ಮೊದಲ ದೋಸೆಯೇ ಹಂಚಿಗೆ ಅಂಟಿಕೊಳ್ಳುತ್ತಿದ್ರೆ, ಬೇಯದೆ ಮೆತ್ತಗಾಗುತ್ತಿದ್ರೆ ಇಲ್ಲೊಂದು Special Tips ಇದೆ

Published : Jun 12, 2026, 02:29 PM IST
How to stop dosa sticking to pan

ಸಾರಾಂಶ

How to stop dosa sticking to pan: ದೋಸೆ ಮಾಡುವಾಗ ಸಾಮಾನ್ಯವಾಗಿ ಮೊದಲ ದೋಸೆಯೇ ಹಂಚಿಗೆ ಅಂಟಿಕೊಳ್ಳುತ್ತದೆ ಅಥವಾ ಸರಿಯಾಗಿ ಬೇಯದೆ ಮೆತ್ತಗಾಗಿಬಿಡುತ್ತದೆ. ಆದ್ದರಿಂದ ಪರ್ಫೆಕ್ಟ್ ಆದ, ಗೋಲ್ಡನ್ ಬ್ರೌನ್ ಬಣ್ಣದ ಗರಿಗರಿ ದೋಸೆ ಮನೆಯಲ್ಲಿಯೇ ಸುಲಭವಾಗಿ ಮಾಡಲು ಕೆಲವು ಪ್ರಮುಖ ಕಿಚನ್ ಟಿಪ್ಸ್ ಇಲ್ಲಿದೆ.

ದೋಸೆ ಎಂದರೆ ಪ್ರತಿಯೊಬ್ಬರಿಗೂ ಇಷ್ಟವಾದ ಬ್ರೇಕ್‌ಫಾಸ್ಟ್. ಅದಕ್ಕಾಗಿಯೇ ಬೆಳ್ಳಂಬೆಳಗ್ಗೆ ಬಿಸಿಬಿಸಿ ದೋಸೆ ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ, ಮುಂಜಾನೆಯ ಅವಸರದಲ್ಲಿ ದೋಸೆ ಹಾಕಲು ಹೋದಾಗ, ಮೊದಲು ಹಾಕಿದ ದೋಸೆಯೇ ಪ್ಯಾನ್‌ಗೆ ಅಂಟಿಕೊಂಡು ಏಳುವುದೇ ಇಲ್ಲ. ಆಗ ಪ್ಯಾನ್ ಅನ್ನು ಉಲ್ಟಾ ತಿರುಗಿಸಿ, ಸೌಟ್ ತೆಗೆದುಕೊಂಡು ಬಲವಾಗಿ ಉಜ್ಜಿ ದೊಡ್ಡ ಯುದ್ಧವೇ ಮಾಡಬೇಕಾಗುತ್ತದೆ. ಇದರಿಂದ ನಿಮ್ಮ ಅಮೂಲ್ಯವಾದ ಸಮಯ ವ್ಯರ್ಥವಾಗುತ್ತದೆ. ಅಷ್ಟೇ ಅಲ್ಲ, ದೋಸೆ ಮಾಡುವ ಆಸಕ್ತಿಯೇ ಹೊರಟುಹೋಗುತ್ತದೆ. ಇದು ಹೆಚ್ಚಿನ ಮನೆಗಳಲ್ಲಿ ದಿನಾಲೂ ನಡೆಯುವ ಸಮಸ್ಯೆಯಾಗಿದೆ. ಹಾಗಾಗಿ, ದೋಸೆ ಹೆಂಚಿಗೆ ಅಂಟಿಕೊಳ್ಳದಂತೆ ಮಾಡಲು ಇಲ್ಲೊಂದು ವಿಶೇಷವಾದ ಸಲಹೆ ಇದೆ. ಅದನ್ನು ಅನುಸರಿಸಿದರೆ ದೋಸೆ ಪರ್ಫೆಕ್ಟ್ ಆಗಿ ಏಳುತ್ತದೆ.

ಮೊದಲಿಗೆ ಹಿಟ್ಟು ತಯಾರಿಸುವ ವಿಧಾನ ನೋಡೋಣ..

ಇಂತಹ ಸಣ್ಣ ಪುಟ್ಟ ಸೂತ್ರ ಪಾಲಿಸಿದರೆ ಹೋಟೆಲ್ ತರಹದ್ದೇ ದೋಸೆಯನ್ನು ನೀವೇ ಮಾಡಬಹುದು. ಈ ಮೊದಲೇ ಹೇಳಿದ ಹಾಗೆ ದೋಸೆ ಚೆನ್ನಾಗಿ ಬರಲು ಅಕ್ಕಿ ಮತ್ತು ಉದ್ದಿನಬೇಳೆಯ ಅನುಪಾತ ಹಾಗೂ ಹಂಚಿನ ತಾಪಮಾನ ಕೂಡ ಅಷ್ಟೇ ಮುಖ್ಯವಾಗುತ್ತದೆ. ಸಾಮಾನ್ಯವಾಗಿ 3 ಕಪ್ ಅಕ್ಕಿಗೆ 1 ಕಪ್ ಉದ್ದಿನಬೇಳೆಯನ್ನು ಬಳಸಬೇಕು. ಇವುಗಳ ಜೊತೆಗೆ ಒಂದು ಚಮಚ ಮೆಂತ್ಯ ಮತ್ತು ಕಾಲು ಕಪ್ ಅವಲಕ್ಕಿಯನ್ನು ನೆನೆಸಿ ರುಬ್ಬುವುದರಿಂದ ದೋಸೆಗೆ ಅದ್ಭುತವಾದ ಗರಿಗರಿತನ (Crispiness) ಮತ್ತು ಆಕರ್ಷಕ ಗೋಲ್ಡನ್ ಬಣ್ಣ ಬರುತ್ತದೆ.

ಮೊದಲಿಗೆ ಅಕ್ಕಿ ಮತ್ತು ಬೇಳೆಯನ್ನು ಚೆನ್ನಾಗಿ ತೊಳೆದು 5-6 ಗಂಟೆಗಳ ಕಾಲ ನೆನೆಸಿ, ನಂತರ ಮೃದುವಾಗಿ ರುಬ್ಬಿಕೊಳ್ಳಿ. ಈ ಹಿಟ್ಟನ್ನು ಕನಿಷ್ಠ 7 ರಿಂದ 8 ಗಂಟೆಗಳ ಕಾಲ ಅಥವಾ ಇಡೀ ರಾತ್ರಿ ಬೆಚ್ಚಗಿನ ಜಾಗದಲ್ಲಿ ಹುದುಗಲು (Ferment) ಬಿಡಬೇಕು. ಹಿಟ್ಟು ಸರಿಯಾಗಿ ಹುದುಗಿದರೆ ಮಾತ್ರ ದೋಸೆಗಳು ಹಗುರವಾಗಿ ಮತ್ತು ರುಚಿಯಾಗಿ ಬರುತ್ತವೆ.

ದೋಸೆ ಹಾಕುವಾಗ ಪಾಲಿಸಬೇಕಾದ ಮುಖ್ಯ ಕ್ರಮಗಳು

*ದೋಸೆ ಹಾಕುವ ಮುನ್ನ ಹಂಚನ್ನು ಗ್ಯಾಸ್ ಮೇಲೆ ಚೆನ್ನಾಗಿ ಕಾಯಿಸಿ. ಹಂಚು ಸರಿಯಾಗಿ ಕಾದ ನಂತರ ಅದರ ಮೇಲೆ ಸ್ವಲ್ಪ ಉಪ್ಪು ಚಿಮುಕಿಸಿ. ಆಮೇಲೆ ಒಂದು ಐಸ್ ತುಂಡನ್ನು (Ice Cube) ತೆಗೆದುಕೊಂಡು ಬಿಸಿಯಾದ ಹೆಂಚಿನ ಮೇಲೆಲ್ಲಾ ಅಗಲವಾಗಿ ಉಜ್ಜಿ. ಹಂಚಿನ ಮೇಲಿರುವ ಐಸ್ ನೀರು ಆವಿಯಾಗುತ್ತಿದ್ದಂತೆ ಅದನ್ನು ಒರೆಸಿ ತೆಗೆಯಿರಿ. ನಂತರ ಹಂಚನ್ನು ಮತ್ತೊಮ್ಮೆ ಗ್ಯಾಸ್ ಮೇಲೆ ಇಟ್ಟು ಕಾಯಲು ಬಿಡಿ. ಹಂಚಿನ ಮೇಲೆ ಕೆಲವು ನೀರಿನ ಹನಿಗಳು ಇರುವಾಗಲೇ, ಅರ್ಧ ಸೀಳಿದ ಈರುಳ್ಳಿಯನ್ನು ಎಣ್ಣೆಯಲ್ಲಿ ಮುಳುಗಿಸಿ, ಹಂಚಿನ ತುಂಬಾ ಎಣ್ಣೆ ಸವರುವಂತೆ ಚೆನ್ನಾಗಿ ತಿರುಗಿಸಿ ಉಜ್ಜಿ.

*ಈಗ ಗ್ಯಾಸ್ ಉರಿಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ (Low Flame), ದೋಸೆ ಹಿಟ್ಟನ್ನು ಹಂಚಿನ ಮಧ್ಯಭಾಗದಲ್ಲಿ ಹಾಕಿ. ಹಿಟ್ಟು ಹಾಕುವ ಪ್ರತಿ ಬಾರಿಯೂ ಗ್ಯಾಸ್ ಉರಿ ಕಡಿಮೆಯಿರಬೇಕು. ಏಕೆಂದರೆ ಹಂಚು ಅತಿಯಾಗಿ ಕಾದಿದ್ದರೆ ದೋಸೆ ಹಿಟ್ಟು ಹೆಂಚಿಗೆ ಅಂಟಿಕೊಂಡು ಇಡೀ ದೋಸೆ ಹಾಳಾಗುತ್ತದೆ.

*ಅಲ್ಲದೆ, ಮೊದಲ ದೋಸೆಯನ್ನು ಯಾವಾಗಲೂ ಸ್ವಲ್ಪ ದಪ್ಪನಾಗಿ ಹಾಕಬೇಕು. ದೋಸೆ ಹಿಟ್ಟನ್ನು ಹಂಚಿನ ಮಧ್ಯಕ್ಕೆ ಹಾಕಿ ಒಳಗಿನಿಂದ ಹೊರಗಿನ ಕಡೆಗೆ ವೃತ್ತಾಕಾರವಾಗಿ ವೇಗವಾಗಿ ಹರಡಬೇಕು. ದೋಸೆ ಹಾಕಿದ ನಂತರವೇ ಗ್ಯಾಸ್ ಉರಿಯನ್ನು ಮೀಡಿಯಂ ಅಥವಾ ಹೈ ಫ್ಲೇಮ್‌ಗೆ ಇಡಬೇಕು. ತಕ್ಷಣವೇ ದೋಸೆಯ ಸುತ್ತಲೂ ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಹಾಕುವುದರಿಂದ ದೋಸೆ ಕ್ರಿಸ್ಪಿಯಾಗುತ್ತದೆ. ದೋಸೆಯನ್ನು ಏಳಿಸುವ ಮುನ್ನ ತಿರುಗಿಸುವ ಕೈಯನ್ನು ಒಮ್ಮೆ ತಣ್ಣೀರಿನಲ್ಲಿ ಮುಳುಗಿಸಿ, ನಂತರ ದೋಸೆಯನ್ನು ಹೆಂಚಿನಿಂದ ತೆಗೆಯಬೇಕು. ಈ ರೀತಿ ಮಾಡಿದರೆ ದೋಸೆ ಹೆಂಚಿಗೆ ಅಂಟಿಕೊಳ್ಳುವುದೇ ಇಲ್ಲ.

*ಒಂದು ವೇಳೆ ನೀವು ದೋಸೆ ಹಿಟ್ಟನ್ನು ಫ್ರಿಡ್ಜ್‌ನಲ್ಲಿಟ್ಟಿದ್ದರೆ, ದೋಸೆ ಮಾಡುವ ಕನಿಷ್ಠ ಅರ್ಧ ಗಂಟೆ ಮುಂಚಿತವಾಗಿಯೇ ಅದನ್ನು ಹೊರಗೆ ತೆಗೆದು ಕೋಣೆಯ ಉಷ್ಣಾಂಶಕ್ಕೆ (Room Temperature) ಬರುವಂತೆ ನೋಡಿಕೊಳ್ಳಿ. ತಣ್ಣಗಿರುವ ಹಿಟ್ಟಿನಿಂದ ದೋಸೆ ಹಾಕಿದರೆ ಅದು ಸರಿಯಾಗಿ ಬೇಯುವುದಿಲ್ಲ.

ಈ ಸರಳ ಕಿಚನ್ ಟ್ರಿಕ್ಸ್ ಪಾಲಿಸಿದರೆ, ನಿಮ್ಮ ಮನೆಯಲ್ಲೂ ಪ್ರತಿಯೊಬ್ಬರೂ ಇಷ್ಟಪಡುವ ಪರ್ಫೆಕ್ಟ್ ಕ್ರಿಸ್ಪಿ ದೋಸೆಗಳನ್ನು ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಬಹುದು! ಒಮ್ಮೆ ಖಂಡಿತ ಪ್ರಯತ್ನಿಸಿ ನೋಡಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಕ್ಕಾಪಟ್ಟೆ ಗಲೀಜು ಆಗಿರೋ ಹಾಲಿನ ಪಾತ್ರೆಯನ್ನು ಸುಲಭವಾಗಿ ಈ ರೀತಿ ಕ್ಲೀನ್ ಮಾಡಿ!
Green Chilli Seeds: ಖಾರ ಅಂತ ಬೀಜ ಬಿಸಾಡಬೇಡಿ: ಹಸಿಮೆಣಸಿನಕಾಯಿ ಬೀಜದಲ್ಲಿದೆ ಆರೋಗ್ಯದ ಮಹಾ ಸಂಪತ್ತು!