ವಿಲ ವಿಲ ಒದ್ದಾಡುತ್ತಿರೋ ಮೀನುಗಳಿಗೆ ಉಪ್ಪು, ಹುಳಿ ಖಾರ ಹಾಕೊಂಡು ಗಬಗಬನೇ ಹೇಗೆ ತಿಂತಾರೆ ನೋಡಿ

ರಸ್ತೆಬದಿಯಲ್ಲಿರೋ ಅಂಗಡಿಗಳಲ್ಲಿ ಚುರುಮುರಿಗೆ  ಉಪ್ಪು, ಹುಳಿ ಮತ್ತು ಖಾರ ಹಾಕಿ ಬೇಲ್‌ಪುರಿ ಮಾಡಿಕೊಡಲಾಗುತ್ತದೆ. ಆದ್ರೆ ಇಲ್ಲಿ ಜೀವಂತ ಮೀನುಗಳನ್ನು ಸಲಾಡ್ ರೂಪದಲ್ಲಿ ತಿಂತಾರೆ.


ಬ್ಯಾಂಕಾಕ್: ಸೋಶಿಯಲ್ ಮೀಡಿಯಾದಲ್ಲಿ ಆಹಾರದ ಕುರಿತ ವಿಡಿಯೋಗಳು ಸದಾ ಟ್ರೆಂಡಿಂಗ್‌ನಲ್ಲಿರುತ್ತವೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋದಾಗ ಆಹಾರ ಶೈಲಿ ಬದಲಾಗುತ್ತಿರುತ್ತದೆ. ಎಲ್ಲರಿಗೂ ನೆಚ್ಚಿನ ಮತ್ತು ಸೇರದ ಆಹಾರಗಳಿರುತ್ತವೆ. ಆಹಾರ ವಿಷಯದಲ್ಲಿ ಎಲ್ಲರ ಅಭಿರುಚಿ ಬೇರೆಯೇ ಆಗಿರುತ್ತದೆ. ಇನ್ನು ಆಹಾರದಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿಗಳು ಎಂಬ ಎರಡು ವಿಧಗಳಿವೆ. ಮಾಂಸಹಾರಿಗಳು ಸಸ್ಯಹಾರವನ್ನು ಸೇವನೆ ಮಾಡುತ್ತಾರೆ. ಭಾರತೀಯ ಆಹಾರ ಪದ್ಧತಿಯಲ್ಲಿ ಯಾವುದೇ ಅಡುಗೆಯಾದ್ರೂ ಅದನ್ನು ಚೆನ್ನಾಗಿ ಬೇಯಿಸಿಯೇ ಮಾಡಲಾಗುತ್ತದೆ. 

ನಮ್ಮ ನೆರೆಯ ರಾಷ್ಟ್ರವಾಗಿರುವ  ಚೀನಾದ ಆಹಾರ ತುಂಬಾ ವಿಭಿನ್ನವಾಗಿರುತ್ತದೆ. ಚೀನಿಯರು ಹಾವು, ಜಿರಳೆ, ಕಪ್ಪೆ ಸೇರಿದಂತೆ ಎಲ್ಲಾ ಜೀವಿಗಳನ್ನು ಆಹಾರ ರೂಪದಲ್ಲಿ ಸೇವನೆ ಮಾಡುತ್ತಾರೆ. ಇಂತಹ ವಿಚಿತ್ರ ಆಹಾರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಚೀನಾದಂತೆ ಥೈಲ್ಯಾಂಡ್ ದೇಶದಲ್ಲಿಯೂ ಇದೇ ರೀತಿಯ ಆಹಾರವನ್ನು ಬಳಕೆ ಮಾಡಲಾಗುತ್ತದೆ. ಭಾರತೀಯರು ಹೆಚ್ಚಾಗಿ ಥೈಲ್ಯಾಂಡ್‌ ದೇಶದ ಪ್ರವಾಸಕ್ಕೆ ತೆರಳುತ್ತಿರುತ್ತಾರೆ. ಪ್ರವಾಸ ಸಮಯದಲ್ಲಿ ಪ್ರವಾಸಿಗರು ಅಲ್ಲಿಯ ವಿಡಿಯೋಗಳನ್ನು ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಪ್ರವಾಸಿಗರೊಬ್ಬರು ಹಂಚಿಕೊಂಡಿರುವ ಜೀವಂತ ಮೀನಿನ ಆಹಾರದ ವಿಡಿಯೋ ವೈರಲ್ ಆಗ್ತಿದೆ. 

Latest Videos

ವಿಶ್ವದ 10 ವಿಚಿತ್ರ ಆಹಾರಗಳು

ವಿಲ ವಿಲ  ಒದ್ದಾಡುತ್ತಿರೋ ಮೀನುಗಳಿಗೆ ಉಪ್ಪು-ಹುಳಿ-ಖಾರ
ವೆಬ್‌ಸೈಟ್‌ ಅಡಿಟಿ ಸೆಂಟ್ರಲ್ ಪ್ರಕಾರ, ವಿಲ ವಿಲ  ಒದ್ದಾಡುತ್ತಿರೋ ಮೀನುಗಳಿಗೆ ಉಪ್ಪು-ಹುಳಿ-ಖಾರ ಹಾಕಿಕೊಂಡು ತಿನ್ನೋದು ಇಲ್ಲಿಯ ಫೇಮಸ್ ಡಿಶ್. ಇದನ್ನು ಡಾನ್ಸಿಂಗ್ ಸೀಗಡಿ ಎಂದು ಕರೆಯಲಾಗುತ್ತದೆ. ಇದು ಮೀನು ಆಹಾರವಾಗಿದ್ದು, ಆದ್ರೆ ಇಲ್ಲಿ ಮೀನನ್ನು ಬೇಯಿಸದೇ ಜೀವಂತವಿರೋವಾಗಲೇ ಹಸಿಯಾಗಿ ತಿನ್ನಲಾಗುತ್ತದೆ. ರೆಸ್ಟೋರೆಂಟ್‌ಗಳಲ್ಲಿ ಈ ಮೀನುಗಳನ್ನು ಸಾಕಲಾಗಿರುತ್ತದೆ. 

ಗ್ರಾಹಕರು ಕೇಳಿದಾಗ ನೀರಿನಿಂದ ತೆಗೆದು ಪಾತ್ರೆಯಲ್ಲಿ ಹಾಕಿ, ಅದಕ್ಕೆ ಉಪ್ಪು, ಹುಳಿ, ಖಾರ ಮತ್ತು ಮಸಾಲೆಯನ್ನು ಸೇರಿಸಿ ಚೆನ್ನಾಗಿ ಕಲಕಿ ಬಾಕ್ಸ್‌ನಲ್ಲಿ ಹಾಕಿ ಕೊಡಲಾಗುತ್ತದೆ. ನಮ್ಮೂರಿನಲ್ಲಿ ಬೇಲ್‌ಪುರಿಯನ್ನು ಹೇಗೆ ಫಟಾಫಟ್ ಅಂತ ಮಾಡಿಕೊಡಲಾಗುತ್ತೋ ಅದೇ ರೀತಿ ಇಲ್ಲಿಯ ಡ್ಯಾನ್ಸಿಂಗ್ ಫಿಶ್ ರೆಡಿಯಾಗುತ್ತದೆ. ಈ ಹಿಂದೆ ಕನ್ನಡದ ಟ್ರಾವೆಲ್ ವ್ಲಾಗರ್ ಗಳಾದ ಡಾಕ್ಟರ್ ಬ್ರೋ, ಫ್ಲೈಯಿಂಗ್ ಪಾಸ್‌ಪೋರ್ಟ್ ಟೀಂ ಇಂತಹ ವಿಡಿಯೋಗಳನ್ನು ಹಂಚಿಕೊಂಡಿದ್ದರು. 

ವಿದೇಶದಲ್ಲಿ 58 ಸಾವಿರ ರೂಪಾಯಿ ದಂಡ ಪಾವತಿಸಿ ಕ್ಷಮೆ ಕೇಳಿದ ಫ್ಲೈಯಿಂಗ್ ಪಾಸ್‌ಪೋರ್ಟ್ ದಂಪತಿ

click me!