ಸೇಬು ಹಣ್ಣಿನ ಮೇಲೆ ವ್ಯಾಕ್ಸ್ ಹಾಕಿರ್ತಾರೆ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಆದ್ರೆ ವ್ಯಾಕ್ಸ್ ತೆಗೆಯುವ ವಿಧಾನ ಗೊತ್ತಿಲ್ಲ. ಬರಿ ನೀರಿನಲ್ಲಿ ಸೇಬು ಹಣ್ಣನ್ನು ಸ್ವಚ್ಛಗೊಳಿಸಿ ಅದ್ರ ಸೇವನೆ ಮಾಡ್ತೇವೆ. ನೀರಿನಲ್ಲಿ ಸೇಬು ಕ್ಲೀನ್ ಮಾಡಿದ್ರೆ ವ್ಯಾಕ್ಸ್ ಹೋಗೋದಿಲ್ಲ.
ಸೇಬು ಹಣ್ಣು ಬಹುತೇಕ ಎಲ್ಲರಿಗೂ ಇಷ್ಟವಾಗುತ್ತದೆ. ಮಾರುಕಟ್ಟೆಯಲ್ಲಿ ವೆರೈಟಿ ಸೇಬು ಹಣ್ಣುಗಳನ್ನು ನಾವು ನೋಡ್ಬಹುದು. ದಿನಕ್ಕೆ ಒಂದು ಸೇಬು ಹಣ್ಣು ತಿಂದು ರೋಗಗಳಿಂದ ದೂರವಿರಿ ಎಂದು ವೈದ್ಯರು ಸಲಹೆ ನೀಡ್ತಾರೆ. ಸೇಬು ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಅದ್ರಲ್ಲಿ ಫೈಬರ್ ಸಮೃದ್ಧವಾಗಿದೆ. ಇದರ ಜೊತೆಗೆ ಸೇಬು ಹಣ್ಣಿನಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳಿವೆ. ಇದೇ ಕಾರಣಕ್ಕೆ ವೈದ್ಯರು ಸೇಬು ಹಣ್ಣು ತಿನ್ನುವಂತೆ ಸಲಹೆ ನೀಡ್ತಾರೆ. ಆದ್ರೆ ಸೇಬು ಹಣ್ಣು ನಿಮ್ಮ ಆರೋಗ್ಯವನ್ನು ಹಾಳು ಕೂಡ ಮಾಡಬಹುದು. ಇದಕ್ಕೆ ಕಾರಣ ಸೇಬು ಹಣ್ಣಿನ ಮೇಲಿರುವ ವ್ಯಾಕ್ಸ್. ಸೇಬು ಹಣ್ಣಿನ ಸಿಪ್ಪೆಯಲ್ಲೇ ಹೆಚ್ಚು ಪೋಷಕಾಂಶವಿದೆ. ಅದಕ್ಕೆ ವ್ಯಾಕ್ಸ್ ಹಾಕುವ ಕಾರಣ ಬಹುತೇಕರು ಸಿಪ್ಪೆ ತೆಗೆದು ಸೇಬು ಸೇವಿಸ್ತಾರೆ. ಆದ್ರೆ ಸಿಪ್ಪೆ ತೆಗೆದು ಸೇಬು ತಿಂದ್ರೆ ಪ್ರಯೋಜನ ಕಡಿಮೆ. ಹಾಗಾಗಿ ನೀವು ಸಿಪ್ಪೆ ಮೇಲಿರುವ ವ್ಯಾಕ್ಸ್ ತೆಗೆದು ಸೇಬು ಸೇವನೆ ಮಾಡೋದು ಒಳ್ಳೆಯದು. ವ್ಯಾಕ್ಸ್ ಹೊಟ್ಟೆ ಸೇರಿದ್ರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಯಕೃತ್ತಿನಿಂದ ಮೂತ್ರಪಿಂಡದವರೆಗೆ ದೇಹದ ಎಲ್ಲ ಭಾಗಗಳ ಮೇಲೂ ವ್ಯಾಕ್ಸ್ ಪರಿಣಾಮ ಬೀರುತ್ತದೆ. ಇಂದು ನಾವು ಸುಲಭವಾಗಿ ಸೇಬು ಹಣ್ಣಿನ ಮೇಲಿರುವ ವ್ಯಾಕ್ಸ್ ತೆಗೆಯೋದು ಹೇಗೆ ಎಂಬುದನ್ನು ನಿಮಗೆ ಹೇಳ್ತೇವೆ.
ಸೇಬು (Apple) ಹಣ್ಣಿನ ಮೇಲಿರುವ ವ್ಯಾಕ್ಸ್ (Wax) ಹೀಗೆ ತೆಗೆಯಿರಿ :
ವ್ಯಾಕ್ಸ್ ತೆಗೆದುಹಾಕಲು ಅಡಿಗೆ ಸೋಡಾ (Baking Soda) : ಎಲ್ಲರ ಮನೆಯಲ್ಲೂ ಅಡುಗೆ ಸೋಡಾ (Baking Soda) ಇದ್ದೇ ಇರುತ್ತೆ. ಸೇಬು ಹಣ್ಣು ತಿನ್ನುವ ಮೊದಲು ನೀವು ಅದ್ರ ವ್ಯಾಕ್ಸ್ ತೆಗೆಯಲು ಅಡಿಗೆ ಸೋಡಾ ಬಳಸಬಹುದು. ಇದಕ್ಕಾಗಿ ಒಂದು ಲೀಟರ್ ನೀರಿನಲ್ಲಿ 2 ಚಮಚ ಅಡಿಗೆ ಸೋಡಾ ಮತ್ತು ಉಪ್ಪನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದಕ್ಕೆ ಸೇಬು ಹಣ್ಣನ್ನು ಹಾಕಿ. ಸುಮಾರು 5 ನಿಮಿಷಗಳ ಕಾಲ ನೀರಿನಲ್ಲಿಯೇ ಸೇಬು ಹಣ್ಣನ್ನು (Apple) ಇಡಿ. ನಂತ್ರ ಸೇಬುವನ್ನು ಸ್ವಚ್ಛಗೊಳಿಸಿ ಸೇವನೆ ಮಾಡಿ. ಹೀಗೆ ಮಾಡಿದ್ರೆ ವ್ಯಾಕ್ಸ್ ನಿಮ್ಮ ಹೊಟ್ಟೆ ಸೇರೋದಿಲ್ಲ.
ಬಿಸಿ ನೀರಿನ (Hot Water) ಬಳಕೆ ಒಳ್ಳೆಯದು : ಸೇಬು ಹಣ್ಣಿಗೆ ಹಾಕಿರುವ ವ್ಯಾಕ್ಸ್ ತೆಗೆದು ಹಾಕಲು ನೀವು ಬಿಸಿ ನೀರಿನ ಬಳಕೆ ಮಾಡಬಹುದು. ಒಂದು ಪಾತ್ರೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ಇರಿಸಿ. ಅದಕ್ಕೆ ಒಂದು ಚಮಚ ಉಪ್ಪು ಸೇರಿಸಿ. ಈ ನೀರಿನಲ್ಲಿ ಸೇಬು ಹಣ್ಣನ್ನು ಸುಮಾರು 2 ನಿಮಿಷಗಳ ಕಾಲ ಇರಿಸಿ. ನಂತ್ರ ಸೇಬು ಹಣ್ಣನ್ನು ತೆಗೆದು ಶುದ್ಧ ಬಟ್ಟೆಯಲ್ಲಿ ಒರೆಸಿ. ನಂತ್ರ ಸೇಬು ಹಣ್ಣಿನ ಸೇವನೆ ಮಾಡಬಹುದು. ಬಿಸಿ ನೀರು, ವ್ಯಾಕ್ಸ್ ತೆಗೆದು ಹಾಕುತ್ತದೆ.
Festival Food: ಈ ಪಾಯಸಗಳಿಂದ ಹಬ್ಬವೂ ಸೂಪರ್, ಆರೋಗ್ಯಕ್ಕೂ ಬಂಪರ್
ವಿನೆಗರ್ (Vinegar) ಕೂಡ ಬಳಸ್ಬಹುದು : ಸೇಬು ಹಣ್ಣಿನ ಮೇಲಿರುವ ವ್ಯಾಕ್ಸ್ ಲೇಪನ ತೆಗೆಯಲು ವಿನೆಗರ್ ಬಳಸಬಹುದು. ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ನೀರಿಗೆ ಹಾಕಿ ಮಿಕ್ಸ್ ಮಾಡಿ. ಆ ನೀರಿನಲ್ಲಿ ಸೇಬುವನ್ನು ಹಾಕಿ ಸ್ವಲ್ಪ ಸಮಯದವರೆಗೆ ಬಿಡಿ. ನಂತ್ರ ಶುದ್ಧ ಬಟ್ಟೆಯಲ್ಲಿ ಒರೆಸಿ, ಸೇವನೆ ಮಾಡಿ.
Children Care: ಮಗು ರಾತ್ರಿ ಪದೇ ಪದೇ ಎದ್ದೇಳುತ್ತಾ? ಹಸಿವಾಗಿರಬಹುದು ನೋಡಿ
ನಿಂಬೆ ಹಣ್ಣಿನ ರಸ : ಸೇಬು ಹಣ್ಣಿನ ಮೇಲೆ ವ್ಯಾಕ್ಸ್ ಹಚ್ಚುವುವು ಮಾಮೂಲಿ. ಅದು ನಮ್ಮ ಕಣ್ಣಿಗೆ ಕಾಣಿಸದೆ ಇರಬಹುದು. ಆದ್ರೆ ವ್ಯಾಕ್ಸ್ ಹೊಟ್ಟೆ ಸೇರುವುದನ್ನು ತಪ್ಪಿಸಬೇಕು. ಅದಕ್ಕೆ ನೀವು ನಿಂಬೆ ರಸ ಕೂಡ ಬಳಸಬಹುದು. ನಿಂಬೆ ರಸವನ್ನು ನೀರಿನೊಂದಿಗೆ ಬೆರೆಸಿ. ಅದನ್ನು ಕರವಸ್ತ್ರದ ಸಹಾಯದಿಂದ ಸೇಬು ಹಣ್ಣಿನ ಮೇಲೆ ಅನ್ವಯಿಸಿ. ನಂತ್ರ ಸೇಬು ಹಣ್ಣನ್ನು ಸ್ವಚ್ಛಗೊಳಿಸಿ, ಸೇವನೆ ಮಾಡಿ.