಿಯಾನಿ, ಮಟನ್ ಕರಿ, ಮಟನ್ ಕಡಾಯಿ ಮೊದಲಾದವುಗಳನ್ನು ಪ್ರಿಪೇರ್ ಮಾಡಿ ತಿನ್ತಾರೆ. ಆದ್ರೆ ತೆಲಂಗಾಣದಲ್ಲೊಬ್ಬ ಭೂಪ ವೀಕೆಂಡ್‌ನಲ್ಲಿ ಹೆಂಡ್ತಿ ಮಟನ್ ಕರಿ (Mutton Curry) ಮಾಡಿಲ್ಲಾಂತ ಪೊಲೀಸರಿಗೆ ಡಯಲ್ ಮಾಡಿದ್ದಾನೆ. ಅಷ್ಟಕ್ಕೂ ಆಗಿದ್ದೇನು ನಾವ್ ಹೇಳ್ತೀವಿ.
ಐದು ವರ್ಷ ಮಹಿಳೆ ಮಾಡಿದ್ದು ಒಂದೇ ಕೆಲ್ಸ, ಚೀಸ್ ಕದ್ದಿದ್ದು ! ಟನ್‌ಗಟ್ಟಲೆ ಚೀಸ್ ಏನ್ಮಾಡ್ತಿದ್ಲು ?
ಅದು ತೆಲಂಗಾಣ (Telangana)ದ ಒಂದು ಮಿಡಲ್ ಕ್ಲಾಸ್ ಫ್ಯಾಮಿಲಿ. ಅವತ್ತು ದುಡಿದು ಅವತ್ತು ತಿನ್ನೋ ಕುಟುಂಬ. ಹಾಗಂತ ವೀಕೆಂಡ್ ಗಮ್ಮತ್ತಿಗೆ ಮೋಸ ಮಾಡೋರು ಅಲ್ಲ.ವಾರಕ್ಕೊಮ್ಮೆ ನಾನ್ ವೆಜ್ ಆಗ್ಲೇಬೇಕು. ನವೀನ್ ಮನೆಯಲ್ಲೂ ಹಾಗೇ ಪ್ರತಿವಾರದ ಕೊನೆಯಲ್ಲಿ ಹೆಂಡ್ತಿ ಮಟನ್ ಕರಿ ಮಾಡ್ತಿದ್ಲು. ಆದ್ರೆ ಆ ವಾರ ಮಾಂಸ ತರೋಕೆ ದುಡ್ಡಿಲ್ಲವಾಗಿತ್ತಾ, ಹಣವಿಲ್ಲವಾಗಿತ್ತಾ ಒಟ್ನಲ್ಲಿ ಮಾಂಸ ತರಲ್ಲಿಲ್ಲ. ಮಟನ್ ಕರಿ ಮಾಡ್ಲಿಲ್ಲ. ಗಂಡ ಸುಮ್ನೆ ಇರೋ ಸಾರಲ್ಲಿ ಊಟ ಮಾಡೋದಲ್ವಾ. ಆದ್ರೆ ಮಟನ್ ಕರಿ ಮಾಡಿಲ್ಲಾಂತ ಸಿಟ್ಟಿಗೆದ್ದ ಗಂಡ ನವೀನ್ ಡೈರೆಕ್ಟ್ ಪೊಲೀಸ (Police)ರಿಗೆ ಕರೆ ಮಾಡಿದ್ದಾನೆ.
ತೆಲಂಗಾಣದ ನವೀನ್ ಎಂದು ಗುರುತಿಸಲಾದ ವ್ಯಕ್ತಿ ಯಾಕೆ ಮಟನ್ ಕರಿ ಮಾಡಿಲ್ಲವೆಂದು ಅವಳೊಂದಿಗೆ ಜಗಳವಾಡಿದ್ದಾನೆ. ಮಾತ್ರವಲ್ಲ ಮದ್ಯಪಾನ ಮಾಡಿದ್ದ ವ್ಯಕ್ತಿ ಕೋಪಗೊಂಡು ಫೋನ್ ಎತ್ತಿಕೊಂಡು 100 ಗೆ ಡಯಲ್ ಮಾಡಿದನು. ತನ್ನ ಆಯ್ಕೆಯ ಮಟನ್ ಕರಿ ಮಾಡದ ಹೆಂಡತಿಯ ವಿರುದ್ಧ ದೂರು ನೀಡಿದ್ದಾನೆ ಎಂದು ತೆಲಂಗಾಣ ಟುಡೇ ವರದಿ ಮಾಡಿದೆ. ಪೊಲೀಸ್ ನಿಯಂತ್ರಣ ಕೊಠಡಿ ನಿರ್ವಾಹಕರು ಕರೆ ಸ್ವೀಕರಿಸಿದರು ಆದರೆ ಆರಂಭದಲ್ಲಿ ಸಂಭಾಷಣೆಯನ್ನು ತಮಾಷೆ ಎಂದು ಪರಿಗಣಿಸಿದ್ದರು. ಆದರೆ ಅದು ಅಲ್ಲಿಗೆ ಮುಗಿಯಲಿಲ್ಲ. ನವೀನ್ ಕಂಟ್ರೋಲ್ ರೂಂಗೆ ಪದೇ ಪದೇ ಆರು ಬಾರಿ ಕರೆ ಮಾಡಿ ಇದೇ ವಿಷಯವನ್ನು ಹೇಳಿದ್ದಾನೆ. ನಂತರ ನಿರ್ವಾಹಕರು ಮೇಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ನೀವು ತಿನ್ನೋದು ದೇಹಕ್ಕೆ ಸಾಕಾಗ್ತಿಲ್ಲ ಅನ್ನೋ ಸೂಚನೆ ಇದು, ನೆಗ್ಲೆಕ್ಟ್ ಮಾಡ್ಬೇಡಿ
ಕಣಗಲ್ ಮಂಡಲದ ಚೆರ್ಲ ಗೌರಾರಂ ಗ್ರಾಮದಲ್ಲಿರುವ ನವೀನ್ ಮನೆಗೆ ಪೊಲೀಸರು ಹೋದಾಗ ಆತ ಪಾನಮತ್ತನಾಗಿದ್ದ. ಶನಿವಾರ ಬೆಳಗ್ಗೆ ಕೆಲ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡರು. ನವೀನ್‌ನನ್ನು ಬಂಧಿಸಿ, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 290 ಮತ್ತು 510 ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ, ಇದು ಕ್ರಮವಾಗಿ ಕುಡಿದ ಮತ್ತಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಉಪದ್ರವ ಮತ್ತು ದುರ್ನಡತೆಯ ಬ ತಿಳಿಸುತ್ತದೆ.
ಪೊಲೀಸರ ಪ್ರಕಾರ, ನವೀನ್ ಶುಕ್ರವಾರ ರಾತ್ರಿ ಮದ್ಯದ ಅಮಲಿನಲ್ಲಿ ಮನೆಗೆ ಮರಳಿದ್ದನು ಮತ್ತು ಮಟನ್ ಕರಿ ಬೇಯಿಸಲು ತನ್ನ ಹೆಂಡತಿಗೆ ಆದೇಶಿಸಿದನು. ಅವಳು ತನ್ನ ಆದೇಶವನ್ನು ನಿರಾಕರಿಸಿದ ನಂತರ ಅವನು ಕುಡಿದ ಮತ್ತಿನಲ್ಲಿ 100 ಅನ್ನು ಡಯಲ್ ಮಾಡಿ ಕಾಟ ಕೊಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆಯ ನಂತರ, ತೊಂದರೆ ಮತ್ತು ತುರ್ತು ಸಂದರ್ಭಗಳಲ್ಲಿ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ 100 ಇದ್ದು, ಇದನ್ನು ದುರುಪಯೋಗಪಡಿಸಿಕೊಳ್ಳದಂತೆ ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.