ತನ್ನ ಲಂಚ್‌ಬಾಕ್ಸ್‌ಗೆ ಬೇಕಾದ ಆಹಾರ ತಾನೇ ರೆಡಿ ಮಾಡೋ ಬಾಲಕ

Published : Oct 18, 2024, 04:03 PM IST
ತನ್ನ ಲಂಚ್‌ಬಾಕ್ಸ್‌ಗೆ ಬೇಕಾದ ಆಹಾರ ತಾನೇ ರೆಡಿ ಮಾಡೋ ಬಾಲಕ

ಸಾರಾಂಶ

ಪುಟ್ಟ ಬಾಲಕನೋರ್ವ ತನಗೆ ಶಾಲೆಗೆ ತೆಗೆದುಕೊಂಡು ಹೋಗಲು ಬೇಕಾದ ಆಹಾರವನ್ನು ತಾನೇ ತಯಾರಿಸಿಕೊಳ್ಳುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಲಕ್ಷಾಂತರ ಜನ ಈ ವೀಡಿಯೋವನ್ನು ವೀಕ್ಷಣೆ ಮಾಡಿದ್ದಾರೆ. 

ಈಗೀಗ ಮಕ್ಕಳು ಬಿಡಿ ಕೆಲ ದೊಡ್ಡವರಿಗೂ ಕೂಡ ತಮಗೆ ಬೇಕಾದ ಆಹಾರವನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದು ತಿಳಿದಿಲ್ಲ, ಹೀಗಾಗಿಯೇ ಹೋಟೇಲ್‌ಗಳ ಸಂಖ್ಯೆ ಹೆಚ್ಚಾಗಿದ್ದು, ಆಹಾರೋದ್ಯಮ ಭಾರಿ ದೊಡ್ಡ ಪ್ರಮಾಣದಲ್ಲಿ ಯಶಸ್ವಿಯಾಗುತ್ತಿದೆ. ಹೀಗಿರುವಾಗ ಪುಟ್ಟ ಬಾಲಕನೋರ್ವ ತನಗೆ ಶಾಲೆಗೆ ತೆಗೆದುಕೊಂಡು ಹೋಗಲು ಬೇಕಾದ ಆಹಾರವನ್ನು ತಾನೇ ತಯಾರಿಸಿಕೊಳ್ಳುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಲಕ್ಷಾಂತರ ಜನ ಈ ವೀಡಿಯೋವನ್ನು ವೀಕ್ಷಣೆ ಮಾಡಿದ್ದಾರೆ. 

ಲೈಫ್ ಆಫ್ ಟು ಬಾಯ್ಸ್ ಎಂಬ ಇನ್ಸ್ಟಗ್ರಾಮ್ ಪೇಜ್‌ನಿಂದ ಈ ವೀಡಿಯೋ ಅಪ್‌ಲೋಡ್ ಆಗಿದ್ದು, ವಿಡಿಯೋದಲ್ಲಿ ಕಾಣಿಸುವಂತೆ ನೇರಳೆ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುವ ಬಾಲಕನೋರ್ವ ಕೈಗೆ ವಾಚ್ ಕಟ್ಟಿ ಶಾಲೆಗೆ ಸಿದ್ಧವಾಗಿದ್ದು, ತನ್ನ ಟಿಫನ್ ಬಾಕ್ಸ್‌ಗೆ ಏನು ಬೇಕು ಅದೆಲ್ಲವನ್ನು ಆತನೇ ಮಾಡಿಕೊಳ್ಳುತ್ತಿದ್ದಾನೆ. ಈತನ ಅಡುಗೆ ಮನೆಯೂ ತುಂಬಾ ಅತ್ಯಾಧುನಿಕವಾಗಿದೆ. 

Health tips: ಮೊಟ್ಟೆಯೊಂದಿಗೆ ಈ 5 ಆಹಾರ ಪದಾರ್ಥ ಸೇವಿಸಲೇಬೇಡಿ

ಈಗ ಬೆಳಗ್ಗೆ ನಾಲ್ಕು ಗಂಟೆ ನನ್ನ ಲಂಚ್ ಬಾಕ್ಸ್‌ನ್ನು ಸಿದ್ಧಪಡಿಸೋಣ, ಎಂದು ವೀಡಿಯೋದ ಮೇಲೆ ಬರೆಯಲಾಗಿದೆ. ಪ್ರಿಡ್ಜ್‌ನಲ್ಲಿ ಇರಿಸಿದ್ದ ಕೆಲ ವಸ್ತುಗಳನ್ನು ಹೊರತೆಗೆಯುವ ಬಾಲಕ, ಒಂದು ಪಾತ್ರದಲ್ಲಿ ನೀರನ್ನು ಇಟ್ಟು ಅದಕ್ಕೆ ಮ್ಯಾಗಿಯನ್ನು ಬೇಯಲು ಹಾಕುತ್ತಾನೆ. ಬಳಿಕ ಮಾನಿಟರ್‌ನಲ್ಲಿ ಗ್ಯಾಸ್‌ನ ಪ್ರಮಾಣವನ್ನು ಅದಕ್ಕೆ ಬೇಕಾದಂತೆ ಸೆಟ್ ಮಾಡ್ತಾನೆ. ನಂತರ ಕಲಸಿ ಇಟ್ಟ ಗೋಧಿ ಹಿಟ್ಟಿನಿಂದ ಮೂರು ಚಪಾತಿಗಳನ್ನು ಮಾಡುತ್ತಾನೆ. ಅದರಲ್ಲಿ ಒಂದು ಹಸಿ ಚಪಾತಿ ಮೇಲೆ ಬೆಲ್ಲದ ಹುಡಿ ಹಾಗೂ ಇನ್ನೊಂದು ಚಪಾತಿ ಮೇಲೆ ಪಿನೆಟ್ ಬಟರ್‌ನ ಹಾಕಿ ಚಮಚದಿಂದ ಸವಾರಿ ಬಳಿಕ ಇನ್ನೊಂದು ಚಪಾತಿಯಿಂದ ಈ ಎರಡು ಚಪಾತಿಯನ್ನು ಸೀಲ್ ಮಾಡುತ್ತಾನೆ. ಈಗ ಈ ಸ್ಟಪ್ಡ್ ಚಪಾತಿಯನ್ನು ಕವಾಲಿಯ ಮೇಲೆ ಹಾಕಿ ಎಣ್ಣೆ ಹಾಕಿ ಬೇಯಿಸುತ್ತಾನೆ.

15 ನಿಮಿಷದಲ್ಲಿ ತಯಾರಾಗುವ ಸಾಂಬಾರ್ ಪೌಡರ್ 6 ತಿಂಗಳಿಟ್ಟರೂ ಏನೂ ಆಗಲ್ಲ

ಬಳಿಕ ಒಂದು ಸೇಬು ಹಣ್ಣನ್ನು ಕತ್ತರಿಸುತ್ತಾನೆ. ಈ ವೇಳೆ ಅತ್ತ ಚಪಾತಿ ಬೆಂದಿದ್ದು, ಅದನ್ನು ಕತ್ತರಿಸಿ 4 ತುಂಡು ಮಾಡುತ್ತಾನೆ. ಅತ್ತ ಮ್ಯಾಗಿಯೂ ನೀರು ಅರಿ ರೆಡಿ ಆಗಿದೆ. ಈಗ ಒಂದೊಂದಾಗಿ ತನ್ನ ಬಾಕ್ಸ್‌ಗೆ ತುಂಬಿಸುತ್ತಾನೆ. ಒಂದು ಜೋಳದ ತುಂಡು ಹಾಗೂ ಚಿಕನ್ ಕ್ರಂಚ್‌ಗಳನ್ನು ಬಾಕ್ಸ್‌ಗೆ ಸೇರಿಸಿದ್ದಾನೆ ಈ ಹುಡುಗ. ಯಾರಿಗೆ ಆದರೂ ಈ ಸಣ್ಣ ಹುಡುಗನ ವೀಡಿಯೋ ನೋಡಿ ಅಚ್ಚರಿ ಆಗದೇ ಇರದು ಅದೇ ರೀತಿ ಈ ಬಾಲಕನ ವೀಡಿಯೋಗೆ ಅಚ್ಚರಿಯ ಮಹಾಪೂರವೇ ಹರಿದು ಬಂದಿದೆ. ಲಕ್ಷಾಂತರ ಜನ ಈ ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ. 

ಈ ಬಾಲಕ ಅಪ್ಪ ಅಮ್ಮನನ್ನು ಕೆಲಸದ ಸ್ಥಳಕ್ಕೆ ಡ್ರಾಪ್ ಮಾಡಿ ಬಳಿಕ ತಾನು ಶಾಲೆಗೆ ಹೋಗುತ್ತಾನೆ ಎಂದು ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋವನ್ನು ಯಾರಿಗೆ ತೋರಿಸಲಿ, ಗಂಡನಿಗೂ ಅಥವಾ ಮಗನಿಗೋ ಎಂದು ಗೊಂದಲಕ್ಕೊಳಗಾಗಿದ್ದೇನೆ ಎಂದು ಒಬ್ಬರು ಮಹಿಳೆ ಪ್ರತಿಕ್ರಿಯಿಸಿದ್ದಾರೆ. ಅದಕ್ಕೊಬ್ಬರು ಇಬ್ಬರಿಗೂ ತೋರಿಸಿ ಎಂದರೆ ಮತ್ತೊಬ್ಬರು ಬೇಡ ಯಾರಿಗೂ ತೋರಿಸಬೇಡಿ, ತೋರಿಸಿದರೆ ಅದನ್ನು ಗಮನವಿಟ್ಟು ನೋಡಿ ನಮಗೂ ಹಾಗೆ ಮಾಡಿಕೊಡು ಎಂದು ನಿಮ್ಮನ್ನೇ ಕೇಳ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈತನ ಅಮ್ಮ ಮಗನನ್ನು ಜಂಟಲ್ ಮ್ಯಾನ್ ಆಗಿ ಬೆಳೆಸುತ್ತಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ನೆಟ್ಟಿಗರನ್ನು ಸಾಕಷ್ಟು ಆಕರ್ಷಿಸಿದೆ. 

ಈ ವೀಡಿಯೋವನ್ನು ನೀವು ನೋಡಿ


 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?