ಮ್ಯಾಂಗೋ ಪ್ರಿಯರಿಗೆ ಸಿಹಿ ಸುದ್ದಿ..ಅಂಚೆ ಮೂಲಕ ಮನೆಬಾಗಿಲಿಗೆ ರಸಭರಿತ ಮಾವು

By Kannadaprabha News  |  First Published Apr 6, 2023, 8:50 AM IST

ಮ್ಯಾಂಗೋ ಪ್ರಿಯರಿಗೊಂದು ಸಿಹಿ ಸುದ್ದಿ. ಉತ್ತಮ ಗುಣಮಟ್ಟದ ಹಾಗೂ ಕೈಗೆಟಕುವ ದರದಲ್ಲಿ ರಸಭರಿತ ಮಾವಿನ ಹಣ್ಣುಗಳನ್ನು ಬೆಳೆಗಾರರಿಂದ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಪೂರೈಸುವ ವ್ಯವಸ್ಥೆಗೆ ಅಂಚೆ ಇಲಾಖೆ ಚಾಲನೆ ನೀಡಿದೆ.


ಬೆಂಗಳೂರು: ಮಾವು ಯಾರಿಗೆ ತಾನೇ ಇಷ್ಟಇಲ್ಲ ಹೇಳಿ. ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಆದ್ರೆ ಮಾರುಕಟ್ಟೆಗೆ ಹೋಗಿ ಗುಣಮಟ್ಟದ ಮಾವಿನಹಣ್ಣನ್ನು ಹುಡುಕೋದು ಸ್ಪಲ್ಪ ಕಷ್ಟ.ಹೀಗಾಗಿ ಹಲವು ಬಾರಿ ಗುಣಮಟ್ಟದ, ರಸಭರಿತ ಮಾವಿನ ಹಣ್ಣಿಗಾಗಿ ಎಲ್ಲೆಲ್ಲೂ ಹುಡುಕಾಟ ನಡೆಸದೇ ಮನೆ ಬಾಗಿಲಿಗೆ ಹಣ್ಣು ಬರುವಂತಿದ್ದರೆ ಎಂದು ಅನಿಸದೇ ಇರಲ್ಲ. ಹೌದು, ಅಂತಹದ್ದೊಂದು ವ್ಯವಸ್ಥೆಗೆ ಭಾರತೀಯ ಅಂಚೆ ಇಲಾಖೆ ಮುಂದಾಗಿದ್ದು ಮಾವಿನ ಹಣ್ಣುಗಳನ್ನು ಬೆಳೆಗಾರರಿಂದ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಪೂರೈಸುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಿದೆ.

ರಾಜಧಾನಿ ಬೆಂಗಳೂರಿನ ಯಾವುದೇ ಭಾಗದ ಗ್ರಾಹಕರು (Customers) ಆನ್‌ಲೈನ್‌ ಮೂಲಕ ಮಾವು ಆರ್ಡರ್‌ ಮಾಡಿದರೆ ಕೇವಲ 24 ಗಂಟೆಗಳಲ್ಲಿ ಪೂರೈಕೆಯಾಗಲಿದೆ. ಅದಕ್ಕಾಗಿ ಕೋಲಾರ ರೈತರು (Farmers) ‘ನಮ್ಮ ತೋಟ’ ವೇದಿಕೆ ರಚಿಸಿಕೊಂಡಿದ್ದು ಗ್ರಾಹಕರ ಮನೆ ಬಾಗಿಲಿಗೆ ಹಣ್ಣು (Fruit) ಪೂರೈಸಲು ಅಂಚೆ ಇಲಾಖೆ ಸಹಯೋಗ ಪಡೆದುಕೊಂಡಿದ್ದಾರೆ. ಆರ್ಡರ್‌ ಬುಕ್‌ ಮಾಡಲು ಕನಿಷ್ಠ ಒಂದು ಬಾಕ್ಸ್‌ ಖರೀದಿಸಬೇಕು. ಆ ಬಾಕ್ಸ್‌ನಲ್ಲಿ ಮೂರು ಕೆ.ಜಿ. ಮಾವು ಇರಲಿದೆ. ಆಲ್ಫಾನ್ಸ್‌, ರಸಪುರಿ, ಕೇಸರ್‌, ಬಾದಾಮಿ ಸೇರಿದಂತೆ ವಿವಿಧ ತಳಿಯ ತಾಜಾ ಮಾವು ಲಭ್ಯವಾಗಲಿದೆ. ರೈತರು ಬೆಳೆದ ಮಾವನ್ನು ಯಾವುದೇ ಮಧ್ಯವರ್ತಿಗಳು ಇಲ್ಲದೇ ನೇರವಾಗಿ ಗ್ರಾಹಕರಿಗೆ ಅಂಚೆ ಇಲಾಖೆ (Postal service) ಮೂಲಕ ಮಾವು ತಲುಪಲಿದೆ.

Latest Videos

undefined

Health Tips: ಮಾವಿನ ಹಣ್ಣಿನ ಸಿಪ್ಪೆಯೂ ಬೇಕು ದೇಹಕ್ಕೆ, ವಿಷ ಇರಬಾರದು ಅಷ್ಟೆ!

ತೋಟಗಳಲ್ಲಿ ಯಾವುದೇ ರಾಸಾಯನಿಕ (Chemical) ಬಳಕೆ ಮಾಡದೇ ನೈಸರ್ಗಿಕವಾಗಿ (Natural) ಹಣ್ಣು ಮಾಡಿರುವ ಮಾವುಗಳನ್ನು ಗ್ರಾಹಕರ ಮನೆಗಳಿಗೆ ತಲುಪಿಸಲಾಗುವುದು. ಈ ಹಿಂದೆಯೂ ಕೋವಿಡ್‌ ಸಂದರ್ಭದಲ್ಲಿ ಅಂಚೆ ಇಲಾಖೆ ಮೂಲಕ ಆನ್‌ಲೈನ್‌ ಮೂಲಕ ಸುಮಾರು 100 ಕ್ವಿಂಟಾಲ್‌ನಷ್ಟು ಹಣ್ಣುಗಳನ್ನು ಮಾರಾಟ ಮಾಡಿದ್ದೆವು. ಈ ಬಾರಿ ಅದಕ್ಕಿಂತ ಹೆಚ್ಚು ಮಾರಾಟ ಮಾಡುವ ಗುರಿ ಹೊಂದಲಾಗಿದೆ. ಕರ್ನಾಟಕ ಮಾವು ಮಾರಾಟ ಮತ್ತು ಅಭಿವೃದ್ಧಿ ನಿಗಮದ ಸಹಕಾರವನ್ನು ಕೂಡ ಪಡೆದುಕೊಂಡಿದ್ದೇವೆ ಎಂದು ಮಾವು ಬೆಳೆಗಾರ ರೈತರು ತಿಳಿಸಿದ್ದಾರೆ.

ಆನ್‌ಲೈನ್‌ ಆರ್ಡರ್‌ಗಾಗಿ ವೆಬ್‌ಸೈಟ್‌: https://www.kolarmangoes.com ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ಮೊಬೈಲ್‌: 9886116046 ಸಂಪರ್ಕಿಸಲು ಕೋರಲಾಗಿದೆ.

ಮಾವಿನ ಹಣ್ಣು ಮಾತ್ರವಲ್ಲ, ಗೊರಟೆಯೂ ಆರೋಗ್ಯಕ್ಕೆ ಬೆಸ್ಟ್‌

ರಾಜಸ್ಥಾನದಲ್ಲಿ ವಿಶ್ವದ ಅತ್ಯಂತ ದುಬಾರಿ ಮಾವು: ದೇಶದಲ್ಲಿ 1 ಕೆಜಿ ಹಣ್ಣಿಗೆ 21 ಸಾವಿರ ರೂಪಾಯಿ!
ರಾಜಸ್ಥಾನದಲ್ಲಿ ಬೆಳೆಯುವ ಮಾವು ಎಷ್ಟು ವಿಶೇಷ ಎಂದರೆ ಎರಡು ಕಿಲೋಗೆ ಮನೆ ಖರೀದಿಸಬಹುದು. ಕೋಟಾದಲ್ಲಿ ವಾಸವಾಗಿರುವ ರೈತ ಕಿಶನ್ ಸುಮನ್ ಅವರ ಹೊಲಗಳಲ್ಲಿ ಈ ವಿಶೇಷ ಮಾವು ಬೆಳೆಯಲಾಗುತ್ತಿದೆ. ಈ ಮಾವಿನ ಹೆಸರು ಮಿಯಾಜಾಕಿ ಮಾವು. ಇದು ವಿಶ್ವದ ಅತ್ಯಂತ ದುಬಾರಿ ಮಾವು ಎಂದು ಪರಿಗಣಿಸಲಾಗಿದೆ. ಕೋಟಾದಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ತನ್ನ ಗ್ರಾಮದಲ್ಲಿ ಕೃಷಿ ಮಾಡುತ್ತಿರುವ ಈ ರೈತ, ತನ್ನ ಕೃಷಿಯಿಂದ ರಾಜ್ಯದಲ್ಲಿ ಅನೇಕ ಬಹುಮಾನಗಳನ್ನು ಗೆದ್ದಿದ್ದಾನೆ. ಈ ರೈತ ಕೇವಲ ಎರಡು ವರ್ಷಗಳಲ್ಲಿ ಫಲ ನೀಡಲು ಆರಂಭಿಸುವ ಇಂತಹ ತಳಿಯನ್ನು ಸಿದ್ಧಪಡಿಸಿದ್ದಾನೆ. 

ಇದನ್ನು ತಳಿಯ ಮಾವನ್ನು ಸುಮಾರು ಮೂವತ್ತರಿಂದ ನಲವತ್ತು ವರ್ಷಗಳ ಹಿಂದೆ ಜಪಾನ್‌ನ ಮಿಯಾಜಾಕಿ ನಗರದಲ್ಲಿ ಕಂಡುಹಿಡಿಯಲಾಯಿತು, ಇದರಿಂದಾಗಿ ಇದಕ್ಕೆ ಮಿಯಾಜಾಕಿ ಎಂಬ ಹೆಸರು ಬಂದಿದೆ. ಆದರೆ ಅದನ್ನು ವಿಶೇಷ ಋತುವಿನಲ್ಲಿ ಮಾತ್ರವೇ ಈ ಮಾವು ಬೆಳೆಯುತ್ತದೆ. ಬಿಸಿಯಾದ ವಾತಾವರಣದಲ್ಲಿ ಈ ಮಾವು ಬೆಳೆಯೋದಿಲ್ಲ.

click me!