ಬೆಂಗಳೂರಿಗರಲ್ಲಿ ಹೆಚ್ಚುತ್ತಿದೆ ಪ್ರೋಟೀನ್ ಕ್ರೇಜ್‌! ಕೇವಲ 'ಪ್ರೋಟೀನ್ ಬಾರ್'ಗಾಗಿಯೇ ₹2 ಲಕ್ಷ ಖರ್ಚು ಮಾಡಿದ ಗ್ರಾಹಕ!

Published : May 25, 2026, 04:42 PM IST
Protein

ಸಾರಾಂಶ

ಇನ್‌ಸ್ಟಾಮಾರ್ಟ್‌ ವರದಿ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ಪ್ರೋಟೀನ್ ಉತ್ಪನ್ನಗಳ ಬೇಡಿಕೆ ಶೇ. 150ರಷ್ಟು ಹೆಚ್ಚಾಗಿದೆ. ಬೆಂಗಳೂರು ಮುಂಚೂಣಿಯಲ್ಲಿದ್ದರೂ, ಟಯರ್-2 ನಗರಗಳಲ್ಲಿ ಈ ಬೆಳವಣಿಗೆ ಇನ್ನೂ ವೇಗವಾಗಿದ್ದು, ಗ್ರಾಹಕರು ಲಕ್ಷಾಂತರ ರೂಪಾಯಿಗಳನ್ನು ಪ್ರೋಟೀನ್‌ಗಾಗಿ ಖರ್ಚು ಮಾಡುತ್ತಿದ್ದಾರೆ.

ಬೆಂಗಳೂರು: ಭಾರತೀಯರು ಈಗ ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಇದಕ್ಕೆ ಸ್ಪಷ್ಟ ನಿದರ್ಶನವೆಂಬಂತೆ 'ಇನ್‌ಸ್ಟಾಮಾರ್ಟ್‌ʼ ಪ್ಲಾಟ್‌ಫಾರ್ಮ್‌ನಲ್ಲಿ ಕಳೆದ ಎರಡು ವರ್ಷಗಳಲ್ಲಿ 'ಪ್ರೋಟೀನ್' ಆಧಾರಿತ ಉತ್ಪನ್ನಗಳ ಆರ್ಡರ್‌ಗಳಲ್ಲಿ ಶೇ. 150ರಷ್ಟು ಭಾರಿ ಏರಿಕೆ ದಾಖಲಾಗಿದೆ. ಆನ್‌ಲೈನ್ ಮೂಲಕ ದಿನಸಿಗಳನ್ನು ತ್ವರಿತವಾಗಿ ತಲುಪಿಸುವ ಪ್ರಸಿದ್ಧ ಸಂಸ್ಥೆ 'ಇನ್‌ಸ್ಟಾಮಾರ್ಟ್' ದೇಶದ ಜನರಲ್ಲಿ 'ಪ್ರೋಟೀನ್' ಬಗ್ಗೆ ಹೆಚ್ಚಿನ ಒಲವು ಬೆಳೆಯುತ್ತಿರುವುದನ್ನು ಗುರುತಿಸಿದೆ.

ಬೆಂಗಳೂರು ಮುಂದು, ಟಯರ್-2 ನಗರಗಳಲ್ಲೂ ಹೆಚ್ಚಿದ ಬೇಡಿಕೆ

ಪ್ರೋಟೀನ್ ಉತ್ಪನ್ನಗಳ ಬೇಡಿಕೆಯಲ್ಲಿ ಭಾರತದ ಸಿಲಿಕಾನ್ ಸಿಟಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಆದರೆ ಅಚ್ಚರಿಯ ವಿಚಾರವೆಂದರೆ, ಕೇವಲ ಮೆಟ್ರೋ ನಗರಗಳಿಗಷ್ಟೇ ಸೀಮಿತವಾಗಿದ್ದ ಈ ಟ್ರೆಂಡ್, ಇದೀಗ ನಾಗ್ಪುರ, ಜೈಪುರ, ಚಂಡೀಗಢ, ಭುವನೇಶ್ವರ, ಗುವಾಹಟಿ ಮತ್ತು ವೈಜಾಗ್‌ನಂತಹ ಎರಡನೇ ಸ್ಥರದ ನಗರಗಳಿಗೂ ವ್ಯಾಪಿಸಿದೆ. ಮೆಟ್ರೋ ನಗರಗಳಿಗಿಂತ ಟಿಯರ್-II ನಗರಗಳಲ್ಲಿ ಪ್ರೋಟೀನ್ ಆರ್ಡರ್‌ಗಳು ಶೇ. 200 ರಷ್ಟು ಏರಿಕೆ ಕಂಡಿದ್ದು, ವೇಗವಾಗಿ ಬೆಳವಣಿಗೆ ಕಾಣುತ್ತಿವೆ.

ಸಾಂಪ್ರದಾಯಿಕ ಪ್ರೊಟೀನ್‌ ಉತ್ಪನ್ನಗಳಿಗೂ ಭಾರೀ ಬೇಡಿಕೆ

ಇಂದಿಗೂ ಭಾರತೀಯರ ನೆಚ್ಚಿನ ಪ್ರೋಟೀನ್ ಆಹಾರಗಳ ಪಟ್ಟಿಯಲ್ಲಿ ಮೊಟ್ಟೆ ಮತ್ತು ಪನ್ನೀರ್ ಮೊದಲ ಸ್ಥಾನದಲ್ಲಿವೆ. ಇವೆರಡರ ಕಾಂಬಿನೇಷನ್ ಅನ್ನು ಅತಿ ಹೆಚ್ಚು ಆರ್ಡರ್ ಮಾಡಲಾಗಿದೆ. ಇದರ ನಂತರದ ಸ್ಥಾನದಲ್ಲಿ ಕೋಳಿ ಮಾಂಸ, ಕಡಲೆ, ಗ್ರೀಕ್ ಯೋಗರ್ಟ್ ಮತ್ತು ಮಖಾನಾ ಸೇರಿವೆ. ಇದಲ್ಲದೆ ಪ್ರೋಟೀನ್ ಮೊಸರು ಶೇ. 280ರಷ್ಟು ಹಾಗೂ ಪ್ರೋಟೀನ್ ಸ್ನ್ಯಾಕ್ಸ್ (ಚಿಪ್ಸ್) ವಿಭಾಗವು ಶೇ. 300ರಷ್ಟು ಬೆಳವಣಿಗೆ ಸಾಧಿಸಿದ್ದು, ಅತಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿರುವ ವಿಭಾಗಗಳಾಗಿವೆ. ಇದರ ಜೊತೆಗೆ ಸೋಯಾ ಚಂಕ್ಸ್ ಮತ್ತು ಸತ್ತು ಪುಡಿಯಂತಹ ಸಾಂಪ್ರದಾಯಿಕ ಪ್ರೋಟೀನ್ ಆಹಾರಗಳ ಬೇಡಿಕೆ ಶೇ. 100ಕ್ಕಿಂತ ಹೆಚ್ಚಾಗಿದೆ. ಇನ್ನು ಆ್ಯಪ್‌ನಲ್ಲಿ 'ಪೀನಟ್ ಬಟರ್' ಅನ್ನು ಗ್ರಾಹಕರು ಅತಿ ಹೆಚ್ಚು ಬಾರಿ ಸರ್ಚ್ ಮಾಡಿದ್ದಾರೆ.

ವಿಚಿತ್ರ ಗ್ರಾಹಕರು, ಪ್ರೊಟೀನ್‌ಗಾಗಿಯೇ ಲಕ್ಷ ಲಕ್ಷ ಖರ್ಚು

ಇನ್‌ಸ್ಟಾಮಾರ್ಟ್‌ನಲ್ಲಿ ಪ್ರೋಟೀನ್‌ಗಾಗಿ ಗ್ರಾಹಕರು ಖರ್ಚು ಮಾಡುತ್ತಿರುವ ಹಣವನ್ನು ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಚೆನ್ನೈ ಮೂಲದ ಬಳಕೆದಾರರೊಬ್ಬರು ಕಡಲೆಕಾಯಿ ಆಧಾರಿತ ಪ್ರೋಟೀನ್ ಉತ್ಪನ್ನಗಳಿಗಾಗಿ ಒಂದೇ ಆರ್ಡರ್‌ನಲ್ಲಿ ಬರೋಬ್ಬರಿ 2,71,385 ರೂ. ಖರ್ಚು ಮಾಡಿದ್ದಾರೆ! ಇನ್ನು ಬೆಂಗಳೂರಿನ ವ್ಯಕ್ತಿಯೊಬ್ಬರು ಕೇವಲ ಪ್ರೋಟೀನ್ ಬಾರ್‌ಗಳನ್ನು ಖರೀದಿಸಲು 2 ಲಕ್ಷ ರೂ.ಗೂ ಅಧಿಕ ಹಣ ವ್ಯಯಿಸಿದ್ದಾರೆ. ಇದಲ್ಲದೆ, ಮುಂಬೈ, ದೆಹಲಿ ಮತ್ತು ಸೂರತ್‌ನಲ್ಲಿ ಗ್ರಾಹಕರು ವೇ ಪ್ರೋಟೀನ್‌ಗಳಿಗಾಗಿ ಒಮ್ಮೆಲೇ 20 ಸಾವಿರ ರೂ. ಗಿಂತ ಹೆಚ್ಚು ಹಣ ಖರ್ಚು ಮಾಡಿದ್ದಾರೆ.

ಜಿಮ್‌ ಸಮಯದಲ್ಲೇ ಅತಿ ಹೆಚ್ಚಿನ ಆರ್ಡರ್

ವರದಿಯ ಪ್ರಕಾರ, ಬೆಳಿಗ್ಗೆ 7:00 ರಿಂದ 11:00 ಗಂಟೆಯವರೆಗೆ ಅತಿ ಹೆಚ್ಚು ಪ್ರೋಟೀನ್ ಉತ್ಪನ್ನಗಳಿಗೆ ಜನರು ಆರ್ಡರ್‌ ಮಾಡುತ್ತಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ ಇದು ಹೆಚ್ಚಿನ ಜನರು ಜಿಮ್‌ನಲ್ಲಿ ಕಳೆಯುವ ಸಮಯವಾಗಿದೆ. ಇದಲ್ಲದೆ ಇತ್ತೀಚೆಗೆ ಮಧ್ಯಾಹ್ನ, ಸಂಜೆ ಹಾಗೂ ಮಧ್ಯರಾತ್ರಿ ವೇಳೆ ಅಂದ್ರೆ 12 ರಿಂದ ಬೆಳಗ್ಗೆ 4 ಗಂಟೆಯ ಅವಧಿಯಲ್ಲಿ ಆರ್ಡರ್ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಇನ್‌ಸ್ಟಾಮಾರ್ಟ್‌ನ 'ಚೀಫ್ ಬಿಸಿನೆಸ್ ಆಫೀಸರ್' ಹರಿ ಕುಮಾರ್ ಜಿ, "ಭಾರತೀಯರ ದಿನಸಿ ಖರೀದಿಸುವ ವಿಧಾನ ಈಗ ಬದಲಾಗಿದೆ. ಕೇವಲ 'ಅಗತ್ಯ' ವಸ್ತುಗಳ ಬದಲಾಗಿ 'ಆರೋಗ್ಯಕರ' ವಸ್ತುಗಳಿಗೆ ಜನರು ಆದ್ಯತೆ ನೀಡುತ್ತಿದ್ದಾರೆ. ಈ ಬದಲಾವಣೆಗೆ ಬೆಂಬಲ ನೀಡಲು ಉದ್ದೇಶಿಸಿದ್ದು ಮೆಟ್ರೋ ನಗರಗಳಿಂದ ಹಿಡಿದು ಸಣ್ಣ ಪಟ್ಟಣಗಳವರೆಗೂ, ಪ್ರತಿಯೊಬ್ಬರಿಗೂ ಗುಣಮಟ್ಟದ ಪ್ರೋಟೀನ್ ಆಹಾರವನ್ನು ಒದಗಿಸಲಿದ್ದೇವೆ," ಎಂದು ತಿಳಿಸಿದರು.

ಆಗಸ್ಟ್ 2020ರಲ್ಲಿ ಆರಂಭವಾದ 'ಇನ್‌ಸ್ಟಾಮಾರ್ಟ್', ಭಾರತದ ಪ್ರಮುಖ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿದ್ದು, ದೇಶದ 131ಕ್ಕೂ ಹೆಚ್ಚು ನಗರಗಳಲ್ಲಿ ತನ್ನ ಸೇವೆ ಒದಗಿಸುತ್ತಿದೆ. ದಿನಸಿ ಹಾಗೂ ದೈನಂದಿನ ಅಗತ್ಯ ವಸ್ತುಗಳನ್ನು ಅತ್ಯಂತ ವೇಗವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಕಂಪನಿ ಮುಂಚೂಣಿಯಲ್ಲಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯಾವ ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಸಿಗದ ಫುಡ್, ಉತ್ತರ ಕರ್ನಾಟಕದ ಮನೆ ಮನೆಯಲ್ಲಿಯೂ ಸಿಗುತ್ತೆ!
ಜಾಸ್ತಿ ಟೈಮ್‌ ಬೇಡ, ತಕ್ಷಣ ಮಾಡಬಹುದಾದ, ಹಲಸಿನ ಹಣ್ಣಿನ ದೋಸೆ! ತುಪ್ಪ ಹಚ್ಚಿ ತಿಂದ್ರೆ...ಅಬ್ಬಬ್ಬಾ..!