Masala Veg Pulao Recipe In Kannada: ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಊಟಕ್ಕೆ ಹೀಗೆ ನಾವು ಮೂರು ಹೊತ್ತು ಇಷ್ಟಪಟ್ಟು ತಿನ್ನುವ ಆಹಾರವೆಂದ್ರೆ ಅದು ಪಲಾವ್. ಹಾಗಾಗಿ ನೀವು ಪಲಾವ್ ಪ್ರಿಯರಾಗಿದ್ದರೆ ಮತ್ತು ಕಡಿಮೆ ಸಮಯದಲ್ಲಿ ಮಾಡಲು ಬಯಸಿದರೆ ಮಸಾಲಾ ಪಲಾವ್ ಟ್ರೈ ಮಾಡಬಹುದು. ಇದು ರುಚಿಕರ ಮತ್ತು ಆರೋಗ್ಯಕರ ರೆಸಿಪಿಯಾಗಿದ್ದು, Working Womenಗೆ ಅತ್ಯುತ್ತಮ ಆಯ್ಕೆಯಾಗಿದೆ. ಇತ್ತೀಚೆಗೆ bharatzkitchen ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಮಸಾಲಾ ಪಲಾವ್ ಮಾಡುವ ವಿಧಾನ ಶೇರ್ ಮಾಡಲಾಗಿದೆ. ಇದಕ್ಕೆ ಕೆಲವೇ ಮಸಾಲೆ ಹಾಕಿ, ಕುಕ್ಕರ್‌ನಲ್ಲಿ ಕೇವಲ 15 ನಿಮಿಷದಲ್ಲಿ ಮಾಡಬಹುದು. ಆದ್ದರಿಂದ ತಡಮಾಡದೇ ಪಲಾವ್ ಮಾಡುವುದು ಹೇಗೆಂದು ನೋಡಿಕೊಂಡು ಬರೋಣ ಬನ್ನಿ...
ಪಲಾವ್‌ಗೆ ಬೇಕಾಗುವ ಪದಾರ್ಥಗಳು (Homemade Masala Veg Pulao:Step-by-Step Recipe)
2 ಕಪ್ ಅಕ್ಕಿ
2 ಕಪ್ ನೀರು
2 ಟೇಬಲ್ ಸ್ಪೂನ್ ದೇಸಿ ತುಪ್ಪ
1/2 ಟೀ ಸ್ಪೂನ್ ಇಂಗು
1 ದೊಡ್ಡ ಈರುಳ್ಳಿ
2 ಟೊಮೆಟೊ
1 ಟೇಬಲ್ ಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್
2 ಟೀ ಸ್ಪೂನ್ ಉಪ್ಪು
2 ಆಲೂಗಡ್ಡೆ
1/2 ಕಪ್ ಬಟಾಣಿ
1/2 ಕಪ್ ಬೀನ್ಸ್ (9-10)
1 ಕ್ಯಾರೆಟ್
1/2 ಟೀ ಸ್ಪೂನ್ ಅರಿಶಿನ ಪುಡಿ
1 ಟೀ ಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ
1 ಟೀ ಸ್ಪೂನ್ ಕೊತ್ತಂಬರಿ ಪುಡಿ
1 ಟೀ ಸ್ಪೂನ್ ಗರಂ ಮಸಾಲ
1/2 ಕಪ್ ಮೊಸರು
ತಾಜಾ ಕೊತ್ತಂಬರಿ ಸೊಪ್ಪು
ಪುದೀನಾ ಎಲೆಗಳು
3 ಹಸಿ ಮೆಣಸಿನಕಾಯಿ
ಮಸಲಾ ಪದಾರ್ಥಗಳು
1 ಟೀಸ್ಪೂನ್ ಜೀರಿಗೆ
1 ದೊಡ್ಡ ಏಲಕ್ಕಿ
1 ಪಲಾವ್ ಎಲೆ
4 ಲವಂಗ
4 ಏಲಕ್ಕಿ
1 ಚಕ್ರಮೊಗ್ಗು
8 - 10 ಕರಿಮೆಣಸು
1 ದಾಲ್ಚಿನ್ನಿ
ಮಾಡುವ ವಿಧಾನ (How to make Veg Pulao)
*ಮಸಾಲ ಪಲಾವ್ ಮಾಡಲು ಮೊದಲು ನೀವು ಬಾಸ್ಮತಿ ಅಕ್ಕಿಯನ್ನು ತೆಗೆದುಕೊಳ್ಳಬೇಕು. ಗಮನಿಸಬೇಕಾದ ವಿಷಯವೆಂದರೆ ನೀವು ಮೆತ್ತಗಿನ ಅನ್ನವನ್ನು ಮಾಡಲು ಬಯಸಿದರೆ ನೀವು ಅದನ್ನು ನೆನೆಸಬೇಕಾಗಿಲ್ಲ, ಅದನ್ನು ತೊಳೆದಿಟ್ಟುಕೊಂಡರೆ ಸಾಕು.
*ಪಲಾವ್ ಮಾಡಲು ನೀವು ಮೊದಲೇ ತರಕಾರಿಗಳನ್ನು ಕಟ್ ಮಾಡಿಟ್ಟುಕೊಳ್ಳಬೇಕು.
*ಈಗ ಕುಕ್ಕರ್ ತೆಗೆದುಕೊಂಡು ಸ್ವಲ್ಪ ತುಪ್ಪ ಹಾಕಿ. ಇದಕ್ಕೆ ಇಂಗು ಮತ್ತು ಜೀರಿಗೆ ಸೇರಿಸಿ.
*ನಂತರ ಮೇಲೆ ಹೇಳಿದ ಎಲ್ಲಾ ಮಸಲಾ ಪದಾರ್ಥಗಳನ್ನು ಮಾತ್ರ ಸೇರಿಸಿ.
*ಈಗ ಈರುಳ್ಳಿ ಸೇರಿಸಿ, ಕಡಿಮೆ ಉರಿಯಲ್ಲಿ ಗೋಲ್ಡನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
*ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಸ್ವಲ್ಪೇ ಸ್ವಲ್ಪ ನೀರು ಸೇರಿಸಿ ಹಸಿ ವಾಸನೆ ಹೋಗುವವರೆಗೂ ಫ್ರೈ ಮಾಡಿ.
* ಇದಕ್ಕೆ ಕಟ್ ಮಾಡಿಟ್ಟುಕೊಂಡ ಟೊಮ್ಯಾಟೊ ಸೇರಿಸಿ ಮೆತ್ತಗಾಗುವವರೆಗೂ ಫ್ರೈ ಮಾಡಿ.
*ಈಗ ಕಟ್ ಮಾಡಿಟ್ಟುಕೊಂಡ ಆಲೂಗಡ್ಡೆ, ಬಟಾಣಿ, ಬೀನ್ಸ್, ಕ್ಯಾರೆಟ್ ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
*ಇದಕ್ಕೆ ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ ಮತ್ತು ಬಿರಿಯಾನಿ ಮಸಾಲವನ್ನು ಕೂಡ ಸೇರಿಸಬಹುದು.
*ಈಗ ಇದಕ್ಕೆ ಮೊಸರು ಸೇರಿಸಿ ಇದರಿಂದ ಅದು ಸ್ವಲ್ಪ ಹುಳಿಯಾಗುತ್ತದೆ. ನಂತರ ಅದರಲ್ಲಿ ಅರ್ಧ ಅಕ್ಕಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದಕ್ಕೆ ಪುನಃ ಒಂದು ಚಮಚ ತುಪ್ಪ ಸೇರಿಸಿ.
*ನಂತರ ಉಳಿದ ಅಕ್ಕಿ, ನೀರು ಸೇರಿಸಿ ಮುಚ್ಚಳವನ್ನು ಮುಚ್ಚಿ. 2 ರಿಂದ 3 ಸೀಟಿ ಹೊಡೆಯಲು ಬಿಡಿ.
*ಕುಕ್ಕರ್‌ನ ಗ್ಯಾಸ್ ಹೊರಗೆ ಹೋದ ನಂತರ ಅದನ್ನು ಬೇರೆ ಪಾತ್ರೆಗೆ ವರ್ಗಾಯಿಸಿದರೆ ಮಸಾಲಾ ಪಲಾವ್ ತಿನ್ನಲು ರೆಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.