ಫುಡ್ ಡೆಲಿವರಿ ಮಾಡೋಕೆ ಸಾಮಾನ್ಯವಾಗಿ ಡೆಲಿವರಿ ಬಾಯ್ಸ್ ಅರ್ಧ ಗಂಟೆ, ಒಂದು ಗಂಟೆ ಪ್ರಯಾಣಿಸ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ ಫುಡ್ ಡೆಲಿವರಿ ಮಾಡೋಕೆ ನಾಲ್ಕು ಖಂಡಗಳನ್ನು ದಾಟಿ ಹೋಗಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರವಾದಂತೆ ಮನುಷ್ಯ ಹೆಚ್ಚು ಆಲಸೀಯಾಗುತ್ತಾ ಹೋಗುತ್ತಿದ್ದಾನೆ. ಹೀಗಾಗಿಯೇ ಮನೆ ಮುಂದೆ ದಿನಸಿ, ಆಹಾ (Food), ಮೆಡಿಸಿನ್ ಎಲ್ಲವೂ ಬಂದು ತಲುಪುತ್ತಿದೆ. ಅಡುಗೆ (Cooking) ಮಾಡಲು ಸೋಮಾರಿತನ ಮಾಡುವವರು ಸುಲಭವಾಗಿ ಫುಡ್ ಆರ್ಡರ್ ಮಾಡಿಬಿಟ್ಟು ನಿರಾಳವಾಗಿ ಬಿಡುತ್ತಾರೆ. ಕೆಲವೇ ನಿಮಿಷಗಳಲ್ಲಿ ಅಥವಾ ಕೆಲವೊಮ್ಮೆ ಕೆಲ ಗಂಟೆಗಳಲ್ಲಿ ಆಹಾರ ಮನೆ ಮುಂದೆ ತಲುಪಿ ಬಿಡುತ್ತದೆ. ಕೆಲವೊಮ್ಮೆ ಇದು ಅರ್ಧ ಗಂಟೆ, ಒಂದು ಗಂಟೆಯ ಸಮಯವನ್ನೂ ತೆಗೆದುಕೊಳ್ಳುತ್ತದೆ. ಆಹಾರ ಬೇಗ ಮನೆಗೆ ತಲುಪಬೇಕು ಎಂದು ಬಯಸುವವರು ಯಾವಾಗಲೂ ಮನೆಯ ಸಮೀಪದ ರೆಸ್ಟೋರೆಂಟ್‌ನಲ್ಲಿ ಫುಡ್ ಆರ್ಡರ್ ಮಾಡಬಹುದಾಗಿದೆ.
4 ಖಂಡಗಳನ್ನು ದಾಟಿ ಆಹಾರ ವಿತರಿಸಿದ ಮಹಿಳೆ
ಫುಡ್ ಆರ್ಡರ್ ಮಾಡೋಕೆ ಒಂದು ಸಿಟಿಯಲ್ಲಿ ಏರಿಯಾಗಳಿಗೆ ಪ್ರಯಾಣಿಸೋದು ಸಹಜ. ಆದ್ರೆ ಇಲ್ಲೊಂದೆಡೆ ಮಹಿಳೆ (Woman)ಯೊಬ್ಬರು ಫುಡ್ ಡೆಲಿವರಿ ಮಾಡೋಕೆ ನಾಲ್ಕು ಖಂಡಗಳನ್ನು ದಾಟಿ ಹೋಗಿದ್ದಾರೆ. ಈ ಫುಡ್ ಡೆಲಿವರಿ ವಿಶ್ವದ ಲಾಂಗೆಸ್ಟ್ ಫುಡ್ ಡೆಲಿವರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾನಸಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಅವರು ಆಹಾರವನ್ನು ತಲುಪಿಸಲು ದಕ್ಷಿಣದ ಖಂಡಕ್ಕೆ ಪ್ರಯಾಣಿಸುವ (Travel) ವೀಡಿಯೋ ಇದಾಗಿದೆ. ಸಿಂಗಾಪುರದಿಂದ ಅಂಟಾರ್ಟಿಕಾ ಎಂದರೆ 5-10 ಕಿಮೀಗಳಷ್ಟು ದೂರವಲ್ಲ, ಇವರು ಸಾಗಿದ್ದು 30,000 ಸಾವಿರ ಕಿ.ಮೀ, ದಾಟಿದ್ದು ಒಂದೆರಡಲ್ಲ, 4 ಖಂಡಗಳನ್ನು.
ಛೀ..Chicken Wings ಆರ್ಡರ್ ಮಾಡಿದ್ರೆ ಇದನ್ನೆಲ್ಲಾ ತಂದ್ ಕೊಡೋದಾ !
ಮಾನಸಾ, ಸಿಂಗಾಪುರದಿಂದ ವಿಮಾನವನ್ನು ಹತ್ತಿ ಜರ್ಮನಿಯ ಹ್ಯಾಂಬರ್ಗ್ ತಲುಪುತ್ತಾರೆ. ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ಮುಂದಿನ ನಿಲ್ದಾಣಕ್ಕೆ ಹಾರುವ ಮೊದಲು, ಅಂತಿಮವಾಗಿ ಅಂಟಾರ್ಕ್ಟಿಕಾಕ್ಕೆ ಹೋಗುತ್ತಾರೆ. ಪೋಸ್ಟ್‌ನಲ್ಲಿ ಮಾನಸಾ, 'ಇಂದು, ನಾನು ಸಿಂಗಾಪುರದಿಂದ ಅಂಟಾರ್ಟಿಕಾಕ್ಕೆ ವಿಶೇಷ ಆಹಾರ ವಿತರಣೆ (Food delivery)ಯನ್ನು ಮಾಡಿದ್ದೇನೆ. ಈ ಮಾಹಿತಿಯನ್ನು @foodpandasgನಲ್ಲಿನ ಅದ್ಭುತ ಜನರೊಂದಿಗೆ ಹಂಚಿಕೊಳ್ಳಲು ಖುಷಿಪಡುತ್ತೇನೆ' ಎಂದಿದ್ದಾರೆ.
'ಫುಡ್ ಪಾಂಡಾ' ಪ್ರಾಯೋಜಕತ್ವದಲ್ಲಿ ಆಹಾರ ಡೆಲಿವರಿ
ಮತ್ತೊಂದು ಪೋಸ್ಟ್‌ನಲ್ಲಿ ಮಾನಸ, ಫುಡ್ ಡೆಲಿವರಿಗೆ ಅಷ್ಟು ದೂರ ಪ್ರಯಾಣಿಸಲು ಯಾಕೆ ನಿರ್ಧರಿಸಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. 2021 ರಲ್ಲಿ ಅವರು ತಮ್ಮ ಅಂಟಾರ್ಕ್ಟಿಕ್ ಯಾತ್ರೆಗೆ ಹಣವನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅದನ್ನು ಪ್ರಾಯೋಜಿಸಲು ಬ್ರ್ಯಾಂಡ್ ಪಡೆಯಲು ಬಯಸಿದ್ದರು ಎಂದು ಅವರು ಹೇಳಿದರು. ಆದರೆ ಕಳೆದ ತಿಂಗಳವರೆಗೆ ಅವಳು ಫುಡ್ ಪಾಂಡಾದಿಂದ ಆಹಾರ ವಿತರಣೆಗೆ ಪ್ರಾಯೋಜಕತ್ವವನ್ನು ಪಡೆದುಕೊಂಡರು. ಮಹಿಳೆಯ ನೆರವಿನಿಂದ ಬ್ರ್ಯಾಂಡ್ ಅದನ್ನು ಲಾಂಗೆಸ್ಟ್ ಫುಡ್ ಡೆಲಿವರಿ ಮಾಡಲು ಬಯಸಿತು.
ಮಗುವನ್ನೆತ್ತಿಕೊಂಡು ಫುಡ್ ಡೆಲಿವರಿ: ಝೋಮ್ಯಾಟೋ ಬಾಯ್ ವಿಡಿಯೋ ವೈರಲ್
ಮಾನಸ ಗೋಪಾಲ್ ಅವರ ಫುಡ್ ಡೆಲಿವರಿ ಅಂತರ್ಜಾಲವನ್ನು ಪ್ರಭಾವಿತಗೊಳಿಸಿದೆ. ವೀಡಿಯೊ 38,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ. 'ವಾಹ್ ನೀವು ಆಹಾರ ವಿತರಣೆಗಾಗಿ ಅತ್ಯಂತ ದೂರ ತೆರಳುವ ಮೂಲಕ ಅತ್ಯುತ್ತಮವಾದ ಬದ್ಧತೆಯ ಕೆಲಸವನ್ನು ಮಾಡಿದ್ದೀರಿ' ಎಂದು ಒಬ್ಬ ವ್ಯಕ್ತಿ ಹೇಳಿದರು. ಆರ್ಡರ್ ಮತ್ತು ವಿತರಣಾ ಶುಲ್ಕ ಏನು ಎಂದು ತಿಳಿಯಲು ಇನ್ನೊಬ್ಬ ವ್ಯಕ್ತಿ ಬಯಸಿದರು. 'ಇನ್‌ಕ್ರೆಡಿಬಲ್' ಎಂದು ಇನ್ನೊಬ್ಬ ವ್ಯಕ್ತಿ ಸೇರಿಸಿದ್ದಾರೆ.
ಏಪ್ರಿಲ್‌ನಲ್ಲಿ, ಮಾನಸ ಗೋಪಾಲ್ ಅವರು ಕ್ಲೈಮೇಟ್ ಫೋರ್ಸ್ ಇಂಟರ್‌ನ್ಯಾಶನಲ್ ಅಂಟಾರ್ಟಿಕಾ ಎಕ್ಸ್‌ಪೆಡಿಶನ್ 2022ರ ಭಾಗವಾಗಿದ್ದರು.ಅಂಟಾರ್ಟಿಕಾದಲ್ಲಿನ ಜಾಗತಿಕ ಹವಾಮಾನ ತಜ್ಞರೊಂದಿಗೆ ಹವಾಮಾನ ನೀತಿ, ಕ್ರಮ, ಸಂಶೋಧನೆ ಮತ್ತು ಜಾಗೃತಿ (Awareness) ಕುರಿತು ಕೆಲಸ ಮಾಡಲು ಇತರ ದೇಶಗಳನ್ನು ಪ್ರತಿನಿಧಿಸುವ ಅಸಾಮಾನ್ಯ ಟೀಮ್‌ನ್ನು ಮಾನಸಾ ಸೇರಿಕೊಂಡಿದ್ದಾರೆ. ಮಾನಸ 2018ರಲ್ಲಿ ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪೂರ್ಣಗೊಳಿಸಿದ್ದಾರೆ.