ಮೂರೇ ನಿಮಿಷದಲ್ಲಿ ಮಾಡಿ ಖಡಕ್ ಟೀ – ಕುಡಿದವರು ಮತ್ತೆ ಮತ್ತೆ ಕೇಳ್ತಾರೆ

Published : Aug 24, 2026, 02:14 PM IST
Tea making method

ಸಾರಾಂಶ

ಟೀ ಕಹಿ ಆಗ್ಬಾರದು ಆದ್ರೆ ಖಡಕ್ ಆಗ್ಬೇಕು ಅನ್ನೋರು ಹೆಚ್ಚು ಮಂದಿ. ಏನೇ ಮಾಡಿದ್ರೂ ಅಂಥ ಟೀ ತಯಾರಿಸೋದು ಕೆಲವರಿಗೆ ಕಷ್ಟ. ನೀವೂ ಖಡಕ್ ಟೀ ತಯಾರಿಸ್ಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ.

ಟೀ ಮಾಡೋದು ಒಂದು ಕಲೆ. ಫುಲ್ ಟೆನ್ಷನ್ ನಲ್ಲಿದ್ದಾಗ ಸ್ಟ್ರಾಂಗ್ ಟೀ ನಿಮ್ಮ ಮೈಂಡ್ ರಿಲ್ಯಾಕ್ಸ್ ಮಾಡುತ್ತೆ. ರಸ್ತೆ ಬದಿಯಲ್ಲಿ ಕೊಡುವಂತ ಖಡಕ್ ಟೀ ತಯಾರಿಸೋಕೆ ಅನೇಕರಿಗೆ ಬರೋದಿಲ್ಲ. ಮನೆಯಲ್ಲೂ ಅಂತ ಟೀ ಮಾಡ್ಬೇಕು ಅಂದ್ರೆ ನೀವು ಕೆಲ ಟಿಪ್ಸ್ ಫಾಲೋ ಮಾಡ್ಬೇಕು.

ಸ್ಟ್ರಾಂಗ್ ಟೀ ತಯಾರಿಸೋದು ಹೀಗೆ

ಟೀ ಪುಡಿ ಹೆಚ್ಚು ಹಾಕಿದ್ರೆ ಇಲ್ಲ ನೀರಿನಲ್ಲಿ ಕೆಲ ಕಾಲ ಟೀ ಪುಡಿಯನ್ನು ನೆನೆಸಿದ್ರೆ ಟೀ ಸ್ಟ್ರಾಂಗ್ ಆಗುತ್ತೆ ಅಂತ ಕೆಲವರು ಭಾವಿಸ್ತಾರೆ. ಆದ್ರೆ ಇದು ಸಂಪೂರ್ಣವಾಗಿ ತಪ್ಪು. ನೀವು ಟೀ ನಿಜವಾದ ಸ್ಟ್ರಾಂಗ್ ರುಚಿ ಬಯಸಿದ್ರೆ, ಕುದಿಸುವ ಸಮಯ ಇಲ್ಲಿ ನಿರ್ಣಾಯಕ.

ಟೀ ಸ್ಟ್ರಾಂಗ್ ಆಗ್ಬೇಕು ಆದ್ರೆ ಹೆಚ್ಚು ಕಹಿ ಆಗ್ಬಾರದು ಎಂದಾದ್ರೆ ಚಹಾವನ್ನು ತಯಾರಿಸುವ ಸರಿಯಾದ ಮಾರ್ಗವನ್ನು ಕಲಿಯೋಣ. 3 ನಿಮಿಷಗಳಿಗಿಂತ ಹೆಚ್ಚು ಕಾಲ ಚಹಾವನ್ನು ಕುದಿಸುವುದು ಅದರ ರುಚಿಯನ್ನು ಹಾಳು ಮಾಡುತ್ತೆ.

• ಮೊದಲು, ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ. ನೀರು ಕುದಿಯಲು ಪ್ರಾರಂಭಿಸಿದ ನಂತರ, ಟೀ ಪುಡಿ ಸೇರಿಸಿ.

• ಟೀ ಪುಡಿ ಸೇರಿಸಿದ ನಂತ್ರ ಅದನ್ನು ಪೂರ್ಣ 3 ನಿಮಿಷಗಳ ಕಾಲ ಕುದಿಸಲು ಬಿಡಿ. ಈ ಮೂರು ನಿಮಿಷಗಳಲ್ಲಿ ಟೀನಲ್ಲಿರು ಟ್ಯಾನಿನ್ಗಳು ತಮ್ಮ ಪೂರ್ಣ ಪರಿಮಳವನ್ನು ನೀರಿಗೆ ಬಿಡುಗಡೆ ಮಾಡುತ್ತವೆ.

• ಮೂರು ನಿಮಿಷಗಳಿಗಿಂತ ಹೆಚ್ಚು ಸಮಯ ಟ್ಯಾನಿನ್ಗಳು ಕಹಿ ರುಚಿಯನ್ನುಂಟುಮಾಡುತ್ತವೆ. ಆದ್ದರಿಂದ ಕೇವಲ 3 ನಿಮಿಷ ಮಾತ್ರ ಕುದಿಸಿ.

• ಜಜ್ಜಿದ ಶುಂಠಿಯನ್ನ ಕುದಿಯುತ್ತಿರುವ ಟೀಗೆ ಸೇರಿಸಿ. ಶುಂಠಿಯ ಪರಿಮಳ ನೀರಿಗೆ ಸೇರುತ್ತೆ. ಒಂದು ನಿಮಿಷಕ್ಕಿಂತ ಹೆಚ್ಚು ಕಾಲ ಕುದಿಸಿದರೆ, ಶುಂಠಿಯ ಸುವಾಸನೆಯು ಮಸುಕಾಗುತ್ತದೆ. ಹಾಗಾಗಿ ಬರೀ ಒಂದು ನಿಮಿಷ ಕುದಿಸಿ.

• ನಂತ್ರ ಹಾಲು ಸೇರಿಸಿ. ಇದು ಟ್ಯಾನಿನ್ಗಳನ್ನು ಸಂರಕ್ಷಿಸುತ್ತೆ. ಟೀ ಕುದಿಯುತ್ತಿರುವಾಗ ಒಂದು ಚಿಟಿಕೆ ಉಪ್ಪು ಸೇರಿಸಿ. ಈ ಉಪ್ಪು ಟೀ ರುಚಿ ಹಾಳು ಮಾಡೋದಿಲ್ಲ.

• ಟೀ ಸೋಸಿ, ಸ್ಟ್ರಾಂಗ್ ಟೀ ಸರ್ವ್ ಮಾಡಿ. ಸ್ಟ್ರಾಂಗ್ ಟೀ ಅಂದ್ರೆ ಅದನ್ನು ದೀರ್ಘಕಾಲ ಕುದಿಸುವುದು ಎಂದಲ್ಲ. ಬದಲಿಗೆ ಸರಿಯಾದ ಸಮಯಕ್ಕೆ ಕುದಿಸೋದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Karnataka style veg pulao: ಪಕ್ಕಾ ಕರ್ನಾಟಕ ಸ್ಟೈಲ್ ತರಕಾರಿ ಪಲಾವ್... ಒಮ್ಮೆ ಟ್ರೈ ಮಾಡಿ ನೋಡಿ!
ಉಪ್ಪಿಗೆ ನೀರು ಬಿದ್ರೆ ಇದೊಂದು ಪದಾರ್ಥ ಸೇರಿಸಿ.. ಕೆಲವೇ ಗಂಟೇಲಿ ಡ್ರೈ ಆಗುತ್ತೆ